The Public Spot
ರಾಜಕೀಯ

ಲಾಡ್ಲೆ ಮಶಾಕ್‌ ದರ್ಗಾ ಕೇಸ್‌.. ಆರೋಪಿಗಳ ವಿರುದ್ಧ ಕೇಸ್‌ ಮನ್ನಾ..

ಕಲಬುರ್ಗಿ ಜಿಲ್ಲೆ ಆಳಂದದ ಲಾಡ್ಲೆ ಮಷಾಕ ದರ್ಗಾದಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಆರೋಪಿಗಳ ಮೇಲಿನ ಕೇಸ್‌ ವಾಪಸ್‌ ಪಡೆದಿದೆ ಸರ್ಕಾರ. ಕೇಸ್‌ ವಾಪಸ್ ಪಡೆದಿದ್ದಕ್ಕೆ ಸರ್ಕಾರದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸಿರೋ ಗೃಹ ಸಚಿವ ಪರಮೇಶ್ವರ್, ನಾವು ಏಕಾಏಕಿ ಸರ್ಕಾರ ನಿರ್ಧಾರ ಮಾಡಿಲ್ಲ. ಎಲ್ಲಾ ಆಯಾಮಗಳಲ್ಲೂ ಚರ್ಚಿಸಿ ನಿರ್ಧರಿಸಲಾಗಿದೆ ಅಂದಿದ್ದಾರೆ.

ಆಳಂದ ಕೇಸ್ ವಾಪಸ್ ಪಡೆದಿರೋ ವಿಚಾರವಾಗಿ MLC ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದುತ್ವವಾದಿ ಮುತಾಲಿಕ್ ಕೇಸ್ ಕೂಡಾ ವಾಪಸ್ ಪಡೆದಿದ್ದೇವೆ. ಮುತಾಲಿಕ್ ಮಾಡೋದು ಪ್ರಚೋದನಾಕಾರಿ ಭಾಷಣ. ಮುಸ್ಲಿಮರು ಸೆಲ್ಫ್ ಡಿಫೆನ್ಸ್​ಗೆ ದೊಣ್ಣೆ ಹಿಡ್ಕೊಂಡಿರ್ತಾರೆ ಅಷ್ಟೇ ಎನ್ನುವ ಮೂಲಕ ಸಮರ್ಥನೆ ಮಾಡಿಕೊಂಡಿದ್ದಾರೆ.

ಮುಸ್ಲಿಮರ ಮೇಲಿನ ಕೇಸ್ ವಾಪಸ್ ಕುರಿತಂತೆ ಪ್ರತಿಕ್ರಿಯಿಸಿರೋ ಡಿಸಿಎಂ ಡಿಕೆ ಶಿವಕುಮಾರ್, ರಾಜಕೀಯವಾಗಿ ಅವರ ಮೇಲೆ ಕೇಸ್ ಹಾಕಿದ್ದರು. ರೈತರು, ಕನ್ನಡ ಚಳವಳಿಗಾರರು ಸೇರಿದಂತೆ ಎಲ್ಲಾ ಹೋರಾಟ ಮಾಡಿದವರ ಮೇಲಿದ್ದ ಎಲ್ಲಾ ಕೇಸ್ ವಾಪಸ್ಸು ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ಲಾಡ್ಲೆ ಮಶಾಕ್ ದರ್ಗಾದಲ್ಲಿ ನಡೆದಿದ್ದ ಗಲಭೆ ಪ್ರಕರಣದ ಕೇಸ್ ವಾಪಸ್ ಪಡೆದ ವಿಚಾರವಾಗಿ ಕಲಬುರಗಿಯಲ್ಲಿ ಹಿಂದೂ ಸಂಘಟನೆ ಮುಖಂಡ ಸಿದ್ರಾಮಯ್ಯ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ಖಾದರ್ ಶಿಫಾರಸಿನ ಮೇಲೆ ಕೇಸ್ ವಾಪಸ್ ಪಡೆಯಲಾಗಿದೆ. ಚಾರ್ಜ್​ಶೀಟ್​ನಲ್ಲಿ ಆರೋಪಿಗಳ ಕೃತ್ಯದ ಬಗ್ಗೆ ಉಲ್ಲೇಖಿಸಲಾಗಿತ್ತು. ಕೇಸ್ ವಾಪಸ್ ಪಡೆಯಲು ಆಗಲ್ಲ ಅಂತ ಪೊಲೀಸ್ ಇಲಾಖೆ ಹೇಳಿತ್ತು. ಚಾರ್ಜ್‌ಶಿಟ್‌ನಲ್ಲಿ ಬಲವಾದ ಸಾಕ್ಷ್ಯಾಧಾರಗಳು ಇವೆ ಅಂತಾ ಸಲಹೆ ನೀಡಿತ್ತು. ಆದ್ರೆ ಸರ್ಕಾರ ಏಕಾಏಕಿ ಕೇಸ್ ವಾಪಸ್ ಪಡೆದಿದೆ ಎಂದಿದ್ದಾರೆ.

ಯಾದಗಿರಿಯಲ್ಲಿ ಮಾತನಾಡಿದ ಶಿವಸೇನೆಯ ಸಿದ್ದಲಿಂಗ ಸ್ವಾಮೀಜಿ ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣ ಮಾಡ್ತಿದೆ. ಭಯೋತ್ಪಾದನೆಗೆ ಕುಮ್ಮಕ್ಕು ಕೊಡ್ತಿದೆ ಅಂತ ಆರೋಪಿಸಿದ್ರು. ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್​ ವಾಪಸ್ ವಿಚಾರವಾಗಿ, ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವೋಟ್ ಬ್ಯಾಂಕ್​ಗಾಗಿ ಓಲೈಕೆಗೆ ಸರ್ಕಾರ ಮುಂದಾಗಿದೆ ಅಂತ ಕಿಡಿಕಾರಿದ್ದಾರೆ. ಲಾಡ್ಲೆ ಮಷಾಕ್ ದರ್ಗಾ ಗಲಾಟೆ ಪ್ರಕರಣದ ಕೇಸ್ ವಾಪಸ್ ಪಡೆದ ವಿಚಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿ, ಇದು ಸಿದ್ದರಾಮಯ್ಯರ ಅತಿರೇತಕದ ಪರಮಾವಧಿ ಎಂದು ಕಿಡಿಕಾರಿದ್ದಾರೆ.

Related posts

Hariyana Vote Theft; ಹರಿಯಾಣದಲ್ಲೂ ಮತಗಳ್ಳತನ ಆಗಿದೆ.. ಸಾಕ್ಷ್ಯ ಕೊಟ್ಟ ರಾಹುಲ್​..

Publicspot

ಇವತ್ತು ವಿಶ್ವಾಸ ಗೆದ್ದು ಬೀಗ್ತಾರಾ ನಟ ವಿಜಯ್‌‌..? ಯಾರೆಲ್ಲಾ ಬೆಂಬಲಿಸ್ತಾರೆ..?

Publicspot

ಕೇರಳಂ ವಿಚಾರ ಅಂದ್ರೆ ಕಾಂಗ್ರೆಸ್​ ತಲೆ ಮೇಲೆ ಹೊತ್ತು ಮಾಡೋದ್ಯಾಕೆ..?

Publicspot

JDS – BJP ಮೈತ್ರಿ ಹಾಳಾದರೆ ಹಾಸನದ ಕಿತಾಪತಿಯೇ ಕಾರಣ..?

Publicspot

BiggBoss Congress; ಬಿಗ್​ಬಾಸ್​ ವಿಚಾರದಲ್ಲಿ ಹೊರಬಿತ್ತು ಕಾಂಗ್ರೆಸ್​ ಅಸಮಾಧಾನ!!

Publicspot

ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸ್ಥಗಿತ ಆಗುತ್ತಾ..? ಸರ್ಕಾರದ ಉದ್ದೇಶ ಏನು..?

Publicspot