The Public Spot
ಕ್ರೀಡೆರಾಜಕೀಯ

ಕಮಿಷನ್‌ ಆಸೆಗೆ ಆನೇಕಲ್‌ನಲ್ಲಿ ಕ್ರೀಡಾಂಗಣ ಮಾಡ್ತಿರೋದಾ..?

ಬೆಂಗಳೂರಿನ ಸೂರ್ಯನಗರದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯಗೆ ಬೆಳ್ಳಿ ಗದೆ ನೀಡಿ ಶಾಸಕ ಆನೇಕಲ್ ಶಿವಣ್ಣ ಅಭಿನಂದಿಸಿದ್ದಾರೆ. ಸಚಿವ ಜಮೀರ್ ಅಹಮದ್‌, ಡಿ.ಕೆ.ಸುರೇಶ್, ಶಿವಲಿಂಗೇಗೌಡರಿಗೆ ಬೆಳ್ಳಿ ಕಿರೀಟ ನೀಡಿ ಆನೇಕಲ್ ಶಿವಣ್ಣ ಸನ್ಮಾನಿಸಿದ್ದಾರೆ. ಗೃಹ ಸಚಿವ ಡಾ.ಜಿ ಪರಮೇಶ್ವರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಹೌಸಿಂಗ್ ಬೋರ್ಡ್ ಅಧ್ಯಕ್ಷ ಶಿವಲಿಂಗೇಗೌಡ, ಮಾಜಿ ಸಂಸದ ಡಿ.ಕೆ.ಸುರೇಶ್​​​ ಹಾಗೂ ಆನೇಕಲ್ ಶಾಸಕ ಬಿ ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ರು. ಈ ಸ್ಟೇಡಿಯಂ ಭಾರತದಲ್ಲೇ ಅತಿ ದೊಡ್ಡ ಎರಡನೇ ಸ್ಟೇಡಿಯಂ ಎಂಬ ಹೆಗ್ಗಳಿಕೆ ಪಡೆಯಲಿದೆ.

ಉದ್ಗಾಟನೆ ಬಳಿಕ ವೇದಿಕೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅತ್ಯಂತ ಸಂತೋಷದಿಂದ ಶಂಕುಸ್ಥಾಪನೆ ಮಾಡಿದ್ದೇನೆ. ಸೂರ್ಯಸಿಟಿಯಲ್ಲಿ ಕ್ರೀಡಾಂಗಣದ ಜೊತೆಗೆ ಕ್ರೀಡಾ ಗ್ರಾಮವೂ ನಿರ್ಮಾಣ ಆಗುತ್ತದೆ. ಅಂತಾರಾಷ್ಟ್ರೀಯ‌ ಕ್ರೀಡಾಂಗಣ, ನಮ್ಮ ಮನೆ ಯೋಜನೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಇಡೀ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ ಇಲ್ಲ. ಹೌಸಿಂಗ್ ಬೋರ್ಡ್‌ನಿಂದ ಇವತ್ತು ಆ ಕೆಲಸ ಮಾಡ್ತಿದ್ದೇವೆ ಎಂದಿದ್ದಾರೆ.

ಅಂತಾರಾಷ್ಟ್ರೀಯ ಕ್ರೀಡಾಂಗಣದಿಂದ ಈ ಭಾಗದ ಅಭಿವೃದ್ಧಿ ಜೊತೆಗೆ ಉದ್ಯೋಗ ಸೃಷ್ಟಿ ಆಗಲಿದೆ. ಹೌಸಿಂಗ್ ಬೋರ್ಡ್‌ನಲ್ಲಿ ಸ್ಟೇ ಸೈಟುಗಳು ಸಾಕಷ್ಟಿವೆ. ಅವುಗಳನ್ನ ಹರಾಜು ಹಾಕಿ ಹೌಸಿಂಗ್ ಬೋರ್ಡ್‌ಗೆ ಹಣ ಪಡೆಯಲು ಹೇಳಿದ್ದೇನೆ. ಹರಾಜಿನಿಂದ ಸುಮಾರು 20 ಸಾವಿರ ಕೋಟಿ‌ ಬರುತ್ತದೆ. ಬೆಂಗಳೂರು ಸುತ್ತಮುತ್ತ ಸೈಟು ಪಡೆಯೋದು ಕಷ್ಟ. ಭೂಮಿ ಬೆಲೆ ತುಂಬಾ ಜಾಸ್ತಿಯಾಗಿದೆ. ಆದರೂ ನಾಗರೀಕರಿಗೆ ಕೈಗೆಟಕುವ ದರದಲ್ಲಿ ಸೈಟು, ಮನೆ ಕಟ್ಟಿಕೊಡುವ ಕೆಲಸವನ್ನ ಮಾಡ್ತಿದ್ದಾರೆ ಎಂದಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಇವತ್ತು ಸಿಎಂಗೆ ಕೃಷ್ಣನ ವಿಗ್ರಹ ಕೊಟ್ಟರು, ನನಗೆ ವಿನಾಯಕ ವಿಗ್ರಹ ಕೊಟ್ಟರು. ವಿಜಯಕ್ಕೆ ವಿನಾಯಕ ಕಾರಣ ಎಂಬಂತೆ, ಬೇರು ಇಲ್ಲ ಅಂದ್ರೆ ಮರ ಉಳಿಯಲ್ಲ, ನಂಬಿಕೆ ಇಲ್ಲ ಅಂದ್ರೆ ಸಂಬಂಧ ಉಳಿಯಲ್ಲ. ನಿನ್ನೆ ಏನಾಯ್ತು ಎಂಬ ಚರ್ಚೆ ಅನಾವಶ್ಯಕ, ಇವತ್ತು ಏನು ಎಂಬುದು ಮುಖ್ಯ. ಬೆಂಗಳೂರಿನ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಇಲ್ಲಿ ಸ್ಟೇಡಿಯಂ ನಿರ್ಮಾಣ ಮಾಡ್ತಿದ್ದೇವೆ. ದಾರಿ ಇದ್ದ ಕಡೆ ನಡೆಯಬೇಕು, ದಾರಿ ಇಲ್ಲದಿದ್ರೆ ದಾರಿ ಮಾಡಿಕೊಂಡು ನಡೆಯಬೇಕು. ಕನಸಿಲ್ಲ ಅಂದ್ರೆ ಯಾವ ದಾರಿಯನ್ನು ಹುಡುಕಲು ಸಾಧ್ಯವಿಲ್ಲ ಎಂದಿದ್ದಾರೆ.

ಸಚಿವ ಜಮೀರ್ ಅಹ್ಮದ್ ಮಾತನಾಡಿ, ಈ ಭಾಗದಲ್ಲಿ ಬಹಳ ವರ್ಷದ ಕನಸು ಇಂದು ನನಸಾಗಿದೆ. ಮೂರು ಸಾವಿರ ಎಕರೆ ಸ್ವಾಧೀನ ಮಾಡಿಕೊಂಡಾಗ ಅಚ್ಚುಕಟ್ಟಾದ ಕ್ರೀಡಾಂಗಣಕ್ಕೆ ಬೇಡಿಕೆ ಇಟ್ಟಿದ್ರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಡಿ.ಕೆ.ಸುರೇಶ್ ಪ್ರಯತ್ನ ಈಡೇರಲಿಲ್ಲ. ಆದೆ ಇಂದು ನಾನು ವಸತಿ ಸಚಿವನಾದ ಬಳಿಕ ಡಿ.ಕೆ.ಸುರೇಶ್ ಒತ್ತಾಸೆಯಂತೆ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರೆವೇರಿಸಲಾಗಿದೆ ಎಂದಿದ್ದಾರೆ.

ಆನೇಕಲ್​​​ನಲ್ಲಿ ಕ್ರಿಕೆಟ್ ಸ್ಟೇಡಿಯಂ ವಿಚಾರಕ್ಕೆ ವಿಪಕ್ಷ ನಾಯಕ ಆರ್​ ಅಶೋಕ್​​ ವ್ಯಂಗ್ಯವಾಡಿದ್ದಾರೆ. ಬೆಂಗಳೂರಲ್ಲಿರುವ ಕ್ರಿಕೆಟ್ ಸ್ಟೇಡಿಯಂ ವರ್ಷಕ್ಕೆ ನಾಲ್ಕು ಬಾರಿ ಬಾಗಿಲು ತೆರೆಯುತ್ತದೆ.. 365 ದಿನದಲ್ಲಿ 360 ದಿನ ಬಾಗಿಲು ಮುಚ್ಚಿಕೊಂಡಿರುತ್ತದೆ ಅಂತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಒಳ್ಳೆ ಕಮಿಷನ್ ಬರ್ತಾ ಇದೆ ಅಂತ ಮಾಡ್ತಾ ಇದ್ದೀರಾ..? ಯಾರಾದ್ರೂ ಆ ಗ್ರೌಂಡ್ ಸುತ್ತ ಜಮೀನುಗಳನ್ನ ಯಾರು ಪರ್ಚೇಸ್ ಮಾಡಿದ್ದಾರೆ ಅನ್ನೋ ಲೆಕ್ಕ ಕೊಡಬೇಕು.. ಎಷ್ಟು ಎಕರೆಗಳಿದೆ, ಅದರ ಬೆಲೆ ಜಾಸ್ತಿ ಮಾಡೋಕೆ ಸ್ಟೇಡಿಯಂ ಮಾಡ್ತಾ ಇದ್ದೀರಾ..? ಕ್ರಿಕೆಟ್ ಆಟಗಾರ ಬಂದು ಆನೇಕಲ್​​ನಲ್ಲಿ ಮಾಡಿ ಅಂತ ಏನಾನ ಕೇಳಿದ್ರಾ? ನೀವು ಏಕಾಏಕಿ ಮಾಡಿದೀರಾ, ಅಂದ್ರೆ ಇದು ದುಡ್ಡೊಡಿಯೋ ಸ್ಕೀಮ್ ಅಂತಾ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.

Related posts

ಚುನಾವಣೆಗೆ ಸಜ್ಜಾಗ್ತಿದ್ಯಾ JDS..? ಇವತ್ತಿನ ಸಮಾವೇಶದ ಉದ್ದೇಶ ಏನು..?

Publicspot

ಗ್ಯಾರಂಟಿಗೆ ಮಾರು ಹೋಗ್ಬೇಡಿ.. ಸಾವಿನ ಹತ್ತಿರ ಹೋಗಿ ಬಂದಿದ್ದೇನೆ.. ಇದು ಸತ್ಯ

Publicspot

ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ

admin

ಪರಿಸರವನ್ನು ಪಠ್ಯಕ್ರಮವಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

admin

ಇವತ್ತು ವಿಶ್ವಾಸ ಗೆದ್ದು ಬೀಗ್ತಾರಾ ನಟ ವಿಜಯ್‌‌..? ಯಾರೆಲ್ಲಾ ಬೆಂಬಲಿಸ್ತಾರೆ..?

Publicspot

ಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಹಂತಕ್ಕೆ ಲಗ್ಗೆ ಹಾಕಿದ ಟೀಂ ಇಂಡಿಯಾ!

Publicspot