The Public Spot
ಅಪರಾಧ

DARMASTHALA SIT ವರದಿ ಸಲ್ಲಿಸಿ: ಸದನದಲ್ಲಿ ಇವತ್ತು ಧರ್ಮಸ್ಥಳ ರಿಪೋರ್ಟ್.. ಏನಿದೆ..?

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ಅನಾಮಿಕ ಆರೋಪದ ಬಳಿಕ ರಾಜ್ಯ ಸರ್ಕಾರ SIT ರಚನೆ ಮಾಡಿ ಆದೇಶ ಮಾಡಿತ್ತು. ಆ ಬಳಿಕ ಪಾಯಿಂಟ್ 6 ಮತ್ತು ಪಾಯಿಂಟ್‌ 14ರಲ್ಲಿ ಎರಡು ಅಸ್ಥಿ ಪಂಜರ ಸಿಕ್ಕಿತ್ತು. ಅದನ್ನು‌ ಬಿಟ್ರೆ ಬೇರೆ ಕಡೆ ಅಸ್ಥಿಪಂಜರ ಸಿಗಲಿಲ್ಲ. ಈ ವಿಚಾರವಾಗಿ ರಾಜಕಾರಣ ಶುರುವಾಗಿದ್ದು, ಬಿಜೆಪಿ ನಾಯಕರು ಮಧ್ಯಂತರ ವರದಿಗೆ ಒತ್ತಾಯಿಸಿದ್ದಾರೆ. ಶನಿವಾರ ಕ ಮೂಲಕ ಧರ್ಮಸ್ಥಳಕ್ಕೆ ತೆರಳಿದ್ದ ಬಿಜೆಪಿ ನಾಯಕರು, ಭಾನುವಾರ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಪ್ರತಿಜ್ಞೆ ಮಾಡಿದ್ದರು.

ಕಾಂಗ್ರೆಸ್‌ ಕೂಡ ಧರ್ಮಸ್ಥಳ ಱಲಿ ಮಾಡಲು ಮುಂದಾಗಿದೆ. ಇವತ್ತು ವಿಧಾನಸಭಾ ಅಧಿವೇಶನದಲ್ಲಿ SIT ವರದಿ ಮಂಡಿಸುವ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್‌ ಹಾಗೂ ಹೋಂ ಮಿನಿಸ್ಟರ್‌ ಪರಮೇಶ್ವರ್‌ ಈಗಾಗಲೇ ಮಾಹಿತಿ ನೀಡಿದ್ದಾರೆ. ತನಿಖಾ ತಂಡ ಈಗಾಗಲೇ ಪ್ರಾಥಮಿಕ ವರದಿಯನ್ನು ಎಸ್‌ಐಟಿ‌ ಮುಖ್ಯಸ್ಥರಿಗೆ ರವಾನೆ ಮಾಡಿದ್ದು, ಇವತ್ತು ಸದನ ಆರಂಭಕ್ಕೂ ಮುನ್ನವೇ ಖುದ್ದು ಎಸ್‌ಐಟಿ ಮುಖ್ಯಸ್ಥರು ಅಥವಾ ಡಿಜಿ ಐಜಿಪಿ‌‌ ಮೂಲಕ ವರದಿ ಗೃಹಸಚಿವ ಪರಮೇಶ್ವರ್‌ ಅವರ ಕೈ ಸೇರಲಿದೆ. ಆ ಬಳಿಕ ಇವತ್ತು ಧರ್ಮಸ್ಥಳ ವರದಿ ರಾಜ್ಯದ ಜನರ ಮುಂದೆ ಬಹಿರಂಗ ಆಗಲಿದೆ.

ಬಹುತೇಕ ಕಡೆ ಅಸ್ಥಿ ಪಂಜರ ಸಿಗದೆ ಇರುವ ಹಿನ್ನೆಲೆಯಲ್ಲಿ SIT ಅಧಿಕಾರಿಗಳು ಸದ್ಯ ಉತ್ಖನನ ಮಾಡುವುದನ್ನು ಕೈ ಬಿಟ್ಟು ವಿಚಾರಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇವತ್ತೂ ಕೂಡ ವಿಚಾರಣೆಗೆ ಬರುವಂತೆ ದೂರುದಾರನಿಗೆ SIT ಅಧಿಕಾರಿಗಳು ಹೇಳಿದ್ದಾರೆ. ದೂರುದಾರ ಇನ್ನೂ ಎರಡು ಕಡೆ ಜಾಗ ತೋರಿಸುತ್ತೇನೆ ಎಂದು ಹೇಳಿದ್ದಾನೆ ಎನ್ನಲಾಗಿದೆ. ಇವತ್ತು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ಅಷ್ಟೇ ಮಾಡ್ತಾರಾ..? ಅಥವಾ ಯಾವುದಾದರೂ ಹೊಸ ಜಾಗಕ್ಕೆ ಕರೆದೊಯ್ದು ಭೂಮಿ ಅಗೆದು ಉತ್ಖನನ ಮಾಡ್ತಾರಾ..? ಅನ್ನೋ ಕುತೂಹಲ ಮೂಡಿಸಿದೆ.

ಬಿಜೆಪಿ ರಾಜಕಾರಣದಿಂದ ಕಾಂಗ್ರೆಸ್‌ ಸರ್ಕಾರ ಕೊಂಚ ಕಂಗಾಲಾಗಿರುವಂತೆ ಕಂಡು ಬರುತ್ತಿದೆ. ಹೀಗಾಗಿ ಧರ್ಮಸ್ಥಳದ ಪರವಾಗಿ ಬ್ಯಾಟಿಂಗ್‌ ಮಾಡ್ತಿರೋ ಕಾಂಗ್ರೆಸ್‌, ಧರ್ಮಸ್ಥಳದ ವಿರುದ್ಧ ಕೆಲವರು ಪಿತೂರಿ ಮಾಡಿದ್ದಾರೆ ಅಂತಾನೂ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಎಸ್‌ಐಟಿ ತನಿಖೆಯನ್ನು ಸರ್ಕಾರ ಹಿಂಪಡೆಯುವ ನಿರ್ಧಾರ ಮಾಡುತ್ತಾ ಅನ್ನೋ ಚರ್ಚೆಗಳು ಆರಂಭ ಆಗಿವೆ. ಈಗಾಗಲೇ ಡಿಸಿಎಂ ಡಿ.ಕೆ ಶಿವಕುಮಾರ್‌ ಧರ್ಮಸ್ಥಳದ ವಿರುದ್ಧ ಸಂಚು ಮಾಡಿದ್ದಾರೆ ಎಂದಿರುವುದು ಕ್ಲೀನ್‌ ಚಿಟ್‌ ಕೊಟ್ಟಂತೆ ಆಗಿದೆ. ರಾಜ್ಯ ಸರ್ಕಾರ ಮುಂದೇನು ಮಾಡಲಿದೆ ಅನ್ನೋ ಬಗ್ಗೆ ರಾಜ್ಯದ ಜನರ ಚಿತ್ತ ನೆಟ್ಟಿದೆ. ಇವತ್ತು ಬಹುತೇಕ ಮಧ್ಯಂತರ ವರದಿ ಮಂಡಿಸಿದ ಬಳಿಕ ಎಸ್‌ಐಟಿ ಭವಿಷ್ಯವೂ ನಿರ್ಧಾರ ಆಗಲಿದೆ.

Related posts

2023 Video Leak; ಚಿನ್ನಯ್ಯ ಹೇಳಿದ ಮಾತುಗಳು ಎಷ್ಟು ಸತ್ಯ..? ಎಷ್ಟು ಸುಳ್ಳು.. ಹೊಸ ವಿಡಿಯೋ ಲೀಕ್‌..

Publicspot

Darshan Jail; ಜೈಲಿನಲ್ಲಿ ಸಹ ಕೈದಿಗಳ ಮೇಲೆ ನಟ ದರ್ಶನ್​ ಹಲ್ಲೆ.. ಎಷ್ಟು ಸತ್ಯ..?

Publicspot

Accident Murder: ರಸ್ತೆಯಲ್ಲಿ ಗಲಾಟೆ.. ಕಾರಿನಲ್ಲಿ ಗುದ್ದಿಸಿ ಕೊಲೆ ಮಾಡಿದ ದಂಪತಿ..

Publicspot

Ananya Mother: ನಾನು ಸಾಯಲು ಸಿದ್ಧಳಿದ್ದೇನೆ.. ರಸ್ತೆಯಲ್ಲಿ ಬೆತ್ತಲೆ ನಿಲ್ತೇನೆ..!

Publicspot

Insta Love: ಏಕಾಂತದ ಸರಸಕ್ಕೆ ಅಡ್ಡಿ ಅಂತಾ ಮಲ-ಮಗಳನ್ನೇ ಕೊಂದ ತಂದೆ ಅರೆಸ್ಟ್‌!

Publicspot

ಜಿಮ್ ಟ್ರೈನರ್ ಮಾಡಿದ್ನಾ ಲವ್ ಜಿಹಾದ್..? ಯಾವುದು ಸತ್ಯ..?

Publicspot