ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ.. ಹವಾಮಾನ ಇಲಾಖೆ ಎಚ್ಚರಿಕೆ..

ರಾಜ್ಯದಲ್ಲಿ ವರುಣ ಅಬ್ಬರಿಸುತ್ತಲೇ ಇದ್ದಾನೆ. ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಮೈಸೂರು ಮಂಡ್ಯ ಭಾಗದ ಜನರು ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ. ಮೈಸೂರು ದಸರಾದ ದೀಪಲಂಕಾರ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಜನರಿಗೆ ಮಳೆ ಚಳಿಜ್ವರ ತರಿಸಿದೆ. ವಾಹನಗಳು ರಸ್ತೆಯಲ್ಲೇ ತೇಲಿ ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಬೆಟ್ಟದ ಮೇಲಿನಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಭೂಕುಸಿತ ಉಂಟಾಗಿದೆ. ಪ್ರವಾಸಿಗರು ಹಾಗೂ ಭಕ್ತರು ಆ ರಸ್ತೆಯಲ್ಲಿ ಸಂಚರಿಸದಂತೆ ಮೈಸೂರು ಪೊಲೀಸ್ ಕಮಿಷನರ್‌ ಡಾ.ಚಂದ್ರಗುಪ್ತರಿಂದ ಸೂಚಿಸಿದ್ದಾರೆ. ಈಗಾಗಲೇ […]

ಬೆಂಗಳೂರು ಭಾರೀ ಮಳೆ; ಅಭಿವೃದ್ಧಿಯೇ ಅವಾಂತರಗಳ ಮೂಲವೇ..?

ಇಡೀ ರಾಜ್ಯದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಗ್ರಾಮಾಂತರ ಕರ್ನಾಟಕ ಭಾಗದ ಬಹುತೇಕ ರೈತರು ಉತ್ತಮ ಫಸಲಿನ ನಿರೀಕ್ಷೆ ಮಾಡುತ್ತಿದ್ದಾರೆ. ( ತೋಟಗಾರಿಕೆ ಬೆಳೆ ನಷ್ಟವೂ ಆಗಿದೆ ) ಕೆರೆಗಳೆಲ್ಲಾ ಭರ್ತಿಯಾಗಿದ್ದು ಅಂತರ್ಜಲ ಏರಿಕೆಯಿಂದ ಮುಂದಿನ ಹಂಗಾಮ ಉತ್ತಮವಾಗಿ ಇರುವ ಭರವಸೆ ಮೂಡಿಸುತ್ತಿದೆ. ಆದರೆ ಬೆಂದಕಾಳೂರಿನಲ್ಲಿ ಮಾತ್ರ ದಿನವಿಡಿ ಸುರಿಯುತ್ತಿರುವ ಮಳೆ ಜನರ ನಿದ್ರೆಗೆಡಿಸಿದೆ. ಜನಪ್ರತಿನಿಧಿಗಳು ಇಲ್ಲದೆ ಆಡಳಿತಾಧಿಕಾರಿ ಹೆಗಲೇರಿರುವ ಬಿಬಿಎಂಪಿ ಗಾಢನಿದ್ರೆಯಲ್ಲಿದೆ. ಸರಾಗವಾಗಿ ಹರಿದುಹೋಗಬೇಕಿದ್ದ ಚರಂಡಿಗಳು ಮುಚ್ಚಿ ಹೋಗಿವೆ. ರಸ್ತೆಗಳೆಲ್ಲಾ ಕೆರೆಗಳಂತಾಗಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು […]

ರಾಜ್ಯದಲ್ಲಿ ಮತ್ತೆ 5 ದಿನ ಭಾರೀ ಮಳೆ..! ನಿನ್ನೆ ಬೆಳಗಾವಿಯಲ್ಲಿ ಗೋಡೆ ಕುಸಿದು 7 ಸಾವು..

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ರಾಜ್ಯಾದ್ಯಂತ ಮುಂದಿನ 5 ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರ ಬೆನ್ನಲ್ಲೇ ಬೆಳಗಾವಿಯಲ್ಲಿ ಭೀಕರ ಘಟನೆ ಒಂದು ನಡೆದಿದೆ. ಒಂದೇ ಕುಟುಂಬಕ್ಕೆ ಸೇರಿದ 7 ಮಂದಿ ನಿನ್ನೆ ಸೂರ್ಯಾಸ್ತ ನೋಡಿದವರು ಇಂದಿನ ಸೂರ್ಯೋದಯ ಕಂಡಿಲ್ಲ. ಎಲ್ಲರೂ ಮಸಣ ಸೇರಿದ್ದಾರೆ. ಅದೂ ಕೂಡ ಮಳೆಯ ಆರ್ಭಟದಿಂದ ಮನೆಯ ಗೋಡೆ ಕುಸಿದು ಈ ದುರಂತ ಸಂಭವಿಸಿದೆ. ರಕ್ಕಸ […]

ಭಾರೀ ಮಳೆ: ಸೌಥ್​ ಇಂಡಿಯಾಗೆ ಯೆಲ್ಲೋ ಅಲರ್ಟ್​, ದೆಹಲಿಗೆ ಆರೇಂಜ್​ ಅಲರ್ಟ್​

ಭಾರತದಲ್ಲಿ ಮಾನ್ಸೂನ್​ ಅಬ್ಬರ ಕಡಿಮೆ ಆಗಿತ್ತು. ಇದೀಗ ಮತ್ತೆ ಮಳೆ ಅಬ್ಬರ ಜೋರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ಸೌತ್​ ಇಂಡಿಯನ್​ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಆಗಸ್ಟ್​ 20 ರಿಂದ ಆರಂಭವಾಗಿ ಆಗಸ್ಟ್​ 25ರ ತನಕ ವರುಣನ ಆರರ್ಭ ಜೋರಾಗಿ ಇರಲಿದ್ದು, ಜನರು ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಂತೆ ಸೂಚನೆ ಕೊಡಲಾಗಿದೆ. ಮಹಾರಾಷ್ಟ್ರದ ವಿದರ್ಭ […]

3 ದಿನಗಳ ಕಾಲ ಮತ್ತೆ ಮಳೆ, ಚಾರ್ಮಾಡಿ ಘಾಟ್​ ಬಂದ್​!

ಕರ್ನಾಟಕದಲ್ಲಿ ಮತ್ತೆ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜುಲೈ 27ರ ತನಕ ರಾಜ್ಯದಲ್ಲಿ ಭರ್ಜರಿ ಮಳೆ ಸುರಿಯಲಿದ್ದು, ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಇಂದು ಬೆಳಗಾವಿ ಲೋಂಡಾದಲ್ಲಿ 38 ಸೆಂ.ಮೀ, ಉತ್ತರ ಕನ್ನಡದಲ್ಲಿ 34 ಸೆಂ.ಮೀ, ಶಿವಮೊಗ್ಗದಲ್ಲಿ 27 ಸೆಂ.ಮೀ ಮಳೆಯಾಗಿದೆ ಎಂದು ತಿಳಿಸಿದ್ದಾರೆ. ಬಂಗಾಳ ಉಪಸಾಗರದಲ್ಲಿ ವಾಯು ಭಾರ ಕುಸಿತ ಆಗಿರುವ ಹಿನ್ನೆಲೆ ರಾಜ್ಯದಲ್ಲಿ ವ್ಯಾಪಕ‌ ಮಳೆ ಆಗ್ತಿದೆ. […]