The Public Spot
ಅಪರಾಧ

15 ದಿನ 7 ಮರ್ಡರ್​.. ಸಾವಿನಿಂದ ಪಾರಾದ ಇಬ್ಬರು.. ಸೈಕೋ ಶಂಕರ್​..

ಬೆಂಗಳೂರಲ್ಲಿ ಲೆಕ್ಕವಿಲ್ಲದಷ್ಟು ಕೊಲೆಗಳು ಆಗ್ತಾನೇ ಇರುತ್ತವೆ. ಗಲ್ಲಿಗಲ್ಲಿಯಲ್ಲೂ ಹೆಣಗಳು ಉರುಳುತ್ತವೆ. ಹೆಣ್ಣಿನ ವ್ಯಾಮೋಹ, ಹಣಕಾಸು ವಿಚಾರ, ಭೂಮಿ ವಿಚಾರ, ರಸ್ತೆಯಲ್ಲಿ ನಡೆಯೋ ಗಲಾಟೆಗಳಿಗೂ ಹೆಣ ಬೀಳಿಸೋದು ಕಾಮನ್​ ಆಗಿದೆ. ಆದರೆ ಈ ಘಟನೆ ಮಾತ್ರ ಇಡೀ ಬೆಂಗಳೂರನ್ನೇ ಅಲುಗಾಡಿಸಿದೆ. ಈ ರೀತಿಯ ನರಮೇಧವನ್ನು ಬೆಂಗಳೂರಿಗರು ಎಂದೂ ಕಂಡಿರಲಾರರು. ಇಡೀ ಕರ್ನಾಟಕದಲ್ಲೇ ಇಂಥಹ ಘಟನೆ ಮೊಟ್ಟ ಮೊದಲು ಅಂತಾನು ಹೇಳಬಹುದು.

1956ರಲ್ಲಿ ಬೆಂಗಳೂರಿನ ಗಾಂಧಿನಗರ, ಅಂದಿನ ಸೆಂಟ್ರಲ್​ ಜೈಲು ಇಂದಿನ ಫ್ರೀಡಂಪಾರ್ಕ್​ ಪಕ್ಕದಲ್ಲೇ ಇದ್ದ ರಂಗ ವಿಲಾಸ ಬಂಗಲೆಯಲ್ಲಿ ಬೇಲೂರು ಶ್ರೀನಿವಾಸ ಐಯ್ಯಂಗಾರ್​ ಎಂಬ ಪ್ರಖ್ಯಾತ ವಕೀಲರ ಮನೆಯಿತ್ತು. ಆ ಮನೆಯಲ್ಲಿ ಸಣ್ಣ ಮಕ್ಕಳು ಸೇರಿದಂತೆ ಸೇರಿದಂತೆ ಎಲ್ಲರನ್ನು ಕೊಂದು ಮುಗಿಸಲಾಗಿತ್ತು. ಅದು ಮೈಸೂರು ರಾಜ್ಯದಲ್ಲಿ ನಡೆದಿದ್ದ ಘಟನೆ. ಇದೀಗ ನಡೆದಿರುವುದು ಕರ್ನಾಟಕ ರಾಜ್ಯದ ಘಟನೆ. ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್​ ಬಳಿಯ ನಿವಾಸದಲ್ಲಿ ಒಟ್ಟು 7 ಕೊಲೆಗಳು ನಡೆದಿವೆ.

ಯಾರಿಗೂ ಸಣ್ಣ ಸುಳಿವು ಸಿಗದಂತೆ ಏಳು ಮಂದಿಯನ್ನು ಕೊಂದು ಬಿಸಾಕಿದ್ದಾನೆ. ಹೆಂಡತಿ ಮೇಲಿನ ದ್ವೇಷದಿಂದ ಹೆಂಡತಿ, ಆಕೆಯ ತಾಯಿ, ಇಬ್ಬರು ಸಹೋದರರು ಹಾಗೂ ಅವರ ಹೆಂಡತಿಯರು ಮತ್ತು ಓರ್ವ ಸಹೋದರನ ಮಗುವನ್ನು ಕೊಂದು ಮುಗಿಸಿದ್ದಾನೆ. ಕೇವಲ 15 ದಿನಗಳ ಅಂತರದಲ್ಲಿ ಒಬ್ಬೊಬ್ಬರನ್ನೇ ಮನೆಗೆ ಕರೆಸಿಕೊಂಡು ಕೊಂದು ಮುಗಿಸಿದ್ದಾನೆ. ಬೆಂಗಳೂರಿನ ರಾಜಾಜಿನಗರ ನಿವಾಸಿ 52 ವರ್ಷದ ಇಂದುಶೇಖರ್​ 20 ವರ್ಷದ ಹಿಂದೆ ಸುನಿತಾ ಎಂಬುವರನ್ನು ಮದ್ವೆಯಾಗಿದ್ದ. ಈ ದಂಪತಿಗೆ ಓರ್ವ ಮಗಳಿದ್ದಾಳೆ. ಈತನ ಪತ್ನಿ ವಕೀಲರ ಕಚೇರಿಯಲ್ಲಿ ಟೈಪಿಸ್ಟ್‌ ಕೆಲಸ ಮಾಡ್ತಿದ್ರು. ಪತ್ನಿ ಜೊತೆ ಸದಾ ಜಗಳ ಮಾಡ್ತಿದ್ದ ಇಂದುಶೇಖರ್​, ಸಾಕಷ್ಟು ಬಾರಿ ರಾಜಿ ಪಂಚಾಯ್ತಿ ಮಾಡಲಾಗಿತ್ತು. ಆಗ ಪತ್ನಿ ಕುಟುಂಬಸ್ಥರು ಮಗಳ ಪರವಾಗಿ ನಿಂತಿದ್ರು ಅನ್ನೋದಷ್ಟೆ ಈತನ ಕೋಪಕ್ಕೆ ಕಾರಣ.

ಅಕ್ಟೋಬರ್​ 16ರಿಂದ ಶುರುವಾಗಿತ್ತು ನರ ಬಲಿ. ಮೊದಲು ಹೆಂಡತಿ ಸುನಿತಾಳನ್ನ ಕೊಲೆ ಮಾಡಿದ್ದ. ರುಬ್ಬೋ ಕಲ್ಲನ್ನು ಪತ್ನಿ ತಲೆ ಮೇಲೆ ಹೊಡೆದು ಕೊಂದಿದ್ದ. ಮಧ್ಯರಾತ್ರಿ ಮೃತದೇಹ ಶಿಫ್ಟ್‌ ಮಾಡಿ ಇಂದುಶೇಖರ್​, ರಾತ್ರೋರಾತ್ರಿ ಬಾಡಿ ಎಸೆದು ಬಂದು ಇಡೀ ಮನೆಯನ್ನ ಕ್ಲೀನ್‌ ಮಾಡಿದ್ದ. ನಂತರ ಅತ್ತೆ ರೂಪವತಿಗೆ ಮಗಳ ಕೈಲಿ ಕರೆ ಮಾಡಿಸಿ, ಮನೆಗೆ ಕರೆಸಿಕೊಂಡಿದ್ದಾರೆ. ಮಟನ್​ ಊಟ ಮಾಡಿ ನಿದ್ರೆ ಮಾತ್ರೆ ಹಾಕಿ ಕೊಂದು ಮುಗಿಸಿದ್ದ. ಆ ಬಳಿಕ ಇಬ್ಬರು ಬಾಮೈದ ಹಾಗೂ ಅವರ ಹೆಂಡತಿಯರು ಮತ್ತು ಓರ್ವ ಮಗನನ್ನು ಅದೇ ಅದೇ ರೀತಿ ಒಂದೆರಡು ದಿನಗಳ ಅಂತರದಲ್ಲಿ ಕರೆಸಿ ಕೊಲೆ ಮಾಡಿದ್ದಾನೆ.

ಮೃತ ಸುನಿತಾಳಿಗೆ ಇಬ್ಬರು ಸಹೋದರರು. ಅವರಿಗೂ ಮದ್ವೆಯಾಗಿ ಒಬ್ಬೊಬ್ಬರು ಮಕ್ಕಳಿದ್ರು. ಆಲ್‌ ಇಂಡಿಯಾ ಟ್ರಿಪ್‌ ಹೋಗಿದ್ದೀನಿ. ಮಾತಾಡೋ ಆಗಿಲ್ಲ. ಮೆಸೇಜ್​ ಮಾತ್ರ ಮಾಡಬಹುದು ಅಂತಾ ಒಂದೊಂದು ಮೊಬೈಲ್​ನಲ್ಲಿ ಮೆಸೇಜ್​ ಮಾಡ್ಕೊಂಡು ಕಾರಿನ ಡಿಕ್ಕಿಯಲ್ಲಿ ಹೆಣಗಳನ್ನು ತುಂಬಿಕೊಂಡು ಧರ್ಮಸ್ಥಳ, ಸುಬ್ರಹ್ಮಣ್ಯ ಎಲ್ಲಾ ಕಡೆಯಲ್ಲೂ ಸುತ್ತಾಡಿ ಬಾಡಿ ಬಿಸಾಡಿದ್ದಾರೆ. ಊಟದಲ್ಲೇ ನಿದ್ರೆ ಮಾತ್ರೆ ಹಾಕಿ ಎಲ್ಲರನ್ನು ಕೊಂದು ಬಿಸಾಡಿದ ಬಳಿಕ ಬೆಂಗಳೂರಿಗೆ ವಾಪಸ್​ ಆಗಿದ್ರು. ಅಷ್ಟರಲ್ಲಿ ಪೊಲೀಸರು ಮೊಬೈಲ್​ ಟ್ರೇಸ್​ ಮಾಡುತ್ತಾ ಹಲಸೂರು ಬಳಿ ಅರೆಸ್ಟ್​ ಮಾಡಿದ್ದಾರೆ. ಓರ್ವ ಬಾಲಕ ಮತ್ತು ಇನ್ನೊಬ್ಬರು ಇವರ ಟಾರ್ಗೆಟ್​ ಲಿಸ್ಟ್​ನಲ್ಲಿದ್ರು. ಆದರೆ ಅಷ್ಟರಲ್ಲಿ ಅರೆಸ್ಟ್​ ಮಾಡಲಾಗಿದೆ. 12 ದಿನ ಪೊಲೀಸ್​ ಕಸ್ಟಡಿಗೆ ನೀಡಿದ್ದು, ವಿಚಾರಣೆ ನಡೆಯುತ್ತಿದೆ.

Related posts

ಪೊಲೀಸರೇ ಕಳ್ಳರಾದಾಗ ನ್ಯಾಯ ಕೇಳೋದು ಯಾರನ್ನು..? ಆಗಿದ್ದೇನು..?

Publicspot

ಬೆಂಗಳೂರಿನ ಮಂತ್ರಿ ಮಾಲ್‌ ಪಕ್ಕದಲ್ಲೇ ಪ್ರೇಯಸಿಯ ಕತ್ತು ಸೀಳಿ ಮರ್ಡರ್‌..!

Publicspot

Foreign Love ಇಳಕಲ್ ಆಂಟಿಗೂ ನೈಜೀರಿಯಾ ಅಂಕಲ್​ಗೂ ಲವ್‌‌!

Publicspot

3 ಮಕ್ಕಳ ತಾಯಿ.. ಮದುವೆ ಆಗಲು ಒತ್ತಡ.. ಲಾಡ್ಜ್​ನಲ್ಲಿ ಅವನಲ್ಲ ಇವನು..

Publicspot

Doughter love intercast boy: ಮಗಳ ಅಂತರ್ ಜಾತಿ ಪ್ರೀತಿಗೆ ರಕ್ಕಸನಾದ ಅಪ್ಪ..

Publicspot

ಓರಗಿತ್ತಿರ ವಾರ್​.. ಇದು ಸೀರಿಯಲ್​ ಕಥೆ.. ನಟಿ ಮಣಿಯ ವ್ಯಥೆ..

Publicspot