ಪ್ರಾಣಿ, ಪಕ್ಷಿಗಳಿಗೆ ಇರುವ ಬುದ್ಧಿವಂತಿಕೆ ಮಾನವನಿಗೆ ಯಾಕಿಲ್ಲ..? ಪ್ರಾಣಿಗಿಂತಾ ಕಡೆನಾ..?

ಮೈಸೂರಿನ ಪಿರಿಯಾಪಟ್ಟಣದಲ್ಲಿ ಸ್ವತಃ ಹೆತ್ತವರೇ ತಮ್ಮ ಮಗಳನ್ನು ಕೊಲೆ ಮಾಡಿ ತೋಟದಲ್ಲಿ ಹೆಣ ಬಿಸಾಡಿರುವ ಘಟನೆ ನಡೆದಿದೆ. ಅಪ್ರಾಪ್ತರಿಗೆ ಬುದ್ಧಿ ಕಡಿಮೆ ಇರುತ್ತೆ ಎನ್ನುವ ಕಾರಣಕ್ಕೆ ಕಾನೂನು ಕೂಡ ಕೆಲವೊಂದು ವಿನಾಯ್ತಿ ನೀಡುತ್ತದೆ. ಆದರೆ ಮಗಳು ಅನ್ಯ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸಿದಳು ಎನ್ನುವ ಏಕೈಕ ಕಾರಣಕ್ಕೆ ತೋಟದ ಬಳಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಮಗಳನ್ನು ಕೊಲೆ ಮಾಡುವ ಮುನ್ನ ಭಾರೀ ಹೈಡ್ರಾಮಾ ನಡೆದಿದ್ದು, ನಾವು ಮಗಳನ್ನು ಚೆನ್ನಾಗಿ ನೋಡಿಕೊಳ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟ ಮೇಲೂ […]

ACID: ಆ್ಯಸಿಡ್​ ದಾಳಿಗೆ ಬೆಚ್ಚಿದ ಬೆಂಗಳೂರು..! ಕಾರಣ ಕೇಳಿದ ಖಾಕಿ ಶಾಕ್​..

ಬೆಂಗಳೂರಿನಲ್ಲಿ 24 ವರ್ಷದ ಯುವತಿ ಮೇಲೆ ಆ್ಯಸಿಡ್​ ದಾಳಿ ನಡೆದಿದೆ. ಬೆಳಗ್ಗೆ 8.45ರ ಸುಮಾರಿಗೆ ಕೆಲಸಕ್ಕೆ ಹೋಗುವಾಗ ದಾಳಿ ನಡೆದಿದ್ದು, ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸುಂಕದಕಟ್ಟೆಯ ಮುತ್ತೂಟ್​ ಫೈನಾನ್ಸ್​ನಲ್ಲಿ ಕೆಲಸ ಮಾಡ್ತಿದ್ದ ಸಂತ್ರಸ್ತ ಯುವತಿ, ಪ್ರೀತಿ ನಿರಾಕರಿಸಿದ್ದು ಘಟನೆ ಕಾರಣ ಎಂದು ಹೇಳಲಾಗಿದೆ. ಕಳೆದ 7 ವರ್ಷಗಳಿಂದಲೂ ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದ ಯುವಕ ನಾಗೇಶ್​, ಕಳೆದ ಕೆಲವು ದಿನಗಳಿಂದ ಹಿಂಸೆ ಕೊಡುವುದಕ್ಕೆ ಶುರು ಮಾಡಿದ್ದ. ಬುಧವಾರ ಅಷ್ಟೇ ಕೆಲಸ ಮಾಡುತ್ತಿದ್ದ ಮುತ್ತೂಟ್​ ಫೈನಾನ್ಸ್​ ಕಚೇರಿ ಬಳಿಗೆ ಬಂದು […]

ಬೆಂಗಳೂರಲ್ಲಿ ಅಟ್ಟಾಡಿಸಿ ಕೊಂದರೂ ಖಾಕಿ ಪಡೆಗೆ ಕಾಣಿಸಲಿಲ್ಲ..! ಹೀಗಿದೆ ನಮ್ಮ ಭದ್ರತೆ..?

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡಿದರೂ ಪೊಲೀಸರಿಗೆ ಗೊತ್ತೇ ಆಗಿಲ್ಲ‌ ಎನ್ನುವುದು ಅಚ್ಚರಿ ಆದರೂ ಸತ್ಯ. ಭಾರತದಲ್ಲಿ ಹೆಚ್ಚು ಗಮನ ಸೆಳೆಯುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೂ ಸ್ಥಾನವಿದೆ. ಸಿಲಿಕಾನ್ ಸಿಟಿಯಲ್ಲಿ ವಿಶ್ವದ ಹಲವು ರಾಷ್ಟ್ರದ ಜನರು ವಾಸ ಮಾಡ್ತಾರೆ. ರಸ್ತೆ ರಸ್ತೆಯಲ್ಲೂ ಸಿಸಿಟಿವಿ ಕ್ಯಾಮೆರಾಗಳು ಕಾಣಸಿಗುತ್ತವೆ.‌ ಇನ್ನು ಕೇಂದ್ರ ಸರ್ಕಾರ ಕೊಡುವ ನಿರ್ಭಯಾ ಫಂಡ್ ಮೂಲಕ ಬೆಂಗಳೂರಿನಲ್ಲಿ ಹೊಯ್ಸಳ ವಾಹನಗಳ ಮೂಲಕ ಪ್ರತಿ ರಸ್ತೆಯಲ್ಲಿ ಗಸ್ತು ಮಾಡಲಾಗುತ್ತದೆ. ಆದರೂ ಒಂದು ಜನನಿಬಿಡ ರಸ್ತೆಯಲ್ಲಿ ಓರ್ವ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು […]

ಅಕ್ಕ ಪ್ರೀತಿಗೆ ಒಪ್ಪಲಿಲ್ಲಎಂದು ತಮ್ಮನನ್ನು ಕಿಡ್ನ್ಯಾಪ್​ ಮಾಡಿದ ಪಾಗಲ್​ ಪ್ರೇಮಿ..!!

ಪ್ರೇಮಕ್ಕಾಗಿ ಪ್ರೇಮಿಗಳು ಏನನ್ನೂ ಬೇಕಾದರೂ ಮಾಡ್ತಾರೆ. ಯಾರನ್ನು ಬೇಕಾದ್ರೂ ಎದುರು ಹಾಕಿಕೊಳ್ತಾರೆ ಎನ್ನುವುದನ್ನು ಸಿನಿಮಾದಲ್ಲಿ ನೋಡಿದ್ದೇವೆ. ಅಲ್ಲಲ್ಲಿ ಕೇಳಿದ್ದೀವಿ. ಇದೀಗ ಬೆಂಗಳೂರಿನಲ್ಲಿ ಅಂತಹದ್ದೊಂದು ವಿಚಿತ್ರ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ತಾವು ಪ್ರೀತಿ ಮಾಡ್ತಿದ್ದ ವಿಚಾರವನ್ನು ಆಕೆ ಒಪ್ಪಿಲಿಲ್ಲ ಎನ್ನುವ ಕಾರಣಕ್ಕೆ ಆಕೆಯ ತಮ್ಮನನ್ನು ಕಿಡ್ನ್ಯಾಪ್​ ಮಾಡಿ ಬೆದರಿಸಿರುವ ಘಟನೆ ನಡೆದಿದೆ. ಕಾರು ಚಾಲಕನಾಗಿದ್ದ ವೆಂಕಟೇಶ್​ನನ್ನು ಕಾರಿನ ಸಮೇತ ಕಿಡ್ನ್ಯಾಪ್​ ಮಾಡಿದ್ದ ಆರೋಪಿ ಶ್ರೀನಿವಾಸ್​ ಅಲಿಯಾಸ್​ ಬೋಟ್​ ಸೀನ, ಆತ ಪ್ರೀತಿಸುತ್ತಿದ್ದ ಮಹಿಳೆಗೆ ವೀಡಿಯೋ ಕಾಲ್​ ಮಾಡಿ, […]

ಪಿಯುಸಿಯಲ್ಲಿ ಶುರುವಾದ ಪ್ರೇಮ.. ಎರಡು ಮಕ್ಕಳಾದರೂ ನಿಲ್ಲಲಿಲ್ಲ..!!

ಕಾಲೇಜು ಓದುವಾಗ ಹುಡುಗ ಹುಡುಗಿಯರು ಪ್ರೇಮಪಾಶಕ್ಕೆ ಸಿಲುಕುವುದು ಸಾಮಾನ್ಯ ಸಂಗತಿ. ಅಪ್ರಾಪ್ತ ವಯಸ್ಸಿನಲ್ಲಿ ಸೃಷ್ಟಿಯಾದ ಪ್ರೇಮ ಎನಿಸಿದರೂ ಆ ಬಳಿಕ ಬದುಕು ಸರಿದಾರಿಗೆ ವಾಪಸ್​ ಕರೆ ತರುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಪ್ರೇಮಪಾಶದಲ್ಲಿ ಜೀವನದ ಹಾದಿ ತಪ್ಪಿ ಅನಾಹುತಗಳಿಗೂ ಎಡೆಮಾಡಿಕೊಡುವುದು ಉಂಟು. ಪ್ರೀತಿ ಪ್ರೇಮ ಎನ್ನುವುದು ಕೇವಲ ಭ್ರಮೆ ಎನ್ನಲಾಗುತ್ತದೆ. ಇದಕ್ಕೆ ಕಾರಣ ಕೆಲವೇ ದಿನಗಳಲ್ಲಿ ಪ್ರೇಮ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಕೆಲವೇ ಕೆಲವು ಜನರ ಪ್ರೀತಿ ಮಾತ್ರ ವಿವಾಹ ಬಂಧನದ ತನಕ ಬರುತ್ತದೆ. ಆ ಪ್ರೇಮ […]

ಅವ್ವನ ಜೊತೆ ಟುವ್ವಿ ಟುವ್ವಿ, ಮಗಳ ಜೊತೆ ಲವ್ವಿ ಡವ್ವಿ..! ತಾಯಿ ಕೊರಳಿಗೆ ಪ್ರೇಮ ಪಾಶ..

ಬೆಂಗಳೂರು ನಗರ ಸೋಮವಾರ ರಾತ್ರಿ ಬೆಚ್ಚಿ ಬಿದ್ದಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ ಮಾಡಿ ಬೆಂಗಳೂರಿನ ನಿವಾಸಕ್ಕೆ ವಾಪಸ್​ ಆಗ್ತಿದ್ದ ಮಹಿಳೆಯನ್ನು ಕಾರಿನಿಂದ ಹೊರಕ್ಕೆ ಎಳೆದು ದುಷ್ಕರ್ಮಿಗಳು ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದರು. ಮಂಗಳವಾರ ಮಹಿಳೆಯ ಕೊಲೆ ತನಿಖೆಗೆ ಖಾಕಿ ಪಡೆ ಇಳಿದಾಗ ಸಾಕಷ್ಟು ವಿಚಾರಗಳು ಬಯಲಾಗಿವೆ. ಜಿಗಣಿಯಲ್ಲಿ ಮತದಾನ ಮಾಡಿ ಸ್ನೇಹಿತೆಯ ಮನೆಯಲ್ಲಿ ಊಟ ಮುಗಿಸಿ ಬೆಳ್ಳಂದೂರಿನ ನಿವಾಸಕ್ಕೆ ವಾಪಸ್​ ಆಗ್ತಿದ್ದ ಅರ್ಚನಾ ರೆಡ್ಡಿ ಎಂಬುವರ ಕೊಲೆಯಾಗಿದೆ. ಈ ಕೊಲೆಯನ್ನು ಆಕೆಯ 2ನೇ ಗಂಡ […]

ಪ್ರೀತಿಸಿ ಮದುವೆ ಆಗಿದ್ದಕ್ಕೆ ಯುವಕನ ಮರ್ಮಾಂಗ ಕತ್ತರಿಸಿದ ಕುಟುಂಬ..!!

ಪ್ರೀತಿಸಿ ಮದುವೆ ಆಗುವುದಕ್ಕೆ ಬಹುತೇಕ ಕುಟುಂಬಗಳು ವಿರೋಧ ಮಾಡುವುದು ಸರ್ವೇ ಸಾಮಾನ್ಯ. ಈ ರೀತಿ ಪ್ರೀತಿಸಿ ಮದುವೆ ಆಗುವುದನ್ನು ತಡೆಯಲು ಯುವತಿಯ ಕುಟುಂಬಸ್ಥರು ಸಾಕಷ್ಟು ಶತ ಪ್ರಯತ್ನ ಮಾಡುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ತಮ್ಮ ಮಗಳನ್ನು ಹತ್ಯೆ ಮಾಡಿ ಪ್ರೇಮ ವಿವಾಹವನ್ನೇ ತಡೆಯುತ್ತಾರೆ. ಇದನ್ನು ‘ಮರ್ಯಾದಾ ಹತ್ಯೆ’ ಎಂದು ಕರೆಯಲಾಗುತ್ತದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣವೊಂದು ನಡೆದಿದೆ. ಪ್ರೇಮ ವಿವಾಹಕ್ಕೆ ವಿರೋಧ ಮಾಡಿದ್ದ ಕುಟುಂಬಸ್ಥರು ತಮ್ಮ ಮಗಳಿಗೆ ಯಾವುದೇ ಸಮಸ್ಯೆ ಮಾಡಿಲ್ಲ. ಬದಲಿಗೆ ತಮ್ಮ ಮಗಳನ್ನು ಪ್ರೀತಿಸಿ […]

ಹೊಸ ಬಾಳಿಗೆ ಕಾಲಿಟ್ಟ 65 ವರ್ಷದ ವೃದ್ಧ ಪ್ರೇಮಿಗಳು..! ಯೌವ್ವನ ಮೀರಿತು 35 ವರ್ಷದ ಪ್ರೇಮ..!

ಮಂಡ್ಯ ಅಂದ್ರೆ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗೋದು ಸಾಮಾನ್ಯ. ಆದರೆ ಇದೀಗ ವಿಭಿನ್ನ ವಿಚಾರದಲ್ಲಿ ಮಂಡ್ಯ ಸುದ್ದಿಯಾಗಿದೆ. 65 ವರ್ಷ ವಯಸ್ಸಿನ ವಯೋವೃದ್ಧರು ಹಸೆಮಣೆ ಏರಿ ನೂತನ ಬಾಳಿಗೆ ಕಾಲಿಟ್ಟಿದ್ದಾರೆ. ಶ್ರೀಕ್ಷೇತ್ರ ಮೇಲುಕೋಟೆಯಲ್ಲಿ ಸಾಂಪ್ರಾದಾಯಿಕ ರೀತಿಯಲ್ಲಿ ವಿವಾಹ ಮಹೋತ್ಸವ ನಡೆದಿದೆ. 35 ವರ್ಷಗಳಿಂದ ಕಾಯುತ್ತಿದ್ದ ತನ್ನ ಪ್ರೀತಿ ಸಿಕ್ಕಿದ ಖುಷಿಯಲ್ಲಿ ಆ ವೃದ್ಧರು ಇದ್ದರು ಎನ್ನುವುದೇ ವಿಶೇಷ ಸಂಗತಿ. 65 ವರ್ಷದ ಜನುಮದ ಜೋಡಿಗೆ ಕಂಕಣ ಭಾಗ್ಯ..!! ಮೂಲತಃ ಹಾಸನ ಜಿಲ್ಲೆಯವರಾದ ಚಿಕ್ಕಣ್ಣ ತನ್ನ ಸೋದರ ಅತ್ತೆಯ ಮಗಳನ್ನು […]

ಮರ್ಯಾದ ಹತ್ಯೆ: ಶಿವಮೊಗ್ಗ ಮಗಳು, ದಾವಣಗೆರೆ ವಾಸ, ಚಿಕ್ಕಮಗಳೂರಲ್ಲಿ ಮರ್ಡರ್

ಚಿಕ್ಕಮಗಳೂರಿನಲ್ಲಿ ಮರ್ಯಾದ ಹತ್ಯೆ ನಡೆದಿದೆ. ಮಗಳು ಪ್ರೀತಿಸುತ್ತಿದ್ದಳು, ತಮ್ಮ ಮಾತನ್ನು ಕೇಳಲಿಲ್ಲ ಎನ್ನುವ ಏಕೈಕ ಕಾರಣಕ್ಕೆ 18 ವರ್ಷದ ಮಗಳನ್ನು ತಂದೆಯೇ ಬಡಿದು ಕೊಂಡದಿದ್ದಾರೆ. ಕಡೂರು ತಾಲೂಕಿನ ಬೀರೂರಿನಲ್ಲಿ ಈ ಘಟನೆ ನಡೆದಿದೆ. 18 ವರ್ಷ ವಯಸ್ಸಿನ ರಾಧಾ ಎಂಬ ಯುವತಿಯನ್ನು ತಂದೆ ಚಂದ್ರಪ್ಪ ಕೊಲೆ ಎಂಬುವರು ಕೊಲೆ ಮಾಡಿದ್ದಾರೆ. ಮಗಳು ಪ್ರೇಮಪಾಶಕ್ಕೆ ಸಿಲುಕಿದ್ದಳು. ಆದರೆ, ಆ ಪ್ರೇಮ ಪಾಶದಿಂದ ಮಗಳನ್ನು ಹೊರಕ್ಕೆ ಕರೆತರಲಾಗದೆ ವೇಲ್​ನಿಂದ ಮಗಳ ಕುತ್ತಿಗೆ ಬಿಗಿದು ಕೊಂದು ಬಿಟ್ಟಿದ್ದಾರೆ. ಬೀರೂರು ಪೊಲೀಸರು ಆರೋಪಿ […]