The Public Spot
ಅಪರಾಧ

ಕಾಯೋ ದೈವವೇ ಕ್ರೂರವಾದರೆ.. ರಕ್ಷಣೆ ಎಲ್ಲಿದೆ..? ಅಯ್ಯೋ ದೇವರೇ..?

ಅಪ್ಪ ಅಂದ್ರೆ ಮಗಳ ಪಾಲಿಗೆ ಪ್ರಪಂಚ. ಮಕ್ಕಳನ್ನು ಅದರಲ್ಲೂ ಹೆಣ್ಣು ಮಗಳು ಅಂದರೆ ಅಪ್ಪನಿಗೆ ಎಲ್ಲಿಲ್ಲದ ಪ್ರೀತಿ. ತನ್ನ ಹೆಗಲ ಮೇಲೆ ಹೊತ್ತು, ಇಡೀ ಜಗತ್ತನ್ನೇ ತೋರಿಸೋ ದೇವರು ಅನ್ನೋ ಮಾತಿದೆ. ಪ್ರತಿಯೊಬ್ಬ ಹೆಣ್ಣು ಮಗಳ ಪಾಲಿಗೆ ಅಪ್ಪನೇ ಪ್ರಪಂಚ. ಆದರೆ ಇಲ್ಲೊಬ್ಬ ಅಪ್ಪ ಅನ್ನೋ ಪದಕ್ಕೇ ಕಳಂಕ ತಂದಿದ್ದಾನೆ. ತನ್ನ ಮಗಳ ಮೇಲೆಯೇ ಕಾಮದ ಕಣ್ಣು ಹಾಕಿದ್ದಾನೆ.

ದಾವಣಗೆರೆ ಜಿಲ್ಲೆಯಲ್ಲಿ ಹೀನ ಘಟನೆಯೊಂದು ನಡೆದಿದೆ. ಬ್ಯೂಟಿಷಿಯನ್ ಆಗಲು ನಿರ್ಧಾರ ಮಾಡಿದ್ದ ಅಪ್ರಾಪ್ತ ಬಾಲಕಿ ದಾವಣಗೆರೆಯಲ್ಲಿ ತರಬೇತಿಗೆ ಹೋಗುತ್ತಿದ್ದಳು, ಇದು ಅಪ್ಪ ಅನಿಸಿಕೊಂಡವನಿಗೆ ಕಿಂಚಿತ್ತು ಇಷ್ಟವಿರಲಿಲ್ಲ. ಮಗಳ ಆಸೆಗೆ ಅಡ್ಡಿಯಾಗಿದ್ದವನು, ತನ್ನ ಸಂಬಂಧಿಕರ ಜೊತೆಗೆ ಮದುವೆ ಮಾಡಿಸಲು ಮುಂದಾಗಿದ್ದ. ಮಗಳು ಅಪ್ರಾಪ್ತೆ ಅನ್ನೋದನ್ನೂ ಮರೆತು ಮದುವೆ ಮಾಡ್ಬೇಕು ಅಂತಾ ನಿರ್ಧಾರ ಮಾಡಿದ್ದ. ಅದರ ಜೊತೆಗೆ ಸ್ವಂತ ಮಗಳನ್ನೇ ಹುರಿದು ಮುಕ್ಕುವ ನಿರ್ಧಾರ ಮಾಡಿದ್ದ.

ದೇವಸ್ಥಾನಕ್ಕೆ ಅಂತಾ ಮಗಳನ್ನ ಕರೆದುಕೊಂಡು ಹೋದ ಅಪ್ಪ ಮನೆಗೆ ವಾಪಸ್‌ ಬರುವಾಗ ಕಾಮದ ವಕ್ರದೃಷ್ಟಿ ಬೀರಿದ್ನಂತೆ. ಮಗಳನ್ನ ಲಾಡ್ಜ್​ಗೆ ಕರೆದುಕೊಂಡು ಹೋದವನು, ತನ್ನ ರಕ್ತ ಹಂಚ್ಕೊಂಡು ಹುಟ್ಟಿದ ಮಗಳು ಅನ್ನೋದನ್ನು ಮರೆತು ಅಸಭ್ಯವಾಗಿ ವರ್ತಿಸೋದಕ್ಕೆ ಶುರು ಮಾಡಿದ್ದಾನೆ. ಇದ್ರಿಂದ ಭಯಗೊಂಡ ಮಗಳು ಪೊಲೀಸ್ರಿಗೆ ಫೋನ್‌‌ ಮಾಡಿ ವಿಷ್ಯ ಮುಟ್ಟಿಸಿದ್ದಾಳೆ. ಹೀಗಾಗಿ ಕಾಮುಕ ಅಪ್ಪನ ವಿರುದ್ಧ ದೂರು ದಾಖಲಾಗಿದ್ದು, ಕಾಮುಕ ತಂದೆಯನ್ನ ಪೊಲೀಸ್ರು ಮಾಡಿದ್ದಾರೆ.

Related posts

ಮರ್ಯಾದೆಗಾಗಿ ಮಗಳಿಗೇ ವಿಷ ಉಣಿಸಿದ ಹೆತ್ತವರು.. ಅರೆಸ್ಟ್​..

Publicspot

ಧರ್ಮಸ್ಥಳ ಮೂಳೆ ರಹಸ್ಯ.. SIT ತನಿಖಾ ವರದಿ ಮತ್ತು ಅನುಮಾನದ ಹುತ್ತ..

Publicspot

Son Thief for Good Cause; ತಂದೆಯ ಕ್ಯಾನ್ಸರ್​ ಚಿಕಿತ್ಸೆಗೆ ಹಣ ಹೊಂದಿಸಲು ಕಳ್ಳನಾದ ಮಗ..!

Publicspot

Darshan Jail; ಜೈಲಿನಲ್ಲಿ ಸಹ ಕೈದಿಗಳ ಮೇಲೆ ನಟ ದರ್ಶನ್​ ಹಲ್ಲೆ.. ಎಷ್ಟು ಸತ್ಯ..?

Publicspot

Teacher Cruality; ಮೇಡಂ ಸೂಸು ಅಂದ್ರೂ ಬಿಡದೆ ಬಾಸುಂಡೆ ಬರುವಂತೆ ಬಡಿದ್ರಂತೆ..!

Publicspot

Seven Year Dreams End; 7 ವರ್ಷದ ಬಳಿಕ ತಾಯಿ ಆಗುವ ಆಸೆಗೆ ಹುಳಿ ಹಿಂಡಿದ್ದು ಯಾರು..?

Publicspot