September 20, 2026
The Public Spot
ರಾಜ್ಯ

ಮಳೆ ಸಾವಿನ ತನಿಖೆಗೆ ಸಮಿತಿ ರಚನೆ.. ಎಂಜಿನಿಯರ್ಸ್‌ ರಜೆ ರದ್ದು..

ಬೆಂಗಳೂರಿನಲ್ಲಿ ಭಾರೀ ಮಳೆಗೆ ಬೌರಿಂಗ್‌‌ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಮಂದಿ ಸಾವನ್ನಪ್ಪಿದ ಪ್ರಕರಣದ ಬಗ್ಗೆ ತನಿಖೆ ಮಾಡಲು ಆದೇಶ ಹೊರಡಿಸಲಾಗಿದೆ.. ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಸಮಿತಿಯಲ್ಲಿ ತಹಶೀಲ್ದಾರ್‌ ಹಾಗೂ ಪಿಡಬ್ಲೂಡಿ ಇಲಾಖೆ ನಿವೃತ್ತ ಎಂಜಿನ ಇಯರ್‌‌ ಕೂಡ ಇರಲಿದ್ದಾರೆ. ದುರಂತಕ್ಕೆ4 ಕಾರಣ ಏನು ಅನ್ನೋ ಬಗ್ಗೆ ತನಿಖೆ ನಡೆಸಿ 7 ದಿನದೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಲಾಗಿದೆ..

ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ.. ಈ ಹಿನ್ನೆಲೆ ಇಂದು ಡಿಸಿಎಂ ಡಿಕೆ ಶಿವಕುಮಾರ್​ ಬೆಂಗಳೂರು ರೌಂಡ್ಸ್​ ಹಾಕಲಿದ್ದಾರೆ. ಮಳೆಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇದೇ ವೇಳೆ 2 ಫ್ಲೈಓವರ್​ ಉದ್ಘಾಟನೆ ಮಾಡಲಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆಶಿ, ಈಗಾಗಲೇ ಸಂಚಾರಕ್ಕೆ ಅಡ್ಡಿಯಾಗಿರುವ ಮರಗಳ ವರದಿ ಕೇಳಿದ್ದೇನೆ. ವರಿದಿ ಬಂದ ಬಳಿಕ ಜಿಬಿಎ ಅಧಿಕಾರಿಗಳಿಗೆ ಸೂಚನೆ ಕೊಡ್ತೇನೆ ಎಂದಿದ್ದಾರೆ..

ಬೆಂಗಳೂರು ಹೊರವಲಯ ತಲಘಟ್ಟಪುರದಲ್ಲಿ ಮಳೆಯಾಗಿದೆ. ಬಿಟ್ಟು ಬಿಡದೇ ಮಳೆ ಸುರಿದಿದ್ದು, ಹವಾಮಾನ ಇಲಾಖೆ ಆರೆಂಜ್​ ಅಲರ್ಟ್​​ ಘೋಷಿಸಿದೆ.. ಇನ್ನು ಬೆಂಗಳೂರಲ್ಲಿ ಮಹಾ ಮಳೆಗೆ ಜನ ಜೀವನ ಬುಡಮೇಲು ಆಗುತ್ತಿದ್ದು, ಜಿಬಿಎ ಮುಖ್ಯ ಆಯುಕ್ತರು ನಗರ ಪಾಲಿಕೆಗಳಿಗೆ ಖಡಕ್ ಸೂಚನೆ ಕೊಟ್ಟಿದ್ದು, ಮಳೆ ನಿಲ್ಲುವವರಿಗೆ ಎಲ್ಲಾ ಇಂಜಿನಿಯರ್‌ಗಳ ರಜೆ ರದ್ದು ಮಾಡಲಾಗಿದೆ. ಐದು ನಗರ ಪಾಲಿಕೆಗಳ ಆಯುಕ್ತರಿಗೂ ಸೂಚಿಸಿರುವ ಮಹೇಶ್ವರ್ ರಾವ್, ಮರ ತೆರವು, ಒಳಚರಂಡಿ ಹರಿವು ಹೀಗೆ ಎಲ್ಲಾ ತರಹದ ಕೆಲಸಗಳು ನಿರಂತರ ನಡೆಯಬೇಕು ಎಂದು ಸೂಚಿಸಿದ್ದಾರೆ.

ಬೆಂಗಳೂರಿನ ಕೆ.ಆರ್ ಸರ್ಕಲ್ ಅಂಡರ್ ಪಾಸ್‌ನಲ್ಲಿನ್ನೂ ನಿಂತಿರುವ ಮಳೆ ನೀರು ತೆರವು ಮಾಡಲು ಹರಸಾಹಸ ಮಾಡಲಾಗಿದೆ. ಮಳೆ ಬಂದು ಒಂದು ದಿನ ಕಳೆದ್ರೂ ಅಂಡರ್ ಪಾಸ್‌ನಲ್ಲಿ ತುಂಬಿದ ಮಳೆ ನೀರು ಹಾಗೇ ಇದೆ. ನಿನ್ನೆ ಬೆಳಗ್ಗೆಯಿಂದ ಅಂಡರ್ ಪಾಸ್‌ನಲ್ಲಿದ್ದ ನೀರು‌ ಹೊರ ಬಿಡುವ ಕಾರ್ಯ ನಡೆಯುತ್ತಿದೆ. ಎರಡು ಮೋಟರ್ ಅಳವಡಿಸಿ ನೀರು ಹೊರ ತೆಗೆಯುತ್ತಿದ್ದರೂ ನೀರು ಖಾಲಿ ಆಗಿಲ್ಲ. ಅಂತಿಮವಾಗಿ ಅಗ್ನಿಶಾಮಕ ದಳದ ವಾಹನದಿಂದ ನೀರು ಹೊರಬಿಡುವ ಕೆಲಸ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯ ಗಾಣಕಲ್ ಗ್ರಾಮದಲ್ಲಿ ಜೋರು ಮಳೆಗೆ ರೈತರು ಬೆಳೆದ ಬೆಳೆಗಳು ನಾಶವಾಗಿವೆ. ಬಾಳೆ ಹಾಗೂ ತೆಂಗಿನ ಮರಗಳು ನೆಲಕ್ಕುರುಳಿ ರೈತರಿಗೆ ಅಪಾರ ನಷ್ಟವಾಗಿದೆ. ಅಲ್ದೇ ಮನೆಗಳ ಮೇಲೆ ಮರ ಬಿದ್ದು, ವಿದ್ಯುತ್​ ಸಂಪರ್ಕ ಕಟ್​ ಆಗಿ ಕಂಬಗಳು ಸಹ ಜಖಂ ಆಗಿವೆ. ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ನಿನ್ನೆ ರಾತ್ರಿ ಕೂಡ ಗುಡುಗು, ಸಿಡಿಲು, ಬಿರು ಗಾಳಿ ಸಹಿತ ಭಾರೀ ಮಳೆ ಆಗಿದೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಭಾಗದಲ್ಲಿ ಮಳೆ ಆಗಿದೆ.

Related posts

ರಾಜ್ಯದಲ್ಲಿ ಬೇಸಿಗೆ ಮಳೆ.. ಸಿಡಿಲಬ್ಬರಕ್ಕೆ ಜೀವ ಬಲಿ, ಮರ, ವಿಂಡ್‌ ಫ್ಯಾನ್‌‌ ಭಸ್ಮ..

Publicspot

GBA ನಿರ್ಲಕ್ಷ್ಯ.. ಮರ ಬಿದ್ದು ಯುವತಿ ಸಾವು.. ಮೂವರ ಸ್ಥಿತಿ ಗಂಭೀರ..

Publicspot

BJP Protest Against Potholes; ರಸ್ತೆ ಗುಂಡಿ ಮುಚ್ಚದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ..

Publicspot

SSLC ಪರೀಕ್ಷೆ ಮತ್ತು ಶಿಕ್ಷಣ ಇಲಾಖೆ ಹಾಗೂ ಸಚಿವರ ಎಡವಟ್ಟುಗಳು..

Publicspot

ನಿಮ್ಮ ಗ್ಯಾರಂಟಿ ಯಾರಿಗೆ ಬೇಕು.. ಗೊಬ್ಬರ ಕೊಡ್ರಿ.. ಸಚಿವರಿಗೆ ತರಾಟೆ..

Publicspot

ಬೃಹತ್ ಇ-ಖಾತಾ ಮೇಳಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವ

admin