KSRTC ಬಸ್​ನಲ್ಲಿ ಕಿಸ್​ ಕೊಟ್ಟ ಕಾಮುಕ, ವಿದ್ಯಾರ್ಥಿನಿ ಮಾಡಿದ ತಪ್ಪೇನು..?

ಗುರುವಾರ ಬೆಂಗಳೂರಿನಲ್ಲಿ ನಡೆದ ಘಟನೆ ಇಡೀ ಹೆಣ್ಣು ಮಕ್ಕಳನ್ನೇ ಆತಂಕಕ್ಕೆ ಈಡು ಮಾಡಿದೆ. ಸಿನಿಮಾ ಸ್ಟೈಲ್​ನಲ್ಲಿ ಕಾಮುಕನೊಬ್ಬ ವಿದ್ಯಾರ್ಥಿನಿಗೆ ಬಸ್​ನಲ್ಲಿ ಕಿಸ್​ ಮಾಡಿ ಓಡಿ ಹೋಗಿದ್ದಾನೆ. ಬಳ್ಳಾರಿಯಿಂದ ಬೆಂಗಳೂರಿಗೆ ಬರ್ತಿದ್ದ ಕೆಎಸ್​ಆರ್​ಟಿಸಿ ಬಸ್​ 8ನೇ ಮೈಲ್​ (ಹೆಸರುಘಟ್ಟ ಕ್ರಾಸ್)​ ತಲುಪುತ್ತಿದ್ದ ಹಾಗೆ ಮುತ್ತು ಕೊಟ್ಟ ಮಹಾಶಯ ಬಸ್​ ಇಳಿದು ಹೋಗಿದ್ದಾನೆ. ಯುವತಿ ನಿದ್ದೆ ಮಂಪರಿನಲ್ಲಿದ್ದ ಕಾರಣ ಕೂಡಲೇ ಪ್ರತಿರೋಧಿಸಲು ಸಾಧ್ಯವಾಗಿಲ್ಲ. ಯುವತಿ ಪ್ರತಿಭಟಿಸುವ ಮುನ್ನವೇ ಮುತ್ತು ಕೊಟ್ಟ ಕೀಚಕ ಬಸ್​ ಇಳಿದು ಹೋಗಿದ್ದಾನೆ. ಆದರೆ ಏನು ಮಾಡಬೇಕೆಂದು […]

ನಮ್ಮೂರ ರಸ್ತೆ ದೇವರಿಗೇ ಪ್ರೀತಿ..! ಜಸ್ಟ್ ಮಿಸ್ ಆಯ್ತು ಅನಾಹುತ..

ಮಂಡ್ಯ: ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯಲ್ಲಿ KSRTC ಬಸ್ ರಸ್ತೆಯಿಂದ ಜಾರಿ ನಿಂತಿರುವ ಘಟನೆ ನಡೆದಿದೆ. ಹೊನ್ನಾವರದ ಹಿರಿಕೆರೆ ಹಿಂಭಾಗದಲ್ಲಿ ರಸ್ತೆ ಕೆಸರಿನಿಂದ ತುಂಬಿದ್ದು, ಶ್ರವಣಬೆಳಗೊಳದಿಂದ ನಾಗಮಂಗಲಕ್ಕೆ ತೆರಳುತ್ತಿದ್ದ ಬಸ್ ಚಾಲಕನ ಜಾಣ್ಮೆಯಿಂದ ಪಲ್ಟಿಯಾಗುವುದು ತಪ್ಪಿದೆ. ವಿದ್ಯಾರ್ಥಿಗಳೂ ಸೇರಿ ಸುಮಾರು 30 ಮಂದಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಜರುಗಿದೆ. ಎದುರಾಗಿ ಬರುತ್ತಿದ್ದ ಕಾರಿಗೆ ರಸ್ತೆ ಬಿಡಲು ಪಕ್ಕಕ್ಕೆ ಸರಿದಾಗ ಹಿಂಬದಿಯ ಚಕ್ರಗಳು ಜಾರಿಕೊಂಡು ಹಳ್ಳಕ್ಕೆ ಹೋಗಿವೆ. ಕೂಡಲೇ ಬಸ್ ನಿಲ್ಲಿಸಿದ ಚಾಲಕ ಬಸ್ ಪಲ್ಟಿಯಾಗುವುದನ್ನು ತಡೆದಿದ್ದಾರೆ. ಮಂಡ್ಯ […]