The Public Spot
ರಾಜ್ಯ

ದಸರಾ, ದೀಪಾವಳಿ ಸಮಯದಲ್ಲಿ ಇದು ಬೇಕಿತ್ತು.. ಅಲ್ವಾ..?

ದಸರಾ ಹಾಗೂ ದೀಪಾವಳಿ ಸಮಯದಲ್ಲಿ ಎಲ್ಲಾ ಕಚೇರಿಗಳು ಸೇರಿದಂತೆ ಪೂಜೆ ಪುನಸ್ಕಾರ ಮಾಡಲಾಗುತ್ತದೆ. ಎಲ್ಲಾ ಸಿಬ್ಬಂದಿಗೆ ಸ್ವೀಟ್​ ಬಾಕ್ಸ್​ ಕೊಡುವ ಪದ್ದತಿಯೂ ಇದೆ. ಆದರೆ ಇದನ್ನೇ ಎನ್​ಕ್ಯಾಶ್​ ಮಾಡಿಕೊಳ್ಳುವ ಬಹುತೇಕ ಸ್ವೀಟ್​ ಅಂಗಡಿ ಮಾಲೀಕರು ಕಳಪೆ ಆಹಾರ ಪದಾರ್ಥ ಬಳಕೆ ಮಾಡಿ ಸ್ವೀಟ್​ ತಯಾರಿಸುವುದು, ಸ್ವೀಟ್​ಗೆ ಅಟ್ರಾಕ್ಷನ್​ಗೆ ಕೆಮಿಕಲ್ ಬಳಸುವುದು ಸೇರಿದಂತೆ ಅಕ್ರಮ ಮಾಡುವುದು ಸರ್ವೇ ಸಮಾನ್ಯ. ಆದರೆ ರಾಜ್ಯ ಸರ್ಕಾರ, ಎಲ್ಲಾ ಕ್ರಮಗಳಿಗೂ ಕಡಿವಾಣ ಹಾಕುವುದಕ್ಕೆ ಮುಂದಾಗಿದೆ.

​

ರಾಜ್ಯಾದ್ಯಂತ ಒಟ್ಟು 90 ಕಡೆಗಳಲ್ಲಿ FSSAI ಅಧಿಕಾರಿಗಳು ಸ್ವೀಟ್ಸ್ ಮಳಿಗೆಗಳ ಮೇಲೆ ದಾಳಿ ಮಾಡಿದ್ದು, 90 ಕಡೆಗಳಿಂದ ಒಟ್ಟು 145 ಸ್ವೀಟ್ಸ್ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗಿದೆ. ನೈರ್ಮಲ್ಯ ಇಲ್ಲದೆ ಇರುವುದು, ಸಿಬ್ಬಂದಿ ವೈದ್ಯಕೀಯ ಪ್ರಮಾಣ ಪತ್ರ ಇಲ್ಲದಿರುವುದು, ಲೇಬಲಿಂಗ್​ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ 25 ತಯಾರಿಕಾ ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎರಡು ಉದ್ದಿಮೆಗಳಿಗೆ ದಂಡವನ್ನೂ ವಿಧಿಸಲಾಗಿದೆ.

ರಾಜ್ಯಾದ್ಯಂತ ಸ್ವೀಟ್ಸ್ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ ವೇಳೆ ಸಿಹಿ ತಿಂಡಿ ತಯಾರಿಕಾ ಘಟಕಗಳು, ಮಾರಾಟ ಮಳಿಗೆಗಳಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಕೋಲಾರದಲ್ಲಿ ಎರಡು ಘಟಕಗಳಿಗೆ ದಂಡ ವಿಧಿಸಿದ್ದು, ಬಾಲಾಜಿ ಸ್ವೀಟ್ಸ್‌ಗೆ ಅಧಿಕಾರಿಗಳು 2 ಸಾವಿರ ದಂಡ ವಿಧಿಸಿದ್ದಾರೆ. ಗೋಲ್ಡ್ ಸ್ಟಾರ್ ಸ್ವೀಟ್ ಮ್ಯಾನುಫ್ಯಾಕ್ಚರಿಂಗ್ ಘಟಕಕ್ಕೆ 5 ಸಾವಿರ ದಂಡ ವಿಧಿಸಿದ್ದಾರೆ. ಬದಾಮಿ, ಕಲಬುರಗಿ, ರಾಯಚೂರು, ಕೋಲಾರ, ಕೊಪ್ಪಳ ಸೇರಿ ಹಲವು ಜಿಲ್ಲೆಗಳಲ್ಲಿ ತಪಾಸಣೆ ನಡೆಸಲಾಗಿದೆ.

ಬೆಂಗಳೂರು GBA ವ್ಯಾಪ್ತಿಯ ವೆಸ್ಟ್, ಈಸ್ಟ್, ಸೌತ್ ವಲಯಗಳಲ್ಲೂ ಪರಿಶೀಲನೆ ನಡೆದಿದ್ದು, ಕೊಡಗು, ಮೈಸೂರು ಗ್ರಾಮಾಂತರ, ಹಾಸನ, ಹುಬ್ಬಳ್ಳಿ-ಧಾರವಾಡ, ಚಿಕ್ಕಬಳ್ಳಾಪುರ, ಚಿತ್ರದುರ್ಗದಲ್ಲೂ ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ. ಒಟ್ಟಾರೆ, ದಸರಾ, ದೀಪಾವಳಿ ಸಮಯದಲ್ಲಿ ಹಣ ಸಂಪಾದನೆಗಾಗಿ ಸ್ವೀಟ್​ ಅಂಗಡಿ ಮಾಲೀಕರು ಅಕ್ರಮ ನಡೆಸುವುದನ್ನು ತಡೆಯುವುದಕ್ಕೆ ಬಿಗಿ ಕ್ರಮ ಕೈಗೊಂಡಿದ್ದಾರೆ. ಇದೊಂದು ರೀತಿಯಲ್ಲಿ ಒಳ್ಳೆಯ ಕ್ರಮವಾಗಿದ್ದು, ದಂಡದ ಮೊತ್ತವನ್ನು ಹೆಚ್ಚಳ ಮಾಡಬೇಕಿದೆ. 2 ಸಾವಿರ, 3 ಸಾವಿರ ದಂಡ ಯಾವುದೇ ಲೆಕ್ಕ ಇಲ್ಲ ಎನ್ನುವಂತಿದೆ.

Related posts

ಆಲಿಕಲ್ಲು ಮಳೆ.. ಇವತ್ತೂ ನಾಳೆ ಬರುತ್ತೆ.. ಸಿಡಿಲಿಗೆ ಸಿಗಲೇಬೇಡಿ..

Publicspot

ಪರಿಸರವನ್ನು ಪಠ್ಯಕ್ರಮವಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

admin

Heavy Rain Alert: ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ.. ಶಾಲಾ ಕಾಲೇಜಿಗೆ ರಜೆ ಘೋಷಣೆ!!

Publicspot

KARNATAKA SCHOOL LEAVE: ಇವತ್ತು 4 ಜಿಲ್ಲೆಗೆ ಮಳೆಯಬ್ಬರ.. 8 ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ

Publicspot

SSLC ಫಲಿತಾಂಶ ಪ್ರಕಟ ಮತ್ತಷ್ಟು ವಿಳಂಬ.. ಹಠಕ್ಕೆ ಬಿದ್ದ ಸರ್ಕಾರ..

Publicspot

SC ಕ್ಯಾಸ್ಟ್ ಸೆನ್ಸ್; ದಲಿತರನ್ನು ಕ್ರಿಶ್ಚಿಯನ್ ಮಾಡಲು ಹೊರಟಿದೆ ರಾಜ್ಯ ಸರ್ಕಾರ.. ಬಿಜೆಪಿ ನಿಯೋಗ ಕಿಡಿ..

ಯಶವಂತಿ