The Public Spot
ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಹೆಕಮಾಂಡ್‌ಗೆ ಡೈನಾಮೇಟ್‌..

ರಾಜ್ಯ ರಾಜಕಾರಣದಲ್ಲಿ ನಾನಾ ನೀನಾ ಅನ್ನೋ ಫೈಟ್‌ ನಡೆಯುತ್ತಿದೆ. ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಪಟ್ಟು ಹಿಡಿದಿದ್ದಾರೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ್ದ ಸಿಎಂ. ಸಿದ್ದರಾಮಯ್ಯ ಮಹತ್ವದ ಚರ್ಚೆ ನಡೆಸಿದ್ದಾರೆ. ಆಪ್ತ ಶಾಸಕರು, ಸಚಿವರನ್ನ ಬಿಟ್ಟು ಏಕಾಂಗಿಯಾಗಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ದ ಸಿದ್ದರಾಮಯ್ಯ ಹೈಕಮಾಂಡ್‌ಗೆ ಖಡಕ್‌ ಸಂದೇಶ ರವಾನೆ ಮಾಡಿದ್ದಾರೆ ಎನ್ನಲಾಗ್ತಿದೆ. ಖರ್ಗೆ ಭೇಟಿ ಬಳಿಕ ಮಾಧ್ಯಮಗಳ ಎದುರಲ್ಲೂ ಖಡಕ್‌ ಆಗಿ ಮಾತನಾಡಿ ಸಿಎಂ ಸಿದ್ದರಾಮಯ್ಯ, ಪಕ್ಷ ಸಂಘಟನೆ ಬಗ್ಗೆ ಮಾತಾಡಿದೆ, ಮುಂದಿನ ಚುನಾವಣೆ ತಯಾರಿ ಬಗ್ಗೆ ಚರ್ಚೆ ಆಯ್ತು. ನಾಯಕತ್ವ ಬದಲಾವಣೆ ಅನ್ನೋದೆಲ್ಲಾ ಊಹಾಪೋಹ. ನಾನು ಡಲ್ ಆಗೋದು ಇಲ್ಲ, ಅತಿ ಸಂತೋಷವಾಗಿಯೂ ಇರಲ್ಲ ಎಂದಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಜೊತೆ ಸಿಎಂ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ನಿರ್ಣಯಕ್ಕೆ ಎಲ್ಲರೂ ಒಪ್ಪಬೇಕು. ಹೈಕಮಾಂಡ್ ನಿರ್ಣಯಕ್ಕೆ ನಾನು ಬದ್ದ ಎಂದಿರುವ ಸಿದ್ದರಾಮಯ್ಯ, ಹೈಕಮಾಂಡ್ ನಿರ್ಣಯವನ್ನ ನಾನು ಒಪ್ಪಬೇಕು, ಡಿ.ಕೆ ಶಿವಕುಮಾರ್ ಸಹ ಒಪ್ಪಬೇಕು. ಹೈಕಮಾಂಡ್‌ ನಾಯಕರು ಯಾವಾಗ ಕರೆಯುತ್ತಾರೋ ಆಗ ದೆಹಲಿಗೆ ಹೋಗ್ತೇನೆ ಎಂದಿದ್ದಾರೆ. ಜೊತೆಗೆ ಅಧಿಕಾರ ಹಸ್ತಾಂತರ ಅನ್ನೋದನ್ನು ನೀವೇ ಮಾಧ್ಯಮಗಳೇ ಹುಟ್ಟುಹಾಕಿರೋದು ಎಂದು ಗರಂ ಆಗಿದ್ದಾರೆ. ಇನ್ನೂ ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಶಾಸಕರು ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದು, ಹೈಕಮಾಂಡ್ ಹೇಳಿದ್ರೆ ನಾನೂ ಒಪ್ಪಿಕೊಳ್ಳಬೇಕು, ಡಿಕೆಶಿಯೂ ಒಪ್ಪಿಕೊಳ್ಳಬೇಕು. ಬೆಳಗ್ಗೆ ತಿಂಡಿ ತಿಂದೆ, ಊಟ ಮಾಡಿದ್ದೆ, ಸಾಯಂಕಾಲ ತಿಂಡಿ ತಿಂದೆ. ಖರ್ಗೆಯವರ ಮನೆಯಲ್ಲೂ ತಿಂಡಿ ತಿಂದೆ. ಬೋಂಡ ಮಾಡಿದ್ರು ತಿಂದೆ. ಡ್ರೈಪ್ರೂಟ್ಸ್ ಇಟ್ಟಿದ್ರು ತಿಂದೆ ಎಂದು ವ್ಯಂಗ್ಯವಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಕ್ಲೋಸ್ ಡೋರ್ ಮೀಟಿಂಗ್‌ನಲ್ಲಿ ನಾಯಕತ್ವ ಗೊಂದಲದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪ ಮಾಡಿದ್ದು, ಇಬ್ಬರೂ ಪರಸ್ಪರ ಸಮನಯ್ವಯದಿಂದ ಹೋಗುವಂತೆ ಖರ್ಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ತಮ್ಮಿಂದ ಯಾವುದೇ ಗೊಂದಲ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಡಿ.ಕೆ ಶಿವಕುಮಾರ್ ಆಪ್ತರ ನಡೆ ವಿರುದ್ದ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದು, ದೆಹಲಿ ಪರೇಡ್ ಬಗ್ಗೆಯೂ ಪ್ರಸ್ತಾಪಿಸಿ ಸಿಎಂ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಸಿಎಂ ಬದಲಾವಣೆ ಆಗಬೇಕೆಂದು ಕೆಲವು ಶಾಸಕರು ಮಾತಾಡಿದ್ದಾರಂತೆ, ಅದಕ್ಕಾಗಿಯೇ ದೆಹಲಿಗೆ ಹೋಗಿದ್ದೇವೆ ಎಂದು ಹೇಳಿದ್ದಾರೆ. ಇದರಿಂದ ಸಾಕಷ್ಟು ಗೊಂದಲ ಆಗಿಬಿಟ್ಟಿದೆ ಎಂದಿದ್ದಾರೆ ಎನ್ನಲಾಗಿದೆ.

ಸಂಪುಟ ಪುನಾರಚನೆಗೂ ಅನುಮತಿ ಕೇಳಿದ ಸಿಎಂ ಸಿದ್ದರಾಮಯ್ಯ ಮಾತಿಗೆ ರಾಹುಲ್ ಗಾಂಧಿ ಜೊತೆ ಚರ್ಚೆ ಮಾಡಿ ತಿಳಿಸುವುದಾಗಿ ಖರ್ಗೆ ಹೇಳಿದ್ದಾರಂತೆ. ಆದರೆ ಕ್ಯಾಬಿನೆಟ್‌ ಪುನಾರಚನೆಗೂ ಹೈಕಮಾಂಡ್‌ ಒಪ್ಪಿಗೆ ಕೊಟ್ಟಿಲ್ಲ. ಅಧಿಕಾರ ಹಸ್ತಾಂತರದ ಬಗ್ಗೆಯೂ ಹೈಕಮಾಂಡ್‌ ಏನನ್ನೂ ಹೇಳಿಲ್ಲ. ಆದಷ್ಟು ದಿನ ಹೀಗೇ ತಳ್ಕೊಂಡು ಹೋಗುವ ಉದ್ದೇಶ ಹೊಂದಿರುವಂತೆ ಕಾಣ್ತಿದೆ. ಆದರೆ ನಾನು ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿದರೆ ಸಾಕಷ್ಟು ಶಾಸಕರು ಬಂಡೇಳುವ ಸಾಧ್ಯತೆಯಿದೆ. ಎಲ್ಲಾ ಶಾಸಕರ ಜೊತೆಗೆ ಒಮ್ಮೆ ಚರ್ಚೆ ಮಾಡಿ. ಶಾಸಕರ ಅಭಿಪ್ರಾಯದಂತೆ ನಾವೆಲ್ಲರೂ ನಡೆಯೋಣ ಎಂದಿದ್ದಾರೆ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೈಕಮಾಂಡ್‌ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಸಿದ್ದರಾಮಯ್ಯ ಸೂಚ್ಯವಾಗಿ ಹೇಳಿರುವ ಮಾತು ಹೈಕಮಾಂಡ್‌ ದಿಗಿಲುಗೊಳ್ಳುವಂತೆ ಮಾಡಿದ ಎನ್ನಬಹುದು.

Related posts

ಸಚಿವ ಸಂಪುಟ ವಿಸ್ತರಣೆ ಫಿಕ್ಸ್​.. ದೆಹಲಿಗೆ ಡಿಸಿಎಂ ಡಿಕೆಶಿ.. ಸಿಎಂ ಪಟ್ಟ ಯಾರಿಗೆ..?

Publicspot

ಗ್ಯಾರಂಟಿಗೆ ಮಾರು ಹೋಗ್ಬೇಡಿ.. ಸಾವಿನ ಹತ್ತಿರ ಹೋಗಿ ಬಂದಿದ್ದೇನೆ.. ಇದು ಸತ್ಯ

Publicspot

ಕಾಂಗ್ರೆಸ್​ನಲ್ಲಿ ಡಿನ್ನರ್​ ಪಾಲಿ‘ಟ್ರಿಕ್ಸ್​’ ಡಿಕೆಶಿ ಉದ್ದೇಶ ಏನು..? ಸಿಎಂ ಆಗ್ತಾರಾ..?

Publicspot

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಸಿದ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು:

admin

ಮಾಜಿ ಮಿನಿಸ್ಟರ್​ ರಾಜಣ್ಣ.. ಮತ್ತು ಆ ಮೂರು ತಪ್ಪುಗಳು.. ಡಿಕೆಶಿಗೆ ಕೈ ಜೋಡಿಸಿದ್ರಾ ಸಿಎಂ..?

Publicspot

ಔಟ್‌ ಗೋಯಿಂಗ್‌ ಸಿಎಂ ಸಿದ್ದರಾಮಯ್ಯಗೆ ಮಗನ ಬಗ್ಗೆ ಅಷ್ಟೇ ಚಿಂತೆ..

Publicspot