The Public Spot
ಅಪರಾಧ

ಸ್ಕ್ಯಾನಿಂಗ್​ಗೆ ಹೋದಾಗ ಬೆರಳಿಟ್ಟು ವಿಕೃತಿ.. ಲೈಂಗಿಕ ಕಿರುಕುಳ ಬಾಯ್ಬಿಡದಂತೆ ಧಮ್ಕಿ..

ಸ್ಕ್ಯಾನಿಂಗ್ ಸೆಂಟರ್​ಗೆ ಬರುವ ಹೆಣ್ಣು ಮಕ್ಕಳು, ತಮ್ಮ ಸಮಸ್ಯೆಗಳ ಬಗ್ಗೆ ಡಾಕ್ಟರ್​ ಬಳಿ ಹೇಳಿಕೊಳ್ತಾರೆ. ಡಾಕ್ಟರ್​ ಅನ್ನೋ ಕಾರಣಕ್ಕೆ ಆತ ಏನು ಮಾಡಿದರೂ ಪರೀಕ್ಷೆಯ ವಿಚಾರಕ್ಕೆ ಹೀಗೆ ಮಾಡುತ್ತಿರಬಹುದು ಎಂದು ಸುಮ್ಮನಾಗುತ್ತಾರೆ. ಆದರೆ ಇಲ್ಲೊಬ್ಬ ಕಾಮಾಂಧ ವೈದ್ಯನ ಕಣ್ಣು ಮಹಿಳೆಯ ಮೇಲೆ ಬಿದ್ದಿದೆ. ರೆಡಿಯಾಲಜಿಸ್ಟ್ ವೈದ್ಯನ ಕಾಮಕಾಂಡ ಮಹಿಳೆಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ಸ್ಕ್ಯಾನಿಂಗ್ ಮಾಡುವ ನೆಪದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ರೆಡಿಯಾಲಜಿಸ್ಟ್​ನಿಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಸ್ಕ್ಯಾನಿಂಗ್ ನೆಪದಲ್ಲಿ ಮಹಿಳೆ ದೇಹ ಮುಟ್ಟಿ ಅಸಭ್ಯ ವರ್ತನೆ ತೋರಿಸಿದ್ದಾನೆ. ಆನೇಕಲ್ ಪಟ್ಟಣದ ಪ್ಲಾಸ್ಮಾ ಮೆಡಿನೋಸ್ಟಿಕ್ಸ್ ಸ್ಕ್ಯಾನಿಂಗ್ ಸೆಂಟರ್​ನಲ್ಲಿ ಈ ಘಟನೆ ನಡೆದಿದೆ. ಆನೇಕಲ್​ನ ಜಯಕುಮಾರ್ ಕಾಮಾಂಧ ರೆಡಿಯಾಲಜಿಸ್ಟ್ ಆಗಿದ್ದಾನೆ.

ಹೊಟ್ಟೆ ನೋವು ಎಂದು ತನ್ನ ಗಂಡನೊಂದಿಗೆ ಸ್ಕ್ಯಾನಿಂಗ್ ಸೆಂಟರ್​ಗೆ ಹೋಗಿದ್ದ ಮಹಿಳೆ, ಈ ವೇಳೆ ಸ್ಲ್ಯಾನಿಂಗ್ ಮಾಡೋ ನೆಪದಲ್ಲಿ ಮಹಿಳೆ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಮಹಿಳೆಯ ಖಾಸಗಿ ಅಂಗಕ್ಕೆ ಬೆರಳು ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸ್ಕ್ಯಾನಿಂಗ್ ಮಾಡೋ ನೆಪದಲ್ಲಿ ಎಂಜಾಲು ಹಾಕಿ ವಿಕೃತಿ ಮೆರೆದಿದ್ದಾನೆ. ರೆಡಿಯಾಲಜಿಸ್ಟ್ ಜಯಕುಮಾರನ ಲೈಂಗಿಕ ಕಿರುಕುಳ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಸ್ಕ್ಯಾನಿಂಗ್ ಮಾಡುವಾಗ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ ಮಹಿಳೆ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಈ ವಿಚಾರವನ್ನು ಹೊರಗೆ ಬಾಯ್ಬಿಡದಂತೆ ಮಹಿಳೆಗೆ ಧಮ್ಕಿ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಯಿಸೋದಾಗಿ ಬೆದರಿಕೆ ಹಾಕಿದ್ದಾನೆ. ಕೂಡಲೇ ಆನೇಕಲ್ ಪೊಲೀಸ್ ಠಾಣೆಗೆ ತೆರಳಿ ಮಹಿಳೆಯಿಂದ ದೂರು ದಾಖಲು ಮಾಡಿದ್ದಾರೆ. ಆರೋಪಿಯನ್ನ ಠಾಣೆಗೆ ಕರೆಸಿ ಬಿಟ್ಟು ಕಳುಹಿಸಿದ್ದಾರೆ ಪೊಲೀಸರು. ಇದುವರೆಗೂ ಆರೋಪಿಯನ್ನ ಬಂಧನ ಮಾಡದ ಆನೇಕಲ್ ಪೊಲೀಸರು ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಮಹಿಳೆ.

Related posts

Seven Year Dreams End; 7 ವರ್ಷದ ಬಳಿಕ ತಾಯಿ ಆಗುವ ಆಸೆಗೆ ಹುಳಿ ಹಿಂಡಿದ್ದು ಯಾರು..?

Publicspot

Dharmasthala Twist; ಬುರುಡೆ ಹಿಂದೆ ಹೊರಟ SIT ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​..

Publicspot

ಶಿಡ್ಲಘಟ್ಟದ ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ರಾಜೀವ್‌ ಗೌಡನ ಜೊತೆ ಮತ್ತೊಬ್ಬ ಅರೆಸ್ಟ್‌

Publicspot

Dharmasthala SIT: ಶೀಘ್ರವೇ ಮಹೇಶ್​ ಶೆಟ್ಟಿ ತಿಮರೋಡಿ ಬಂಧನ ಆಗುತ್ತಾ..?

Publicspot

ಪ್ರೀತಿಯನ್ನು ಪೀತಿಯಿಂದಲೇ ಗೆಲ್ಲಬೇಕು.. ರಸ್ತೆಯಲ್ಲಿ ಹಿಡಿದು ಎಳೆದಾಡಿ ಅಲ್ಲ..

Publicspot

Son Thief for Good Cause; ತಂದೆಯ ಕ್ಯಾನ್ಸರ್​ ಚಿಕಿತ್ಸೆಗೆ ಹಣ ಹೊಂದಿಸಲು ಕಳ್ಳನಾದ ಮಗ..!

Publicspot