The Public Spot
ರಾಜ್ಯ

ಸೋಮಣ್ಣ ಆನೆ ರಂಪಾಟ.. ಹೊಣೆ ನಮ್ಮದು ಅಂದಿದ್ಯಾರು..?

ಶಿವಮೊಗ್ಗ ದಸರಾದಲ್ಲಿ ಸೋಮಣ್ಣ ಆನೆ ರಂಪಾಟ ಮಾಡಿದ ವಿಚಾರವಾಗಿ ಅರಣ್ಯ ಇಲಾಖೆ ವಿರುದ್ಧ ಅಕ್ರೋಶ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿ ಮುಂಭಾಗ ಕರವೇ ಸಿಂಹ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಕರವೇ ಸಿಂಹ ಸೇನೆ ಸಂಘಟನೆ ಸದಸ್ಯರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಆನೆ ಸೋಮಣ್ಣ ರಂಪಾಟಕ್ಕೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕಿಡಿಕಾರಿದರು.

ಸೋಮಣ್ಣ ಆನೆಗೆ ಅಂಬಾರಿ ಹೊರುವ ಅಭ್ಯಾಸವೇ ಇರಲಿಲ್ಲ ಎಂದಿರುವ ಪ್ರತಿಭಟನಾಕಾರರು, ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳಿಗೆ ಆರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದ ಸದಸ್ಯರು, ವನ್ಯಜೀವಿ ವಿಭಾಗದಲ್ಲಿ ಆನೆಗಳಿಗೆ ಚಿತ್ರಹಿಂಸೆ ಕೊಡಲಾಗ್ತಿದೆ ಎಂದಿದ್ದಾರೆ. ಶಿವಮೊಗ್ಗದಲ್ಲಿ ಶಾಸಕ ಚನ್ನಬಸಪ್ಪ ಮಾಧ್ಯಮಗಳ ಜೊತೆಗೆ ಮಾತನಾಡಿ, ದಸರಾ ಮೆರವಣಿಗೆಯಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಚಾಮುಂಡೇಶ್ವರಿ ದೇವಿ ಮಹಾತ್ಮೆಯಿಂದಾಗಿ ಯಾವುದೇ ದುರ್ಘಟನೆ ನಡೆದಿಲ್ಲ. ಚಾಮುಂಡಿ ತಾಯಿ ತನ್ನ ಕೈ ಮುರಿದುಕೊಂಡು ಊರನ್ನು ರಕ್ಷಿಸಿದ್ದಾಳೆ ಎಂದಿದ್ದಾರೆ.

ಸೋಮಣ್ಣ ಆನೆ ಮೆರವಣಿಗೆಯಲ್ಲಿ ಗಾಬರಿಗೊಂಡು ಓಡಿತು. ಆದರೆ ಆನೆ ಯಾರಿಗೂ ಏನೂ ಮಾಡಿಲ್ಲ. ಇದು ಚಾಮುಂಡೇಶ್ವರಿ ಆಶೀರ್ವಾದ ಇರುವುದರಿಂದಲೇ ಏನೂ ಆಗಿಲ್ಲ. ಪವಾಡ ಸದೃಶವಾಗಿ ಘಟನೆ ನಡೆದು ಹೋಯಿತು. ಧಾರ್ಮಿಕ ವಿಧಿ ಪೂಜೆ ಏನಾದರೂ ನಡೆಸಬೇಕಾ..? ಎಂಬ ಚರ್ಚೆ ನಡೆದಿದೆ. ಘಟನೆಯ ಹೊಣೆ ನಾವೇ ಹೊರಬೇಕು. ಒಳ್ಳೆಯದಾಗ ನಾವು ಕ್ರೆಡಿಟ್ ತೆಗೆದುಕೊಳ್ಳುತ್ತೇವೆ. ನಾವು ಹೊಣೆಗಾರಿಕೆಯಿಂದ ಜಾರಿಕೊಳ್ಳಲ್ಲ. ಆನೆ ಎಂಬ ಪ್ರಾಣಿಯ ಮಾನಸಿಕತೆ ಬಗ್ಗೆ ಏನೂ ಹೇಳಲು ಆಗಲ್ಲ. ಆದರೆ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ ಎಂದಿದ್ದಾರೆ.

ಅಂಬಾರಿ ಹೊತ್ತ ಸೋಮಣ್ಣ ಆನೆ ಗಾಬರಿಯಾಗಿದ್ರಿಂದ ಬೆಳ್ಳಿ ಅಂಬಾರಿ ಛಿದ್ರ ಛಿದ್ರ ಆಗಿದೆ. ಆನೆಯ ಓಟದ ರಭಸಕ್ಕೆ ಬೆಳ್ಳಿ ಅಂಬಾರಿ ಪುಡಿಯಾದರೆ, ಮಾರ್ಗ ಮಧ್ಯದಲ್ಲಿ ಸಿಕ್ಕ ಕಾರು ಸೇರಿದಂತೆ ಹಲವು ವಾಹನಗಳು ನಜ್ಜುಗುಜ್ಜಾಗಿವೆ. ಶಾಸಕರು ಮಾತ್ರ ಹೊಣೆಯನ್ನು ನಾವೇ ಹೊತ್ತುಕೊಳ್ತೇವೆ ಎಂದಿದ್ದಾರೆ. ಆದರೆ ಇದಕ್ಕೆ ಶಾಸಕರು ಹೊಣೆ ಹೊರುವುದಲ್ಲ, ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಈ ಅನಾಹುತ ನಡೆದಿದೆ. ಆನೆಯನ್ನು ತರಬೇತುಗೊಳಿಸಿಲ್ಲ, ಜನರ ಮಧ್ಯೆ ಆನೆಯನ್ನು ಓಡಾಡಿಸಿ ಅಭ್ಯಾಸ ಮಾಡಿಸಿಲ್ಲ. ಅಕ್ಕ ಪಕ್ಕದಲ್ಲಿ ಕುಮ್ಕಿ ಆನೆಗಳನ್ನು ನಿಲ್ಲಿಸಿ ನಿಯಂತ್ರಿಸುವ ಕೆಲಸ ಮಾಡಿಲ್ಲ. ಇದಕ್ಕೆ ಯಾರು ಹೊಣೆ..? ಶಿವಮೊಗ್ಗದಲ್ಲಿ ಅಧಿಕಾರಿಗಳದ್ದು ಆಡಿದ್ದೇ ಆಟ ಎನ್ನುವಂತಾಗಿದೆ.

Related posts

ಕಸ ಗುಡಿಸುವ ವಾಹನ ಖರೀದಿ ಓಕೆ.. ಬಾಡಿಗೆಗೆ ಕೊಡೋದು ಯಾಕೆ..? JDS ಆಕ್ರೋಶ..

Publicspot

Abhiman Studio: ಅಭಿಮಾನ್​ ಸ್ಟುಡಿಯೋ ವಶಕ್ಕೆ ಪಡೆದ ಸರ್ಕಾರ.. ಮತ್ತೆ ತಲೆ ಎತ್ತುತ್ತಾ ಸ್ಮಾರಕ..?

Publicspot

SSLC ಫಲಿತಾಂಶ ಪ್ರಕಟ ಮತ್ತಷ್ಟು ವಿಳಂಬ.. ಹಠಕ್ಕೆ ಬಿದ್ದ ಸರ್ಕಾರ..

Publicspot

ನಾಳೆ ಬೆಂಗಳೂರಿಗೆ ಬರ್ತಿದ್ದಾರೆ ಪ್ರಧಾನಿ ಮೋದಿ.. ಏನೆಲ್ಲಾ ಬದಲಾವಣೆ..?

Publicspot

Caste Census Doubt; ಜಾತಿ ಜನಗಣತಿಗೆ ಸರ್ಕಾರದಲ್ಲೇ ವಿರೋಧ.. ಸೆಪ್ಟೆಂಬರ್‌ 22ರಿಂದ ಸಮೀಕ್ಷೆ ಡೌಟ್..

Publicspot

Cast Censes Congress Ready to Leagal Fight; ಹೈಕೋರ್ಟ್‌ನಲ್ಲಿ ತಡೆ ಸಿಕ್ಕರೂ ಕಾನೂನು ಹೋರಾಟಕ್ಕೆ ಕಾಂಗ್ರೆಸ್‌ ತಯಾರಿ..!

Publicspot