The Public Spot
ದೇಶ-ವಿದೇಶ

Election Commission Deadline: ರಾಹುಲ್‌ ಗಾಂಧಿ ಈಗ ಏನ್‌ ಮಾಡ್ತಾರೆ..? ಉತ್ತರ ಏನು..?

ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದಿದ್ದ ರಾಹುಲ್ ಗಾಂಧಿ ಭಾರತದಲ್ಲಿ PPT ಮೂಲಕ ಸಾಕ್ಷ್ಯ ರಿಲೀಸ್ ಮಾಡಿದ್ದಾರೆ. ಆ ಬಳಿಕ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಇದೀಗ ಚುನಾವಣಾ ಆಯೋಗದ ವಿರುದ್ಧ ರಾಹುಲ್ ಆರೋಪಕ್ಕೆ ಕೇಂದ್ರ ಚುನಾವಣಾ ಆಯೋಗ ತಿರುಗೇಟು ನೀಡಿದೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ RJD ನಾಯಕ ತೇಜಸ್ವಿ ಯಾದವ್ ಆರೋಪಗಳನ್ನು ಅಲ್ಲಗಳೆದಿದ್ದು, ರಾಹುಲ್ ಗಾಂಧಿ ತಮ್ಮ ಆರೋಪಗಳಿಗೆ ಅಫಿಡವಿಟ್ ಸಲ್ಲಿಸುವ ಧೈರ್ಯ ಮಾಡಬೇಕು. ಅಥವಾ ಯಾವುದೇ ಸಾಕ್ಷ್ಯ ಇಲ್ಲದಿದ್ರೆ ದೇಶದ ಜನರ ಕ್ಷಮೆ ಕೇಳುವ ಕೆಲಸ ಮಾಡ್ಬೇಕು, ಬೇರೆ ಆಯ್ಕೆಗಳಿಲ್ಲ. 7 ದಿನದಲ್ಲಿ ಎಡನ್ನೂ ಮಾಡಲಿಲ್ಲ ಅಂದ್ರೆ ರಾಹುಲ್ ಗಾಂಧಿ ಮಾಡಿದ ಆರೋಪ ಸುಳ್ಳು ಎಂದು ಸಾಬೀತಾಗಿದೆ.

ಬಿಹಾರ ಮತಪಟ್ಟಿ ರೆಡಿ ಆಗಿದೆ. ಮತಪಟ್ಟಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಚುನಾವಣಾ ಆಯೋಗ ಆಗಸ್ಟ್ 1 ರಿಂದ ಸೆಪ್ಟೆಂಬರ್ 1 ರ ತನಕ ಅವಕಾಶ ಕೊಟ್ಟಿದೆ. ಆದರೆ 15 ದಿನಗಳು ಕಳೆದರೂ ಚುನಾವಣಾ ಆಯೋಗಕ್ಕೆ ಒಂದೇ ಒಂದು ರಾಜಕೀಯ ಪಕ್ಷಗಳು ಮತಪಟ್ಟಿ ಬಗ್ಗೆ ಆಕ್ಷೇಪಣೆ ಸಲ್ಲಿಸಿಲ್ಲ. ಅಂದ ಮೇಲೆ ಚುನಾವಣಾ ಆಯೋಗ ಪ್ರಕಟಿಸಿರುವ ಮತಪಟ್ಟಿ ಇದೆ ಎಂದರ್ಥ ಅಲ್ಲವೇ..? ಆಕ್ಷೇಪ ಬಂದರೆ ಲೋಪವನ್ನು ಸರಿಪಡಿಸುತ್ತೇನೆ. ಆದರೆ ಸೆಪ್ಟೆಂಬರ್ 1ರ ಬಳಿಕ ಮತ್ತೆ ಸೆಪ್ಟೆಂಬರ್ ಚುನಾವಣಾ ಆಯೋಗದ ವಿರುದ್ಧ ಟೀಕೆಗಳು ಶುರುವಾಗುತ್ತವೆ. ಇದಕ್ಕೆ ಹೊಣೆ ಯಾರು..? ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ವೇಳೆ ಮತದಾರರ ಪಟ್ಟಿ ಈಗಾಗಲೇ ಆಗಿರುವ ಬಗ್ಗೆ ರಾಹುಲ್ ಆರೋಪ ಮಾಡಿದ್ದಾರೆ. ಚುನಾವಣಾ ಪಟ್ಟಿ ಸಿದ್ಧವಾದ ಕೂಡಲೇ ಯಾಕೆ ಸರಿಯಾದ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಲಿಲ್ಲ ಎಂದು ಪ್ರಶ್ನೆ ಮಾಡಲಾಗಿದೆ. ಯಾವಾಗ ಚುನಾವಣಾ ಫಲಿತಾಂಶ ಹೊರಬಿತ್ತೋ ಆಗ ಮತದಾರ ಪಟ್ಟಿ ಬಗ್ಗೆ ಆರೋಪ ಮಾಡಲಾಗಿದೆ. ನೀವು ಹೇಳಿದ್ದನ್ನೇ ಪದೇ ಪದೇ 10 ಅಲ್ಲ 20 ಬಾರಿ ಹೇಳಿದರೂ ಸತ್ಯ ಆಗುವುದಿಲ್ಲ. ಯಾರೋ ಒಬ್ಬರು ಹೇಳ್ತಿದ್ದಾರೆ ಅಂತಾ ಸೂರ್ಯ ಪಶ್ಚಿಮದಲ್ಲಿ ಹುಟ್ಟಲ್ಲ ಅಂತಾ ಕೌಂಟರ್ ಕೊಟ್ಟಿದ್ದಾರೆ.

ಡ್ಯೂಪ್ಲಿಕೇಟ್‌ ವೋಟರ್‌ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಚುನಾವಣಾ ಆಯೋಗ, 2 ರೀತಿಯಲ್ಲಿ ನಕಲಿ ವೋಟ್‌ಗಳು ಇರುತ್ತವೆ. ಒಂದೇ ಎಪಿಕ್‌ ನಂಬರ್‌ನಲ್ಲಿ ಬೇರೆ ಬೇರೆ ಪ್ರದೇಶದಲ್ಲಿ ಮತದಾರ ಇದ್ದರೆ ಸಮಸ್ಯೆ ಆಗುತ್ತದೆ. ಈ ರೀತಿಯ 3 ಲಕ್ಷ ಎಪಿಕ್‌ ನಂಬರ್‌ ಬದಲಾವಣೆ ಮಾಡಲಾಗಿದೆ. ಇನ್ನೊಂದು ರೀತಿ ಎಂದರೆ ಒಬ್ಬನೇ ವ್ಯಕ್ತಿ ಊರಿನಲ್ಲಿ ಇದ್ದಾಗ ಮತಪಟ್ಟಿಗೆ ಸೇರ್ಪಡೆ ಆಗಿರ್ತಾನೆ. ಅದೇ ವ್ಯಕ್ತಿ ಕೆಲಸಕ್ಕೆ ಎಂದು ವಲಸೆ ಹೋದಾಗ ಮತ್ತೆ ಮತಪಟ್ಟಿಗೆ ಸೇರ್ಪಡೆ ಆಗುತ್ತಾನೆ. ಈ ರೀತಿ ಆದಾಗಲೂ ಡ್ಯೂಪ್ಲಿಕೇಟ್‌ ವೋಟರ್ಸ್‌ ಬರುವ ಸಾಧ್ಯತೆ ಇರುತ್ತದೆ. ಆದರೆ ಈ ರೀತಿಯ ಮತದಾರರನ್ನು ಆತುರಾತುರವಾಗಿ ಡಿಲೀಟ್‌ ಮಾಡಿದ್ರೆ, ಕೆಲವರು ಮತದಾರರು ಹಕ್ಕು ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ ಎಂದಿದ್ದಾರೆ.

ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಭೀತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟಾಂಗ್‌ ಕೊಟ್ಟಿರುವ ಕೇಂದ್ರ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌, ರಾಹುಲ್‌ ಗಾಂಧಿ 7 ದಿನದಲ್ಲಿ ಅಫಿಡವಿಟ್‌ ಸಲ್ಲಿಸಬೇಕು ಅಥವಾ ಕ್ಷಮೆಯಾಚನೆ ಮಾಡಬೇಕು ಎಂದು ಗಡುವು ನೀಡಿದ್ದಾರೆ. ಇನ್ನು ಚುನಾವಣಾ ಆಯೋಗಕ್ಕೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎರಡೂ ಒಂದೇ. ಸಾಂವಿಧಾನಿಕ ಜವಾಬ್ದಾರಿಯಿಂದ ಚುನಾವಣಾ ಆಯೋಗ ಹಿಂದೆ ಸರಿಯಲ್ಲ ಎಂದಿದ್ದಾರೆ.

ಮತಗಳ್ಳತನ ಅನ್ನೋದೇ ಸಂಪೂರ್ಣ ಸುಳ್ಳು ಸುದ್ದಿ. ನಮಗೆ ಆಡಳಿತ-ಪ್ರತಿಪಕ್ಷಗಳು ಎರಡೂ ಒಂದೇ. ರಾಜಕೀಯಕ್ಕೋಸ್ಕರ ಆರೋಪ ಮಾಡುವುದು ಸರಿಯಲ್ಲ. ಸುಳ್ಳುಸುದ್ದಿಗಳ ಮೂಲಕ ಭಯ ಸೃಷ್ಟಿಸಲಾಗ್ತಿದೆ. ವಿಶೇಷ ಮತಪಟ್ಟಿ ಪರಿಷ್ಕರಣೆಗೆ ಎಲ್ಲಾ ಪಕ್ಷಗಳ ಪರಿಗಣನೆ ಮಾಡಿದ್ದೇವೆ. ಯಾವುದೇ ಸುಳ್ಳು ಆರೋಪಗಳಿಗೆ ಆಯೋಗ ಬೆದರುವುದಿಲ್ಲ. ಪಕ್ಷಗಳ ಪ್ರತಿನಿಧಿಗಳು, ಬಿಎಲ್‌ಓ ಮೂಲಕವೇ ಮತಪಟ್ಟಿ ರೆಡಿ ಆಗುತ್ತದೆ. ತಕರಾರುಗಳ ಸಲ್ಲಿಕೆಗಾಗೇ ಒಂದಷ್ಟು ಸಮಯ ಇರುತ್ತದೆ. ಡ್ರಾಫ್ಟ್‌ ಅಂತಿಮ ಆದ ಬಳಿಕ ಮತಪಟ್ಟಿಯನ್ನು ರಾಜಕೀಯ ಪಕ್ಷಗಳಿಗೂ ಕೊಡ್ತೇವೆ. ತಕರಾರುಗಳಿದ್ದರೆ ಅದನ್ನು ಆಯೋಗ ಪರಿಶೀಲಿಸುತ್ತೆ. ಅಂತಿಮ ಪಟ್ಟಿ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

Related posts

Stamped death; ತಮಿಳು ನಟ ವಿಜಯ್​​ Rally ಯಲ್ಲಿ ಕಾಲ್ತುಳಿತ.. 38 ಜನ ಸಾವು..!

Publicspot

ನಾವು ಬರಲ್ಲ ಶಾಂತಿ ಸಭೆಗೆ.. ಏನ್​ ಮಾಡ್ತೀರಾ..? ಮಾಡ್ಕೊಳಿ..

Publicspot

Indian Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ಕೆಂಪುಕೋಟೆ ಸಜ್ಜು..

ಯಶವಂತಿ

VICE PRESIDENT ELECTION: NDA ಉಪರಾಷ್ಟ್ರಪತಿ ಅಭ್ಯರ್ಥಿ ಯಾರು ಗೊತ್ತಾ..?

Publicspot

ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್‌..! ಕಾರಣ ಏನು..?

Publicspot

Sugar Rate hike; ಸಕ್ಕರೆ MSP ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ.. ಯಾರಿಗೆ ಲಾಭ..?

Publicspot