ಸಾಲು ಮರದ ತಿಮ್ಮಕ್ಕಗೆ ಇನ್ಮುಂದೆ ಸಂಪುಟ ಸಚಿವೆ ಸ್ಥಾನಮಾನ..!

ಸಾಲು ಮರದ ತಿಮ್ಮಕ್ಕ ಯಾರಿಗೆ ತಾನೆ ಗೊತ್ತಿಲ್ಲ. ತನ್ನ ಇಡೀ ಜೀವನವನ್ನು ಮರಗಳ ಪೋಷಣೆಗೆ ಧಾರೆ ಎರೆದ ವೃಕ್ಷಮಾತೆ. ಸುಮಾರು 4 ಕಿಲೋ ಮೀಟರ್​ ದೂರ ಸಾಲು ಗಿಡಗಳನ್ನು ನೆಟ್ಟು ಪೋಷಣೆ ಮಾಡಿ, ಇಂದು ಸಾಲುಮರದ ತಿಮ್ಮಕ್ಕ ಎಂದು ತನ್ನ ಕೆಲಸವೇ ತನ್ನ ಹೆಸರಿನ ಮುಂದೆ ಬರುವಂತೆ ಮಾಡಿರುವ ದಿಟ್ಟ ಮಹಿಳೆ. ಸಾಲುಮರದ ತಿಮ್ಮಕ್ಕನಿಗೆ ಬರೋಬ್ಬರಿ 111 ವರ್ಷಗಳು ಪೂರ್ಣ. ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಅವರನ್ನು ರಾಜ್ಯ ಸರ್ಕಾರದ ವತಿಯಿಂದ ಗೌರವಿಸಿ, ಸನ್ಮಾನ […]