The Public Spot
ರಾಜ್ಯ

ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ S I R ಶುರು.. ಢವಢವ ಶುರು..

ದೇಶದಲ್ಲಿ 3ನೇ ಹಂತದಲ್ಲಿ ವಿಶೇಷ ಮತಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಚಾಲನೆ ನೀಡಿದೆ. ಕೇಂದ್ರ ಚುನಾವಣಾ ಆಯೋಗದಿಂದ ಆದೇಶ ಪ್ರಕಟವಾಗಿದ್ದು, ಜೂನ್ 30ರಿಂದ ಕರ್ನಾಟಕದಲ್ಲಿ SIR ಶುರು ಆಗಲಿದೆ. 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ SIR ಶುರು ಆಗಲಿದೆ. ಇದರ ಪ್ರಕಾರ ಅಕ್ರಮವಾಗಿ ನೆಲೆಸಿದವರು, ಸತ್ತವರು ಮತ್ತು 2 ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದವರನ್ನು ಮತದಾರರ ಪಟ್ಟಿಯಿಂದ ತೆಗೆಲಾಗುವುದು. ಕಾಂಗ್ರೆಸ್‌ ಪಕ್ಷದ ವಿರೋಧದ ನಡುವೆಯೇ ಮುಂದಿನ ಎಲೆಕ್ಷನ್‌ಗಳಿಗೆ ಚುನಾವಣಾ ಆಯೋಗ ಭರ್ಜರಿ ತಯಾರಿ ನಡೆಸಿದೆ.

SIR ನಡೆಸಲು ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿರುವ ವಿಚಾರದ ಬಗ್ಗೆ ಸಚಿವ ದಿನೇಶ್​ ಗುಂಡೂರಾವ್​ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾವು SIR ಬೇಡ ಎಂದರೂ ಅವರು ಮಾಡೇ ಮಾಡುತ್ತಾರೆ. ಅದಕ್ಕೆ ಸಮಯಾವಕಾಶ ಪೂರ್ತಿ ಕೊಡಬೇಕು. ಪಶ್ಚಿಮ ಬಂಗಾಳದಲ್ಲಿ ಆದ ರೀತಿಯಲ್ಲಿ ರಾಜ್ಯದಲ್ಲಿ ಆಗಬಾರದು. 25-30ಲಕ್ಷ ಜನ ಅರ್ಜಿ ಹಾಕೊಂಡು ಕ್ಯೂ‌ನಲ್ಲಿ ನಿಂತರೂ ವೋಟ್​ ಹಾಕಲು ಅವಕಾಶ ಸಿಕ್ಕಿಲ್ಲ. ಚುನಾವಣೆ ಸಂದರ್ಭದಲ್ಲಿ ಮತ ಪರಿಷ್ಕರಣೆ ಮಾಡಬಾರದು. ಚುನಾವಣೆಗೆ ಮೂರು ವರ್ಷ ಇದೆ ಎಂದಾಗಲೇ ಮಾಡಬೇಕು. ಚುನಾವಣೆ ಜೊತೆಯಲ್ಲಿ ಮಾಡಿದ್ರೆ ತೊಂದರೆ ಆಗುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿ ವಿಶೇಷ ಮತಪಟ್ಟಿ ಪರಿಷ್ಕರಣೆ ವಿಚಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಲ್ಲಿ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ವಿರೋಧ ಮಾಡುವುದು ಸ್ವಾಭಾವಿಕ. ಎಲ್ಲದಕ್ಕೂ ವಿರೋಧಿಸುವ ಕಾಂಗ್ರೆಸ್ ಪಕ್ಷ, SIR ಅನ್ನು ಕೂಡ ವಿರೋಧಿಸುತ್ತದೆ. ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಪುದುಚೇರಿಯಲ್ಲಿ ಜನ ಮಂಗಳಾರತಿ ಮಾಡಿದ್ದಾರೆ. NDA ಸರ್ಕಾರದ ಪ್ರತಿ ಯೋಜನೆಗಳನ್ನು ವಿರೋಧಿಸುವುದೇ ಕಾಂಗ್ರೆಸ್ ದಿನ ನಿತ್ಯದ ಕೆಲಸವಾಗಿದೆ ಎಂದು ಕಿಡಿಕಾರಿದ್ದಾರೆ.

ದೇಶಾದ್ಯಂತ 3ನೇ ಹಂತದ SIR ಶುರು ಆಗಲಿದ್ದು, 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ SIR ನಡೆಯಲಿದೆ. 3 ಲಕ್ಷ 94 ಸಾವಿರ BLOಗಳ ನೇಮಕ ಮಾಡಲಾಗಿದ್ದು, 3 ಲಕ್ಷ 42 ಸಾವಿರ BLA ಗಳ ನೇಮಕ ಆಗಿದೆ. 36 ಕೋಟಿ 73 ಲಕ್ಷ ಮತದಾರರ ಪರಿಶೀಲನೆ ಕಾರ್ಯ ನಡೆಯಬೇಕಿದ್ದು, 2011ರ ಜನಗಣತಿ ಆಧರಿಸಿ ಮನೆಗಳ ಲೆಕ್ಕ ಮಾಡಲಾಗುತ್ತದೆ. ಅಧಿಕಾರಿಗಳು, ಪಕ್ಷಗಳ ಏಜೆಂಟ್‌ಗಳಿಂದ ಸರ್ವೇ ಕೂಡ ನಡೆಯಲಿದೆ. ಪ್ರತಿ ಬೂತ್‌ಗೂ ಪಕ್ಷಗಳಿಂದ ಏಜೆಂಟ್‌ಗಳ ನೇಮಕ ಮಾಡಲಾಗುತ್ತದೆ. ಅಕ್ರಮವಾಗಿ ನೆಲೆಸಿದವರು, ಸತ್ತವರ ಹೆಸರುಗಳು ಡಿಲೀಟ್ ಮಾಡಲಾಗುತ್ತದೆ.

ಆಂಧ್ರ ಪ್ರದೇಶ, ಅರುಣಾಚಲ ಪಙ್ರದೇಶ, ಹರ್ಯಾಣ, ಜಾರ್ಖಂಡ್‌, ಕರ್ನಾಟಕ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌, ಓಡಿಶಾ, ಪಂಜಾಬ್‌, ಸಿಕ್ಕಿಂ, ತ್ರಿಪುರಾ, ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿ SIR ನಡೆಯಲಿದೆ. ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಚಂಢೀಗಢ, ದಾದ್ರಾ ಮತ್ತು ನಗರ್‌ ಹವೇಲಿ, ದಮನ್‌ & ದಿಯು ನಲ್ಲೂ ವಿಶೇಷ ಮತಪಟ್ಟಿ ಪರಿಷ್ಕರಣೆ ನಡೆಸಲು ಕೇಂದ್ರ ಚುನಾವಣಾ ತಯಾರಿ ಮಾಡಿಕೊಂಡಿದೆ. ಇದರಿಂದ ಯಾರ ಮತಗಳೂ ಡಿಲೀಟ್‌ ಆಗುವುದಿಲ್ಲ. ಆದರೆ ಎರಡು ಕಡೆ ಇದ್ದರೆ ಮಾತ್ರವೇ ಡಿಲೀಟ್‌ ಆಗಲಿದೆ. ಸತ್ತವರ ಹೆಸರು ಪಟ್ಟಿಯಲ್ಲಿದ್ದರೆ ಡಿಲೀಟ್‌ ಆಗಲಿದೆ.

Related posts

ಲಂಕೇಶ್ ಅವರ ಅಧ್ಯಯನಶೀಲತೆ ಮಾದರಿಯಾಗಲಿ: ಪತ್ರಕರ್ತರ ಮಕ್ಕಳಿಗೆ ಕೆವಿ ಪ್ರಭಾಕರ್ ಕರೆ

admin

5 ಜಿಲ್ಲೆಗಳಿಗೆ ರೆಡ್ ಅಲರ್ಟ್.. ಮಳೆ ಸಮಯದಲ್ಲಿ ಈ ತಪ್ಪು ಮಾಡಬೇಡಿ..

Publicspot

Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ನೀವೂ ಹೋಗಬಹುದು.. ಪಾಸ್‌ ಎಲ್ಲಿ ಸಿಗುತ್ತೆ ಗೊತ್ತಾ..?

ಯಶವಂತಿ

ಬಂಗಾಳದಲ್ಲಿ ಬಿಜೆಪಿ, ತಮಿಳುನಾಡಲ್ಲಿ ವಿಜಯ್‌ಗಿಲ್ಲ ಅಧಿಕಾರ.. ಚಾಣಕ್ಯ ಸಮೀಕ್ಷೆ

Publicspot

ಪರಿಸರವನ್ನು ಪಠ್ಯಕ್ರಮವಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

admin

Caste Censes; ಇಂದಿನಿಂದ ಶುರುವಾಗುತ್ತದೆ ಜಾತಿ ಜನಗಣತಿ..! ನಿಮ್ಮ ಧರ್ಮ, ಜಾತಿ ಗೊಂದಲ ಬೇಡ..

Publicspot