The Public Spot
ಟ್ರೆಂಡ್

Baby Inside Another Baby ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಮಗು.. ಅಚ್ಚರಿ ಮತ್ತು ವಿಸ್ಮಯ..

ಹುಬ್ಬಳ್ಳಿ: ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಮಗು ಇರುವ ಪ್ರಕರಣ ಬೆಳಕಿಗೆ ಬಂದಿದೆ. ನವಜಾತ ಶಿಶುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಹೊರಕ್ಕೆ ತೆಗೆಯುವಲ್ಲಿ ವೈದ್ಯರ ತಂಡ ಯಶಸ್ವಿ ಆಗಿದೆ. 14 ದಿನದ ಶಿಶುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಮುಗಿಸಿದೆ ಕಿಮ್ಸ್ ವೈದ್ಯರ ತಂಡ. 14 ದಿನದ ಮಗುವಿನ ಹೊಟ್ಟೆಯಲ್ಲಿನ ಭ್ರೂಣವನ್ನು ಹೊರಕ್ಕೆ ತೆಗೆಯಲಾಗಿದೆ.

ಹುಬ್ಬಳ್ಳಿ ಕಿಮ್ಸ್ ವೈದ್ಯರ ತಂಡ ಜಗತ್ತಿನಲ್ಲಿಯೇ ಅಪರೂಪದಲ್ಲಿ ಅಪರೂಪ ಎನ್ನುವಂತಹ ಪ್ರಕರಣಕ್ಕೆ ಸಾಕ್ಷಿಯಾಗಿದ್ದಾರೆ. ಮಂಗಳವಾರ ಶಸ್ತ್ರಚಿಕಿತ್ಸೆ ಮೂಲಕ ಭ್ರೂಣ ಹೊರತಗೆಯುವಲ್ಲಿ ಯಶಸ್ವಿ ಆಗಿದ್ದಾರೆ. 45 ನಿಮಿಷಗಳ ಕಾಲ ಅತ್ಯಂತ ಕ್ಲಿಷ್ಟಕರವಾದ ಆಪರೇಷನ್ ನಡೆಸಿದ ವೈದ್ಯರ ತಂಡ ಯಶಸ್ವಿಯಾಗಿದೆ. ಮಕ್ಕಳ ವಿಭಾಗದ ಶಸ್ತ್ರಚಿಕಿತ್ಸಾ ತಜ್ಞ ಡಾ.ರಾಜಶಂಕರ್ ನೇತೃತ್ವದಲ್ಲಿ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಸಾಂದರ್ಭಿಕ ಚಿತ್ರ

14 ದಿನದ ಮಗುವಿನ ಹೊಟ್ಟೆಯಲ್ಲಿದ್ದ ಮತ್ತೊಂದು ಭ್ರೂಣದ ಬೆನ್ನುಹುರಿಯನ್ನು ಹೊರಕ್ಕೆ ತಗೆದಿದೆ ವೈದ್ಯರ ತಂಡ. ಆ ಭ್ರೂಣದಲ್ಲಿ ಮೆದಳು ಮತ್ತು ಹೃದಯ ಇರಲಿಲ್ಲ. ಕೇವಲ ಬೆನ್ನುಹುರಿ ಮತ್ತು ಕೈಕಾಲುಗಳು ಮೂಡಿದ್ದವು. ನವಜಾತ ಗಂಡು ಶಿಶುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿತ್ತು. ಗಂಡು ಮಗುವಿನ ಹೊಟ್ಟೆಯಲ್ಲಿ ಬೆನ್ನುಹುರಿ ಇರೋ ಭ್ರೂಣ ಪತ್ತೆyಆದ ಹಿನ್ನೆಲೆಯಲ್ಲಿ ಭ್ರೂಣದ ಅವಶೇಷಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ ವೈದ್ಯರು.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಹಿಳೆ ಸೆಪ್ಟೆಂಬರ್ 23 ರಂದು ಜನ್ಮ ನೀಡಿದ್ದರು. ಆದ್ರೆ ಮಗುವಿನ ಹೊಟ್ಟೆ ಒಳಗೊಂದು ಮಗು ಇರೋದು ಬೆಳಕಿಗೆ ಬಂದಿತ್ತು. ನವಜಾತ ಶಿಶುವಿನ ಆರೋಗ್ಯ ತಪಾಸಣೆ ವೇಳೆ ಮತ್ತೊಂದು ಭ್ರೂಣ ಪತ್ತೆಯಾಗಿತ್ತು. ಅಲ್ಟ್ರಾಸೌಂಡ್ ಸ್ಕ್ಯಾನ್‌, ಎಂಆರ್‌ಐ ಸ್ಕ್ಯಾನ್‌ ಮಾಡಿ ತಪಾಸಣೆ ಮಾಡಿದಾಗ ಭ್ರೂಣ ಇರುವುದು ಖಚಿತವಾಗಿತ್ತು. ನವಜಾತ ಶಿಶುವಿಗೆ ಅನಸ್ತೇಷಿಯಾ ನೀಡಿ ಶಸ್ತ್ರಚಿಕಿತ್ಸೆ ಮಾಡೋದು ದೊಡ್ಡ ಸವಾಲಾಗಿತ್ತು. ಆ ಕಠಿಣ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂದಿದ್ದಾರೆ ವೈದ್ಯರು.

ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಆಪರೇಷನ್‌ ಬಳಿಕ ಮಗು ಆರೋಗ್ಯ ಆಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಶಸ್ತ್ರಚಿಕಿತ್ಸೆಯಿಂದ ಮಗುವಿಗೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾಗಲ್ಲ ಎಂದು ಕಿಮ್ಸ್ ವೈದ್ಯರು ಮಾಹಿತಿ ನೀಡಿದ್ದಾರೆ. ಆದರೂ 14 ದಿನದ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಇರುವುದು ಜಗತ್ತೇ ಅಚ್ಚರಿಯಿಂದ ನೋಡುವಂತಾಗಿದೆ. ವೈದ್ಯಕೀಯ ಲೋಕಸಲ್ಲೂ ಈ ಬಗ್ಗೆ ಗಹನವಾದ ಚರ್ಚೆ ಆರಂಭವಾಗಿದೆ.

Related posts

ನಾಡಿನ ಸಮಸ್ತ ಜನರಿಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು

Publicspot

ಚಂದ್ರಗ್ರಹಣ ಬರಿಗಣ್ಣಿನಿಂದಲೇ ನೋಡಿ.. ಇದೆಲ್ಲವೂ ಸೃಷ್ಟಿಯ ಅಚ್ಚರಿಗಳು..

Publicspot

ಎಲೆಕ್ಟ್ರಿಕ್‌ ವಾಹನ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ದೂರು.. ಕುಮಾರಣ್ಣ ಏನಂತಾರೆ..?

Publicspot

ಮೌಢ್ಯದ ಮಹಲಿನಲ್ಲಿ ಮರೆಯಾದ ಚಂದಿರ.. ಫಲಾಹಾರ ಸೇವಿಸಿ ಸೈ ಎಂದ ಪ್ರಗತಿಪರರು

Publicspot

CM Meeting; ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ.. ಬರ್ತಾರಾ ರೈತರು..?

Publicspot

Sugarcane Farmers Protest; ಸರ್ಕಾರದ ಆಹ್ವಾನ ತಿರಸ್ಕರಿಸಿದ ರೈತರು.. ಸಂಜೆ ತನಕ ಡೆಡ್‌ಲೈನ್‌..

Publicspot