The Public Spot
ರಾಜ್ಯ

Mysore Mahisha Mandala; ಮೈಸೂರು ಚಾಮುಂಡಿಗೆ ಕೊಡುವ ಗೌರವ ಮಹಿಷನಿಗೂ ಕೊಡಿ..

ಮೈಸೂರು ದಸರಾ ಪ್ರಯುಕ್ತ ಆಯೋಜನೆ ಆಗಿರುವ ಮಹಿಷ ಮಂಡಲೋತ್ಸವದಲ್ಲಿ ಪ್ರೊ ಭಗವಾನ್ ಭಾಷಣ ಮಾಡಿದ್ದು, ಹಿಂದೂ ಧರ್ಮದಲ್ಲಿ ಚತುರ್ವರ್ಣ ಇದೆ. ಇದರಲ್ಲಿ ನಾಲ್ಕನೇ ವರ್ಣ ಶೂದ್ರ. ಶೂದ್ರ ಅಂದ್ರೆ ಗುಲಾಮರು. ಶೂದ್ರ ಅಂದ್ರೆ ಹಾದರಕ್ಕೆ ಹುಟ್ಟಿರೋರು ಅಂತ ಮನುಸ್ಮೃತಿ ಹೇಳುತ್ತದೆ ಎಂದು ಪ್ರೊ ಭಗವಾನ್ ವಿವಾದ್ಮಾತಕ ಭಾಷಣ ಮಾಡಿದ್ದಾರೆ. ಹಿಂದೂ ಧರ್ಮವನ್ನು ಸ್ವಾಮಿ ವಿವೇಕಾನಂದರು ಟೀಕೆ ಮಾಡಿರೋ ಅಷ್ಟು ಅಂಬೇಡ್ಕರ್ ಕೂಡ ಮಾಡಿಲ್ಲ. ದೀನ ದಲಿತರ ಕುತ್ತಿಗೆಯನ್ನು ಹಿಂದೂ ಧರ್ಮ ಮೆಟ್ಟಿ ತುಳಿಯುವಂತೆ ಯಾವ ಧರ್ಮವು ತುಳಿದಿಲ್ಲ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ.

ನೀವೆಲ್ಲರೂ ಸ್ವಾಭಿಮಾನಿಗಳು ಆಗ್ಬೇಕು. 1925 ಪೆರಿಯಾರ್ ಸ್ವಾಭಿಮಾನಿ ಚಳುವಳಿ ಮಾಡಿದ್ರು. ತಮಿಳುನಾಡಿನಲ್ಲಿ ಚಳುವಳಿ ಬ್ರಾಹ್ಮಣರ ಹಿಡಿತ ತಪ್ಪಿಸಿದರು. ಕರ್ನಾಟಕದಲ್ಲಿ ಬಸವಣ್ಣ ಮಾಡಿದ್ರು. ಆದ್ರೆ ಜನ ಸರಿಯಾಗಿ ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಜಾತಿ ವಿನಾಶ ಪುಸ್ತಕ ಓದಿ, ಸರಿಯಾದ ಧರ್ಮ ಯಾವುದು ಅಂತ ತಿಳಿದುಕೊಳ್ಳಲು ಬುದ್ಧ ಮತ್ತು ಧಮ್ಮ ಪುಸ್ತಕ ಓದಿ ಎಂದು ಸಲಹೆ ನೀಡಿದ್ದಾರೆ. ವಿಜ್ಞಾನಿ ಐಸ್ಟಿನ್ ಕೂಡ ಬುದ್ಧ ಧಮ್ಮ ಕುರಿತು ಹೊಗಳಿದ್ದಾರೆ ಎಂದು ಮಹಿಷ ಮಂಡಲೋತ್ಸವದಲ್ಲಿ ಪ್ರೊ ಭಗವಾನ್ ತಿಳಿಸಿದ್ದಾರೆ.

ಮಹಿಷ ಮಂಡಲೋತ್ಸವದಲ್ಲಿ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದೀ ಶರಣು ಹೇಳುತ್ತಾರೆ. ಪುರಾಣ ಎಂಬುದು ಪುಂಡರ ಗೋಷ್ಠಿ. ಭಕ್ತಿ ಎಂಬುದು ತೋರಿದ ಲಾಭ. ತನ್ನನ್ನು ತಾನು ಅರಿತವನೇ ದೇವರು ನೋಡಾ ಅಂತ ಬಸವಣ್ಣ ಹೇಳುತ್ತಾರೆ. ಪುರಾಣ ಎಂಬ ಪುಂಡರ ಗೋಷ್ಠಿ ಎನ್ನುವ ನಾವು ತಲೆ ಮೇಲೆ ಹೊತ್ತು ಹೋಗುವುದಿಲ್ಲ. ಪುರಾಣ, ವೇದ, ಆಗಮ ಎಲ್ಲವನ್ನೂ ಬಿಡಿ ಎಂದು ಬಸವಣ್ಣ ಹೇಳಿದ್ದಾರೆ. ನಾವು ಅಂಬೇಡ್ಕರ್ ಹೇಳಿರುವ ಹಾಗೆ ಟಾರ್ ರೋಡ್​ನಲ್ಲಿ ಹೋಗಬೇಕು ಎನ್ನುವ ಮೂಲಕ ಪರೋಕ್ಷವಾಗಿ ನಾವು ಹಿಂದೂ ಧರ್ಮದ ಜೊತೆ ಹೋಗಬಾರದು. ಇನ್ಮುಂದೆ ನಾವು ಬೌದ್ಧ ಧರ್ಮ ಅನ್ನುವ ಮೇನ್ ರೋಡ್​ನಲ್ಲಿ ಹೋಗೋಣ ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಕರೆ ಕೊಟ್ಟಿದ್ದಾರೆ.

ಇನ್ನೂ ಎಮ್ಮೆಯನ್ನು ಶೋಷಿತರ ವರ್ಗದ ಆಸ್ತಿ, ಎಮ್ಮೆಯಿಂದ ಏರುಮೆನಾಡು ಆಯ್ತು. ಅದನ್ನು ಮಹಿಷಾಪುರ ಅಂತ ಬ್ರಿಟಿಷ್ ಗೆಜೆಟ್​ನಲ್ಲಿ ಬರೆದಿದ್ದಾರೆ. ಅದನ್ನು ಮುಚ್ಚಿ ಹಾಕುವ ಕೆಲಸ ಆಗಿದೆ. ಪಟ್ಟಮಹಿಷ ಪಟ್ಟಮಹಿಷಿ ಅಂತಾರೆ. ಪಟ್ಟಕೋಣ ಅಂತ ಯಾಕೆ ಕರಿಯಲ್ಲ..? ಸುಳ್ಳು ಚರಿತ್ರೆ ಸೃಷ್ಟಿಯಾಗಿದೆ. ಮಹಿಷ ಮಧ್ಯಪ್ರದೇಶದಿಂದ ಬಂದಿದ್ರೆ ದುರ್ಗೆ ಎಲ್ಲಿಂದ ಬಂದಳು..? ಕಟ್ಟು ಕಥೆಗಳಿಂದ ನಮ್ಮನ್ನು ವಂಚನೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಮಹಿಷಾಸುರ ಮಹಿಷ ಮಂಡಲ ಬೌದ್ಧ ಧರ್ಮ ಇತ್ತ ಇಲ್ವಾ..? ಅಂತ ಚರ್ಚೆ ಆಗ್ತಿದೆ. ನಮ್ಮ ರಾಯಚೂರಿನ ಮಸ್ಕಿಯ ಸಣ್ಣಕ್ಕಿ ಸೇರಿ 9 ಜಾಗದಲ್ಲಿ ಶಾಸನಗಳು ಸಿಕ್ಕಿವೆ. ಮೈಸೂರಿನಲ್ಲಿ ಅಶೋಕ ರಸ್ತೆ, ಶ್ರೀಹರ್ಷ ರಸ್ತೆ ಯಾಕಿದೆ..? ಮಹಾರಾಜರು ಚರಿತ್ರೆ ಓದಿದ್ರು ಅದಕ್ಕಾಗಿ ಮೈಸೂರಿನ ರಸ್ತೆಗಳಿಗೆ ಹೆಸರು ಇಟ್ಟಿದ್ದಾರೆ. ಮಹಿಷಮಂಡಲ ಮಹಿಷಾಸುರ ಎಲ್ಲಕ್ಕೂ ಸಂಬಂಧವಿದೆ ಅಂತಾನೂ ಜ್ಞಾನ ಪ್ರಕಾಶ ಸ್ವಾಮೀಜಿ ತಿಳಿಸಿದ್ದಾರೆ.

ಚಾಮುಂಡೇಶ್ವರಿಗೆ ಕೊಡುವಷ್ಟು ಗೌರವ ಮಹಿಷಿನಿಗೂ ಕೊಡ್ಬೇಕು. ದಸರಾ ಉದ್ಘಾಟನೆ ಮಾಡಿದ್ರು, ಹಾಗೆ ಮಹಿಷಾನಿಗೆ ಪುಷ್ಪಾರ್ಚನೆ ಮಾಡಿದ್ರೆ ಸರ್ಕಾರಕ್ಕೆ ಏನಾಗ್ತಿತ್ತು..? ನಮ್ಮ ತೆರಿಗೆ ಹಣದಲ್ಲಿ ನೀವು ದಸರಾ ಮಾಡ್ತಿದ್ದೀರ , ಮಹಿಷನನ್ನು ಕಂಡರೆ ನಿಮಗೆ ಯಾಕೆ ಭಯ..? ಅವತ್ತಿನ ಕಾಲಕ್ಕೆ ಮಹಿಷನನ್ನು ಕಂಡರೆ ಭಯ ಇತ್ತು, ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಈಗಲೂ ಯಾಕೆ ಮಹಿಷನ ಭಯ..? ದಸರಾ ಉದ್ಘಾಟನೆ ಆಯ್ಕೆ ವಿಚಾರದಲ್ಲಿ ಸಂವಿಧಾನ ಓದಿ ಅಂತ ಸುಪ್ರೀಂ ಕೋರ್ಟ್ ಹೇಳಿದೆ. 46 ಕೋಟಿ ನಮ್ಮ ದುಡ್ಡಿನಲ್ಲಿ ದಸರಾ ಮಾಡ್ತಿದ್ದೀರಿ. ನಮಗೆ ನಮ್ಮ ಪಾಲು ಕೊಡಿ, ಇಲ್ಲವೇ ನೀವೇ ಮಹಿಷ ಮಂಡಲೋತ್ಸವ ಮಾಡಿ ಎಂದು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಜ್ಞಾನ ಪ್ರಕಾಶ ಸ್ವಾಮೀಜಿ ಕಿಡಿಕಾರಿದ್ದಾರೆ.

ಜಾತಿ ಜನಗಣತಿ ನಡೆಯುತ್ತಿದೆ. ಜಾತಿ ಕಲಂನಲ್ಲಿ ಹಿಂದೂ ಅಂತ ಬರೆಸಬೇಡಿ. ಬೌದ್ಧ ಅಂತ ಬರೆಸಿ ಎಂದು ಮಹಿಷ ಮಂಡಲೊತ್ಸವದಲ್ಲಿ ನಿವೃತ್ತ ಡಿಸಿಪಿ ಸಿದ್ದರಾಜು ಕರೆ ನೀಡಿದ್ದಾರೆ. ಈ ಹಿಂದೆ ಇತಿಹಾಸ ತಿರುಚಿದ್ದಾರೆ. ಆನೆ ಶಾಂತಿಯ ಸಂಕೇತ, ಮುಂದಿನ ದಿನಗಳಲ್ಲಿ ದಸರಾದಲ್ಲಿ ಆನೆಯ ಮೇಲೆ ಸಂವಿಧಾನ ಇಟ್ಟು ಮೆರವಣಿಗೆ ಮಾಡಬೇಕು. ಬುದ್ಧ, ಬಸವ, ಅಂಬೇಡ್ಕರ್ ಇರಬೇಕು. ಇನ್ಮುಂದೆ ಬುದ್ಧ, ಬಸವ, ಅಂಬೇಡ್ಕರ್, ಅಶೋಕ ಇರಬೇಕು ಎಂದು ನಿವೃತ್ತ ಡಿಸಿಪಿ ಸಿದ್ದರಾಜು ಆಗ್ರಹ ಮಾಡಿದ್ದಾರೆ.

Related posts

SC ಕ್ಯಾಸ್ಟ್ ಸೆನ್ಸ್; ದಲಿತರನ್ನು ಕ್ರಿಶ್ಚಿಯನ್ ಮಾಡಲು ಹೊರಟಿದೆ ರಾಜ್ಯ ಸರ್ಕಾರ.. ಬಿಜೆಪಿ ನಿಯೋಗ ಕಿಡಿ..

ಯಶವಂತಿ

ಈ ವರ್ಷ ಹಿಂದಿಗೆ ಅಂಕಗಳನ್ನೇ ನೀಡಿ.. ಸರ್ಕಾರಕ್ಕೆ ಮುಖಭಂಗ

Publicspot

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿ

admin

Caste Censes; ಇಂದಿನಿಂದ ಶುರುವಾಗುತ್ತದೆ ಜಾತಿ ಜನಗಣತಿ..! ನಿಮ್ಮ ಧರ್ಮ, ಜಾತಿ ಗೊಂದಲ ಬೇಡ..

Publicspot

ಬಿಡದಿ ಭೂ ಸ್ವಾಧೀನ ವಿಚಾರವಾಗಿ ಪೋಸ್ಟರ್​ ವಾಕ್ಸಮರ..! HDK ಕಿಡಿ..

Publicspot

Rain Alert: ರಾಜ್ಯದಲ್ಲಿ ಎರಡು ದಿನ ಮಳೆಯಬ್ಬರ.. ಯಾವೆಲ್ಲಾ ಜಿಲ್ಲೆಗಳಿಗೆ ಅಲರ್ಟ್‌..!?

Publicspot