ಬೆಂಗಳೂರಲ್ಲಿ ಮಳೆ, ಮಧ್ಯರಾತ್ರಿ ಅಖಾಡಕ್ಕಿಳಿದ ಡಿಸಿಎಂ..

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಭಾರೀ ಪ್ರಮಾಣದ ಮಳೆಯಾಗಿದ್ದು, ಸಂಜೆಯಿಂದಲೇ ಶುರುವಾದ ಧಾರಾಕಾರ ಮಳೆ ಬೆಂಗಳೂರಿಗರಿಗೆ ತಂಪೆರೆಯುವ ಜೊತೆಗೆ ರಸ್ತೆಗಳು ತುಂಬಿ ಹರಿದ ಪರಿಣಾಮ ಜನರು ಮನೆಗಳಿಗೆ ವಾಪಸ್‌ ಆಗುವುದಕ್ಕೆ ಪರದಾಡುವಂತಾಗಿತ್ತು. ಸಂಜೆ ಬಳಿಕ ಬೆಂಗಳೂರಿನ ಯಲಹಂಕದಲ್ಲಿ 11.4 ಸೆಂ.ಮೀ ಮಳೆ ಆಗಿದೆ. ನಂದಿನಿ ಲೇಔಟ್‌ನಲ್ಲಿ 7.5 ಸೆಂ.ಮೀ. ಹಂಪಿ ನಗರ 8.6 ಸೆಂ.ಮೀ, ಅಗ್ರಹಾರ ದಾಸರಹಳ್ಳಿ 6.2 ಸೆಂ.ಮೀ, ನಾಗಪುರ 8.2 ಸೆಂ.ಮೀ, ಜಕ್ಕೂರು 5.8 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ […]

ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ.. ಬೆಂಗಳೂರಲ್ಲಿ 3 ದಿನ ವರುಣಾರ್ಭಟ..

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿಯಲಿದ್ದು, ಮುಂದಿನ ಒಂದು ವಾರ ಮಳೆ ಸುರಿಯಲಿದೆ ಎನ್ನುವ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದ್ದು, ಕರಾವಳಿ ಕರ್ನಾಟಕ ಭಾಗದಲ್ಲಿ ಇನ್ನೂ ಮೂರು ದಿನ ಮಳೆ ಅಬ್ಬರ ಜೋರಾಗಿರಲಿದೆ ಎನ್ನುವ ಮಾಹಿತಿ ಜನತೆಯನ್ನು ಕಂಗಾಲು ಮಾಡಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನಾಳೆ ರೆಡ್ ಅಲರ್ಟ್ ಹಾಗು ಆಗಸ್ಟ್​ 6ರಂದು ಆರೆಂಜ್ ಅಲರ್ಟ್ ಮತ್ತು ಕೊನೆಯ ಎರಡು […]

Rain effect: ಸಿಎಂ ಸಾರ್ ಕೂಗಿ ಕರೆದರೂ ಯಾರೂ ರಕ್ಷಣೆಗೆ ಬರಲಿಲ್ಲ, ನಾವು ಮತಕ್ಕೆ ಮಾತ್ರ ಸೀಮಿತವೇ..?

ಭಟ್ಕಳ : ದಿನಾಂಕ 02/08/2022 ರಂದು ಸುರಿದ ಅತಿವೃಷ್ಠಿಯಿಂದಾಗಿ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಟದಹಿತ್ಲು ಎಂಬ ಊರಿನಲ್ಲಿ ನೆರೆಹಾವಳಿ ಸಂಭವಿಸಿರುತ್ತದೆ. ಕಂಟದಹಿತ್ತಲಿನ ಎಲ್ಲಾ ಮನೆಗಳಿಗೂ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿದ್ದು, ಎರಡು ಮನೆಗಳ ಗೋಡೆಗಳು ಕುಸಿದಿದೆ. ಎರಡು ಲಗೇಜ್ ರಿಕ್ಷಾ, ಒಂದು ಕಾರು, ಒಂದು ಆಟೋ ರಿಕ್ಷಾ, ಒಂದು 807 ಟೆಂಪೋ, ಹಾಗೂ ಎಂಟು ಬೈಕುಗಳು ನೀರು ಪಾಲಾಗಿದ್ದು, ಬೈಂದೂರಿನ ಸಂತೆಗೆ ತೆರಳಲು ಸಿದ್ಧವಾಗಿದ್ದ ನಾಗರಾಜ ದೇವಡಿಗರ ಹಾರ್ಡ್‌ವೇರ್ ವಸ್ತುಗಳನ್ನು ತುಂಬಿದ್ದ ಲಗೇಜ್ […]

ಮಳೆ ಹಾನಿಗೆ ಸರ್ಕಾರದಿಂದ ಪರಿಹಾರ ಘೋಷಣೆ..! ಒಂದೇ ದಿನಕ್ಕೆ ಸಿಎಂ ಸುಸ್ತು..

ರಾಜ್ಯದಲ್ಲಿ ಬಹುತೇಕ ಎಲ್ಲಾ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಡ್ಯಾಂಗಳಿಂದ ನದಿಗೆ ಅಪಾರ ಪ್ರಮಾಣದ ನೀರನ್ನು ಬಿಡಲಾಗ್ತಿದೆ. ಎಲ್ಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ (12-07-2022) ರಂದು ಮಳೆ ಹಾನಿ ಬಗ್ಗೆ ಖುದ್ದು ಭೇಟಿ ನೀಡಿ ಜನರ ಸಂಕಷ್ಟ ಆಲಿಸುವ ಉದ್ದೇಶದಿಂದ ಕೊಡಗು, ದಕ್ಷಿಣ ಕನ್ನಡ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರು. ಕೊಯಿನಾಡು ಸಂತ್ರಸ್ಥರ ಕೇಂದ್ರಕ್ಕೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಮಳೆಯಿಂದ ಹಾನಿಗೆ ಒಳಗಾದ […]

ಕರಾವಳಿಯಲ್ಲಿ ವರುಣನ ಆರ್ಭಟ, ಶಾಲಾ ಕಾಲೇಜುಗಳಿಗೆ ರಜೆ..!

ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಭಾರೀ ಮಳೆಯಾಗಿತ್ತು. ದಕ್ಷಿಣ ಒಳನಾಡು ಸೇರಿದಂತೆ ಬಯಲು ಸೀಮೆಯಲ್ಲೂ ವರುಣನ ಆರ್ಭದಿಂದ ಕರೆ ಕಟ್ಟೆಗಳು ಭರ್ತಿ ಆಗಿದ್ದವು. ಆದರೆ ಮುಂಗಾರು ಆರಂಭವಾಗಿ ಒಂದು ತಿಂಗಳು ಕಳೆದರೂ ಸರಿಯಾದ ಪ್ರಮಾಣದ ಮಳೆ ಬಿದ್ದಿರಲಿಲ್ಲ. ಬೆಳೆ ಬಿತ್ತನೆ ಮಾಡುವುದಕ್ಕೆ ರೈತರು ಆಕಾಶದ ಕಡೆಗೆ ನೋಡುವಂತಾಗಿತ್ತು. ಆದರೆ ಇದೀಗ ವರುಣ ತನ್ನ ಕಾಯಕ ಶುರು ಮಾಡಿದ್ದಾನೆ. ಬೆಂಗಳೂರು ಸೇರಿದಂತೆ ಕರಾವಳಿಯಲ್ಲಿ ವರುಣ ಆರ್ಭಟ ಶುರು ಮಾಡಿದ್ದು, ಕರಾವಳಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಭಾರತೀಯ ಹವಾಮಾನ ಇಲಾಖೆ […]

ನಟ ದರ್ಶನ್ ಮನೆಯನ್ನು ತೆರವು ಮಾಡ್ತಾರಾ..? ಮುನಿರತ್ನ ಶಪಥ ಕೈಗೂಡುತ್ತಾ..!?

ಬೆಂಗಳೂರಿನಲ್ಲಿ ಮಳೆ ಅವಾಂತರ ಸರ್ಕಾರದ ನಿದ್ರೆ ಕೆಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ 3 ದಿನಗಳಿಂದ ಎಡೆಬಿಡದೆ ಸಿಟಿರೌಂಡ್ ಮಾಡ್ತಿದ್ದಾರೆ. ಇವತ್ತೂ ಕೂಡ ಬೆಂಗಳೂರು ನಗರ ಪ್ರದಕ್ಷಿಣೆ ಹಾಕುತ್ತಿದ್ದು, ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರ ಕಷ್ಟ ಆಲಿಸಲಿದ್ದಾರೆ. ಆದರೆ ನಿನ್ನೆ ಗುರುವಾರ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ಸಿಎಂ, ರಾಜಕಾಲುವೆ ಒತ್ತುವರಿ ಆಗಿರುವುದನ್ನು ಒಪ್ಪಿಕೊಂಡಿದ್ದರು. ಆ ಬಳಿಕ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜಕಾಲುವೆ ಒತ್ತುವರಿ ಹಾಗೂ ಹೂಳು ತೆಗೆದಿಲ್ಲ ಎನ್ನುವ ಕಾರಣಕ್ಕೆ […]

ಬೆಂಗಳೂರಲ್ಲಿ ಯಾಕಿಷ್ಟು ಮಳೆ ಅವಾಂತರ..!? ದಾಖಲೆಯ ಮಳೆ ಕಾರಣವೋ..!?

ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ವರುಣನ ಆರ್ಭಟ ಜೋರಾಗಿದೆ. ಬೆಂಗಳೂರಿನ ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿವೆ. ಕಾರುಗಳು ಸಂಪೂರ್ಣವಾಗಿ ಮುಳುಗಿರುವ ಅನೇಕ ಪ್ರಕರಣಗಳು ಇಂದು ವರದಿಯಾಗಿವೆ. ಇದಕ್ಕೆ ಮಂಗಳವಾರ ರಾತ್ರಿ ಸುರಿದ ಅತಿ ಹೆಚ್ಚು ಮಳೆಯೂ ಒಂದು ಕಾರಣ. ಆದರೆ ಮಳೆ ಬಿದ್ದರೆ ಬೆಂಗಳೂರು ಮುಳುಗುವ ಅವಶ್ಯಕತೆ ಇಲ್ಲ. ಯಾಕೆಂದರೆ ಮಳೆ ಸುರಿದ ಕೆಲವೇ ಗಂಟೆಗಳಲ್ಲಿ ನೀರು ಸರಾಗವಾಗಿ ಹರಿದು ನದಿಯನ್ನು ಸೇರುವಂತಹ ವ್ಯವಸ್ಥೆ ಇರಬೇಕು. ಆದರೆ ನಮ್ಮಲ್ಲಿ ಸಮನ್ವಯತೆ ಕೊರತೆ ಇರುವುದರಿಂದ ನೀರು ನಗರ […]

Heavy Rain: ರಾಜ್ಯದಲ್ಲಿ ಮುಂಗಾರು ಪೂರ್ವ ಅಬ್ಬರ.. ಮುಂದಿನ 5 ದಿನಗಳ ಕಾಲ ಬಿ ಕೇರ್​ಫುಲ್​..

ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭವಾಗುವ ಮುನ್ನವೇ ಅಬ್ಬರ ಶುರುವಾಗಿದೆ. ಬೇಸಿಗೆಯನ್ನು ಗುಳುಂ ಸ್ವಾಹಃ ಮಾಡಿದ ಮಳೆಗಾಲ, ಏಪ್ರಿಲ್​ ಅಂತ್ಯದಿಂದಲೇ ಎಲ್ಲೆಡೆ ಸುರಿಯಲಾರಂಬಿಸಿತ್ತು. ಇದೀಗ ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಬಯಲುಸೀಮೆಯಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಶುರುವಾಗಿದೆ. ಇನ್ನೂ ಮುಂದಿನ 5 ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಸಿಕ್ಕಿದ್ದು, ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ಹವಾಮಾನ ಇಲಾಖೆ ಕಟ್ಟೆಚ್ಚರ ನೀಡಿದೆ. ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವಿಪರೀತ ಮಳೆಯಾಗುವ ಸಂಭವವಿದ್ದು, ಮಳೆಯನ್ನು ಆಧರಿಸಿ […]

ರಾಜ್ಯದಲ್ಲಿ ನಿಲ್ಲದ ಮಳೆಯ ಅಬ್ಬರ.. ಶಾಲಾ ಕಾಲೇಜಿಗೆ ರಜೆ ಘೋಷಣೆ..!

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಕಳೆದ ಇಪ್ಪತ್ತು ದಿನಗಳಿಂದ ಸೂರ್ಯೋದಯ ಕಾಣದೆ ಜನರು ಪರದಾಡುವಂತಾಗಿದೆ. ಮನೆ ಬಿಟ್ಟು ಹೊರಕ್ಕೆ ಬಂದರೆ ಮಳೆಯಲ್ಲಿ ಒದ್ದೆಯಾಗುವುದು ನಿಶ್ಚಿತ ಎನ್ನುವಂರಾಗಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಇದೇ ವಾತಾವರಣ ಇರಲಿದೆ ಎನ್ನುವುದು ಹವಾಮಾನ ಇಲಾಖೆ ಮಾಹಿತಿ. ಇನ್ನೂ ಶಾಲಾ ಕಾಲೇಜು ಮಕ್ಕಳು ಈ ಮಳೆಯ ಸಂಕಷ್ಟದಲ್ಲಿ ಶಾಲಾ ಕಾಲೇಜು ತಲುಪುವುದು ದುಸ್ತರವಾಗಿದೆ. ಇದೇ ಕಾರಣದಿಂದ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಜೆ ಘೋಷಣೆ..! […]

ಬೆಂಗಳೂರಿಗೆ ಬೆಂಕಿ ಬಿದ್ದರೆ ಮಾತ್ರ ಸರ್ಕಾರಕ್ಕೆ ಎಚ್ಚರ.. ಆ ಬಳಿಕ ಗಾಢ ನಿದ್ರೆ..

ಗುರುವಾರ, ಶುಕ್ರವಾರ ಸತತವಾಗಿ ಸುರಿದ ಮಳೆ ಬೆಂಗಳೂರು ಜನರು ಜಾಗರಣೆ ಮಾಡುವಂತೆ ಮಾಡಿತ್ತು. ಚಾಮರಾಜಪೇಟೆ, ಜಯನಗರ, ಜೆಸಿ ರಸ್ತೆ, ಗುಡ್ಡದಹಳ್ಳಿ, ಕಸ್ತೂರ ಬಾ ನಗರ ಸೇರಿದಂತೆ ಬಹುತೇಕ ಪ್ರದೇಶಗಳು ಜಲಾವೃತ ಆಗಿದ್ದವು. ತಗ್ಗು ಪ್ರದೇಶದ ಮನೆಗಳು ಕೊಳಚೆ ನೀರಿನಲ್ಲಿ ಮುಳುಗಿದ್ರೆ, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಕೆರೆಯಂತಾಗಿದ್ದ ನೀರಿನಲ್ಲಿ ತೇಲುತ್ತಿದ್ದವು. ಜನರು ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ರು. ಬಿಬಿಎಂಪಿ ಕಾಲ್ ಸೆಂಟರ್‌ಗೆ ಕರೆ ಮಾಡಿದ್ರು ಯಾವುದೇ ಸ್ಪಂದನೆ ಸಿಗಲಿಲ್ಲ ಎನ್ನುವುದು ಸಾರ್ವಜನಿಕರ ಆರೋಪ. ಜನರ ಕೋಪ […]