The Public Spot
ರಾಜ್ಯ

ಧರ್ಮಸ್ಥಳ ವಿಚಾರದಲ್ಲಿ ಚಿನ್ನಯ್ಯ ಜೊತೆಗೆ ಮಾತನಾಡಿದ್ದೆ.. ಆದರೆ..!!

ಧರ್ಮಸ್ಥಳದಲ್ಲಿ ಅಪರಿಚತ ಶವಗಳ ಬುರುಡೆ ಪ್ರಕರಣದಲ್ಲಿ ಬಹುಭಾಷಾ ನಟ ಪ್ರಕಾಶ್​ ರಾಜ್​ ಹೆಸರನ್ನು ಉಲ್ಲೇಖಿಸಿದ್ದನು. ಈ ಬಗ್ಗೆ ನಟ ಪ್ರಕಾಶ್​ ರಾಜ್​ ಇಂದು ಬೆಂಗಳೂರಿನ ಪ್ರೆಸ್​ ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ಕೊಡುವ ಕೆಲಸ ಮಾಡಿದ್ದಾರೆ. ಅದರಲ್ಲಿ ಸಾಕಷ್ಟುಯ ವಿಚಾರಗಳನ್ನು ಪ್ರಕಾಶ್​ ರಾಜ್​ ನೇರವಾಗಿ ಒಪ್ಪಿಕೊಳ್ಳುವ ಕೆಲಸವನ್ನೂ ಮಾಡಿದ್ದಾರೆ. ಮಾಸ್ಕ್​ ಮ್ಯಾನ್​ ಅಲಿಯಾಸ್​ ಚಿನ್ನಯ್ಯ ಹೈಕೋರ್ಟ್​ ಮೊರೆ ಹೋಗಿದ್ದು, ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ಮಾಡಲು 200 ಕೋಟಿ ಹಣ ಡೀಲ್​ ಆಗಿದೆ ಎಂದು ದೂರುದಾರರ ವಿರುದ್ಧ ಕ್ರಮ ಕೈಗೊಳ್ಬೇಕು ಎಂದು ಆಗ್ರಹಿಸಿ ಹೈಕೋರ್ಟ್​ಗೆ ಅರ್ಜಿ ಹಾಕಲಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಪ್ರಕಾಶ್​ ರಾಜ್​ ಹೇಳಿದ್ದಿಷ್ಟು.

ಧರ್ಮಸ್ಥಳದ ಬುರುಡೆ ಕೇಸ್​ನಲ್ಲಿ ಚಿನ್ನಯ್ಯ, ನಟ ಪ್ರಕಾಶ್ ರಾಜ್ ಹೆಸರು ಹೇಳಿದ್ದಾನೆ ಅಂತ ಮಾಧ್ಯಮದಲ್ಲಿ ಬಂದಿದೆ. ಬಹಳಷ್ಟು ಮಾಧ್ಯಮಗಳು ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಕೆಲವರು ಈ ಬಗ್ಗೆ ಜಡ್ಜ್ ಮಾಡಿದ್ದಾರೆ. ನಾನು ಯಾವತ್ತೂ ಧರ್ಮಸ್ಥಳಕ್ಕೆ ಹೋದವನು ಅಲ್ಲ. ಮಟ್ಟಣ್ಣವರ್​ ನನ್ನನ್ನು ಭೇಟಿ ಮಾಡಿದ್ದು ಇಲ್ಲ. ನಾನೊಬ್ಬ ಸೋಶಿಯಲ್ ಆ್ಯಕ್ಟಿವಿಸ್ಟ್, ನಾನು ಸರ್ಕಾರಕ್ಕೆ ನಾನು ಒತ್ತಾಯ ಮಾಡ್ತೀನಿ, ಇದು ನಡೆದಿರೋ ವಿಚಾರ SIT ರಚನೆ ಮಾಡಿ ಅಂತ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ನಾನು ಟ್ವೀಟ್ ಮಾಡಿದ್ದೀನಿ. ಮೊಹಂತಿ ಅವರು ಇನ್ನೂ ಚಾರ್ಜ್ ತೆಗೆದುಕೊಂಡಿರಲಿಲ್ಲ, ಆಗ ಗಿರೀಶ್ ಮಟ್ಟಣ್ಣವರ್​ ಫೋನ್ ಬಂದಿತ್ತು. ಮಾಸ್ಕ್ ಹಾಕಿಕೊಂಡಿರುವ ವ್ಯಕ್ತಿ ನಿಮ್ಮ ಜೊತೆ ಮಾತಾಡಬೇಕು ಅಂತಾ ಹೇಳಿದ್ರು.

ಆ ವ್ಯಕ್ತಿ ತಮಿಳು ಭಾಷೆಯಲ್ಲಿ ಮಾತಾಡ್ತಾರೆ. ನನ್ನನ್ನು ಮೀಟ್ ಮಾಡಬೇಕು ಅಂದ್ರು. ಆಮೇಲೆ ರೆಕಾರ್ಡ್ ಮಾಡಿ ವಾಯ್ಸ್ ಕಳಿಸಿ ಅಂದೆ. ಪ್ರಣಬ್​ ಮೊಹಂತಿ ಸರ್​ಗೆ ಫೋನ್ ಮಾಡಿ ಈ ಬಗ್ಗೆ ಅವತ್ತೇ ಹೇಳಿದ್ದೀನಿ. ಮಂಡ್ಯದವನು ಅಂತಾನೆ ತಮಿಳು ಮಾತಾಡ್ತಾನೆ. ತೆಲುಗು ಮಿಕ್ಸ್ ಮಾತಾಡ್ತಾನೆ ಅಂದಿದ್ದೆ. ಸ್ವಲ್ಪ ದಿನ ಆದ ಮೇಲೆ ಅಧಿಕಾರಿಗಳನ್ನು ಕೇಳಿದೆ. ಆಗ ಇನ್ನು ಮೇಲೆ ಆ ಫೋನ್ ಕಾಲ್ ಅಟೆಂಡ್ ಮಾಡಬೇಡಿ ಅಂದ್ರು. ಪೊಲೀಸ್ ಡಿಪಾರ್ಟ್ಮೆಂಟ್ ಹಾಗೂ ರಾಜ್ಯದ ಜನರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾನೆ. ಅವನ ಮೇಲೆ ಕ್ರಮ ಆಗುತ್ತದೆ.
ಒಬ್ಬರು ಮಾಧ್ಯಮದಲ್ಲಿ ಹೇಳ್ತಾರೆ, ಪ್ರಕಾಶ್ ರಾಜ್​ ನಿಮ್ಮದು ಧ್ವಂದ್ವ ನಿಲುವು ಅಂತ. ಚಿನ್ನಯ್ಯ ಫೋನ್ ಮಾಡಿರೋ ಬಗ್ಗೆ SIT ಅವರಿಗೆ ಹೇಳಿದ್ನಾ ಇಲ್ವಾ ನೀವೇ ಕೇಳಿ ಎಂದು ತಿಳಿಸಿದ್ದಾರೆ.

ನನ್ನ ಹೆಂಡತಿ ಪೂಜೆ ಮಾಡ್ತಾಳೆ, ನಾನು ಅವಳ ನಂಬಿಕೆ ಗೌರವಿಸುತ್ತೇನೆ. ಕೆಲವರಿಗೆ ದೇವಸ್ಥಾನಕ್ಕೆ ದುಡ್ಡು ಕೊಡೋದರಲ್ಲಿ ಮನಃ ಶಾಂತಿ ಸಿಗುತ್ತದೆ. ನನಗೆ ಮಕ್ಕಳ ಶಾಲಾ ಫೀಸ್ ಕಟ್ಟೋಕೆ ಖುಷಿ ಇದೆ. ನನಗೆ ಮನುಷ್ಯರು ಮುಖ್ಯ. ಬಿಜೆಪಿ ಒಂದು ಪಕ್ಷ ಅಂದ್ರೆ ಪೊಲಿಟಿಕಲ್ ಪಾರ್ಟಿಯಷ್ಟೆ, ಪ್ರಶ್ನೆ ಕೇಳಿದಾಗ ಯಾಕೆ ಗರಂ ಆಗ್ತೀರಿ..? ಎಂದು ಪ್ರಶ್ನೆ ಮಾಡಿರುವ ಪ್ರಕಾಶ್​ ರಾಜ್​, ತಿರುಚುವ ಮಾಧ್ಯಮಕ್ಕೆ ಹೇಳುತ್ತೀನಿ, ಜನರಿಗೆ ಯಾಕೆ ತಪ್ಪು ದಾರಿ ಎಳೆಯುತ್ತೀರಿ..? ಎಂದು ಕಿಡಿಕಾರಿದ್ದಾರೆ. ಇನ್ನೂ ವೀರೇಂದ್ರ ಹೆಗಡೆ ಅವರನ್ನು ಒಮ್ಮೆ ಭೇಟಿ ಆಗಿದ್ದೆ. ಅದ್ಬುತ ಆದ ಮನುಷ್ಯ ಅವರು. ಈ ಸುದ್ದಿ ತಿರುಚುವವರಿಗೆ ಧರ್ಮಸ್ಥಳ ಧರ್ಮದ ಮೇಲೆ ಪ್ರೀತಿ ಇಲ್ಲ ಎಂದಿದ್ದಾರೆ.

200 ಕೋಟಿ ರೂಪಾಯಿ ಹಣ ಏಣಿಸೋಕೆ ಆಗುತ್ತಾ..? ಎಂದಿರುವ ನಟ ಪ್ರಕಾಶ್​ ರಾಜ್​, ಬೆಟ್ಟಿಂಗ್ ಆ್ಯಪ್ ಅಲ್ಲಿ ಪ್ರಕಾಶ್ ರೈ ಅಂದ್ರು. ಕೋಟಿ ಕೋಟಿ ಅಂತ ಹೇಳೋದು ಅಭ್ಯಾಸ ಆಗಿ ಹೋಗಿ ಬಿಟ್ಟಿದೆ. ನಾವು ಪ್ರಶ್ನೆ ಕೇಳುತ್ತಾ ಇರಬೇಕು. ಕೇಳೋದ್ರಲ್ಲಿ ರಾಜಕೀಯ ದುರುದ್ದೇಶ ಇದೆ ಅಂದ್ರೆ ನಾನು MLA, MP ಆಗಬೇಕಿಲ್ಲ. ಸೌಜನ್ಯ ಪ್ರಕರಣ ಬಗ್ಗೆ ನೀವೆಲ್ಲಾ ಬರೆದಿದ್ದೀರಿ. ಆದ್ರೆ ಸೌಜನ್ಯ ಹೇಗೆ ಸತ್ತಳು ಅನ್ನೋದು ಬೇಕಲ್ಲಾ..! ಯಾವುದೇ ಪಾರ್ಟಿಯನ್ನು ಪ್ರಶ್ನೆ ಮಾಡಿದ್ರೆ ಧರ್ಮ ಪ್ರಶ್ನೆ ಮಾಡಿದ ಹಾಗೆ ಅಲ್ಲ. ನನ್ನ ಆತ್ಮೀಯರು ಕಾಶಿಗೆ, ತಿರುಪತಿಗೆ, ಅಯ್ಯಪ್ಪ ಮಾಲೆ ಹಾಕೊಂಡು ಶಬರಿಮಲೆಗೂ ಹೋಗ್ತಾರೆ ನಾನು ಯಾವ ಧರ್ಮದ ವಿರೋಧಿಯೂ ಅಲ್ಲ ಎಂದಿದ್ದಾರೆ.

ಚಿನ್ನಯ್ಯನಿಗೆ ನಾನು ಹೇಳಿದೆ, ನೀನು SIT ಗೆ ಎಲ್ಲವನ್ನೂ ಹೇಳು. ನೀನು ಹೇಳಿದ್ದು ನಿಜ ಆದ್ರೆ ನಾನೇ ಬಂದು ಮಾತಾಡ್ತೀನಿ ಅಂದಿದ್ದು ನಿಜ. ಗಿರೀಶ್ ಮಟ್ಟಣ್ಣವರ್ ಹೇಳಿರಬಹುದು, ಗೊತ್ತಿಲ್ಲ, ನನಗ್ಯಾಕೆ ಫೋನ್ ಮಾಡಿದ್ದ ಅಂತಾ. ಬಹಳ ಜನ ನನಗೆ ಫೋನ್ ಮಾಡ್ತಾರೆ. ನನಗೆ ಕರೆ ಬಂದ ತಕ್ಷಣ ನಾನು ಮೊಹಂತಿ ಅವರಿಗೆ ಹೇಳಿದ್ದೀನಿ. SIT ಮುಂದೆ ವಿಚಾರ ಹೇಳು, ಸತ್ಯ ಹೇಳಿದರೆ ನಿನ್ನನ್ನು ಊರೇ ಕೊಂಡಾಡುತ್ತದೆ. ನಾನೇ ಬಂದು ಅಪ್ಪಿಕೊಳ್ಳುತ್ತೀನಿ ಅಂತ ಹೇಳಿದ್ದು ನಿಜ. ನನ್ನ ಇಂಟೆನ್ಷನ್ ಅಬ್ಬಾ ಕೊಲೆಗಾರ ಸಿಕ್ಕಿದ ಅನ್ನೋದಷ್ಟೇ ಆಗಿತ್ತು. ನನ್ನ ಉದ್ದೇಶ ಬೇರೆ ಏನೂ ಆಗಿಲ್ಲ. ಗಿರೀಶ್ ಮಟ್ಟಣ್ಣವರ್ ನನಗೆ ಪರಿಚಯ ಇಲ್ಲ. ಹಲವು ಪ್ರತಿಭಟನೆಗಳಲ್ಲಿ ಭಾಗಿ ಆಗ್ತೀನಿ. ಹಾಗೇ ಕರೆ ಮಾಡಿದ್ರೇನೋ ಗೊತ್ತಿಲ್ಲ ಎಂದಿದ್ದಾರೆ ಬಹುಭಾಷಾ ನಟ ಪ್ರಕಾಶ್ ರಾಜ್.

Related posts

ಮನೆ ಮನೆಗೆ ಇ-ಖಾತೆಯನ್ನು ತಲುಪಿಸುವ ಅರ್ಥಪೂರ್ಣ ಕಾರ್ಯಕ್ರಮ ಇ-ಖಾತಾ ಮೇಳ: ಬಿ.ಎಸ್.ಸುರೇಶ್

admin

PU, SSLC ಪರೀಕ್ಷೆಗೆ ಸಿದ್ಧತೆ ಇರಲಿ, ಭಯ ಬೇಡ.. ಪತ್ರಿಕೆ ಲೀಕ್‌ ಆಗುವ ಭಯ ಬೇಡ..

Publicspot

ಇವತ್ತೂ ನಾಳೆ ರಾಜ್ಯದಲ್ಲಿ ಮಳೆಯೋ ಮಳೆ.. ಕರಾವಳಿಗೆ ಮಾತ್ರ ರಜೆ..

Publicspot

Veerendra Heggade: ಧರ್ಮಸ್ಥಳದಿಂದ ಸರ್ಕಾರಕ್ಕೆ ಧನ್ಯವಾದ.. ಒಳ್ಳೆಯದ್ದೇ ಮಾಡುವ ಭರವಸೆ..

Publicspot

ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ S I R ಶುರು.. ಢವಢವ ಶುರು..

Publicspot

Mysore Mahisha Mandala; ಮೈಸೂರು ಚಾಮುಂಡಿಗೆ ಕೊಡುವ ಗೌರವ ಮಹಿಷನಿಗೂ ಕೊಡಿ..

Publicspot