ಸಿದ್ದರಾಮಯ್ಯಗೆ 75ನೇ ಹುಟ್ಟುಹಬ್ಬ, 75 ಕೋಟಿ ವೆಚ್ಚದಲ್ಲಿ ಅದ್ಧೂರಿ ಕಾರ್ಯಕ್ರಮ..!

ಮಾಜಿ ಸಿಎಂ ಹಾಗು ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತನ್ನ ವಾಕ್​ ಚಾತುರ್ಯದಿಂದಲೇ ಜನಮಾನಸದಲ್ಲಿ ಖ್ಯಾತಿ ಪಡೆದಿರುವ ಜನನಾಯಕ. ಇಂದು ಆಗಸ್ಟ್​ 3, ಸಿದ್ದರಾಮಯ್ಯ 75ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ದಾವಣೆಗೆರೆಯಲ್ಲಿ ಬೃಹತ್​ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬರೋಬ್ಬರಿ 75 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಸುಮಾರು 8 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಉತ್ತರ ಕರ್ನಾಟಕ ಭಾಗದ ಪ್ರತಿಯೊಂದು ಕ್ಷೇತ್ರದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಇನ್ನೂ ಹಳೇ ಮೈಸೂರು […]

ಮುಖ್ಯಮಂತ್ರಿಯಾಗಿ ನಾನ್ಯಾಕೆ 2ನೇ ಮದುವೆ ಆದೆ..!? ಇದು ಅಸಲಿ ಕಥೆ..!

ಪಂಜಾಬ್​ ಮುಖ್ಯಮಂತ್ರಿ ಮದುವೆ ಸರಳವಾಗಿ ಗುರುವಾರ ಚಂಢಿಗಡದ ನಿವಾಸದಲ್ಲಿ ನೆರವೇರಿದೆ. ಇತ್ತೀಚಿಗಷ್ಟೇ ಭರ್ಜರಿಯಾಗಿ ಆಮ್​ ಆದ್ಮಿ ಪಕ್ಷದಿಂದ ಜಯಭೇರಿ ಬಾರಿಸಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದ ಭಗವಂತ್​ ಮನ್​ ವೃತ್ತಿಯಲ್ಲಿ ವೈದ್ಯೆ​ ಆಗಿರುವ ಡಾ ಗುರ್​ಪ್ರೀತ್​​ ಕೌರ್ ಎಂಬಾಕೆಯನ್ನು ವರಿಸಿದ್ದಾರೆ. ಸರಳ ಕಾರ್ಯಕ್ರಮದಲ್ಲಿ ಸಂಬಂಧಿಕರು, ಆಪ್ತರು ಹಾಗೂ ಹಿತೈಶಿಗಳು ಮಾತ್ರವೇ ಭಾಗಿಯಾಗಿದ್ದರು. ಆಮ್​ ಆದ್ಮಿ ಪಕ್ಷದ ಸಂಸ್ಥಾಪಕ ಹಾಗು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಭಾಗವಹಿಸಿ, ನೂತನ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಆದರೆ ಪಂಜಾಬ್​ ಸಿಎಂ ಆಗುವ ಮೊದಲೇ […]

ತ್ರಿಪುರದಲ್ಲಿ ಬಿಜೆಪಿ CM ದಿಢೀರ್ ಚೇಂಜ್​..! ರಾಜ್ಯದಲ್ಲೂ ಮಹತ್ವದ ಬೆಳವಣಿಗೆ..

ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಷಾ ಟೀಂ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಳಿಕ ಸಾಕಷ್ಟು ಬದಲಾವಣೆ ತರಲಾಗಿದೆ. ಸಾಕಷ್ಟು ಅಚ್ಚರಿಯ ರಾಜಕೀಯ ಬೆಳವಣಿಗೆ ಮಾಡೋದ್ರಲ್ಲೂ ಈ ಇಬ್ಬರು ನಾಯಕರು ನಿಸ್ಸೀಮರು ಎನ್ನುವುದನ್ನು ಯಾರೇ ಆಗಲಿ ಒಪ್ಪಿಕೊಳ್ಳಬೇಕು. ಯಾಕಂದ್ರೆ ಚುನಾವಣೆಗಳಲ್ಲಿ ಸೋಲುತ್ತೇವೆ ಎನ್ನುವುದು ಅರಿವಿಗೆ ಬಂದರೆ ಗೆಲ್ಲುವುದಕ್ಕೆ ಬೇಕಾದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಸಚಿವ ಸಂಪುಟವನ್ನೇ ಬರ್ಕಾಸ್ತ್ ಮಾಡಿ ಹೊಸ ಮುಖ್ಯಮಂತ್ರಿಯನ್ನೇ ಆಯ್ಕೆ ಮಾಡ್ತಾರೆ. ಸಾಕಷ್ಟು ರಾಜ್ಯಗಳಲ್ಲಿ ಈ ಯೋಜನೆ ಸಕ್ಸಸ್​ ಆದ ಬಳಿಕ ಇದೀಗ […]

ಚುನಾವಣೆ ಗೆಲ್ಲಲು ಬಿಜೆಪಿ ಬಳಿ ಬ್ರಹ್ಮಾಸ್ತ್ರ.. ಹಳಿ ತಪ್ಪುತ್ತಾ ಕಾಂಗ್ರೆಸ್, ಜೆಡಿಎಸ್ ಲೆಕ್ಕ..!?

ಬಿಜೆಪಿ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸ್ತಾರೆ. ಈ ಬಾರಿ‌ ಬಿಜೆಪಿ ಸೋಲುವುದು ಖಚಿತ ಅಂತಾ ಜನರು ಮಾತನಾಡಿಕೊಳ್ತಾರೆ. ಆದರೆ ಮುಂದಿನ ಚುನಾವಣೆಯಲ್ಲಿ‌ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ. ಆ ಬಳಿಕ ವಿರೋಧ ಪಕ್ಷಗಳು ಯಥಾ ಪ್ರಕಾರ ಇವಿಎಂ ಮೆಷಿನ್ ಕಡೆಗೆ ಬೊಟ್ಟು ಮಾಡಿ ತೋರಿಸ್ತಾರೆ. ಆದರೆ ಬಿಜೆಪಿ ತಂತ್ರಗಾರಿಕೆ ಗೆಲುವು ಕಾಣುತ್ತದೆ. ಅದೇ ಬಿಜೆಪಿ ಉರುಳಿಸಿದ ದಾಳವನ್ನು ಅರ್ಥ ಮಾಡಿಕೊಳ್ಳದೆ ತಾನೇ ಉರುಳಿಗೆ ಸಿಲುಕಿಕೊಳ್ಳುತ್ತವೆ. ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ದಾಳ ಉರುಳಿಸಲು […]

ಗೆಲುವಿನ ಕನಸಿನಲ್ಲಿ ಸೋಲುವ ಆತಂಕ..! ಕಾಂಗ್ರೆಸ್​ನಲ್ಲಿ ಗೆದ್ದವರು ಸಿಎಂ..!

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಗೆಲುವು ಸಾಧಿಸಿ ಅಧಿಕಾರ ಹಿಡಿಯುವ ಬಗ್ಗೆ ಈಗಾಗಲೇ ಲೆಕ್ಕಾಚಾರಗಳು ಶುರುವಾಗಿದೆ. ಬಿಜೆಪಿ ಸರ್ಕಾರದ ಆಡಳಿತ ಕಾರ್ಯವೈಖರಿಯಿಂದ ಬೇಸರಗೊಂಡಿರುವ ಜನರು ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸಿ ಅಧಿಕಾರ ನೀಡುತ್ತಾರೆ ಎನ್ನುವುದು ಬಹುತೇಕ ರಾಜಕೀಯ ಪಂಡಿತರ ಲೆಕ್ಕಾಚಾರ ಕೂಡ ಆಗಿದೆ. ಕಳೆದ ಬಾರಿ ಕೂಡ ಬಿಜೆಪಿ ಅಧಿಕಾರ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್​ ಸಂಪೂರ್ಣ ಬಲದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ 5 ವರ್ಷಗಳ ಕಾಲ ಅಧಿಕಾರ ಪೂರ್ಣ ಮಾಡಿದ್ದರು. ಇದೀಗ ಮತ್ತದೇ ರಾಜಕೀಯ […]

ರಾಮನಗರ: ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮಾರಾಮಾರಿ..! ಡಿಕೆ.. ಡಿಕೆ ಜೈಕಾರ..

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮಾರಾಮಾರಿ ನಡೆದಿದೆ. ಸಚಿವ ಅಶ್ವತ್ಥ ನಾರಾಯಣ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್​ ವೇದಿಕೆ ಮೇಲೆಯೇ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ವೇದಿಕೆ ಮೇಲಿದ್ದರೂ ಏನನ್ನೂ ಮಾಡಲಾಗದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಕಪ್ರೇಕ್ಷರಾಗಿದ್ದರು. ಆ ಬಳಿಕ ಪೊಲೀಸ್​ ಹಿರಿಯ ಅಧಿಕಾರಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ವೇದಿಕೆಯಿಂದ ಕೆಳಕ್ಕೆ ಕರೆದೊಯ್ದು ಪರಿಸ್ಥಿತಿ ತಿಳಿಗೊಳಿಸುವ ಕೆಲಸ ಮಾಡಿದ್ದಾರೆ. ಬಿಜೆಪಿ ಬಿತ್ತುವ […]

ಬಿಜೆಪಿ ತಂತ್ರಗಾರಿಕೆ ಹಿಂಬಾಲಿಸಿ ಮುಗ್ಗರಿಸಿ ಬಿದ್ದ ಕಾಂಗ್ರೆಸ್..! ತನ್ನ ಗುಂಡಿ ತಾನೇ ತೋಡಿದ್ಯಾಕೆ..?

ಕರ್ನಾಟಕದಲ್ಲಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ , ಗುಜರಾತ್, ಉತ್ತರಾಖಂಡ್​​ನಲ್ಲಿ ಬಿಜೆಪಿ ಮುಖ್ಯಮಂತ್ರಿಗಳನ್ನು ಬದಲಾಯಿಸಿ ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ಇದೀಗ ಬಿಜೆಪಿಯನ್ನೇ ಹಿಂಬಾಲಿಸಲು ಹೊರಟ ಕಾಂಗ್ರೆಸ್ ಪೆಟ್ಟು ತಿನ್ನುವ ಎಲ್ಲಾ ಸಾಧ್ಯತೆಗಳನ್ನು ಸೃಷ್ಟಿಸಿಕೊಂಡಿದೆ. ಪಂಜಾಬ್​ನಲ್ಲಿ ಮುಖ್ಯಮಂತ್ರಿ ಆಗಿದ್ದ ಕಾಂಗ್ರೆಸ್​ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಕಳೆದ ನಾಲ್ಕೈದು ತಿಂಗಳುಗಳಿಂದ ಆಕ್ರೋಶ ಕೇಳಿಬಂದಿತ್ತು. ಸ್ವತಃ ಈಗಿನ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ನವಜೋತ ಸಿಂಗ್ ಸಿಧು, ಡಿಸಿಎಂ ಆಗಿದ್ದಾಗಲೇ ನೇರವಾಗಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಿರಂತರವಾಗಿ ಇಬ್ಬರ […]

‘ಮುಖ್ಯಮಂತ್ರಿಗೆ ಟೆಸ್ಟಿಂಗ್​ ಟೈಂ’ ಕೇವಲ ಆರೇಳು ತಿಂಗಳು ಮಾತ್ರಾನಾ..?

ಬಿಎಸ್​ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದರು. ಆ ಬಳಿಕ ಬಿಜೆಪಿ ಪಕ್ಷದೊಳಗೆ ಅಸಮಾಧಾನದ ಹೊಗೆ ಎದ್ದಿದ್ದು, ಬಹಿರಂಗ ಆಗಿಲ್ಲ ಎನ್ನುವುದು ಬಿಜೆಪಿ ಮೂಲಗಳ ಮಾಹಿತಿ. ಸಿಎಂ ರೇಸ್​ನಲ್ಲಿದ್ದ ಅರವಿಂದ್​ ಬೆಲ್ಲದ್​ ಇನ್ನೂ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಹಿಂದುತ್ವ ಹಿನ್ನೆಲೆಯಲ್ಲಿರುವ ಮಂತ್ರಿ ಮಂಡಲ ರಚನೆ ಆಗ್ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಬೇರೆ ಆಗುತ್ತದೆ ಎಂದು ಬಸನಗೌಡ ಪಾಟೀಲ್​ ಯತ್ನಾಳ್​ ಎಚ್ಚರಿಸಿದ್ದಾರೆ. ದೆಹಲಿ ಪ್ರವಾಸ ಕೈಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಅಮಿತ್​ ಷಾ […]

ಮುಖ್ಯಮಂತ್ರಿಗಳೇ.. ಇದು ನಮ್ಮೂರ ರಸ್ತೆ, ನೀವೊಮ್ಮೆ ನೋಡಿ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ರಂಗೇನಹಳ್ಳಿಯಿಂದ ಬರಗೇನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯಿದು. ಈ ರಸ್ತೆ ಸಂಪೂರ್ಣವಾಗಿ ಹಾಳಗಿದ್ದು, ರಸ್ತೆಯ ತುಂಬಾ ತಗ್ಗು-ಗುಂಡಿಗಳು ಇರುವುದರಿಂದ ವಾಹನ ಸವಾರರು ಸಂಚಾರ ಮಾಡಲು ಹರಸಾಹಸ ಪಡಬೇಕಾಗಿದೆ. ನಿತ್ಯ ಸಂಚಾರ ಮಾಡುವ ಜನರ ಗೋಳು ಹೇಳ ತೀರದು. ರಾಜ್ಯದಲ್ಲಿ ಬಿಜೆಪಿ ಪಕ್ಷ ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿ ಇದೆ. ನಮ್ಮ ಕ್ಷೇತ್ರದಲ್ಲೂ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗಿದ್ದರೂ ಅಭಿವೃದ್ಧಿ ಮರಿಚಿಕೆಯಾಗಿದೆ. ಇದಕ್ಕೆ ನೂತನ ಮುಖ್ಯಮಂತ್ರಿಯಾದ ನೀವಾದರೂ ಕಾಯಕಲ್ಪ ನೀಡಿ. ಈ ರಸ್ತೆಯು […]

ನನ್ನ ಆಡಳಿತದಲ್ಲಿ ಯಾರ ಹಸ್ತಕ್ಷೇಪವೂ ಇರಲ್ಲ – ನಿಯೋಜಿತ ಸಿಎಂ ಭರವಸೆ

ಬಿ.ಎಸ್​ ಯಡಿಯೂರಪ್ಪ ಸರ್ಕಾರದಲ್ಲಿ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಹೆಚ್ಚಾಗಿತ್ತು ಎನ್ನುವುದೇ ಪ್ರಮುಖ ಆರೋಪವಾಗಿತ್ತು. ಆದರೆ ನನ್ನ ಆಡಳಿತದಲ್ಲಿ ಯಾರೊಬ್ಬರ ಹಸ್ತಕ್ಷೇಪ ಇರಲ್ಲ, ಪಾರದರ್ಶಕ ಆಡಳಿತ ನೀಡುತ್ತೇನೆ ಎಂದು ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಶಾಸಕಾಂಗ ಪಕ್ಷದ ನಾಯಕನಾಗಿ ಘೋಷಣೆ ಆದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮನವಿ ಮಾಡಿದ ಬಳಿಕ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿ ಭಾರತಾಂಬೆಗೆ ಪುಷ್ಪಾರ್ಚನೆ ಮಾಡಿದರು. ರಾಜ್ಯ ಅಧ್ಯಕ್ಷ ನಳೀನ್​ ಕುಮಾರ್​ ಜೊತೆಗೆ ಚರ್ಚೆ […]