The Public Spot
ಅಪರಾಧ

Lover Good Husband Bad; ಆನೇಕಲ್​ ಆಂಟಿ ವಾಪಸ್​ ಬಂದು ಗೊಳೋ ಅಂತಿರೋದ್ಯಾಕೆ..?

ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ವಿಚಿತ್ರ ಘಟನೆಯೊಮದು ನಡೆದಿದೆ. ಬಸವನಪುರದಲ್ಲಿ ಬಾಡಿಗೆ ಮನೆ ಮಾಡ್ಕೊಂಡು ಜೀವನ ಮಾಡ್ತಿದ್ದ ಮಂಜುನಾಥ್ – ಲೀಲಾವತಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಗಂಡ ಹಾಗೂ ಮೂವರನ್ನು ಬಿಟ್ಟು ಹೆಂಡತಿ ಪ್ರಿಯಕರ ಸಂತೋಷ್​ ಜೊತೆಗೆ ಪರಾರಿ ಆಗಿದ್ದಳು. ಗಂಡ ಹೆಂಡತಿ ತನ್ನ ಲವರ್​ ಜೊತೆಗೆ ತೆಗೆಸಿಕೊಂಡಿದ್ದ ಒಂದೊಂದೇ ಫೋಟೋಗಳನ್ನು ಮೀಡಿಯಾಗಳ ಎದುರು ಹರಿದು ಹಂಚಿದ್ದ. ಯಾವಾಗ ಓಡಿಹೋಗಿದ್ದ ಲೀಲಾವತಿ ವಿಚಾರ ಟಿವಿಗಳಲ್ಲಿ ಬಂತು ನೋಡಿ, ಆಂಟಿ ಕಂಗಾಲಾಗಿ ಗೊಳೋ ಅಂತಾ ಅಳ್ತಿದ್ದಾಳೆ. ನನ್ನ ಪ್ರೇಮಿ ಸಂತು ಏನೂ ತಪ್ಪು ಮಾಡಿಲ್ಲ, ನನ್ನ ಗಂಡನದ್ದೇ ಎಲ್ಲಾ ತಪ್ಪು ಅಂತಾ ಪ್ರೇಮಿ ಪರ ಬ್ಯಾಟ್​ ಬೀಸಿದ್ದಾಳೆ.

ಲೋಲಾವತಿ ಆಂಟಿ, ಈ ಮೊದಲು ಮಂಜುನಾಥ್​ನನ್ನು ಪ್ರೀತಿಸಿ, ಮದ್ವೆ ಆಗದೆ ಬೇರೊಬ್ಬನ ಜೊತೆಗೆ ತಾಳಿ ಕಟ್ಟಿಸಿಕೊಂಡಿದ್ಲಂತೆ.. ಆ ಬಳಿಕ ಗಂಡ ಬೇಡ ನನಗೆ ನೀನೇ ಬೇಕು ಅಂತಾ ಮಂಜುನಾಥ್​ ಜೊತೆಗೆ ಬಂದಿದ್ದಾಳೆ. ಅವರಿಬ್ಬರ ಬಾಳ ಪಯಣದಲ್ಲಿ ಮೂವರು ಮಕ್ಕಳೂ ಜೊತೆಯಾಗಿದ್ದಾರೆ. ಮದ್ವೆ ಆಗಿ 11 ವರ್ಷ ಆದ ಬಳಿಕ ಮಂಜುನಾಥನೂ ಬೇಡ ಅಂತಾ ಮತ್ತೊಬ್ಬನ ಜೊತೆಗೆ ಚಕ್ಕಂದ ಶುರು ಮಾಡಿದ್ಲಂತೆ. ಬಟ್ಟೆಬರೆ ಎಲ್ಲವನ್ನೂ ಪ್ರೇಮಿಯಿಂದಲೇ ತರಿಸಿಕೊಳ್ತಿದ್ಲಂತೆ. ಈ ಎಲ್ಲಾ ವಿಚಾರ ಗೊತ್ತಾದ ಬಳಿಕ ಗಂಡ ಎನಿಸಿಕೊಂಡವನು ಇದೆಲ್ಲಾ ತಪ್ಪು. ಹೀಗೆಲ್ಲಾ ಮಾಡಬಾರದು ಅಂತಾ ಬುದ್ಧಿ ಹೇಳಿದ್ದಕ್ಕೆ ಗಂಡ ಮಕ್ಕಳನ್ನು ಬಿಟ್ಟು ಎಸ್ಕೇಪ್​ ಆಗಿದ್ದಾಳೆ. ನನಗೆ ನನ್ನ ಮಕ್ಕಳಿಗೆ ಗತಿಯಾರು ಅಂತಾ ಗಂಡ ಕಣ್ಣೀರಿಟ್ಟಿದ್ದ.

ಲೀಲಾವತಿಯ ಲೀಲೆ ಬಗ್ಗೆ ಹಾಡಿಕೊಂಡು ಅಳುತ್ತಾ ಕ್ಯಾಬ್​ ಡ್ರೈವರ್​ ಮಂಜುನಾಥ ಹೈಡ್ರಾಮವನ್ನೇ ಮಾಡಿದ್ದ. ಟಿವಿ, ಪತ್ರಿಕೆಗಳಲ್ಲಿ ಸುದ್ದಿ ಸದ್ದು ಮಾಡ್ತಿದ್ದ ಹಾಗೆ ಪ್ರಾಯ ಕಳೆದರೂ ಪ್ರೇಮ ಪಾಶದಲ್ಲಿ ಸಿಲುಕಿದ್ದ ಲೀಲಾವತಿ, ಕಳೆದ ಭಾನುವಾರ ಗಂಡ, ಮೂರು ಮಕ್ಕಳನ್ನ ಬಿಟ್ಟು ಲವರ್ ಜೊತೆ ಪರಾರಿಯಾಗಿದ್ದಳು. ಪತ್ನಿ ಕೈಕೊಟ್ಟು ಹೋದ್ಲು ಅಂತಿದ್ದ ಹಾಗೆ ಬನ್ನೇರುಘಟ್ಟ ಪೊಲೀಸ್‌ ಠಾಣೆಗೆ ಗಂಡ ದೂರು ಕೊಟ್ಟಿದ್ದ. ಆದರೆ ನನಗೆ ಗಂಡ ಮಕ್ಕಳು ಬೇಡ, ನನಗೆ ನನ್ನ ಪ್ರೇಮಿಯೇ ಇಂಪಾರ್ಟೆಂಟ್​ ಅಂದಿದ್ದ ಆಂಟಿ ಕಾಲ್ಕಿತ್ತಿದ್ದಳು. ಆದರೆ ಸಂತು ಜೊತೆಗಿನ ರಸಗಳಿಗೆ ಟಿವಿಗಳಲ್ಲಿ ಪ್ರಚಾರ ಆಗ್ತಿದ್ದ ಹಾಗೆ ಕಣ್ಣೀರು ಹಾಕೊಂಡು ಗೋಗರೆಯುತ್ತಿದ್ದಾಳೆ.

ಆಂಟಿ ವಿಡಿಯೋಗಳು ವೈರಲ್‌ ಆಗ್ತಿದ್ದ ಹಾಗೆ ಕ್ಯಾಮರಾ ಮುಂದೆ ಬಂದು ಗೋಳೋ ಅಂತ ಕಣ್ಣೀರು ಹಾಕಿದ್ದಾಳೆ ಲೀಲಾವತಿ. ನಾನು ಅಂಥವಳು ಅಲ್ವೇ ಅಲ್ಲ. ನನ್ನ ಗಂಡ ಅನ್ನಿಸಿಕೊಂಡವನು ನನ್ನ ಮರ್ಯಾದೆ ಹರಾಜು ಹಾಕಿದ್ದಾನೆ. ಫೋಟೋಗಳನ್ನೆಲ್ಲಾ ಕೊಟ್ಟು ಮಾನ ತೆಗೆದಿದ್ದಾನೆ. ನನಗೆ ತಲೆ ಎತ್ಕೊಂಡ್‌ ಓಡಾಡೋದಕ್ಕೆ ಆಗ್ತಿಲ್ಲ ಅಂತ ಕಣ್ಣೀರು ಹಾಕಿದ್ದಾಳೆ. ನೀನು ನನಗೆ ಬೇಡ ಅಂತ ಹೇಳಿ ಪೊಲೀಸ್​ ಠಾಣೆಯಲ್ಲಿ ಬರೆದು ಕೊಟ್ರೂ ನನ್‌ ಗಂಡ ಬಿಡ್ತಿಲ್ಲ. ನಿಮ್ಮಬ್ಬರನ್ನ ಸಾಯಿಸ್ತೀನಿ ಅಂತ ಹೇಳ್ತಿದ್ದು, ಸಿಕ್ಕಸಿಕ್ಕವರ ಜೊತೆ ಸಂಬಂಧ ಕಟ್ತಿದ್ದಾನೆ. ನನ್ನ ಸಾವಿಗೆ ನನ್ನ ಗಂಡ ಕಾರಣ. ನನ್ನ ಜೊತೆ ಇರೋ ಸಂತುದು ಏನೂ ತಪ್ಪು ಮಾಡಿಲ್ಲ ಅಂತ ವಿಡಿಯೋ ಮಾಡಿದ್ದಾಳೆ.

Related posts

ಧರ್ಮಸ್ಥಳದಲ್ಲಿ ಇವತ್ತು ಹೈಟೆಕ್​ ತಂತ್ರಜ್ಞಾನದ ಜೊತೆಗೆ ಅಸ್ಥಿ ಆಪರೇಷನ್​..!!

Publicspot

ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್​ ಪರ ವಕೀಲರ ಪ್ಲಾನ್ ಏನು..? ​

Publicspot

Court Order bring Happy & Sad: ಕೋರ್ಟ್‌ ಆದೇಶದಿಂದ ಸಂತೋಷ ಜೊತೆಗೆ ದುಃಖ

Publicspot

PU ಫಲಿತಾಂಶ ನೆಪದಲ್ಲಿ ಮಗಳನ್ನು ಕೊಂದಳಾ ಹೆತ್ತಮ್ಮ..? ತನುಶ್ರೀ ಸಾವಿಗೆ ಕಾರಣ ಏನು..?

Publicspot

Mandya Murder: ಮಗಳನ್ನು ಪ್ರೀತಿಸಿದ್ದಕ್ಕೆ ಕೊಂದೇ ಬಿಟ್ರಾ..?

Publicspot

ದಾವಣಗೆರೆ SP ಉಮಾ ಪ್ರಶಾಂತ್​​ ಬಗ್ಗೆ ಕೀಳು ಮಾತು.. ಅರೆಸ್ಟ್​ ಆಗ್ತಾರಾ ಶಾಸಕ..?

Publicspot