The Public Spot
ಅಪರಾಧ

Accident Murder: ರಸ್ತೆಯಲ್ಲಿ ಗಲಾಟೆ.. ಕಾರಿನಲ್ಲಿ ಗುದ್ದಿಸಿ ಕೊಲೆ ಮಾಡಿದ ದಂಪತಿ..

ಬೆಂಗಳೂರಿನಲ್ಲೊಂದು ಆಕ್ಸಿಡೆಂಟ್ ಮರ್ಡರ್ ನಡೆದಿದೆ. ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಕಾರಿನಲ್ಲಿ ಗುದ್ದಿಸಿ ಕೊಲೆ ಮಾಡಿರುವ ಘಟನೆ ಪುಟ್ಟೇನಹಳ್ಳಿಯ ಶ್ರೀರಾಮಲೇಔಟ್‌ನಲ್ಲಿ ನಡೆದಿದೆ. ಪುಟ್ಟೇನಹಳ್ಳಿ ಪೊಲೀಸರು ಮನೋಜ್ ಕುಮಾರ್, ಆರತಿ ಎಂಬ ದಂಪತಿಯನ್ನು ಬಂಧಿಸಿದ್ದಾರೆ. ಉದ್ದೇಶ ಪೂರ್ವಕವಾಗಿ ಕಾರು ಗುದ್ದಿಸಿ ಹತ್ಯೆ ಮಾಡಿದ ಆರೋಪದಡಿ ಬಂಧನ ಮಾಡಲಾಗಿದೆ.

ಕೊಲೆಯಾದ ಯುವಕ

ಸಣ್ಣದಾಗಿ ನಡೆದ ರೋಡ್ ರೇಜ್ ಘಟನೆ ಬೈಕ್ ಸವಾರನ ಕೊಲೆಯಲ್ಲಿ ಅಂತ್ಯವಾಗಿದೆ. ಅಕ್ಟೋಬರ್ 25 ರಂದು ಘಟನೆ ನಡೆದಿತ್ತು. ಬೈಕ್‌‌ನಲ್ಲಿ ದರ್ಶನ್ ಮತ್ತು ವರುಣ್ ಎಂಬ ಬೈಕ್ ಸವಾರರು ಹೋಗುತ್ತಿದ್ರು. ಈ ವೇಳೆ ಅದೇ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಮನೋಜ್ ದಂಪತಿ. ಕಾರಿನಲ್ಲಿ ಹೋಗುವಾಗ ಬೈಕ್ ಕಾರಿನ ಮಿರರ್‌ಗೆ ಟಚ್ ಆಗಿತ್ತು. ಟಚ್ ಮಾಡಿದ ಬಳಿಕ ಸ್ವಲ್ಪ ದೂರ ಹೋಗಿದ್ದರು ಬೈಕ್ ಸವಾರರು.

ಈ ವೇಳೆ ಬೈಕ್ ಹಿಂಬಾಲಿಸಿಕೊಂಡು ಹೋಗಿ ಡಿಕ್ಕಿ ಹೊಡೆದಿದ್ದಾರೆ. ಈ‌ ವೇಳೆ ಬೈಕ್ ಸವಾರ ದರ್ಶನ್ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಸವಾರ ವರುಣ್‌ಗೆ ಗಾಯವಾಗಿತ್ತು. ಈ ಬಗ್ಗೆ ಜೆಪಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಎಂದು ಕೇಸ್ ದಾಖಲು ಆಗಿದೆ. ಅಪಘಾತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ಪರಿಶೀಲನೆ ವೇಳೆ ಉದ್ದೇಶಪೂರ್ವಕವಾಗಿ ಕಾರು ಗುದ್ದಿಸಿರುವುದು ಪತ್ತೆಯಾಗಿದೆ. ಅಪಘಾತದ ಬಳಿಕ ಕಾರನ್ನು ಸ್ವಲ್ಪ ಮುಂದೆ ನಿಲ್ಲಿಸಿ, ಕಾರಿನ ಬಿಡಿಭಾಗಗಳನ್ನ ಎತ್ತಿಕೊಂಡು ಹೋಗಿದ್ದರು ದಂಪತಿ.

ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ದಂಪತಿ ಅಪಘಾತ ಆದ ಬಳಿಕ ಕಾರಿನ ಪಾರ್ಟ್ಸ್ ಎತ್ತಿಕೊಂಡು ಹೋಗಿದ್ದರು. ಕಾರಿನ ಮೀರರ್ ಹೊಡೆದು ಹಾಕಿದರು ಅನ್ನೋ ಕೋಪದಲ್ಲಿ ಅಪಘಾತ ಮಾಡಿ ಕೊಲೆ ಮಾಡಿದ್ದಾರೆ. ಸುಮಾರು ಎರಡು ಕಿ.ಮೀ. ಚೇಸ್ ಮಾಡಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕೋರ್ಟ್​ನಲ್ಲಿ ಇಂದಿನಿಂದ ದರ್ಶನ್​ ಕೊಲೆ ಕೇಸ್​ ವಿಚಾರಣೆ!!

Publicspot

ಧರ್ಮಸ್ಥಳಕ್ಕೆ ಇಂದು Car Rally : ಜೈನರನ್ನು ಟೀಕಿಸಿದ್ದಕ್ಕೆ ಅರೆಸ್ಟ್…!

Publicspot

Dharmasthala SIT Investigation: ಧರ್ಮಸ್ಥಳ ಕೇಸ್​ ಬಗ್ಗೆ ಮಾಸ್ಕ್​ ಮ್ಯಾನ್​ ಸುಳ್ಳು ಹೇಳ್ತಿರೋದ್ಯಾಕೆ..?

Publicspot

Son Thief for Good Cause; ತಂದೆಯ ಕ್ಯಾನ್ಸರ್​ ಚಿಕಿತ್ಸೆಗೆ ಹಣ ಹೊಂದಿಸಲು ಕಳ್ಳನಾದ ಮಗ..!

Publicspot

Priyanka Upendra; ಪ್ರಿಯಾಂಕಾ ಉಪೇಂದ್ರಗೆ ವಂಚಿಸಿದ್ದ ಬಿಹಾರಿ ಬಾಬು ಅಂದರ್​..

Publicspot

ಬೆಂಗಳೂರಲ್ಲಿ ಪ್ರಿಯಕರನ ಕೊಂದಿದ್ಯಾಕೆ ಪ್ರೇಯಸಿ..? ಹೆತ್ತವರ ಪ್ರಶ್ನೆ..

Publicspot