The Public Spot
Uncategorized

Supreme Court; ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆತ.. ಕಾರಣ ಏನು..?

ಸುಪ್ರೀಂಕೋರ್ಟ್‌ನಲ್ಲಿ ಹಿಂದೆಂದೂ ನಡೆಯದೆ ಇದ್ದ ಆಘಾತಕಾರಿ ಘಟನೆಯೊಂದು ನಡೆದಿದೆ. ಸುಪ್ರೀಂಕೋರ್ಟ್​ CJI (ಚೀಫ್​ ಜಸ್ಟೀಸ್​ ಆಫ್​ ಇಂಡಿಯಾ) ಬಿ.ಆರ್ ಗವಾಯಿ​ ಮೇಲೆ ಶೂ ಎಸೆದಿರುವ ಕೃತ್ಯ ಭಾರೀ ಸಂಚಲನ ಉಂಟು ಮಾಡಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಅಂದ್ರೆ ಈ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಂತ ಉನ್ನತ ಮಟ್ಟದ ಸ್ಥಾನ ಆಗಿರುತ್ತದೆ. ಆದರೆ ಸಿಜೆಐ ಬಿ.ಆರ್‌.ಗವಾಯಿ ಮೇಲೆ ವಕೀಲರೊಬ್ಬರು ಶೂ ಎಸೆದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಪೀಠದಲ್ಲಿದ್ರು. ಕೋರ್ಟ್‌ಗೆ ಹಾಜರಾಗಿದ್ದ ವಕೀಲ ಕಿಶೋರ್ ರಾಕೇಶ್ ಏಕಾಏಕಿ, ಕಾಲಿನಿಂದ ಶೂ ಕಳಚಿ ಚೀಫ್​ ಜಸ್ಟೀಸ್​ ಪೀಠದ ಕಡೆಗೆ ತೂರಿದ್ದಾನೆ. ಸನಾತನ ಧರ್ಮಕ್ಕೆ ಅಪಮಾನ ಆದರೆ ನಾನು ಸಹಿಸಲ್ಲ ಅಂತ ಕೂಗಾಡಿ ಆಕ್ರೋಶ ಹೊರಹಾಕಿದ್ದಾನೆ ಎನ್ನಲಾಗಿದೆ. ಅಷ್ಟರಲ್ಲಿ ವಕೀಲನನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯದ ಆವರಣದಿಂದ ಹೊರಕ್ಕೆ ಕರೆದುಕೊಂಡು ಬಂದಿದ್ದಾರೆ. ಪೊಲೀಸ್​ ವಿಚಾರಣೆಯಲ್ಲಿ ಘಟನೆಗೆ ಕಾರಣ ಏನು ಅನ್ನೋದನ್ನು ವಕೀಲ ಕಿಶೋರ್​ ರಾಕೇಶ್​​ ಬಾಯ್ಬಿಟ್ಟಿದ್ದಾರೆ.

ಮಧ್ಯಪ್ರದೇಶದದಲ್ಲಿ ವಿಷ್ಣು ವಿಗ್ರಹ ಸ್ಥಾಪನೆ ವಿವಾದ ಸ್ವರೂಪ ಪಡೆದುಕೊಂಡಿತ್ತು. ಮಧ್ಯಪ್ರದೇಶದ ಜವಾರಿ ದೇವಾಲಯದ 7 ಅಡಿ ಎತ್ತರದ ವಿಷ್ಣುವಿನ ವಿಗ್ರಹ ಸ್ಥಾಪನೆಗೆ ಅರ್ಜಿ ಸಲ್ಲಿಕೆ ಆಗಿತ್ತು. ವಿಗ್ರಹ ಪುನರ್​​​​​​ ನಿರ್ಮಿಸಲು ರಾಕೇಶ್ ದಲಾಲ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನ ಸಿಜೆಐ ಬಿ.ಆರ್​ ಗವಾಯಿ ಅವರಿದ್ದ ಪೀಠ ವಜಾಗೊಳಿಸಿತ್ತು. ಕಳೆದ ಮೇ 16 ರಂದು ಅರ್ಜಿ ವಜಾ ಆಗಿತ್ತು. ಅರ್ಜಿ ಪ್ರಚಾರದ ಹಿತಾಸಕ್ತಿ ಇರುವಂತಿದೆ ಎಂದು ಸಿಜೆಐ ಹೇಳಿದ್ದರು. ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳುತ್ತಿದ್ದೀರಿ, ಹೋಗಿ ದೇವರನ್ನೇ ಏನಾದರೂ ಮಾಡಲು ಕೇಳಿಕೊಳ್ಳಿ, ದೇವರನ್ನೇ ಪ್ರಾರ್ಥಿಸಿ, ಧ್ಯಾನ ಮಾಡಿ, ಆಗ ಮರುಸ್ಥಾಪನೆಗೆ ದಾರಿ ತೋರಿಸಬಹುದು ಎಂದಿದ್ದರಂತೆ CJI ಬಿ.ಆರ್​ ಗವಾಯಿ. ಈ ಹೇಳಿಕೆ ಖಂಡಿಸಿ ವಕೀಲ ಕಿಶೋರ್‌‌ ಶೂ ಎಸೆದಿದ್ದಾನೆ ಎನ್ನಲಾಗ್ತಿದೆ.

ಚೀಫ್​ ಜಸ್ಟೀಸ್​ ಮೇಲೆ ಶೂ ಎಸೆಯುತ್ತಿದ್ದಂತೆ ವಕೀಲ ಕಿಶೋರ್ ರಾಕೇಶ್​ನನ್ನು ಪೊಲೀಸ್ರು ಅರೆಸ್ಟ್‌ ಮಾಡಿದ್ದಾರೆ.. ಬಾರ್ ಕೌನ್ಸಿಲ್ ಆಫ್ ಇಂಡಿಯಾ ವಕೀಲ ವೃತ್ತಿಯಿಂದ ವಜಾ ಮಾಡಿದೆ. ರಾಷ್ಟ್ರದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ತಂದಿದ್ದಕ್ಕೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರೋ ಸಿಜೆಐ ಬಿ.ಆರ್​ ಗವಾಯಿ, ಈ ಘಟನೆಯಿಂದ ವಿಚಲಿತರಾಗಿಲ್ಲ. ಇದ್ಯಾವುದು ನನ್ನ ಮೇಲೆ ಪರಿಣಾಮ ಬೀರಲ್ಲ. ವಕೀಲರು ತಮ್ಮ ವಾದ ಮಂಡನೆಯನ್ನ ಮುಂದುವರಿಸಿ ಅಂತ ಕೋರ್ಟ್​ನಲ್ಲಿದ್ದ ಬೇರೆ ವಕೀಲರಿಗೆ ಹೇಳಿದ್ದಾರೆ ಎನ್ನಲಾಗಿದೆ

ದೇವಸ್ಥಾನದ ಮರು ನಿರ್ಮಾಣಕ್ಕೆ ಹೋಗಿ ವಿಷ್ಣುವನ್ನೇ ಕೇಳು ಎಂದಿದ್ದ ಸಿಜೆಐ ಮಾತಿಗೆ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ಹೆಚ್ಚಾಗ್ತಿದ್ದಂತೆ ನಾನು ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ ಅಂತ ಬಿ.ಆರ್​ ಗವಾಯಿ ಸ್ಪಷ್ಟನೆಯನ್ನೂ ಕೊಟ್ಟಿದ್ರು. ಆದರೂ ಸನಾತನ ಧರ್ಮದ ವಿರುದ್ಧ ಮಾತನಾಡಿದರೆ ಸಹಿಸಲ್ಲ, ಸನಾತನ ಧರ್ಮಕ್ಕೆ ಅಗೌರವ ಸಹಿಸಲ್ಲ ಎಂದು ಚೀಫ್​ ಜಸ್ಟೀಸ್​ ಮೇಲೆ ಶೂ ಎಸೆದಿರುವುದು ಸಹಿಸಲಾರದ ವಿಚಾರ. ಸಾಕಷ್ಟು ಮಂದಿ ಈ ಘಟನೆಯನ್ನು ಖಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಿ.ಆರ್​ ಗವಾಯಿ ಜೊತೆಗೆ ಮಾತನಾಡಿದ್ದು, ಈ ಘಟನೆಯನ್ನು ಖಂಡಿಸುತ್ತೇನೆ. ಈ ರೀತಿಯ ಘಟನೆ ನಡೆಯಬಾರದಿತ್ತು ಎಂದಿದ್ದಾರೆ. ಆರೋಪಿತನ ವಿರುದ್ಧ ಇಡೀ ಭಾರತವೇ ಇದೆ ಎಂದಿದ್ದಾರೆ ಎನ್ನಲಾಗಿದೆ.

Related posts

ಉಗ್ರರು, ಅಪರಾಧಿಗಳ ಪಾಲಿನ ಸ್ವರ್ಗ ನಮ್ಮ ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲು

Publicspot

ನೀಟ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್‌ಗೆ ಯಾರು ಹೊಣೆ..? ಜವಾಬ್ದಾರಿ ಯಾರದ್ದು..?

Publicspot

Big Boss Bund: ಬಿಗ್‌‌ಬಾಸ್‌ ಮನೆಗೆ ಬೀಗ ಬಿದ್ದಿದೆ.. ಮುಂದೆ ಇರುವ ದಾರಿ ಯಾವುದು..?

Publicspot

ಚಂದ್ರಚೂಡ್​ ಕಥೆಗಳನ್ನು ಯಾವುದೇ ನಿರ್ಮಾಪಕ ಸಿನಿಮಾ ಮಾಡುವಂತಿಲ್ಲ..!

Publicspot

Kanthara Rishab Shetty Master Plan; ಕಾಂತಾರ ಅಧ್ಯಾಯ ಒಂದರ ಪ್ರಚಾರ ಶುರುವಾಗಿದೆ.. ಶೆಟ್ಟರ ಬುದ್ಧಿವಂತಿಕೆ ವರ್ಕ್​ ಆಗ್ತಿದೆ..

ಯಶವಂತಿ

ಅಯೋಧ್ಯೆಯಲ್ಲಿ ಬಾನಂಗಳದಲ್ಲಿ ಹಾರಿದ ರಾಮಧ್ವಜ.. ಮೋದಿ, ಭಾಗವತ್‌ ಭಾಗಿ..

Publicspot