The Public Spot
ರಾಜಕೀಯ

SIR ವಿರುದ್ಧ ಕಾಂಗ್ರೆಸ್​ ಆರೋಪ.. ಬಿಜೆಪಿ ನಾಯಕರ ಜಾಗೃತಿ.. ಜನರಲ್ಲಿ ಗೊಂದಲ..

ಬೆಂಗಳೂರಿನ ಟೌನ್​ಹಾಲ್​ನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸಿಇಒ ಜ್ಞಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ಅಣಕು ಸಂಸತ್ ಮಾಡಿರುವುದು ಸಾಂವಿಧಾನಿಕ ಸಂಸ್ಥೆಗೆ ಮಾಡಿರುವ ಅಪಮಾನ. ಮಲ್ಲಿಕಾರ್ಜುನ ಖರ್ಗೆಯವರ ಮನೆಯಲ್ಲಿ ಸಿನಿಮಾ ಸೆಟ್ ರೀತಿ ಸೆಟ್ ಹಾಕಲಾಗಿತ್ತು. ಮಾಕ್ ಪಾರ್ಲಿಮೆಂಟ್​ನಲ್ಲಿ ಕೂಡಾ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡಲಿಲ್ಲ. ಈಗಿನ ಎಸ್ಐಆರ್ ಅಕ್ರಮ ಅಂತಾದರೆ ಕಾಂಗ್ರೆಸ್ ಅವಧಿಯಲ್ಲಿ ನಡೆದಿತ್ತಲ್ಲ ಎಸ್ಐಆರ್ ಅದೂ ಕೂಡಾ ಅಕ್ರಮವೇ..? ಹಲವು ರಾಜ್ಯಗಳಲ್ಲಿ 35-40 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರಕ್ಕೇ ಬಂದಿಲ್ಲ. ಬಾಂಗ್ಲಾದೇಶ ನುಸುಳುಕೋರರು, ಅಕ್ರಮ ವಲಸಿಗರು ದೇಶದ ಮತದಾರರ ಪಟ್ಟಿಯಲ್ಲಿ ಇರಬೇಕಾ..? ಎಸ್ಐಆರ್ ವಿರೋಧ ಮಾಡುವರು ದೇಶ ದ್ರೋಹಿಗಳು. ಡಿಕೆ ಶಿವಕುಮಾರ್, ಬಿ ಕೆ ಹರಿಪ್ರಸಾದ್ ಸೇರಿ ಎಲ್ಲಾ ಕಾಂಗ್ರೆಸ್ ನಾಯಕರು ಎಷ್ಟು ಬೇಕಿದ್ರೂ ಚೀರಾಡಲಿ. ಆದರೆ ನಾವು ಒಬ್ಬನೇ ಒಬ್ಬ ನುಸುಳುಕೋರ ಮತದಾರರ ಪಟ್ಟಿಯಲ್ಲಿ ಇಲ್ಲದಂತೆ ಸಂಕಲ್ಪ ಮಾಡುತ್ತೇವೆ ಎಂದು ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಿ ಸಂಸದ ಡಾ. ಸಂಬೀತ್ ಪಾತ್ರಾ ಮಾತನಾಡಿ, ಎಸ್​ಐಆರ್ ವಿರುದ್ಧದ ಕಾಂಗ್ರೆಸ್ ಹೋರಾಟ ಕೇವಲ ಹೋರಾಟ ಅಲ್ಲ. ದೇಶದಲ್ಲಿ ಅರಾಜಕತೆ ಸೃಷ್ಟಿಸುವುದು ಇದರ ಹಿಂದಿನ ಉದ್ದೇಶ. ಬಾಂಗ್ಲಾದೇಶ, ಶ್ರೀಲಂಕಾ, ಫ್ರಾನ್ಸ್ ನಲ್ಲಿ ಆಗಿದ್ದು ಯಾವುದೂ ಆಕಸ್ಮಿಕ ಅಲ್ಲ. ನೇಹಾ ಬೋರಾ ಸ್ಪಷ್ಟವಾಗಿ ಬಾಂಗ್ಲಾದೇಶ ಬಗ್ಗೆ ಹೇಳಿ ಅಜೆಂಡಾ ಏನು ಅಂತಾ ತೋರಿಸಿದ್ದಾರೆ. ಅವರ ಪ್ಲಾನ್​ಗಳು ಅಪಾಯಕಾರಿಯಾಗಿವೆ, ನಾವು ಎಚ್ಚರವಾಗಿರಬೇಕು ಎಂದಿದ್ದಾರೆ. ಇನ್ನೂ ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಎಲ್ಲರ ಮತಬ್ಯಾಂಕ್​ಗಳು ಮುಳುಗುತ್ತಿವೆ. ಕಾಂಗ್ರೆಸ್ ಅವಧಿಯಲ್ಲಿ ನೇಮಕವಾಗಿದ್ದ ಸಿಇಸಿ ನವೀನ್ ಚಾವ್ಲಾ ಸೋನಿಯಾ ಗಾಂಧಿಗೆ ಟಾಯ್ಲೆಟ್ ನಲ್ಲಿ ಹೋಗಿ ಕರೆ ಮಾಡುತ್ತಿದ್ದರು ಎಂದು ಅಣಕಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, 2014ಕ್ಕೆ ಮೊದಲು ಯುವಕರಿಗೆ ಈ ದೇಶದಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದೆಂಬ ವಿಶ್ವಾಸ ಹೊರಟು ಹೋಗಿತ್ತು. ದೇಶದಲ್ಲಿರುವ ವಿಪಕ್ಷಗಳಿಗೆ ನರೇಂದ್ರ ಮೋದಿ ನಾಯಕತ್ವ ಸಹಿಸಲು ಆಗುತ್ತಿಲ್ಲ. ಮೂರನೇ ಬಾರಿಯೂ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಇಲ್ಲ. ಮೋದಿ ಜನಪ್ರಿಯತೆಯಿಂದ ರಾಹುಲ್ ಗಾಂಧಿಗೆ ತಲೆ ಕೆಡುವಂತಾಗಿದೆ. ಕಾಂಗ್ರೆಸ್ ನವರು ತಮ್ಮ ಭವಿಷ್ಯದ ಬಗ್ಗೆ ಚಿಂತೆ ಪಡುತ್ತಿದ್ದಾರೆ ಹೊರತು ದೇಶದ ಬಗ್ಗೆ ಅಲ್ಲ. ವಾಸ್ತವಿಕ ಸತ್ಯವನ್ನು ರಾಹುಲ್ ಗಾಂಧಿ ಅರ್ಥ ಮಾಡಿಕೊಳ್ಳಬೇಕಾಗಿತ್ತು. ಕಮ್ಯುನಿಸ್ಟರ ಜೊತೆ ಸೇರಿ ದೇಶದಲ್ಲಿ ಅರಾಜಕತೆ ಸೃಷ್ಟಿಸಿ, ದಂಗೆ ಹುಟ್ಟು ಹಾಕಿ ಆಡಳಿತ ಪಕ್ಷ ಉರುಳಿಸಬೇಕೆಂಬ ಹಾರಾಟ ಮಾಡುತ್ತಿದ್ದಾರೆ ಎಂದಿದ್ದಾರೆ.

ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರ ಟೀ ಶರ್ಟ್ ಗಳಲ್ಲಿ ಬುರುಡೆ ಚಿತ್ರ ಇತ್ತು. ಶ್ರೀಲಂಕಾ, ಫ್ರಾನ್ಸ್ ನಲ್ಲಿ ದಂಗೆ ಆದಾಗ ಅಲ್ಲಿ ಕೂಡಾ ಬುರುಡೆ ಚಿತ್ರ ಇತ್ತು​ ಎನ್ನುವ ಮೂಲಕ Gen Z ಹೆಸರಿನಲ್ಲಿ ದಂಗೆ ಎಬ್ಬಿಸುವುದು, ಆ ಬಳಿಕ ಆಡಳಿರೂಢ ಬಿಜೆಪಿ ನೇತೃತ್ವದ NDA ಸರ್ಕಾರವನ್ನು ಉರುಳಿಸುವುದು ಕಾಂಗ್ರೆಸ್​ನ ದುರುದ್ದೇಶ ಎನ್ನುವುದು ಬಿಜೆಪಿ ನಾಯಕರ ಆರೋಪ. ಆದರೆ ಅಸಲಿಗೆ SIR ಮಾಡಿದ್ರಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಇದೆ. ಆದರೂ ಕಾಂಗ್ರೆಸ್​ ಸೇರಿದಂತೆ ಸಾಕಷ್ಟು ಜನರು ಆರೋಪ ಮಾಡುತ್ತಿರುವುದರ ಹಿಂದಿನ ಮರ್ಮವೇನು ಅನ್ನೋದು ಜನರಲ್ಲಿ ಗೊಂದಲ ಮೂಡಿಸಿದೆ. ವೋಟ್​ ಡಿಲೀಟ್​ ಆದರೂ ಮತ್ತೆ ಸೇರ್ಪಡೆ ಮಾಡಬಹುದಲ್ವಾ..? ಅನ್ನೋದು ಜನರ ಮನಸ್ಸಲ್ಲಿ ಇರುವ ಪ್ರಶ್ನೆ.

Related posts

CM Finally; ಸಿಎಂ ಆಗಲು ಪಟ್ಟು ಹಿಡಿದು ಕುಳಿತ ಡಿ.ಕೆ ಶಿವಕುಮಾರ್​.. ಶಕ್ತಿ ವೃದ್ಧಿಗೆ ಸರ್ಕಸ್​..

Publicspot

ಸಿಎಂ ಡಿನ್ನರ್‌ ಮೀಟ್‌.. ಸಚಿವರ ಸಭೆ.. ಡಿಕೆಶಿ ಸಿಎಂ ಆಗ್ತಾರೆ.. ಆಗ್ಬೇಕು..!!

Publicspot

Hariyana Vote Theft; ಹರಿಯಾಣದಲ್ಲೂ ಮತಗಳ್ಳತನ ಆಗಿದೆ.. ಸಾಕ್ಷ್ಯ ಕೊಟ್ಟ ರಾಹುಲ್​..

Publicspot

ಮಣಿಪಾಲ್​ ಆಸ್ಪತ್ರೆಯಲ್ಲಿ ದೇವೇಗೌಡರನ್ನು ಭೇಟಿಯಾದ ಜಮೀರ್.. ಸ್ಪಷ್ಟನೆ..

Publicspot

ಬಳ್ಳಾರಿಯ ಬ್ಯಾನರ್ ಹೋರಾಟಕ್ಕೆ ಬಿಜೆಪಿ ನಾಯಕರ ಸಿದ್ಧತೆ.. ರಾಜ್ಯ ನಾಯಕರಿಗೆ ಮನಸ್ಸಿಲ್ಲ ಯಾಕೆ..?

Publicspot

BiggBoss Congress; ಬಿಗ್​ಬಾಸ್​ ವಿಚಾರದಲ್ಲಿ ಹೊರಬಿತ್ತು ಕಾಂಗ್ರೆಸ್​ ಅಸಮಾಧಾನ!!

Publicspot