ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸೋಲಿಗೆ ಒಂದೊಂದೇ ಮೆಟ್ಟಿಲು..! ನಿನ್ನೆ ಭಾರೀ ಬೆಳವಣಿಗೆ..

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವುದು ಬಿಜೆಪಿ ಹೈಕಮಾಂಡ್​ ಕನಸು. ಇದೇ ಕಾರಣಕ್ಕೆ ಬಿಎಸ್​ ಯಡಿಯೂರಪ್ಪ ಅವರನ್ನು ಪ್ರಕ್ಷದ ಪ್ರಮುಖ ಹುದ್ದೆ ಸಂಸದೀಯ ಸ್ಥಾನಕ್ಕೂ ನೇಮಕ ಮಾಡಿತ್ತು. ಆದರೆ ಬಿಜೆಪಿಯಲ್ಲಿ ದಿನೇ ದಿನೇ ನಡೆಯುತ್ತಿರುವ ಬೆಳವಣಿಗೆ ಬಿಜೆಪಿ ಸೋಲಿಗೆ ಒಂದೊಂದೇ ಮೆಟ್ಟಿಲುಗಳು ಆಗುತ್ತಿವೆಯಾ ಅನ್ನೋ ಅನುಮಾನವನ್ನು ಮೂಡಿಸುತ್ತಿದೆ. ಇದೀಗ 2023ರ ವಿಧಾನಸಭಾ ಚುನಾವಣೆಗೆ ಬಿಜೆಪಿಗೆ ಎದುರಾಗಿರುವ ಸಂಕಷ್ಟಗಳು ಮೂರು. ಒಂದನೆಯದ್ದು ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ, ಬಳ್ಳಾರಿ ಭಾಗದಲ್ಲಿ ಎಸ್​ಟಿ ಸಮುದಾಯದ ಮೀಸಲಾತಿ ಹೋರಾಟ. ಪಂಚಮಸಾಲಿ […]

ಧರ್ಮ ಮೀರಿದ ಪ್ರೀತಿಯಲ್ಲಿ ಸಣ್ಣದೊಂದು ಬಿರುಕು.. ದುರಂತದಲ್ಲೂ ಒಂದಾದ ಪ್ರೇಮ..

ರಾಜ್ಯದಲ್ಲಿ ಹಿಂದೂ ಮುಸ್ಲಿಂ ಧರ್ಮಗಳ ನಡುವೆ ದೊಡ್ಡ ಕಂದಕವೇ ಸೃಷ್ಟಿಯಾಗುತ್ತಿದೆ. ಇದರ ನಡುವೆ ಬಳ್ಳಾರಿಯಲ್ಲಿ ಹಿಂದೂ ಮುಸ್ಲಿಂ ಪ್ರೀತಿಯ ಕಥೆಯೊಂದು ಹೊರಕ್ಕೆ ಬಿದ್ದಿದೆ. ದುರಂತ ಅಂದ್ರೆ ಪ್ರೀತಿಯಲ್ಲಿ ಕಾಣಿಸಿಕೊಂಡ ಸಣ್ಣ ಬಿರುಕು ಸರಿಮಾಡಿಕೊಳ್ಳದೆ ಅಂತ್ಯ ದುರಂತ ಆಗಿದೆ ಅನ್ನೋದು. ಇದೀಗ ಪ್ರೇಮಿಗಳು ಸಾವಿನಲ್ಲಿ ಒಂದಾಗುವ ಮೂಲಕ ನಮ್ಮಿಬ್ಬರದ್ದು ನಿಜವಾದ ಪ್ರೇಮ ಎಂದು ಸಾಬೀತು ಮಾಡಿಕೊಂಡಿದ್ದಾರೆ. ಪ್ರೇಯಸಿಯ ಹೆಸರು ನಾಜೀಯಾ ಬಾನು, ಪ್ರೇಮಿಯ ಹೆಸರು ಮಂಜುನಾಥ್​ ಆಚಾರ್ಯ. ಧರ್ಮ ಮೀರಿದ್ದ ಪ್ರೇಮ ಧಮನ ಆಗಿದೆ. ಪ್ರೇಮಿ ಮಂಜುನಾಥ್​ ಆಚಾರ್ಯ […]

ಪೊಲೀಸರೇ ನೀವ್ಯಾಕೆ ಹೀಗೆ..? ಸಮಾಜಕ್ಕೆ ಕೆಟ್ಟ ಸಂದೇಶ ಕೊಡೋದು ಸರೀನಾ..?

ಪೊಲೀಸರು ಸಮಾಜವನ್ನು ಸರಿ ದಾರಿಯಲ್ಲಿ ನಡೆಯುವಂತೆ ಮಾಡುವ ಕಾನೂನು ಪಾಲಕರು. ಸಮುದಾಯದಲ್ಲಿ ಆರಕ್ಷಕರು ಹಳಿ ತಪ್ಪಿದರೆ ಇಡೀ ಸಮಾಜವೇ ಅಲ್ಲೋಲ ಕಲ್ಲೋಲ ಆಗುವುದು ಶತಸಿದ್ಧ. ಅದೇ ಕಾರಣಕ್ಕೆ ಆರಕ್ಷಕ (Police) ಇಲಾಖೆ ಪ್ರಮುಖ ಪಾತ್ರ ಎನ್ನುತ್ತಾರೆ. ಇತ್ತೀಚಿನ ಬೆಳವಣಿಗೆಯನ್ನು ನೋಡಿದಾಗ ಪೊಲೀಸರು ಸಮಾಜದ ದಿಕ್ಕನ್ನು ಸರಿದಾರಿಗೆ ತರುವ ಬದಲು ತಾವೇ ದಾರಿ ಬಿಟ್ಟು ಹಳ್ಳದ ಕಡೆಗೆ ಇಳಿಯುತ್ತಿದ್ದಾರೆ ಎನಿಸುತ್ತದೆ. ಪಿಎಸ್​ಐ ನೇಮಕಾತಿ ವಿಚಾರದಲ್ಲಿ ರಾಜಕಾರಣಿಗಳು ಹಣದಾಸೆಗೆ ಉಳ್ಳವರಿಗೆ ಖಾಕಿ ತೊಡಿಸಲು ಮುಂದಾಗಿದ್ದಾರೆ ಎನ್ನುವುದು ಸರ್ವತಾ ಸತ್ಯ. ಇನ್ನು […]

ಬಿಜೆಪಿ, ಕಾಂಗ್ರೆಸ್​​ ರಾಜಕಾರಣಿಗಳಿಗೆ ವರಮಹಾಲಕ್ಷ್ಮೀ ಹಬ್ಬದ ಬಂಪರ್​ ಗಿಫ್ಟ್​..!

ಕಾಂಗ್ರೆಸ್​ ನಾಯಕ, ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಹಾಗೂ ಬಿಜೆಪಿ ನಾಯಕ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್​ ರಿಲೀಫ್​ ಸಿಕ್ಕಿದೆ. ಧಾರವಾಡ ಬಿಜೆಪಿ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್​ ಗೌಡ ಕೊಲೆ ಪ್ರಕರಣದನಲ್ಲಿ ಜೈಲು ಸೇರಿದ್ದ ವಿನಯ್​ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಕಳೆದ ವಾರ ಕೊಲೆ ಕೇಸ್​ನಲ್ಲಿ ಸುಪ್ರೀಂಕೋರ್ಟ್​ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಸಾಕ್ಷ್ಯ ನಾಶ ಪ್ರಕರಣದಲ್ಲಿ ಜನಪ್ರತಿನಿಧಿ ಕೋರ್ಟ್​ನಲ್ಲಿ ಜಾಮೀನು ಸಿಗದಿದ್ದ ಕಾರಣಕ್ಕೆ ಜೈಲಿನಲ್ಲೇ ಕಾಲ ಕಳೆಯುವಂತಾಗಿತ್ತು. […]

9ನೇ ದಿನದ ತಿಥಿ ಕಾರ್ಯಕ್ಕೆ ಬಂದ ವಾನರ..! ಏನಿದರ ವಿಶೇಷ..? ವಿಡಿಯೋ ಇಲ್ಲಿದೆ

ಬಳ್ಳಾರಿ: ವಾನರ ಅಥವಾ ಮಂಗನನ್ನು ಕಂಡರೆ ಹೆದರಿ ದೂರ ಹೋಗುವ ಜನರೇ ಹೆಚ್ಚು. ಆದರೆ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಬಸವೇಶ್ವರ ಕ್ಯಾಂಪ್​ನಲ್ಲಿ 70 ವರ್ಷದ ವಿಶ್ವನಾಥ ರಾಜು ಎಂಬಾತ ನಿಧನರಾಗಿದ್ದರು. ಅಂದು ವಿಶ್ವನಾಥ್​ ರಾಜು ನಿವಾಸಕ್ಕೆ ಬಂದಿದ್ದ ವಾನರ, ಶವದ ಮೇಲಿನ ಬಟ್ಟೆಯನ್ನು ಎಳೆದು ಅಂತಿಮ ದರ್ಶನ ಪಡೆದಿದ್ದ ಎನ್ನಲಾಗಿದೆ. ಇನ್ನೂ ಕೆಲಕಾಲ ಅಲ್ಲಿಯೇ ಕುಳಿತು ವಿಶ್ವನಾಥ ರಾಜು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದ. ಇದೀಗ 9ನೇ ದಿನದ ತಿಥಿ ಕಾರ್ಯದಲ್ಲೂ ಅದೇ ವಾನರ ಭಾಗಿಯಾಗಿದ್ದಾನೆ. […]