The Public Spot
ಟ್ರೆಂಡ್

AIBE 20 ಪರೀಕ್ಷೆಯ ಅಡ್ಮಿಟ್‌ ಕಾರ್ಡ್‌ ರಿಲೀಸ್‌‌.. ಡೌನ್‌ಲೋಡ್‌ ಮಾಡೋದು ಹೇಗೆ..?

ಆಲ್‌ ಇಂಡಿಯಾ ಬಾರ್‌ ಕೌನ್ಸಿಲ್ 20ನೇ ಪರೀಕ್ಷೆಯ ಹಾಲ್‌ ಟಿಕೆಟ್‌‌ ಬಿಡುಗಡೆ ಆಗಿದೆ. ಸಂಜೆ 5 ಗಂಟೆಗೆ ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಪರೀಕ್ಷಾ ವೇಳಾ ಪಟ್ಟಿಯಂತೆ ನವೆಂಬರ್‌ 15ರಂದು ಹಾಲ್‌ ಟಿಕೆಟ್‌ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಅದರಂತೆ ಇಂದು ಸಂಜೆ 5 ಗಂಟೆಗೆ ಆಲ್‌ ಟಿಕೆಟ್‌ ಬಿಡುಗಡೆ ಮಾಡಲಾಗಿದೆ. allindiabarexamination.com ಆಕ್ಟೀವ್‌ ಆಗಿದ್ದು, ನೀವು ನಿಮ್ಮ ಆಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಂಡು ಜೋಪಾನವಾಗಿ ಇಟ್ಟುಕೊಳ್ಳಬೇಕಿದೆ.

ಕಾನೂನು ಪದವಿ ಮುಗಿಸಿರುವ ವಿದ್ಯಾರ್ಥಿಗಳು ಮತ್ತು ಈ ಬಾರಿ ಕಡೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಕಾನೂನು ವಿದ್ಯಾರ್ಥಿಗಳು ಹಾಗೂ ಈಗಾಗಲೇ ರಾಜ್ಯ ಬಾರ್‌ ಕೌನ್ಸಿಲ್‌ನಲ್ಲಿ ಎನ್‌ರೋಲ್‌ ಆಗಿರುವ ವಕೀಲರು AIB 20 ಪರೀಕ್ಷೆ ಬರೆಯಲು ಅರ್ಹರಿದ್ದಾರೆ. All India Bar Examination ಪಾಸ್‌ ಆದ ಬಳಿಕ ವಕೀಲರು ಸನ್ನದಿಗೆ ಸಹಿ ಹಾಕುವ ಅವಕಾಶ ಪಡೆದುಕೊಳ್ತಾರೆ. ಒಮ್ಮೆ ಸ್ಟೇಟ್ ಬಾರ್‌ ಕೌನ್ಸಿಲ್‌ನಲ್ಲಿ ಎನ್‌ರೋಲ್‌ ಆದ ಬಳಿಕ AIBE ಪಾಸ್‌ ಮಾಡಿಕೊಳ್ಳಲು 2 ವರ್ಷಗಳ ಕಾಲಾವಕಾಶ ಇರುತ್ತದೆ.

ನವೆಂಬರ್‌ 30ರಂದು AIB ಪರೀಕ್ಷೆ ನಡೆಯಲಿದ್ದು, ಅಂದು ಬೆಳಗ್ಗೆ 11.30ಕ್ಕೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಹಾಜರಿರಬೇಕು. ಅಂದು ಮಧ್ಯಾಹ್ನ 1 ಗಂಟೆಗೆ ಪರೀಕ್ಷೆ ಆರಂಭ ಆಗಲಿದ್ದು ಮೂರು ಗಂಟೆಗಳ ಕಾಲ ಪರೀಕ್ಷೆ ನಡೆಯಲಿದೆ. ಒಟ್ಟು 100 ಅಂಕಗಳಿಗೆ 1 ಅಂಕದಂತೆ ಬಹು ಆಯ್ಕೆ ಪ್ರಶ್ನೆಗಳು ಬರಲಿದ್ದು, ಪರೀಕ್ಷಾರ್ಥಿಗಳು Bare Act ನೋಡಿ ಉತ್ತರ ಬರೆಯುವುದಕ್ಕೆ ಅವಕಾಶ ಇರಲಿದೆ. 1 ಪ್ರಶ್ನೆಗೆ 1 ಅಂಕ ಇರಲಿದ್ದು, ತಪ್ಪು ಅಂಕಗಳಿಗೆ ಯಾವುದೇ ನಕಾರಾತ್ಮಕ ಅಂಕಗಳು ಇರುವುದಿಲ್ಲ. ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗುವ ಬೇರ್‌ ಆ್ಯಕ್ಟ್‌ನಲ್ಲಿ ನೋಟ್ಸ್‌ ಇರುವಂತಿಲ್ಲ. ಅದನ್ನು ಪರಿಶೀಲನೆ ಮಾಡಿ ಹೊಸದಾಗಿ ಬೇರ್‌ ಆ್ಯಕ್ಟ್‌ ಖರೀದಿ ಮಾಡುವುದು ಅತ್ಯಗತ್ಯ.

ಈಗ ಹಾಲ್‌ ಟಿಕೆಟ್‌ (Admit Card) ಡೌನ್‌ಲೋಡ್‌ ಮಾಡಲು BCI ವೆಬ್‌ಸೈಟ್‌ ತರೆಯಿರಿ, AIBE 20 admit card link ಮೇಲೆ ಕ್ಲಿಕ್‌ ಮಾಡಿ, ನಿಮ್ಮ ನಿಮ್ಮ login ID and password ಹಾಕಿ, AIBE 20 admit card ಶೋ ಆಗಲಿದ್ದು, ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ಡೈರೆಕ್ಟ್‌ ಲಿಂಕ್‌ ಇಲ್ಲಿ ಕ್ಲಿಕ್‌ ಮಾಡಿ allindiabarexamination.com

AIB ಎಕ್ಸಾಂ ಬರೆಯುತ್ತಿರುವ ಎಲ್ಲಾ ಪರೀಕ್ಷಾರ್ಥಿಗಳಿಗೆ The Public Spot.Com ಕಡೆಯಿಂದ ಶುಭಾಶಯಗಳು.

Related posts

ಸುಳ್ಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿ ಸಿಕ್ಕಿಬಿತ್ತಾ ರಾಮೇಶ್ವರಂ ಕೆಫೆ..?

Publicspot

Baby Inside Another Baby ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಮಗು.. ಅಚ್ಚರಿ ಮತ್ತು ವಿಸ್ಮಯ..

Publicspot

Bike Taxi Start: ರಾಜ್ಯದಲ್ಲಿ ಬೈಕ್​ ಟ್ಯಾಕ್ಸಿ ಸೇವೆಗೆ ಹೈಕೋರ್ಟ್​ ಅಸ್ತು.. ರಸ್ತೆ ಫೈಟ್​ ನಿಲ್ಲಿಸಲಿ ಖಾಕಿಪಡೆ..

Publicspot

CM Meeting; ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ.. ಬರ್ತಾರಾ ರೈತರು..?

Publicspot

ಲೈಂಗಿಕ ಸಮಸ್ಯೆಗೆ 48 ಲಕ್ಷದ ಮದ್ದು..! ಕನಸು ಕೈಗೂಡಲಿಲ್ಲ.. ಕಿಡ್ನಿಯೇ ಹೋಯ್ತು..

Publicspot

Elephant; ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಆನೆ ಬದುಕಿದ್ಯಾ..? ಸತ್ತೇ ಹೋಯ್ತಾ..?

Publicspot