ಉಕ್ರೇನಿಯನ್ನರ ದೇಶಪ್ರೇಮ ರಸ್ತೆ ರಸ್ತೆಯಲ್ಲೂ ಅಬ್ಬರ..! ರಷ್ಯಾಗೆ ಸಂಧಾನವೇ ಸಕ್ಸಸ್..!

ರಷ್ಯಾ – ಉಕ್ರೇನ್​ ನಡುವೆ ಯುದ್ಧ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ತಿದೆ. ಉಕ್ರೇನ್​ನ ಒಂದೊಂದೇ ನಗರಗಳು ರಷ್ಯಾ ಸೈನಿಕರ ಹಿಡಿತಕ್ಕೆ ಹೋಗುತ್ತಿವೆ. ರಷ್ಯಾ ಸೇನೆಯ ಯುದ್ಧ ಟ್ಯಾಂಕರ್​​ಗಳ ಅಬ್ಬರ ಉಕ್ರೇನ್​​ ರಸ್ತೆಗಳಲ್ಲಿ ಕಾಣಿಸುತ್ತಿದೆ. ಬಾಂಬ್​​ಗಳ ಸುರಿಮಳೆ ಆಗುತ್ತಿದೆ. ಉಕ್ರೇನ್​ ದೇಶಕ್ಕೆ ಲಗ್ಗೆ ಇಟ್ಟಿರುವ ರಷ್ಯಾ ಸೈನಿಕರ ಸ್ಥಿತಿ ಅಯೋಮಯವಾಗಿದೆ. ರಷ್ಯಾ ಸೈನಿಕರು ತಿನ್ನಲು ಆಹಾರ ಸಿಗದೆ ಉಕ್ರೇನ್​ ದೇಶದ ಸೂಪರ್​ ಮಾರ್ಕೆಟ್​​ಗಳಲ್ಲಿ ತಡಕಾಡುತ್ತಿರುವ ದೃಶ್ಯ ಸರ್ವೇ ಸಮಾನ್ಯವಾಗಿದೆ. ಉಕ್ರೇನ್​​ ದೇಶದ ಅಣು ವಿದ್ಯುತ್​​ ಸ್ಥಾವರಗಳನ್ನು ವಶಕ್ಕೆ ಪಡೆದಿರುವ […]

ರಷ್ಯಾ ಹಾಗೂ ಉಕ್ರೇನ್​ ನಡುವೆ ಯುದ್ಧ ಆರಂಭಕ್ಕೆ ಕಾರಣ ಏನು..!? ಉಕ್ರೇನ್‌ಗೆ ಬೆಂಬಲಿಸ್ತಾರಾ ಮೋದಿ..?

ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿರುವ ರಷ್ಯಾ, ತನ್ನ ನೆರೆಯ ರಾಷ್ಟ್ರ ಉಕ್ರೇನ್​​ ಮೇಲೆ ಯುದ್ಧ ಘೋಷಣೆ ಮಾಡಿದೆ. ಉಕ್ರೇನ್​ನ ಎರಡು ನಗರಗಳಾದ ಕ್ರಿಮಿಯ ಮತ್ತು ಡೋನ್​ಬಾಸ್​ಗಾಗಿ ಯುದ್ಧ ಶುರುವಾಗಿದ್ದು, ಉಕ್ರೇನ್​ ಮೇಲೆ ರಷ್ಯಾ ಆಧಿಪತ್ಯ ಸ್ಥಾಪನೆ ಮಾಡಲು ಮುಂದಾಗಿದೆ. ಬಾಂಬ್​​ ದಾಳಿ ನಡೆಸುತ್ತಿರುವ ರಷ್ಯಾ, ಸಾಕಷ್ಟು ಸೇನಾ ನೆಲೆಗಳನ್ನು ಧ್ವಂಸ ಮಾಡಿರುವ ರಷ್ಯಾ, ಉಕ್ರೇನ್​ ತನ್ನ ಎದುರು ಶರಣಾಗುವಂತೆ ಸಲಹೆ ನೀಡಿದೆ. ಒಂದು ವೇಳೆ ಶರಣಾಗತಿ ಆದರೆ ರಷ್ಯಾ ಎದುರು ಉಕ್ರೇನ್​​ ತಲೆಬಾಗಬೇಕಿದೆ. ಈ ಮೂಲಕ ರಷ್ಯಾ […]

ಭಾರತದಲ್ಲಿ ಮತ್ತೆ ಬ್ರಿಟೀಷ್​ ಆಳ್ವಿಕೆ – 2.O – RSS ಆತಂಕ

ಭಾರತವನ್ನು 18ನೇ ಶತಮಾನದಲ್ಲಿ ಆಗ್ಲರು ಆಳ್ವಿಕೆ ಮಾಡಿದ್ದರು. ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಕಾಲಿಟ್ಟಿದ್ದ ಬ್ರಿಟೀಷರು, ಸಣ್ಣ ಸಣ್ಣ ರಾಜ್ಯಗಳಾಗಿದ್ದ ಸ್ವಾತಂತ್ರ್ಯ ಪೂರ್ವ ಭಾರತವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಸುಮಾರು 200 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದು ಇತಿಹಾಸ. ಆದರೆ ಸ್ವಾತಂತ್ರ್ಯ ಪಡೆದ ಭಾರತ ಪ್ರಜಾಪ್ರಭುತ್ವ, ಸಂವಿಧಾನದ ಆಶಯದಡಿ ಸರ್ಕಾರಗಳು ಸ್ಥಾಪನೆ ಆಗುತ್ತಿವೆ. ಆದರೆ ಮತ್ತೆ ಬ್ರಿಟೀಷರು ಭಾರತವನ್ನು ತಮ್ಮ ಕೈವಶ ಮಾಡಿಕೊಳ್ಳಲಿದ್ದಾರೆ ಎಂದು ಬಿಜೆಪಿ ಮಾತೃ ಸಂಸ್ಥೆ ಆಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಆತಂಕ […]

ಸೋಮವಾರ ಭಾರತ್​ ಬಂದ್,​ ಬೆಂಬಲ, ನೈತಿಕ ಬೆಂಬಲ..! ಮತ್ತು ಪರಿಣಾಮ..?

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ಮುಂದಾಗಿರುವ 3 ಕೃಷಿ ಕಾಯ್ದೆಗಳನ್ನು ಲಕ್ಷಾಂತರ ರೈತರು ವರ್ಷದಿಂದಲೂ ವಿರೋಧಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕರೆದಿದ್ದ ಸಂಧಾನ ಸಭೆ ಹತ್ತಾರು ಬಾರಿ ವಿಫಲವಾಗಿದೆ. ಈ ನಡುವೆ ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕುವ ಹತ್ತಾರು ಪ್ರಯತ್ನಗಳನ್ನು ಮಾಡಿತ್ತು. ಪ್ರತಿಭಟನಾ ಸ್ಥಳದಲ್ಲಿ ನೂರಾರು ರೈತರು ಸಾವನ್ನಪ್ಪಿದ್ದಾರೆ. ಇಡೀ ಕೇಂದ್ರ ಸರ್ಕಾರ ಹೋರಾಟ ಮಾಡುತ್ತಿರುವ ಜನ ರೈತರೇ ಅಲ್ಲ ಎನ್ನುವ ವಾದವನ್ನು ಮುಂದಿಟ್ಟಿದ್ದು, ಅನ್ನದಾತರ ಆಕ್ರೋಶ ಇಮ್ಮಡಿಯಾಗುವಂತೆ ಮಾಡಿತ್ತು. ಕೊರೊನಾ ಆರ್ಭಟದ ಕಾರಣಕ್ಕೆ ಸಾಕಷ್ಟು […]

ಭಾರತಕ್ಕೆ ಬಂದವರು ಇಲ್ಲೇ ಇರ್ತಾರಾ..? ವಾಪಸ್​ ಹೋಗ್ತಾರಾ..?

ಅಫ್ಘಾನಿಸ್ತಾನದಲ್ಲಿ ಇಡೀ ದೇಶವನ್ನೇ ಉಗ್ರರು ತನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲಿನ ಜನರು ಉಗ್ರರ ತಾಪ ತಾಳಲಾರದೆ ಬೇರೆ ಯಾವುದಾದರೂ ದೇಶಕ್ಕೆ ಹೋಗಿ ಜೀವ ಉಳಿಸಿಕೊಳ್ಳುವ ಕಸರತ್ತು ಮಾಡುತ್ತಿದ್ದಾರೆ. ಸಾಕಷ್ಟು ಜನ ವಿಮಾನದ ಮೇಲೆ ಕುಳಿತು ಹಾರಿಕೊಂಡು ಹೋಗಲು ಯತ್ನಿಸಿ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆಗಳೂ ವರದಿಯಾಗಿವೆ. ಈ ನಡುವೆ ಭಾರತ ಸರ್ಕಾರ ಅಫ್ಘಾನಿಸ್ತಾನಿ ಪ್ರಜೆಗಳಿಗೆ 6 ತಿಂಗಳ ವೀಸಾ ಮಂಜೂರು ಮಾಡುವ ನಿರ್ಧಾರ ಪ್ರಕಟ ಮಾಡಿದೆ. ಅಂದರೆ ಅಪ್ಘಾನಿಸ್ತಾನದ ಯಾವುದೇ ಪ್ರಜೆ ಸದ್ಯಕ್ಕೆ ಭಾರತಕ್ಕೆ ಬಂದು ಉಳಿದುಕೊಳ್ಳಬಹುದು. ತಾಲಿಬಾನಿ […]