The Public Spot
ರಾಜಕೀಯ

ಶಿವಾನಂದ ನೀಲಣ್ಣನವರ್‌ ಬಂಧನ ರಾಜಕೀಯ ಪ್ರೇರಿತ ಅಲ್ಲ..!

ಬೆಳಗಾವಿಯಲ್ಲಿ 4500 ಕೋಟಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಂಡಿದೆ. 35 ಸಾವಿರ ಜನರು ಹಣ ಹೂಡಿಕೆ ಮಾಡಿದ್ದು, ಬಹುತೇಕ ಜನರು ಆನ್‌ಲೈನ್‌ನಲ್ಲೇ ಪೇಮೆಂಟ್ ಮಾಡಿದ್ದಾರೆ. ಎರಡೂವರೆ ಸಾವಿರ ಕೋಟಿಗೂ ಅಧಿಕ ಹಣ ಆನ್‌ಲೈನ್‌ ಮೂಲಕ ಹೂಡಿಕೆ ಮಾಡಲಾಗಿದೆ. ಇಷ್ಟು ದೊಡ್ಡ ಮೊತ್ತದ ಹಣ ಹೂಡಿಕೆ ಆದ್ರೂ ಬ್ಯಾಂಕ್‌ನವರು ಸೈಲೆಂಟ್ ಆಗಿದ್ದಾರೆ. ಸದ್ಯ ಶಿವಾನಂದ ನೀಲಣ್ಣವರ್ ಬಳಸುತ್ತಿದ್ದ ನಾಲ್ಕು ಅಕೌಂಟ್ ಫ್ರೀಜ್ ಮಾಡಲಾಗಿದೆ.

ಬೆಳಗಾವಿಯಲ್ಲಿ ಹಣ ದುರುಪಯೋಗ ಪ್ರಕರಣ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ‌ ಪ್ರತಿಕ್ರಿಯೆ ಕೊಟ್ಟಿದ್ದು, ಅಧಿಕಾರಿಗಳು ಈ ವಿಚಾರವನ್ನ ಗಮನಕ್ಕೆ ತಂದಿದ್ದಾರೆ. 500 ಕೋಟಿ ಮೇಲಿನ ಅವ್ಯವಹಾರ ಆಗಿರೋದಕ್ಕೆ ಸಿಐಡಿಗೆ ವರ್ಗಾವಣೆ ಮಾಡಿದ್ದೇವೆ ಎಂದಿದ್ದಾರೆ. ಸಾವಿರಾರು ಕೋಟಿ ಅವ್ಯವಹಾರ ಇದೆ. ತನಿಖೆ ಮಾಡಿ ಮುಂದಿನ ಸ್ಟೇಪ್ ಸಿಐಡಿಯವರು ತಗೋತಾರೆ. ತನಿಖೆಯಲ್ಲಿ ಮತ್ತೆ ಯಾರ ಹೆಸರಿದೆ ಗೊತ್ತಾಗುತ್ತದೆ. ಇಷ್ಟು ದೊಡ್ಡ ಹಗರಣ ಆಗಿದೆ. ಇದು ರಾಜಕೀಯ ಪ್ರೇರಿತ ಅನ್ನೋದು ಸರಿಯಲ್ಲ. ಅವರು ಮಾಡುವ ಭಾಷಣ ನೋಡಿ ಹೀಗಾಯ್ತು. ಹಗರಣ ಆಗಿದ್ದು ನಿಜ, ಜಾಸ್ತಿ ಬಡ್ಡಿ ಕೊಡಲು ಸಾಧ್ಯವಿಲ್ಲ ಇವರು ಹೇಗೆ ಕೊಡ್ತಾರೆ..? ತನಿಖೆ ಬಳಿಕ ಎಲ್ಲಾ ವಿಚಾರ ಹೊರ ಬರಲಿದೆ ಎಂದಿದ್ದಾರೆ.

ಶಿವಾನಂದ ನೀಲಣ್ಣವರ ಬಹುಕೋಟಿ ಹಣ ದುರುಪಯೋಗ ಪ್ರಕರಣದಲ್ಲಿ ಸಂಸದ ಜಗದೀಶ್‌ ಶೆಟ್ಟರ್‌ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸಂಸದ ಜಗದೀಶ ಶೆಟ್ಟರ್, ಸಿಕ್ಕಂತಹ ಸಾಕ್ಷ್ಯಗಳ ಆಧಾರದ ಮೇಲೆ ಕೇಸ್ ಮಾಡಿದ್ದಾರೆ. ಇವೆಲ್ಲವೂ ಅಂತಿಮವಾಗಿ ಕೋರ್ಟ್‌ನಲ್ಲಿ ನಿರ್ಧಾರ ಆಗಬೇಕಿದೆ. ಕೋರ್ಟ್‌ನಲ್ಲಿ ಇರುವುದರಿಂದ ಹೆಚ್ಚು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಸಿಐಡಿ ಅಧಿಕಾರಿಗಳು ಹೇಗೆ ತನಿಖೆ ಮಾಡಿ, ಸಾಕ್ಷಿ-ಆಧಾರ ಸಂಗ್ರಹಿಸುತ್ತಾರೆ. ಅದರ ಮೇಲೆ ಪ್ರಕರಣದ ಬಗ್ಗೆ ಗೊತ್ತಾಗಲಿದೆ. ಆತನ ಬಗ್ಗೆ ಒಂದು ನಿರ್ಧಾರಕ್ಕೆ ಬರಲು ಸಾಧ್ಯ ಆಗಲಿದೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಬಹುಕೋಟಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಿಷನರ್ ಭೂಷಣ್ ಬೊರಸೆ ಪ್ರಕರಣದ​​ ಬಗ್ಗೆ ಮಾಹಿತಿ ನೀಡಿದ್ದಾರೆ. ಬಹುಕೋಟಿ ವಂಚನೆಯ ಕೇಸ್ ಬಗ್ಗೆ ಶಿವಾನಂದ ನೀಲಣ್ಣವರನನ್ನು ಬಂಧಿಸಲಾಗಿದೆ. ಈ ಪ್ರಕರಣದ ವ್ಯಾಪ್ತಿ ಅಂತರ ರಾಜ್ಯಕ್ಕೂ ವ್ಯಾಪಿಸಿದ್ದು, 50 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಸಿಐಡಿ, ಡಿಐಜಿ ಭೀಮಾಶಂಕರ ಗುಳೇದ್ ಬಂದು ನಮ್ಮ ಬಳಿ ಮಾಹಿತಿ ಪಡೆದಿದ್ದಾರೆ. ನಾವು ಮಾಡಿರುವ ತನಿಖೆ ಮಾಹಿತಿಯನ್ನು ಅವರಿಗೆ ನೀಡಿದ್ದೇವೆ. ಅದರ ಆಧಾರದ ಮೇಲೆ ಸಿಐಡಿಗೆ ಕೇಸ್​​​ ವರ್ಗಾಯಿಸಿದ್ದೇವೆ. ಸಿಐಡಿ ಡಿಐಜಿ ಭೀಮಾಶಂಕರ ಗುಳೇದ್ ಅವರು ಫಾರ್ಮಾಲಿಟಿ ಮುಗಿಸಿದ್ದಾರೆ ಎಂದಿದ್ದಾರೆ.

ಇನ್ನು ಶಿವಾನಂದ ನೀಲಣ್ಣವರ್​ ಬಂಧನ ಬೆನ್ನೆಲ್ಲೇ, ಪೊಲೀಸರು ಅಲರ್ಟ್​ ಆಗಿದ್ದಾರೆ. ಶಿವಾನಂದ ನೀಲಣ್ಣವರ್​ ಹೆಸರಿಗೆ ಪೊಲೀಸರು ಬಣ್ಣ ಬಳಿಸಿದ್ದಾರೆ. ಕಡೂರು ಪೊಲೀಸ್ ಠಾಣೆಗೆ ಶಿವಾನಂದ ನೀಲಣ್ಣವರ್ ಬೋರ್ಡ್ ಅನ್ನು ಕೊಡುಗೆಯಾಗಿ ನೀಡಿದ್ರು. ಬೋರ್ಡ್​​ ಕೆಳ ಭಾಗದಲ್ಲಿ ಸಮಾಜ ಸೇವಕ ಶಿವಾನಂದ ನೀಲಣ್ಣವರ್ ಅಂತ ಬರೆಸಲಾಗಿತ್ತು. ಹೀಗಾಗಿ ಬೋರ್ಡ್​​ನ ಕೆಳಭಾಗದಲ್ಲಿ ನೀಲಣ್ಣವರ್ ಜಾಗಕ್ಕೆ ಸಹಾಯವಾಣಿ ಸಂಖ್ಯೆ ಹಾಕಲಾಗಿದೆ.

Related posts

ಔಟ್‌ ಗೋಯಿಂಗ್‌ ಸಿಎಂ ಸಿದ್ದರಾಮಯ್ಯಗೆ ಮಗನ ಬಗ್ಗೆ ಅಷ್ಟೇ ಚಿಂತೆ..

Publicspot

ಡಿ.ಕೆ ಶಿವಕುಮಾರ್‌ ನೇತೃತ್ವದ ಸರ್ಕಾರ ರಚನೆ.. ಏನೆಲ್ಲಾ ಆಯ್ತು..?

Publicspot

Congress MP Opposed Cm Decision; ಸಿದ್ದರಾಮಯ್ಯ ಆಸೆಗೆ ತಣ್ಣೀರು ಎರಚಿದ ಕಾಂಗ್ರೆಸ್‌ ಸಂಸದ

Publicspot

Hello Karge Here; ಬೆಳಗ್ಗೆ ಮನೆಗೆ ಬನ್ನಿ ಮಾತನಾಡ್ಬೇಕು..! ಸಿಎಂ ಮನವೊಲಿಸ್ತಾರಾ ಖರ್ಗೆ..?

Publicspot

Hariyana Vote Theft; ಹರಿಯಾಣದಲ್ಲೂ ಮತಗಳ್ಳತನ ಆಗಿದೆ.. ಸಾಕ್ಷ್ಯ ಕೊಟ್ಟ ರಾಹುಲ್​..

Publicspot

ಸಿಎಂ ಡಿಕೆಶಿ ಹೊಗಳಲು ಜೆಡಿಎಸ್​ ಬಗ್ಗೆ ತುಚ್ಛ ಮಾತು..! ನಾನೇ ಪಕ್ಷ ಕಟ್ಟಿದ್ದು..!!

Publicspot