The Public Spot
ಅಪರಾಧ

ನಟ ದರ್ಶನ್​ – ಪವಿತ್ರಾಗೌಡಗೆ ಧೈರ್ಯ ತುಂಬಲು ಸಿಕ್ಕಿತ್ತಾ ಅವಕಾಶ..?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್​ ರಾವ್​ ಮಾಫಿ ಸಾಕ್ಷಿ ಆದ್ಮೇಲೆ ಏನಾಗುತ್ತೋ ಏನೋ ಅನ್ನೋ ಭಯ ನಟ ದರ್ಶನ್​ ಅಭಿಮಾನಿಗಳ ಪಾಲಿಕೆ ಟೆನ್ಷನ್​ ತಂದಿಟ್ಟಿತ್ತು. ಆದರೆ ಇವತ್ತು ನಟ ದರ್ಶನ್​ ಹಾಗೂ ಪವಿತ್ರಾ ಗೌಡ ಮಾತು ಕೇಳಿಸಿಕೊಂಡ ಬಳಿಕ ನಟ ದರ್ಶನ್​ ದರ್ಶನ್​ ಟೆನ್ಷನ್​ನಲ್ಲಿ ಇಲ್ಲ. ಬೆನ್ನು ನೋವಿನ ಸಮಸ್ಯೆ ಇದ್ದರೂ ಜೈಲಿನಲ್ಲಿ ಆರಾಮವಾಗಿ ಇದ್ದಾರೆ ಎನ್ನುವಂತಾಗಿದೆ.

ಬೆಂಗಳೂರಿನ ಸಿಟಿ ಸಿವಿಲ್​ ಕೋರ್ಟ್​ನ 59ನೇ ಸೆಷನ್ಸ್​ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ವಿಚಾರಣೆ ದಿನನಿತ್ಯವೂ ನಡೆಯುತ್ತಿದೆ. ಸುಪ್ರೀಂಕೋರ್ಟ್​ಗೆ 1 ವರ್ಷದಲ್ಲಿ ವಿಚಾರಣೆ ಪೂರ್ಣ ಮಾಡ್ತೇವೆ ಅಂತಾ ಸರ್ಕಾರ ಹೇಳಿರುವ ಹಿನ್ನೆಲೆಯಲ್ಲಿ ವಿಚಾರಣೆ ವೇಗವಾಗಿ ಸಾಗುತ್ತಿದೆ. ಇವತ್ತು ಸಾಕ್ಷಿದಾರ ಪುನೀತ್ ಕ್ರಾಸ್ ಎಕ್ಸಾಮಿನೇಷನ್ಸ್ ಇತ್ತು. ಎಸ್​ಪಿಪಿ ಪ್ರಸನ್ನ ಕುಮಾರ್ ಪುನೀತ್​ಗೆ ಪ್ರಶ್ನೆ ಮಾಡಿದ್ದು, ಮ್ಯಾಜಿಸ್ಟ್ರೇಟ್ ಮುಂದೆ 164 ಹೇಳಿಕೆ ನೀಡಿದ್ದ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು. ಈ ವೇಳೆ ತಾಂತ್ರಿಕ ಸಮಸ್ಯೆಯಿಂದ ಡಿಸ್​ ಕನೆಕ್ಟ್​ ಆಯ್ತು. ಈ ನಡುವೆ ಇಬ್ಬರ ಸಂಭಾಷಣೆಯೂ ಆಯ್ತು ಎನ್ನಲಾಗಿದೆ.

ಕೋರ್ಟ್​ ಕನೆಕ್ಷನ್​ ಹೋಗ್ತಿದ್ದ ಹಾಗೆ ವೀಡಿಯೋ ಕಾನ್ಫರೆನ್ಸ್​ನಲ್ಲಿ ದರ್ಶನ್ ಹಾಗೂ ಪವಿತ್ರಗೌಡ ಪರಸ್ಪರ ಮಾತನಾಡಿಕೊಂಡ ಘಟನೆ ನಡೆದಿದೆ. ಊಟ ಆಯ್ತಾ ಅಂತ ಪವಿತ್ರಗೌಡ ದರ್ಶನ್​ಗೆ ಕೇಳಿದ್ದಾರೆ. ಜೊತೆಗೆ ಬೆನ್ನುನೋವು ಸಮಸ್ಯೆ ಹೇಗಿದೆ ಅಂತಾನೂ ಪವಿತ್ರಗೌಡ ಕೇಳಿದ್ದು, ಈ ವೇಳೆ ಬೆನ್ನು ಫುಲ್ ಹೋಗಿದೆ. ಒಂದು ಸೆಷನ್ ಫಿಸಿಯೋಥೆರಫಿ ಆಗಿದೆ. ಟ್ರೀಟ್​ಮೆಂಟ್ ತಗೊಳ್ತಿದ್ದೀನಿ ಎಂದಿದ್ದಾರೆ. ಇದೇ ವೇಳೆ ಜಾಮೀನು ವಿಚಾರವನ್ನು ಮಾತನಾಡಿರುವ ದರ್ಶನ್ ಹಾಗೂ ಪವಿತ್ರಾಗೌಡ, ಇನ್ನು ಎಷ್ಟು ದಿನ ಜೈಲುವಾಸ ಎಂದಿದ್ದಾರೆ. ಇಷ್ಟು ದಿನಗಳೇ ಕಳೆದಿದೆ ಸ್ವಲ್ಪ ದಿನ ವೇಯ್ಟ್ ಮಾಡು ಎಂದಿದ್ದಾರೆ ದರ್ಶನ್.

ಮಹಿಳಾ ಬ್ಯಾರಕ್​ನಲ್ಲಿ ನನಗೆ ಸಮಸ್ಯೆ ಆಗ್ತಿದೆ ಎಂದು ಪವಿತ್ರಾಗೌಡ ಅಳಲು ತೋಡಿಕೊಂಡಿದ್ದಾರೆ. ಆಗ ಇಲ್ಲಿ ನಮಗೂ ಕೂಡ ಸಮಸ್ಯೆ ಇದೆ. ಇನ್ನೂ ನಾಲ್ಕು ತಿಂಗಳು ಕಾಯಬೇಕು ಅಂತಾ ದರ್ಶನ್ ತಿಳಿಸಿದ್ದಾರೆ. ಇನ್ನೂ ಎಷ್ಟು ದಿನ ಹೀಗೇ ಎಂದು ಪವಿತ್ರಾಗೌಡ ಪ್ರಶ್ನೆ ಮಾಡಿದಾಗ ಇನ್ನೂ 4 ತಿಂಗಳಾದರೂ ಇರಬೇಕಾಗಬಹುದು, ಇಲ್ಲಿ ನಮಗೂ ಸಮಸ್ಯೆ ಇದೆ, ಏನೂ ಮಾಡಲಾಗುವುದಿಲ್ಲ ಸ್ವಲ್ಪ ದಿನ ತಾಳ್ಮೆಯಿಂದಿರಬೇಕು. ನಾಲ್ಕು ತಿಂಗಳಲ್ಲಿ ಜಡ್ಜ್ ಚೇಂಜ್ ಆಗ್ತಾರೆ, ಆಗ ಜಾಮೀನಿಗೆ ಅರ್ಜಿ ಹಾಕೋಣ ಅಂತಾ ದರ್ಶನ್ ಹೇಳಿದ್ದಾರೆ ಅಂತಾ ಮಾಧ್ಯಮಗಳಲ್ಲಿ ವರದಿ ಆಗಿದೆ. ಇದೇ ರೀತಿ ಎರಡು ನಿಮಿಷಗಳ ಕಾಲ ಪರಸ್ಪರ ಮಾತನಾಡಿಕೊಂಡಿದ್ದಾರೆ. ಕೋರ್ಟ್ ವಿಡಿಯೋ ಕಾನ್ಫರೆನ್ಸ್​ ರೀ ಕನೆಕ್ಟ್​ ಆದ ಬಳಿಕ ದರ್ಶನ್-ಪವಿತ್ರಾಗೌಡ ಮಾತುಕತೆ ನಿಲ್ಲಿಸಿದ್ದಾರೆ. ಮನಸ್ಸು, ಹೃದಯ ಗಟ್ಟಿ ಮಾಡಿಕೋ ಅಂತ ಕೈ ಸನ್ನೆ ಮೂಲಕ ಪವಿತ್ರಗೌಡಗೆ ಹೇಳಿದ ದರ್ಶನ್ ಮಾತು ನಿಲ್ಲಿಸಿದ್ದಾರೆ ಎನ್ನಲಾಗಿದೆ.

Related posts

ಜೈಲಿನಲ್ಲಿ ಚಳಿ.. ಬೆಡ್‌ಶೀಟ್‌ ಕೇಳಿದ ದರ್ಶನ್.. ಎಲ್ಲಾ ಕೈದಿಗಳಿಗೂ ಅನ್ವಯ ಆಗುತ್ತಾ..?

Publicspot

Darshan Request to Poisoning: ವಿಷ ಕೊಡಲು ಆದೇಶ ಮಾಡಿ.. ನಟ ದರ್ಶನ್ ಮನವಿ

Publicspot

Parappana Agrahara Jail: ದರ್ಶನ್​ಗೆ ಮಾತ್ರ ಜೈಲು.. ಉಳಿದವರಿಗೆ ಬಾರ್​.. ಪಬ್​..

Publicspot

ಸೌಜನ್ಯ ಪ್ರಕರಣದ ವಿಚಾರಣೆ ಪುನಾರಂಭ ಆಯ್ತಾ..? ಏನಿದು ನಿಗೂಢತೆ..?

Publicspot

ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕನ ಸಾವಿಗೆ ಕಾರಣ ಏನು..? ಅದೂ ಕೂಡ ಈ ರೀತಿ ಸಾವಾ..?

Publicspot

BENGALURU BLAST: ಸ್ವಾತಂತ್ರ್ಯೋತ್ಸವದ ದಿನ ಸ್ಫೋಟ.. ಸಿಲಿಂಡರ್​ ಸ್ಫೋಟವೇ..? ಅನುಮಾನ..

ಯಶವಂತಿ