The Public Spot
ಅಪರಾಧ

Doughter love intercast boy: ಮಗಳ ಅಂತರ್ ಜಾತಿ ಪ್ರೀತಿಗೆ ರಕ್ಕಸನಾದ ಅಪ್ಪ..

ಮಗಳು ಅನ್ಯಜಾತಿ ಹುಡುಗನನ್ನು ಪ್ರೀತಿ ಮಾಡ್ತಿದ್ದಾಳೆ ಅನ್ನೋ ಕಾರಣಕ್ಕೆ ಅಪ್ಪ ಕೊಲೆಗಾರನಾಗಿರುವ ಘಟನೆ ಬಿಸಿಲ ನಾಡು ಕಲಬುರಗಿಯಲ್ಲಿ ನಡೆದಿದೆ. ಕೈತುತ್ತು ಕೊಟ್ಟು ಬೆಳೆಸಿದ್ದ ಮಗಳನ್ನ ಸ್ವತಃ ಅಪ್ಪನೇ ಕೊಂದು ಹಾಕಿದ್ದಾನೆ. ಊರಲ್ಲಿ ಮರ್ಯಾದೆ ಹೋಗುತ್ತೆ ಅಂತಾ ಕಗ್ಗತ್ತಲ ರಾತ್ರಿಯಲ್ಲಿ ಮಗಳನ್ನು ಕೊಂದು ಮುಗಿಸಿದ್ದಾನೆ. ಬೆಳ್ಳಂಬೆಳಗ್ಗೆಯೇ ಸುಟ್ಟು ಹಾಕಿದ್ದಾನೆ. ಕಲಬುರಗಿ ಜಿಲ್ಲೆಯ ಮೇಳಕುಂದಾ ಗ್ರಾಮದಲ್ಲಿ ನಡೆದಿದ್ದು, ಇಡೀ ಗ್ರಾಮ ಅಷ್ಟೇ ಅಲ್ಲದೆ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ.

ಪಿಯುಸಿ ಮುಗಿಸಿ ನರ್ಸಿಂಗ್‌ ಓದುತ್ತಿದ್ದ ಕವಿತಾ, ತಂದೆ ಶಂಕರ್ ಕೊಳ್ಳೂರ್ ಕೃಷಿಕನಾಗಿದ್ದ. ಒಟ್ಟು 5 ಜನ ಹೆಣ್ಣುಕ್ಕಳಲ್ಲಿ ಇಬ್ಬರಿಗೆ ಈಗಾಗಲೇ ಮದುವೆ ಆಗಿತ್ತು. ಮೂವರು ಹೆಣ್ಣುಮಕ್ಕಳನ್ನು ಸಾಕುತ್ತ ಜೀವನ ನಡೆಸುತ್ತಿದ್ದ ಶಂಕರ್​ ಕೊಳ್ಳೂರ್, ತನ್ನ 4ನೇ ಮಗಳು ಕವಿತಾ ಪ್ರೀತಿಯಲ್ಲಿ ಬಿದ್ದಿದ್ದಳು. ಲಿಂಗಾಯತ ಕುಟುಂಬಕ್ಕೆ ಸೇರಿದ್ದ ಕವಿತಾ ತಮ್ಮೂರಿನ ಅನ್ಯಜಾತಿ ಹುಡುಗನನ್ನ ಪ್ರೀತಿ ಮಾಡುತ್ತಿದ್ದ ವಿಚಾರ ಹೆತ್ತವರ ಗಮನಕ್ಕೆ ಬಂದಿತ್ತು. 3 ತಿಂಗಳ ಹಿಂದೆ ವಿಷಯ ಗೊತ್ತಾಗಿತ್ತು. ಆಗಲೇ ಮಗಳನ್ನು ಕರೆದು ವಾರ್ನ್​ ಮಾಡಿದ್ದ ಶಂಕರ್​, ಇಲ್ಲಿಗೆ ನಿಲ್ಲಿಸು, ಊರಿನಲ್ಲಿ ನಮ್ಮ ಮರ್ಯಾದೆ ತೆಗಿಬೇಡ ಅಂತಾ ಎಚ್ಚರಿಕೆ ಕೊಟ್ಟಿದ್ರಂತೆ. ಆದ್ರೆ, ಮಗಳು ಕವಿತಾ ಮಾತ್ರ ಯಾವುದಕ್ಕೂ ಬಗ್ಗಿರಲಿಲ್ಲ ಎನ್ನಲಾಗಿದೆ.

ಹೆತ್ತವರ ಬುದ್ಧಿ ಮಾತನ್ನು ಮಗಳು ಕವಿತಾ ಕೇಳಿರಲಿಲ್ಲ. ಇದೇ ವಿಚಾರಕ್ಕೆ ಗುರುವಾರ ರಾತ್ರಿ ಗಲಾಟೆ ಶುರುವಾಗಿದೆ. ತಂದೆ ಶಂಕರಪ್ಪ, ಆತನ ತಮ್ಮನ ಮಗ ಶರಣಪ್ಪ ಹಾಗೂ ಸಂಬಂಧಿ ದತ್ತಪ್ಪ ಅನ್ನೋರು ಸೇರ್ಕೊಂಡು ಹೊಡೆದು ಬಡಿದು ಬುದ್ಧಿ ಕಲಿಸುವ ಪ್ರಯತ್ನ ಮಾಡಿದ್ದಾರೆ. ಕವಿತಾಗೆ ಎಷ್ಟೇ ಹಿಂಸೆ ಕೊಟ್ಟರೂ ಆಕೆ ಪ್ರೀತಿಯನ್ನು ಬಿಡುವ ಬಗ್ಗೆ ಯಾವುದೇ ಮಾತನಾಡಿಲ್ಲ. ‘ನಾನು ಪ್ರೀತಿಸಿದ ಹುಡುಗನನ್ನೇ ಮದ್ವೆಯಾಗೋದು’ ಎಂದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಶಂಕರಪ್ಪ, ಮಗಳು ಅನ್ನೋದನ್ನೂ ನೋಡದೆ ಕವಿತಾಳ ಕತ್ತು ಹಿಸುಗಿ ಕೊಲೆ ಮಾಡಿದ್ದಾನೆ.

ಕವಿತಾ ಸಾವಿನ ಬಗ್ಗೆ ಯಾರಿಗೂ ಅನುಮಾನ ಬಾರದಿರಲಿ ಅಂತಾ ಮಗಳ ಮೈಮೇಲೆ ಕ್ರಿಮಿನಾಷಕ ಸುರಿದು, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಊರಿನ ಜನರನ್ನು ನಂಬಿಸಿದ್ದಾರೆ. ಊರಿನ ಜನರು ಅಪ್ಪನ ಮಾತನ್ನೇ ನಂಬಿದ್ದಾರೆ. ಕವಿತಾ ತಾಯಿ ಮಲ್ಲಮ್ಮ ಕೂಡ ಗಂಡ ಹೇಳಿದಂತೆಯೇ ಸೈ ಎಂದಿದ್ದಾಳೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಮಗಳ ಚಿತೆಗೆ ಬೆಂಕಿ ಇಟ್ಟು ಅಂತ್ಯಸಂಸ್ಕಾರವನ್ನೂ ಮಾಡಿ ಮುಗಿಸಿದ್ದಾರೆ. ಮಗಳು ಹೆಣ ಸುಟ್ಟು ಬೂದಿಯಾದ ಬಳಿಕ ಎಲ್ಲವೂ ಅಂದುಕೊಂಡಂತೆ ಆಯ್ತು ಎಂದು ನಿಟ್ಟುಸಿರು ಬಿಟ್ಟಾಗ ಆಘಾತ ಎದುರಾಗಿತ್ತು.

ಅನಾಮಧೇಯ ವ್ಯಕ್ತಿಯೊಬ್ಬ ಫರಹತಾಬಾದ್ ಪೊಲೀಸ್‌ ಠಾಣೆಗೆ ಕರೆ ಮಾಡಿ, ಹೀಗೊಂದು ಮರ್ಯಾದಾ ಹತ್ಯೆ ಆಗಿದೆ ಅನ್ನೋ ಬಗ್ಗೆ ಮಾಹಿತಿ ನೀಡಿದ್ದ. ತಕ್ಷಣವೇ ಅಲರ್ಟ್‌‌ ಆದ ಪೊಲೀಸ್ರು ತನಿಖೆ ಶುರು ಮಾಡಿದ್ದಾರೆ. ಮೇಳಕುಂಡಾ ಗ್ರಾಮಕ್ಕೆ ಬಂದು ಶಂಕರಪ್ಪನನ್ನ ಕರೆದೊಯ್ದು ವಿಚಾರಣೆ ಮಾಡಿದಾಗ ಅಸಲಿ ಸಂಗತಿ ಬಯಲಾಗಿದೆ. ಆ ಬಳಿಕ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರೋ ಪೊಲೀಸ್ರು, ಇನ್ನಿಬ್ಬರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಮಗಳು ಕವಿತಾ ಮಾಡಿದ್ದು ಸರೀನಾ ಅನ್ನೋ ಪ್ರಶ್ನೆಗೆ ಉತ್ತರ ಹೇಳೋದು ಕಷ್ಟ. ಆದರೆ ಅಪ್ಪ ಮಾಡಿದ್ದು ಸರೀನಾ ಅಂದಾಗ ಕಾನೂನು ಪ್ರಕಾರ ಸರಿಯಲ್ಲ ಅಂತಾ ಹೇಳದೆ ವಿಧಿಯಿಲ್ಲ. ಆದರೆ ಹೆತ್ತವರು ಚಿಕ್ಕವರಿದ್ದಾಗಿನಿಂದ ಸಾಕಿ ಸಲಹಿರುತ್ತಾರೆ. ನೀವು ಯೌವ್ವನಾವಸ್ಥೆಗೆ ಬಂದಾಗ ನಾನು ವಯಸ್ಕಳು, ಕಾನೂನಿನಲ್ಲಿ ನನಗೆ ಮಾನ್ಯತೆಯಿದೆ ಅನ್ನೋ ಕಾರಣಕ್ಕೆ ಅಪ್ಪ ಅಮ್ಮನ ಮರ್ಯಾದೆಯನ್ನು ಲೆಕ್ಕಿಸದೆ ನಿಮಗೆ ಇಷ್ಟ ಬಂದ ಹಾಗೆ ಮಾಡ್ತೀರಿ ಅನ್ನೋದನ್ನು ಅಪ್ಪ ಅಮ್ಮನಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಅಂತರ್​ಜಾತಿ ವಿವಾಹ ಆಗಬೇಡಿ ಎನ್ನಲು ಸಾಧ್ಯವಿಲ್ಲ. ಆದರೆ ಪ್ರೀತಿ ಮಾಡುವ ಮುನ್ನ ಒಂದು ಕ್ಷಣ ಹೆತ್ತವರು ಹಾಗೂ ಅವರು ನಮ್ಮನ್ನು ಸಾಕಲು ತೆಗೆದುಕೊಂಡ ಸವಾಲುಗಳ ಬಗ್ಗೆ ಯೋಜನೆ ಮಾಡಿ. ಅದೇ ರೀತಿ ಹೆತ್ತವರೂ ಕೂಡ ಮಕ್ಕಳನ್ನು ಕೊಂದು ಜೈಲಿಗೆ ಹೋಗುವ ಬದಲು, ಇಷ್ಟವಿದ್ದರೆ ಮದುವೆ ಮಾಡಿಕೊಡಿ ಇಲ್ಲವೇ ನನ್ನ ಪಾಲಿಗೆ ನೀನು ಇಲ್ಲ ಎಂದುಕೊಂಡು ಸುಮ್ಮನಾಗಿ. ಕೊಲ್ಲುವುದು ಯಾಕೆ..? ಜೈಲು ವಾಸ ಯಾಕೆ..? ಅಲ್ಲವೇ..?

Related posts

Darshan Jail; ಜೈಲಿನಲ್ಲಿ ಸಹ ಕೈದಿಗಳ ಮೇಲೆ ನಟ ದರ್ಶನ್​ ಹಲ್ಲೆ.. ಎಷ್ಟು ಸತ್ಯ..?

Publicspot

Dharmasthala Issue: ಧರ್ಮಸ್ಥಳ ವಿಚಾರದಲ್ಲಿ ಸರ್ಕಾರ ಮತ್ತೆ ಎಡವಟ್ಟುಗಳು..

Publicspot

ಒಂದು ಪ್ರೀತಿ ಮೂವರ ಕೊಲೆ.. ಮನೆಯಲ್ಲೇ ಮಣ್ಣು ಮಾಡಿ ಸಿಕ್ಕಿಬಿದ್ದಿದ್ಯಾಕೆ..?

Publicspot

ಸ್ಕ್ಯಾನಿಂಗ್​ಗೆ ಹೋದಾಗ ಬೆರಳಿಟ್ಟು ವಿಕೃತಿ.. ಲೈಂಗಿಕ ಕಿರುಕುಳ ಬಾಯ್ಬಿಡದಂತೆ ಧಮ್ಕಿ..

Publicspot

ತಂದೆ ತಾಯಿಗೆ ಚಾಕು ಇರಿದ ಮಗ.. ಅಮೆರಿಕದಲ್ಲಿ ಓದಿಸಿದ್ದಕ್ಕೂ ಸಾರ್ಥಕ..

Publicspot

ಡಾಕ್ಟರ್​ ಕೊಲೆಗಾರ ಆಗಿದ್ದು ಸತ್ಯನಾ..? 12 ವರ್ಷ ನರಳಿದ ನತದೃಷ್ಟ ಹೆಣ್ಣು

Publicspot