The Public Spot
ರಾಜಕೀಯ

ಸಿದ್ದರಾಮಯ್ಯ ರಾಜೀನಾಮೆ.. ಅವಧಿ ಪೂರ್ವ ಚುನಾವಣೆ ನಿರೀಕ್ಷೆ..!

ಸಿದ್ದರಾಮಯ್ಯಗೆ ರಾಜೀನಾಮೆ ನೀಡಲು ಹೈಕಮಾಂಡ್ ಸೂಚನೆ ನೀಡ್ತಿದ್ದಂತೆ ಡಿ.ಕೆ ಶಿವಕುಮಾರ್‌ ಟೀಮ್ ಸಖತ್‌ ಹ್ಯಾಪಿಯಾಗಿದೆ. ಡಿ.ಕೆ ಶಿವಕುಮಾರ್‌ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಇಕ್ಬಾಲ್ ಹುಸೇನ್ ಹರ್ಷ ವ್ಯಕ್ತಪಡಿಸಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಇಕ್ಬಾಲ್, ಭಗವಂತನ ದಯೆಯಿಂದ ಒಳ್ಳೆಯ ಗಳಿಗೆ ಕೂಡಿ ಬಂದಿದೆ. ಮೊದಲು ನಾನು ಧ್ವನಿ ಎತ್ತಿದ್ದೆ. ಆ ಕೂಗು ಎಷ್ಟರ ಮಟ್ಟಿಗೆ ಹೋಯ್ತು ಗೊತ್ತಿಲ್ಲ. ಭಗವಂತ ನಮ್ಮ ನಾಯಕರ ಆಸೆಯನ್ನು ನೆರವೇರಿಸಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಸಿಎಂ ಬದಲಾವಣೆ ವಿಚಾರಕ್ಕೆ ಚಿಕ್ಕಮಗಳೂರು ಶಾಸಕ ತಮ್ಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯಪಾಲರ ಸಮಯವನ್ನ ಸಿಎಂ ಕೇಳಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದಿದ್ದಾರೆ.

ದೆಹಲಿಯಲ್ಲಿ ಏನು ಚರ್ಚೆ ಆಗಿದೆ ಎಂದು ಗೊತ್ತಿಲ್ಲ ಎಂದು ಶಾಸಕ ಹೆಚ್‌.ಸಿ ಬಾಲಕೃಷ್ಣ ಹೇಳಿದ್ದಾರೆ. ನಾವು ಅವರ ಬಣ, ಇವರ ಬಣ ಅಂತ ಏನೂ ಇಲ್ಲ. ಸಿದ್ದರಾಮಯ್ಯ ಮುಂದುವರಿಯುವುದಾದರೆ ನಮ್ಮ ತಕರಾರಿಲ್ಲ. ಸಿದ್ದರಾಮಯ್ಯರನ್ನ ತೆಗೆದು ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿ ಅಂತ ನಾವು ಹೇಳಲ್ಲ. ಸಿಎಲ್‌ಪಿ ಬಗ್ಗೆ ಯಾವುದೇ ಮೆಸೇಜ್ ಬಂದಿಲ್ಲ ಎಂದಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್‌ ಪಾಳಯದಲ್ಲಿ ಸಂಭ್ರಮಾಚರಣೆ ಜೋರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಡಿಸಿಎಂ ಅಭಿಮಾನಿಗಳು ಫುಲ್ ಖುಷ್​ ಆಗಿ ಪೋಸ್ಟ್ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮುಂದಿನ ಸಿಎಂ ಡಿಕೆ ಶಿವಕುಮಾರ್ ಅನ್ನೋ ಪೋಸ್ಟ್​ಗಳು ರಾರಾಜಿಸ್ತಿವೆ. ಸಿಎಂ ಪಟ್ಟಕ್ಕೆ ಡಿ.ಕೆ ಶಿವಕುಮಾರ್‌ ಬರೋದು ಖಚಿತವಾಗಿರೋ ಹಿನ್ನೆಲೆ ಡಿಕೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡ್ತಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, ದೆಹಲಿಯಲ್ಲಿ ಸರಣಿ ಸಭೆಯ ಬಳಿಕ ಹೈಕಮಾಂಡ್ ಈ ತೀರ್ಮಾನ ತೆಗೆದುಕೊಂಡಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚಿಸಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಅವನತಿ ಆರಂಭವಾಗಲಿದೆ ಎಂದಿದ್ದಾರೆ. ಈ ಬೆಳವಣಿಗೆಯನ್ನು ದೇಶ ಹಾಗೂ ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಸಿದ್ದರಾಮಯ್ಯ ನಂತರ ಮುಂದೆ ಸಿಎಂ ಯಾರಾಗುತ್ತಾರೆ ಎಂಬುದು ತಿಳಿದಿಲ್ಲ. ಆದರೆ ಯಾರೇ ಆದರೂ ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದು ಖಚಿತ. ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಿಂದ ಅವಧಿ ಪೂರ್ವ ಚುನಾವಣೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಅನುಭವಿ ಮುಖ್ಯಮಂತ್ರಿ, ನನಗೆ ಅವರ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ ಅವರ ಆಡಳಿತದಲ್ಲಿ ರಾಜ್ಯದ ಸಾಲದ ಪ್ರಮಾಣ ಮಿತಿಮೀರಿದೆ ಎಂದು ಟೀಕಿಸಿದ್ದಾರೆ.

ಹತ್ತು ಲಕ್ಷ ಕೋಟಿಗೂ ಹೆಚ್ಚಿನ ಸಾಲವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಭ್ರಷ್ಟಾಚಾರ ಹಾಗೂ ದುರಾಡಳಿತ ಮಿತಿ ಮೀರಿದೆ ಎಂದಿರುವ ವಿಜಯೇಂದ್ರ, ರಾಜ್ಯದ ಇತಿಹಾಸದಲ್ಲೇ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಂಗ್ರೆಸ್ ಅವಧಿಯಲ್ಲಿ ನಡೆದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಮೂಡಾ ಹಗರಣ ಸೇರಿದಂತೆ ಅನೇಕ ಭ್ರಷ್ಟಾಚಾರ ನಡೆದಿದೆ. ಇದೀಗ ಅಂತಿಮವಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡಲಿದ್ದಾರೆ. ಮುಂದೆ ಸಿಎಂ ಯಾರಾಗುತ್ತಾರೆ ಎಂಬುದು ಮುಖ್ಯ ಅಲ್ಲ. ರಾಜ್ಯದ ಅಭಿವೃದ್ಧಿ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ಮುಖ್ಯ ಎಂದಿದ್ದಾರೆ. ಒಟ್ಟಾರೆ ಬಿಜೆಪಿ ಅವಧಿಗೂ ಮುನ್ನ ವಿಧಾನಸಭಾ ಚುನಾವಣೆ ಎದುರಾಗುವ ಬಗ್ಗೆ ನಿರೀಕ್ಷೆ ಇರಿಸಿಕೊಂಡಿದ್ದು, ಮುಖ್ಯಮಂತ್ರಿ ಆದ ಬಳಿಕ ನೂತನ ಸರ್ಕಾರ ಹೇಗೆ ಸಾಗುತ್ತದೆ ಅನ್ನೋದನ್ನು ಕಾದು ನೋಡ್ಬೇಕು.

Related posts

ಬಿಜೆಪಿಯವರು ಕರ್ನಾಟಕದಲ್ಲಿ ಇಂತಹ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ?

admin

ತ್ರಿಭಾಷಾ ಸೂತ್ರ ವಿಚಾರದಲ್ಲಿ ಕಾಂಗ್ರೆಸ್‌ ನಿಲುವು ಏನು..? ಹಿಂದಿ ಬೇಡ.. ಉರ್ದು ಬೇಕಾ..?

Publicspot

ಕಾಂಗ್ರೆಸ್​ನಲ್ಲಿ ಸಂಪುಟ ಪುನಾರಚನೆ ಒತ್ತಡ.. ಹೈಕಮಾಂಡ್​ ಹಾದಿ ಏನು..?

Publicspot

BJP ಬಾಣವನ್ನು ಬಿಜೆಪಿಗೇ ತಿರುಗಿಸಿದ ಸಚಿವ ಕೃಷ್ಣಬೈರೇಗೌಡ..!

Publicspot

ಔಟ್‌ ಗೋಯಿಂಗ್‌ ಸಿಎಂ ಸಿದ್ದರಾಮಯ್ಯಗೆ ಮಗನ ಬಗ್ಗೆ ಅಷ್ಟೇ ಚಿಂತೆ..

Publicspot

Vote Theft.. ರಾಹುಲ್​ ಆರೋಪಕ್ಕೆ ಟೀಕೆ ಮಾಡಿದವರಿಗೆ ಪ್ರಿಯಾಂಕ್​ ತಿರುಗೇಟು..

Publicspot