ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಶವಪತ್ತೆ.. ಕೊಲೆ ಆಗಿರೋ ಅನುಮಾನ..

ಕಳೆದ ಭಾನುವಾರ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಶವವಾಗಿ ಪತ್ತೆಯಾಗಿದ್ದಾರೆ. ದಾವಣಗೆರೆಯ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮಾತ್ರ ಕಳೆದ ನಾಲ್ಕು ದಿನಗಳಿಂದ ಅನ್ನ ಆಹಾರ ಬಿಟ್ಟು ಗೋಳಿಡುತ್ತಿದ್ದರು. ಆದರೆ ಸಾವು ಸಂಭವಿಸಿದ್ದು ಅಪಘಾತದಿಂದ ಎಂದು ಹೇಳಲಾಗ್ತಿದೆ, ಆದರೆ ಸಾವಿನ ಹಿಂದೆ ಹತ್ತಾರು ಅನುಮಾನಗಳು ಕಾಡುತ್ತಿದೆ. ಕಾರು ಅಪಘಾತ ಆಗಿದ್ರೆ, ಅಪಘಾತ ಆದ ಕಾರಿನಲ್ಲಿ ಶವ ಹಿಂದಕ್ಕೆ ಹೋಗಿ ಬಿದ್ದಿರೋದು ಯಾಕೆ..? ಕಾರಿನ ಮುಂಭಾಗದಲ್ಲಿ ಎರಡು ಏರ್​ಬ್ಯಾಗ್​ಗಳು​ ಓಪನ್​ ಆಗಿದೆ. ಅಂದಮೇಲೆ ಇಬ್ಬರು ಪ್ರಯಾಣಿಕರು ಇದ್ದಿರಬಹುದು. […]

ಬಾಲ್ಯ ಸ್ನೇಹಿತರನ್ನು ಬಲಿ ತೆಗೆದುಕೊಂಡಿದ್ದು ಒಬ್ಬಳೇ ಹುಡುಗಿ..! ಒಬ್ಬನ ಕೊಲೆ.. ಒಬ್ಬನಿಗೆ ಜೈಲು..

ಬೆಂಗಳೂರಿನಲ್ಲಿ ಒಂದೇ ಹುಡುಗಿ ಇಬ್ಬರು ಮೂವರನ್ನು ಪ್ರೀತಿ ಮಾಡುವ ಸಾಕಷ್ಟು ಪ್ರಕರಣಗಳ ನಮ್ಮ ಕಣ್ಣೆದುರಲ್ಲಿ ಕಾಣಿಸುತ್ತವೆ. ಅದೇ ರೀತಿ ಬೆಂಗಳೂರಿನ ಹಳೇ ಬೈಯ್ಯಪ್ಪನಹಳ್ಳಿ ವಾಸವಾಗಿದ್ದ ಇಬ್ಬರು ಸ್ನೇಹಿತರು ಇಂದು ದುಷ್ಮನ್ಗಳಾಗಿ ಕೊಲೆಯಾಗಿದ್ದಾರೆ. ಒಬ್ಬ ಕೊಲೆ ಮಾಡಿ ಜೈಲು ಸೇರಿದ್ರೆ ಮತ್ತೋರ್ವ ಮದುವೆಯಾದ ತಪ್ಪಿಗೆ ಹೆಣವಾಗಿದ್ದಾನೆ. ಇಬ್ಬರನ್ನು ಪ್ರೀತಿಸಿದ್ದ ಯುವತಿ ಅತ್ತ ಪ್ರಿಯಕರನೂ ಇಲ್ಲದೆ ಇತ್ತ ಗಂಡನೂ ಇಲ್ಲದೆ ಒಂಟಿ ಬಾಳು ಅನುಭವಿಸುವಂತಾಗಿದೆ. ಬಾಲ್ಯದಿಂದಲೂ ಸ್ನೇಹಿತರಾಗಿದ್ದವರು ಪ್ರೇಮ ಪಾಶಕ್ಕೆ ಸಿಲುಕಿ ಜೀವನವನ್ನೇ ಅಂತ್ಯ ಮಾಡಿಕೊಂಡಿದ್ದಾರೆ. ಪ್ರೀತಿಸಿದವನನ್ನು ಬಿಟ್ಟು ಸ್ನೇಹಿತನನ್ನು […]

ಮಡಿಕೇರಿ ಟು ಕೋಲಾರ ಡೆಂಟಲ್​ ಡಾಕ್ಟರ್​ ಲವ್​..! 2 ಹೆಣ ಹತ್ತಾರು ಪ್ರಶ್ನೆ..!

ಬೆಂಗಳೂರಿನಲ್ಲಿ ಡೆಂಟಿಸ್ಟ್​ ದುರಂತ ಮುಂದುವರಿದಿದೆ. ಕಳೆದ ವಾರ ಡೆಂಟಿಸ್ಟ್​ ತಾಯಿಯೊಬ್ಬಳು ತನ್ನ 6 ವರ್ಷದ ಮಗುವನ್ನು 4ನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಳು. ಆ ಬಳಿಕ ಇದೀಗ ಮತ್ತೋರ್ವ ಡೆಂಟಿಸ್ಟ್​ ಡಾಕ್ಟರ್​​ ತನ್ನ ಮಗಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆಕೆಯ ಕುಟುಂಬಸ್ಥರು ಮಾತ್ರ ಆತ್ಮಹತ್ಯೆಯಲ್ಲ, ಕೊಲೆ ಎಂದು ದೂರಿದ್ದಾರೆ. ಬನಶಂಕರಿ ಪೊಲೀಸರು ಡೆಂಟಿಸ್ಟ್​ ಆಗಿರುವ ಗಂಡ ನಾರಾಯಣಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೊಲೆಯೋ..? ಆತ್ಮಹತ್ಯೆಯೋ..? ಅನ್ನೋ ಬಗ್ಗೆ ಪೊಲೀಸ್ರು ತನಿಖೆ ಆರಂಭಿಸಿದ್ದಾರೆ. ಕೊಡಗು ಜಿಲ್ಲೆ […]

ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ.. ಬದುಕಬೇಕಿದ್ದರೆ ನೀವು ಹೀಗಿರಬೇಕು..

ರಾಜ್ಯದಲ್ಲಿ ಧರ್ಮ ಸಂಘರ್ಷ ಶುರುವಾಗಿದೆ. ಹಿಂದೂಗಳು ಹಾಗು ಮುಸಲ್ಮಾನ ಸಮುದಾಯದ ನಡುವೆ ಪರೋಕ್ಷವಾಗಿ ಬೆಂಕಿ ಹಚ್ಚುವ ಕೆಲಸವನ್ನು ಪಟಭದ್ರ ಹಿತಾಸಕ್ತಿ ಸೂಕ್ತ ರೀತಿಯಲ್ಲಿ ಮಾಡುತ್ತಿದೆ. ರಾಜ್ಯ ಸರ್ಕಾರ ಹಿಂದೂಗಳ ಮನೆಗೆ ತೆರಳಿ ಸಾಂತ್ವನ ಹೇಳುತ್ತದೆ ಪರಿಹಾರದ ಮೊತ್ತವನ್ನೂ ಕೊಡುತ್ತದೆ. ಆದರೆ ಮುಸಲ್ಮಾನ ಸಮುದಾಯದ ಯುವಕರು ಕೊಲೆಯಾದರೆ ತಿರುಗಿಯೂ ನೋಡದ ವಾತಾವರಣ ಸೃಷ್ಟಿಯಾಗಿದೆ. ಒಂದು ಸಮುದಾಯಕ್ಕೆ ಮಾತ್ರ ಸರ್ಕಾರ ಸೀಮಿತವಾಗಿದ್ಯಾ..? ಎನ್ನುವ ಪ್ರಶ್ನೆಯನ್ನು ಜನರೇ ಕೇಳುವಂತಾಗಿದೆ. ಆದರೆ ಹಿಂದೂಗಳು, ಅದರಲ್ಲೂ ಬಿಜೆಪಿ ಪಕ್ಷವನ್ನೇ ಆರಾಧಿಸುವ ಕಟ್ಟರ್​ ಹಿಂದುತ್ವವಾದಿಗಳ ರಕ್ಷಣೆಯಲ್ಲೂ […]

ಶಿವಮೊಗ್ಗದ ಹರ್ಷನಂತೆ ಪುತ್ತೂರಿನಲ್ಲೂ ಹಿಂದೂ ಮುಖಂಡನ ಭೀಕರ ಹತ್ಯೆ..!!

ಕರಾವಳಿಯಲ್ಲಿ ಹಿಂದೂ ಮುಸ್ಲಿಂ ನಡುವಿನ ದ್ವೇಷ ತಾರಕಕ್ಕೇರಿದೆ. ಪುತ್ತೂರಿನಲ್ಲಿ BJP ಯುವ ಮುಖಂಡನಾಗಿದ್ದ ಪ್ರವೀಣ್​ ನೆಟ್ಟಾರು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರ ಕೊಲೆ ಮಾಡಲಾಗಿದೆ. ಬೆಳ್ಳಾರೆ ಪೇಟೆಯಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಭೀಕರ ಹತ್ಯೆ ಮಾಡಿರುವ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಬಿಜೆಪಿ ಮುಖಂಡ ಪ್ರವೀಣ್​ ನೆಟ್ಟಾರು, ಹಿಂದೂಪರ ಸಂಘಟನೆಯಲ್ಲೂ ಸಕ್ರಿಯನಾಗಿ ಗುರುತಿಸಿಕೊಂಡಿದ್ದರು. ಕೇರಳ ನೊಂದಣಿ ಸಂಖ್ಯೆಯ ಬೈಕ್​ನಲ್ಲಿ ಬಂದಿದ್ದ ಮೂವರು ಕಿಡಿಗೇಡಿಗಳು ಪ್ರವೀಣ್​ ನೆಟ್ಟಾರು ಅವರನ್ನು ಹತ್ಯೆ […]

ಬ್ಯಾಂಕ್​ ಉದ್ಯೋಗಿ ಕೊಂದಿದ್ದುಯಾಕೆ ? ಅಪಾರ್ಟ್​ಮೆಂಟ್​ ಸೆಕ್ಯುರಿಟಿ ಗಾರ್ಡ್ಸ್..?

ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್​ಗಳೇ ಕಳ್ಳತನ ಮಾಡುತ್ತಿರುವ, ಕೊಲೆ ಪ್ರಕರಣಗಳಲ್ಲಿ ಭಾಗಿಯಾಗ್ತಿರೋ ಪ್ರಕರಣಗಳು ಹೆಚ್ಚಾಗುತ್ತಿವೆ ಅನ್ನೋದು ಬೆಂಗಳೂರು ಪೊಲೀಸ್​ ಮೂಲಗಳ ಮಾಹಿತಿ. ಉತ್ತರ ಭಾರತ, ನೇಪಾಳ, ಬಾಂಗ್ಲಾ ಕಡೆಗಳಿಂದ ಉದ್ಯೋಗ ಹರಸಿ ಬರುವ ಅದೆಷ್ಟೋ ಕುಟುಂಬಗಳಿಗೆ ಬೆಂಗಳೂರು ಅನ್ನ ನೀರು ಕೊಡುವ ತಾಯಿ ಎನ್ನಬಹುದು. ಆದರೆ ಕೆಲಸ ಮಾಡುವ ಜೊತೆಗೆ ಕೊಲೆ ಸುಲಿಗೆ ಪ್ರಕರಣಗಳಲ್ಲಿ ಭಾಗಿ ಆಗುತ್ತಿರುವ ಪ್ರಕರಣಗಳು ದಿನದಿಂದ ಹೆಚ್ಚಾಗುತ್ತಲೇ ಇವೆ. ಜುಲೈ 5ರಂದು ಬೆಂಗಳೂರಿನಲ್ಲಿ ಬ್ಯಾಂಕ್​ ಉದ್ಯೋಗಿಯೊಬ್ಬರುನ್ನು ಕಬ್ಬಿಣದ ರಾಡ್​ನಿಂದ ಹೊಡೆದು ಕೊಲೆ ಮಾಡಲಾಗಿದೆ. ಇದಕ್ಕೆ […]

ಪ್ರಾಣಿ, ಪಕ್ಷಿಗಳಿಗೆ ಇರುವ ಬುದ್ಧಿವಂತಿಕೆ ಮಾನವನಿಗೆ ಯಾಕಿಲ್ಲ..? ಪ್ರಾಣಿಗಿಂತಾ ಕಡೆನಾ..?

ಮೈಸೂರಿನ ಪಿರಿಯಾಪಟ್ಟಣದಲ್ಲಿ ಸ್ವತಃ ಹೆತ್ತವರೇ ತಮ್ಮ ಮಗಳನ್ನು ಕೊಲೆ ಮಾಡಿ ತೋಟದಲ್ಲಿ ಹೆಣ ಬಿಸಾಡಿರುವ ಘಟನೆ ನಡೆದಿದೆ. ಅಪ್ರಾಪ್ತರಿಗೆ ಬುದ್ಧಿ ಕಡಿಮೆ ಇರುತ್ತೆ ಎನ್ನುವ ಕಾರಣಕ್ಕೆ ಕಾನೂನು ಕೂಡ ಕೆಲವೊಂದು ವಿನಾಯ್ತಿ ನೀಡುತ್ತದೆ. ಆದರೆ ಮಗಳು ಅನ್ಯ ಜಾತಿಗೆ ಸೇರಿದ ಯುವಕನನ್ನು ಪ್ರೀತಿಸಿದಳು ಎನ್ನುವ ಏಕೈಕ ಕಾರಣಕ್ಕೆ ತೋಟದ ಬಳಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಮಗಳನ್ನು ಕೊಲೆ ಮಾಡುವ ಮುನ್ನ ಭಾರೀ ಹೈಡ್ರಾಮಾ ನಡೆದಿದ್ದು, ನಾವು ಮಗಳನ್ನು ಚೆನ್ನಾಗಿ ನೋಡಿಕೊಳ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟ ಮೇಲೂ […]

ನಾಗಮಂಗಲ ರಕ್ತಚರಿತ್ರೆ..! ಮಂಡ್ಯದಲ್ಲಿ ಅಕ್ರಮ ಪ್ರಶ್ನಿಸಿದ್ರೆ ಕೊಲ್ಲುವುದೇ ಅಸ್ತ್ರ..!?

ಮಂಡ್ಯ ಜಿಲ್ಲೆ ಎಲ್ಲಾ ವಿಚಾರಗಳಲ್ಲೂ ಗಮನ ಸೆಳೆಯುವ ಜಿಲ್ಲೆ ಎಂದರೆ ತಪ್ಪಲ್ಲ. ಇಲ್ಲಿನ ರಾಜಕೀಯ, ಬಾಷೆ, ಮುಗ್ದತೆ ಜೊತೆಗೆ ಕ್ರೂರತೆಯೂ ಮಂಡ್ಯ ಜನರಲ್ಲಿ ಹಾಸು ಹೊಕ್ಕಾಗಿದೆ ಎನ್ನುವುದನ್ನು ಈ ಸುದ್ದಿಯೇ ನಿಮ್ಮ ಮುಂದಿಡುತ್ತಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ 31 ವರ್ಷದ ಮೋಹನ್​ ಎಂಬಾತನನ್ನು ಕಿಡ್ನ್ಯಾಪ್​ ಮಾಡಿ ಹಾಸನ ಜಿಲ್ಲೆ ಹೊಳೆ ನರಸೀಪುರದ ಬಳಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಅಲ್ಲೇ ಗುಡ್ಡಗಾಡು ಪ್ರದೇಶದಲ್ಲಿ ಶವವನ್ನು ಹೂತು ಹಾಕಿದ್ದ ಪ್ರಕರಣ, ಕುಟುಂಬಸ್ಥರ ಜಾಣ್ಮೆಯಿಂದ ಬಯಲಿಗೆ […]

Intsagram Love.. ಕಾಲೇಜಲ್ಲಿ ಱಗಿಂಗ್..! ಯುವಕ ಸಾವು..!

ಬೆಂಗಳೂರಿನಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳಿವೆ. ಸಾಕಷ್ಟು ಕಾಲೇಜುಗಳಲ್ಲಿ ಗಾಂಜಾ ಗಮ್ಮತ್ತು ಜೋರಾಗಿದ್ರೆ, ಇನ್ನೂ ಕೆಲವು ಕಾಲೇಜುಗಳಲ್ಲಿ ಱಗಿಂಗ್​ ಭೂತ ಮನೆ ಮಾಡಿದೆ. ಇದೀಗ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಆದರೆ ಯಾರಾದರೂ ಕೊಲೆ ಮಾಡಿ ಹೆಣವನ್ನು ಎಂ ಸ್ಯಾಂಡ್​ ತುಂಬಿದ್ದ ಲಾರಿಯಲ್ಲಿ ಹಾಕಿದ್ರಾ..? ಅಥವಾ ಮಾಡದೆ ಇರುವ ಕೃತ್ಯಕ್ಕೆ ತಾನು ಹೊಣೆಯಾಗ್ತಿದ್ದೇನೆ ಎನ್ನುವ ಭೀತಿಯಲ್ಲಿ ತಾನೇ ಆತ್ಮಹತ್ಯೆ ಮಾಡಿಕೊಂಡನಾ..? ಎನ್ನುವ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಓದಿನಲ್ಲಿ ಸಾಕಷ್ಟು ಮುಂದಿದ್ದ ಯುವಕ ಸೋಮನಾಥ್​, ಹೆಣವಾಗಿ ಲಾರಿ ಮೇಲೆ ಬಿದ್ದಿದ್ದಾನೆ. ದ್ವಿತೀಯ ಪರೀಕ್ಷೆ […]

ಮದುವೆಯಾದ ಬಳಿಕ ಸಂಗಾತಿ ಇಷ್ಟ ಆಗದಿದ್ರೆ ಕೊಲ್ಲುವುದ್ಯಾಕೆ..!? ಇಲ್ಲಿದೆ ಪರಿಹಾರ..

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗಂಡನಿಂದ ಹೆಂಡತಿ ಕೊಲೆ ಅಥವಾ ಹೆಂಡತಿಯಿಂದ ಗಂಡನ ಕೊಲೆ ಎನ್ನುವ ಸುದ್ದಿಗಳು ಪ್ರತಿದಿನ ಮಾಧ್ಯಮಗಳಲ್ಲಿ ಬರುವುದನ್ನು ನೋಡಿರ್ತೀರಿ. ಸಾಕಷ್ಟು ವರ್ಷಗಳ ಕಾಲ ಪ್ರೀತಿ ಮಾಡಿ ಮದುವೆಯಾದ ಜೋಡಿಗಳ ಮನಸ್ಸು ಮದುವೆಯಾದ ಬಳಿಕ ಒಡೆದು ಹೋಗಿರುವ ಸಂಗತಿಗಳೂ ಕಾಣಸಿಗುತ್ತವೆ. ಮದುವೆಯಾದ ಬಳಿಕ ದೈಹಿಕ ಸುಖಕ್ಕಾಗಿ ಬೇರೊಬ್ಬರ ಜೊತೆಗೆ ಸಂಬಂಧ ಬೆಳೆಸಿ ಮದುವೆಯಾಗಿದ್ದ ಸಂಗಾತಿಯನ್ನು ಕೊಲ್ಲುವ ಘಟನೆಗಳು ನಡೆಯುತ್ತಿವೆ. ಆದರೆ ಕೊಲ್ಲುವ ಮುನ್ನ ಮುಂದೆ ಎದುರಾಗುವ ಕಾನೂನು ಸಂಘರ್ಷ ಹಾಗೂ ಜೈಲು ಶಿಕ್ಷೆಯ ಬಗ್ಗೆ ಆಲೋಚನೆ […]