September 25, 2026
The Public Spot
ಅಪರಾಧರಾಜ್ಯ

ಬೆಂಗಳೂರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ..! 29 ಸ್ಥಳ.. 1909 ಮಂದಿ..

ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಬೃಹತ್ ಕಾರ್ಯಾಚರಣೆ ನಡೆಸಲಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗ ಪೊಲೀಸರು ಬೃಹತ್​ ಕಾರ್ಯಾಚರಣೆ ನಡೆಸಿದ್ದಾರೆ. ಡಿಸಿಪಿ ಎಂ. ನಾರಾಯಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, 295 ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. 23 ವಿಶೇಷ ತಂಡಗಳು ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಮಾಡುವ ಕಾರ್ಯ ಮಾಡಲಾಗಿದೆ.

ಶನಿವಾರ ಮುಂಜಾನೆ 4 ಗಂಟೆಗೆ ಏಕಾಕಾಲದಲ್ಲಿ ರೇಡ್ ಮಾಡಿದ ಪೊಲೀಸರು, ಬರೋಬ್ಬರಿ 29 ಸ್ಥಳಗಳಲ್ಲಿದ್ದ ಅಕ್ರಮ ವಲಸಿಗರನ್ನ ವಶಕ್ಕೆ ಪಡೆದಿದ್ದಾರೆ. ಒಟ್ಟು 1909 ಮಂದಿ ಅಕ್ರಮ ವಲಸಿಗರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಎಲ್ಲರ ದಾಖಲಾತಿಗಳನ್ನು ಪರಿಶೀಲನೆ ನಡೆಸಿದಾಗ ಆ ಪೈಕಿ 15 ಮಂದಿ ಮಾತ್ರ ಅಕ್ರಮ ಬಾಂಗ್ಲಾ ವಲಸಿಗರೆಂದು ದೃಢಪಟ್ಟಿದೆ. ಪಶ್ಚಿಮ ಬಂಗಾಳ, ಅಸ್ಸಾಂ ಮೂಲದ ನಕಲಿ ಆಧಾರ್ ಕಾರ್ಡ್ ಕೂಡ ಪತ್ತೆ ಆಗಿವೆ.

1894 ಅಕ್ರಮ ವಲಸಿಗರ ದಾಖಲೆ ಪರಿಶೀಲನೆ ಕಾರ್ಯ ನಡೆಸಲಾಗಿದೆ. ಶಂಕಿತರ ರಾಷ್ಟೀಯತೆ ಬಗ್ಗೆಯೂ ದಾಖಲೆ ಪರಿಶೀಲನೆ ಮಾಡಲಾಗ್ತಿದೆ. ಈಗಾಗಲೇ 15 ಜನರನ್ನು ಬಾಂಗ್ಲಾದೇಶದ ಬಾಗೇರಹತ್​ನ ಖುಲ್ನಾ ಜಿಲ್ಲೆಯವರು ಎಂದು ಪತ್ತೆ ಮಾಡಿದ್ದು, ಬಾಂಗ್ಲಾ ದೇಶಿಯರು ಅಕ್ರಮವಾಗಿ ಭಾರತದ ಗಡಿಯಲ್ಲಿ ನುಸುಳಿ ಬಂದಿರುವುದು ದೃಢಪಟ್ಟಿದೆ.

ಇದೇ ವೇಳೆ ಕೆಲವು ಸಂಘಟನೆಗಳು ನೈತಿಕ ಪೊಲೀಸ್ ಗಿರಿ ನಡೆಸುತ್ತಿದ್ದಾರೆ. ಬಾಂಗ್ಲಾ ದೇಶಿಯರ ಶೇಡ್ ಮೇಲೆ ದಾಳಿ ಮಾಡ್ತಾರೆ. ಅವರನ್ನ ಹೆದರಿಸಿ ಬೆದರಿಸಿ ಕೆಲವರು ಹಣ ಹಾಕಿಸಿಕೊಳ್ತಾರೆ ಎಂದು ಪೊಲೀಸರು ದೂರಿದ್ದಾರೆ. ನಿಮಗೆ ಬಾಂಗ್ಲಾ ದೇಶಿಯರು ಅಂತ ಗೊತ್ತಾದ್ರೆ ಕೂಡಲೇ ಪೊಲೀರಿಗೆ ಮಾಹಿತಿ ನೀಡಬೇಕು. ನೈತಿಕ ಪೊಲೀಸ್ ಗಿರಿ ನಡೆಸಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಹೇಳಿಕೆ.

ಇತ್ತೀಚಿಗಷ್ಟೇ ಪೊಲೀಸರಿಗೆ ಹೈಕೋರ್ಟ್​ ಛೀಮಾರಿ ಹಾಕಿತ್ತು. ಬಾಮಗ್ಲಾದೇಶಿಯರು ಇದ್ದಾರೆಂದು ಪೊಲೀಸರಿಗೆ ಮಾಹಿತಿ ನೀಡಿದ್ದ ಡಾಕ್ಟರ್​ ವಿರುದ್ಧವೇ ಪೊಲೀಸರು ಕೌಂಟರ್​ ರ್ಈಋ FIR ದಾಖಲು ಮಾಡಿದ್ದರು. ಬಾಂಗ್ಲಾ ದೇಶಿಯರು ದಾಖಲಿಸಿದ್ದ FIR ರದ್ದು ಕೋರಿ ಹೈಕೋರ್ಟ್​ ಮೆಟ್ಟಿಲೇರಿದಾಗ ಕೌಂಟರ್​ ಪ್ರಕರಣ ದಾಖಲಿಸಿದ್ದ ಪೊಲೀಸರ ವಿರುದ್ಧ ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿತ್ತು. ಅದೂ ಅಲ್ಲದೆ ದೂರು ಕೊಟ್ಟ 15 ನಿಮಿಷದಲ್ಲಿ ಕೌಂಟರ್​ ಕೇಸ್​ ಮಾಡಲಾಗಿತ್ತು.

Related posts

Kolar malur MLA Case; ಕಾಂಗ್ರೆಸ್‌ ಶಾಸಕನ ಸ್ಥಾನ ಅನರ್ಹ.. ಸುಪ್ರೀಂಕೋರ್ಟ್‌ನಲ್ಲಿ ಸಿಗುತ್ತಾ ರಿಲೀಫ್..?

Publicspot

ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ ಪ್ಲಾಂಟ್ ಏಷ್ಯಾದಲ್ಲೇ ನಂ 1 ಎಂದ ಸಿಎಂ ಸಿದ್ದರಾಮಯ್ಯ

admin

ನೀಟ್‌ ಅಕ್ರಮದ ಬಗ್ಗೆ ಕಾಂಗ್ರೆಸ್‌ ಪ್ರತಿಭಟನೆ ಖಂಡಿಸಿ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ

Publicspot

ನಾಳೆ, ನಾಡಿದ್ದು CET ಪರೀಕ್ಷೆ.. ಈ ವರ್ಷ ಮಹತ್ವದ ಬದಲಾವಣೆ..

Publicspot

Mahesh Thimarodi house search: ತಿಮರೋಡಿ ಮನೆ ಮೇಲಿನ ದಾಳಿ.. ಪರಮೇಶ್ವರ್​ ಏನಂದ್ರು..?

Publicspot

Darshan Bail Order: ನಟ ದರ್ಶನ್ ಮತ್ತು ಪವಿತ್ರ ಗೌಡ ಬೇಲ್ ರದ್ದಾಗುತ್ತಾ..?

ಯಶವಂತಿ