The Public Spot
ಅಂಕಣ

ಹಿರಿಯೂರು ಗೆದ್ದು ಮಾನ ಉಳಿಸಿಕೊಳ್ಳಲು ಸಿಎಂ ಸರ್ಕಸ್​..!

ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಡಿ ಸುಧಾಕರ್​ ನಿಧನದಿಂದ ಉಪಚುನಾವಣೆ ಎದುರಾಗಿದೆ. ಇದೀಗ ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್​ಗೆ ಎದುರಾಗಿದೆ. ಆದರೆ ಇತ್ತೀಚಿಗೆ ನಡೆದ ವಿಧಾನಪರಿಷತ್​ ಚುನಾವಣೆಯಲ್ಲಿ ಕಾಂಗ್ರೆಸ್​ ಎಲ್ಲಾ ನಾಲ್ಕು ಸ್ಥಾನಗಳಲ್ಲೂ ಸೋಲುಂಡಿರುವುದು ಕಾಂಗ್ರೆಸ್​ ಪಾಲಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಜಂಕ್​ ಫುಡ್​ ಎನ್ನುವಂತಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ಹೊರತುಪಡಿಸಿ ಉಳಿದ ಮೂರೂ ಸ್ಥಾನಗಳು ಬಿಜೆಪಿ ಸ್ಥಾನಗಳು. ಹೀಗಾಗಿ ನಾವು ಪರಿಷತ್​ನಲ್ಲಿ ಸೋತಿರುವುದು ಒಂದೇ ಒಂದು ಸ್ಥಾನ ಎನ್ನುವುದು ಕಾಂಗ್ರೆಸ್​ ಸಮರ್ಥನೆ. ಆದರೆ ಹಿರಿಯೂರು ಕ್ಷೇತ್ರ ಕಾಂಗ್ರೆಸ್​ ಪಕ್ಷದ್ದೇ ಸ್ಥಾನ ಆಗಿರೋದ್ರಿಂದ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಉಪಚುನಾವಣೆಗೆ ಯಾವುದೇ ಕ್ಷಣದಲ್ಲೂ ಚುನಾವಣೆ ಘೋಷಣೆ ಆಗುವ ಸಾಧ್ಯತೆಯಿದೆ. ಈಗಾಗಲೇ ರಾಜ್ಯದಲ್ಲಿ S I R ಮುಕ್ತಾಯ ಆಗಿದ್ದು, ಉಪಚುನಾವಣೆ ಘೋಷಣೆ ಮಾಡುವ ಸಾಧ್ಯತೆಯಿದೆ. ಪರಿಷತ್​ ಚುನಾವಣೆ ಬಳಿಕ ಹಿರಿಯೂರು ಕ್ಷೇತ್ರ ಕಳೆದುಕೊಳ್ಳುವ ಭೀತಿಗೆ ಒಳಗಾಗಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​, ನಿನ್ನೆ ಇಡೀ ದಿನ ಹಿರಿಯೂರು ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದಾರೆ. ಧರ್ಮಪುರ KSRTC ಬಸ್ ನಿಲ್ದಾಣ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಡಿಕೆ ಶಿವಕುಮಾರ್​, ದಿವಂಗತ ಡಿ ಸುಧಾಕರ್​ ಮಗನನ್ನು ಗೆಲ್ಲಿಸಬೇಕು ಎಂದು ಜನರಿಗೆ ಕರೆ ನೀಡಿದ್ದಾರೆ.

D. ಸುಧಾಕರ್​ ನೆನಪು ಮಾಡಿಕೊಂಡ ಸಿಎಂ ಡಿ.ಕೆ ಶಿವಕುಮಾರ್​, ನಾನು ಈ ಕಾರ್ಯಕ್ರಮಕ್ಕೆ ಬಹಳ ದುಃಖದಿಂದ ಬಂದಿದ್ದೇನೆ. ನಾನು ಮುಖ್ಯಮಂತ್ರಿ ಆಗುವಾಗ ಸುಧಾಕರ್ ಇದ್ದಿದ್ರೆ ಎಷ್ಟು ಆನಂದ ಸಂತೋಷ ಪಡ್ತಿದ್ದ. ಸಾಯುವ ಎರಡು ತಿಂಗಳ ಮುಂಚೆ ನಾನು ಮಂತ್ರಿ ಆಗದಿದ್ದರೂ ಡಿ.ಕೆ ಶಿವಕುಮಾರ್​ ಸಿಎಂ ಆಗಬೇಕು ಎಂದು ಘೋಷಣೆ ಮಾಡಿದ್ದ ನನ್ನ ಸ್ನೇಹಿತ. ಆತನ ಕನಸು, ಜನರ ಮೇಲೆ ಇಟ್ಟ ಪ್ರೀತಿ ನಾನು ಸಿಎಂ ಆಗಿದ್ದೇನೆ. ಆತನಿಗೆ ಜಾತಿ, ಧರ್ಮ ಇರಲಿಲ್ಲ, ಎಲ್ಲರನ್ನೂ ಒಗ್ಗೂಡಿ ಒಯ್ಯುವ ಪ್ರಯತ್ನ ಮಾಡ್ತಿದ್ದ ಎಂದಿದ್ದಾರೆ. ₹2200 ಕೋಟಿ ವಿವಿಧ ಇಲಾಖೆಗಳಿಂದ ಅನುದಾನ ಬಿಡುಗಡೆ ಮಾಡಿ ಇಲ್ಲಿಗೆ ಬಂದಿದ್ದೀವಿ. ಎಂಎಲ್‌ಸಿ ಚುನಾವಣೆ ಹಿನ್ನೆಲೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಕೊಡಲು ಆಗಲಿಲ್ಲ ಎಂದಿದ್ದಾರೆ.

ಮಾಜಿ ಶಾಸಕಿ ಪೂರ್ಣಿಮಾ ಹಾಗೂ ಅವರ ಪತಿ ಶ್ರೀನಿವಾಸ್​ ಸಹ ವೇದಿಕೆಯಲ್ಲಿ ಇದ್ರು. ಈ ನಡುವೆ ಸಿಎಂ ಸುಹಾಸ್ ಸುಧಾಕರ್​ ಅವರನ್ನು ಗೆಲ್ಲಿಸಬೇಕು ಅಂತಾ ಕರೆ ನೀಡಿದ್ರು. ಇಲ್ಲಿ ನಾನೇ ಕ್ಯಾಂಡಿಡೇಟ್ ತಲೆ ಕೆಡಿಸಿಕೊಳ್ಳಬೇಡಿ ಎಂದ CM ಡಿ.ಕೆ.ಶಿವಕುಮಾರ್, ಹಿರಿಯೂರು ಕ್ಷೇತ್ರದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಈ ನಡುವೆ ಸ್ಟಿಂಗ್​ ವಿಚಾರದಿಂದಲೇ ಕಾಂಗ್ರೆಸ್​ ಪರಿಷತ್​ ಚುನಾವಣೆ ಸೋಲಬೇಕಾಯ್ತು ಅಂತಾ ಸಿದ್ದರಾಮಯ್ಯ ರಾಹುಲ್​ ಗಾಂಧಿಗೆ ದೂರು ನೀಡಿದ್ದಾರೆ ಅನ್ನೋ ಚರ್ಚೆಗಳು ನಡೆಯುತ್ತಿವೆ. ಹಿರಿಯೂರು ಚುನಾವಣೆಗೆ ಸ್ಟಿಂಗ್​ ಪ್ರಕರಣ ಯಾವ ಮಟ್ಟದಲ್ಲಿ ಪರಿಣಾಮ ಬೀರುತ್ತದೆ..? ಅನ್ನೋದನ್ನು ಕಾದು ನೋಡ್ಬೇಕು.

Related posts

ಜಮೀರ್​​ ಅಖಾಡಕ್ಕೆ ಬಾರದಿದ್ದರೆ ಕಾಂಗ್ರೆಸ್​​ಗೆ ಸಂಕಷ್ಟ ಫಿಕ್ಸ್​..!

Publicspot

Banu Musthaq Not So Great: ಬಾನು ಮುಷ್ತಾಕ್​ ದೊಡ್ಡವರಾಗಲು ಹೀಗೆ ಮಾಡಬೇಕಿತ್ತು..

Publicspot

ಕಾಂಗ್ರೆಸ್​ನಲ್ಲಿ ಹೈಕಮಾಂಡ್ ಅಂದ್ರೆ ಯಾರು..? ಹೀಗೆ ಮಾಡೋದು ಸರೀನಾ..?

Publicspot

JDS-BJP ಮೈತ್ರಿಗೆ ಜನರ ಬೆಂಬಲ ಸಿಗುತ್ತಾ..? ಇದೆನಾ 2028ರ ಮುನ್ನಡಿ

Publicspot

ಅಕ್ಕನ ಗಂಡನನ್ನೇ ಬುಟ್ಟಿಗೆ ಹಾಕೊಂಡ ತಂಗಿ.. ಅಕ್ಕನ ಕೊಂದಿದ್ಯಾರು..?

Publicspot

ಸಿಎಂ ಮನದಾಳದ ಮಾತು ಯತೀಂದ್ರ ಮಾತಲ್ಲಿ ಹೊರ ಬೀಳ್ತಿದ್ಯಾ..?

Publicspot