The Public Spot
ರಾಜ್ಯ

ಪಂಚಮಸಾಲಿ ಪೀಠದಿಂದ ಬಸವಜಯ ಮೃತ್ಯುಂಜಯ ಶ್ರೀ ಕಿಕ್​ಔಟ್! ಸಿಡಿ ಬಾಂಬ್​..

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟದ ಮೂಲಕ ಇಡೀ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿಯನ್ನು ಪೀಠದಿಂದ ಉಚ್ಛಾಟನೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆ ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ನಡೆದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಟ್ರಸ್ಟ್‌ನ ಕಾರ್ಯಕಾರಿಣಿ ಸಭೆಯಲ್ಲಿ ಉಚ್ಛಾಟನೆ ಮಾಡುವ ನಿರ್ಧಾರವನ್ನು ಒಟ್ಟಾಗಿ ತೆಗೆದುಕೊಳ್ಳಲಾಗಿದೆ. ಪಂಚಮಸಾಲಿ ಪೀಠಾಧಿಪತಿಯಾಗಿದ್ದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳನ್ನು ಟ್ರಸ್ಟ್‌ನ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಿ ಉಚ್ಛಾಟಿಸುವ ನಿರ್ಣಯ ಕೈಗೊಳ್ಳಲಾಗಿದೆ.

ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್​ ಆಕ್ರೋಶ ಹೊರ ಹಾಕಿದ್ದರು. ಸ್ವಾಮೀಜಿ ನಡುವೆ ಭಾರೀ ಸಂಘರ್ಷ ನಡೆದ ಬಳಿಕ ಮಠದಲ್ಲಿದ್ದ ಶ್ರೀಗಳ ಕಚೇರಿಗೆ ಬೀಗ ಹಾಕಿ ಹೊರದಬ್ಬಲಾಗಿತ್ತು. ಆ ಬಳಿಕ ಸಂಧಾನ ನಡೆಸಿದ ಬಳಿಕ ಪ್ರಕರಣ ಸುಖಾಂತ್ಯವಾಗಿತ್ತು. ಆದರೆ ಇದೀಗ ಪಂಚಮಸಾಲಿ ಪೀಠದಿಂದಲೇ ಉಚ್ಛಾಟಿಸಲಾಗಿದೆ. ಟ್ರಸ್ಟ್ ಧರ್ಮದರ್ಶಿಗಳು ನೀಡುತ್ತಿರುವ ಕಾರಣ ಎಂದರೆ, ಅಕ್ರಮ ಆಸ್ತಿ ಸಂಪಾದನೆ. ಸ್ವಾಮೀಜಿಯವರು ದಾವಣಗೆರೆ ಸೇರಿ ವಿವಿಧೆಡೆ ಅಸ್ತಿ ಸಂಪಾದನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಸವ ತತ್ವಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲವು ಖಾಸಗಿ ವಿಚಾರಗಳು ಇವೆ ಅಂತ ಆರೋಪಿಸಲಾಗಿದೆ.

ಜಯಮೃತ್ಯುಂಜಯ ಶ್ರೀಗಳು ಈ ಬಗ್ಗೆ ಮಾತನಾಡಿ, ನಮ್ಮ ಪೀಠಕ್ಕೂ ಟ್ರಸ್ಟ್‌ಗೂ ಯಾವುದೇ ಸಂಬಂಧವಿಲ್ಲ. ನಮ್ಮ ಮೇಲಿನ ಆರೋಪಗಳು ಸುಳ್ಳು ಅಂತ ಹೇಳಿದ್ದಾರೆ. ಆದರೆ ಇದೀಗ ಪಂಚಮಸಾಲಿ ಪೀಠದ ಸ್ವಾಮೀಜಿ ವಿರುದ್ಧ ಸಿಡಿ ಬಾಂಬ್ ಸ್ಫೋಟವಾಗಿದೆ. ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಗ್ಗೆ ಪಂಚಮಸಾಲಿ ಪೀಠದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಸ್ವಾಮೀಜಿ ವಿರುದ್ಧ ಸಿಡಿ ಬಾಂಬ್ ಪ್ರಕಟವಾಗಿದೆ. ಪಂಚಮಸಾಲಿ ಪೀಠದ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸಿಡಿ ಬಾಂಬ್ ಸಿಡಿಸಿದ್ದಾರೆ. ಕಾರ್ಯಕಾರಿ ಸಭೆಯಲ್ಲಿ ಸ್ವಾಮೀಜಿ ವಿರುದ್ಧ ಕಾಶಪ್ಪನವರ್ ಗಂಭೀರ ಆರೋಪ ಮಾಡಿದ್ದಾರೆ. ಸ್ವಾಮೀಜಿ ಮಾರಿಕೊಂಡು ಹೋಗಿದ್ದಾನೆ, ಅಂತನೂ ನಾನು ಹೇಳುತ್ತೇನೆ. ಇವ್ರು ಸ್ವಯಂ ಘೋಷಿತ ಆಸ್ತಿ ಮಾಡಿದ್ದಾನೆ. ನಮ್ಮ ಹತ್ರ ಎಲ್ಲ ದಾಖಲೆ ಅದಾವ. ಸ್ವಯಂ ಘೋಷಿತ ಟ್ರಸ್ಟ್ ಮಾಡ್ಯಾನ. ಅದು ಬಿಡ್ರಿ ಇನ್ನು ಬಹಳ ಅದಾವ, ತರ್ತೀನಿ. ಸಮಯ ಬಂದಾಗ ಎಳೆ ಎಳೆಯಾಗಿ ಬಿಚ್ಚಿ ಇಡ್ತೀನಿ. ಎಲ್ಲ್ಲೆಲ್ಲಿ ಆಸ್ತಿ ಮಾಡ್ಯಾರ,ಎಲ್ಲೆಲ್ಲಿ ಮನಿ ಮಾಡ್ಯಾರ..? ಎಲ್ಲೆಲ್ಲಿ ಯಾರ್ ಯಾರ್ ಜೊತೆಗೆ ಅದಾರ. ಎಲ್ಲೆಲ್ಲಿ ಸಿಡಿ ಹೋಗ್ಯಾವ, ಎಲ್ಲೆಲ್ಲಿ ಏನೇನ್ ಹೋಗ್ಯಾವ ಎಲ್ಲಾ ತೋರಸ್ತಿನಿ ಎಂದಿದ್ದಾರೆ.

Related posts

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿ

admin

Mysore Mahisha Mandala; ಮೈಸೂರು ಚಾಮುಂಡಿಗೆ ಕೊಡುವ ಗೌರವ ಮಹಿಷನಿಗೂ ಕೊಡಿ..

Publicspot

Heavy Rain All Over India: ರಾಜ್ಯ ಮತ್ತು ದೇಶದಲ್ಲಿ ಹೇಗಿದೆ ಮಳೆ ಅಬ್ಬರ.. ಎಲ್ಲೆಲ್ಲಿ ರಜೆ..?

Publicspot

ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ಸಮ್ಮತಿ.. ಯಾರು ಏನೇನು ಹೇಳಿದ್ರು..?

Publicspot

Ration Card Cancel; ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಹುದು.. ರಾಜ್ಯ ಸರ್ಕಾರ ಪ್ಲ್ಯಾನಿಂಗ್..

Publicspot

ಹೈಕೋರ್ಟ್‌ ಆದೇಶಕ್ಕೆ ಮಣಿದ ಸರ್ಕಾರ.. ನಾಳೆಯೇ SSLC ರಿಸಲ್ಟ್‌

Publicspot