The Public Spot
Uncategorized

ಸುಪ್ರೀಂಕೋರ್ಟ್​ನಲ್ಲಿ ಜಾಮೀನು ರದ್ದಾದ ವೇಳೆ ದರ್ಶನ್​ ಮಾಡಿದ್ದೇನು..?

ದರ್ಶನ್​ಗೆ ಜಾಮೀನು ಕೊಟ್ಟ ಹೈಕೋರ್ಟ್​ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆಗ ದರ್ಶನ್ ತುಂಬಾ ಬೇಸರದಲ್ಲಿ ಇದ್ದರು. ಕೆಲವು ದಿನ ಮೌನವಾದರು. ಒಬ್ಬರೇ ಯೋಚನೆ ಮಾಡ್ತಿದ್ದರು ಎಂದು ವಿಜಯಲಕ್ಷ್ಮೀ ಹೇಳಿಕೊಂಡಿದ್ದಾರೆ. ಜಾಮೀನು ತೀರ್ಪು ಬರುವ ದಿನ ದರ್ಶನ್​​ ತಮಿಳುನಾಡಿಗೆ ಹೋಗಿದ್ದರು. ಕುದುರೆ ಕೊಂಡುಕೊಳ್ಳುವ ಉದ್ದೇಶದಿಂದ ಹೋಗಿದ್ದರು. ಆಗ ಬೇಲ್ ಕ್ಯಾನ್ಸಲ್ ಅಂತ ಬಂದ ಸುದ್ದಿ ಕೇಳಿ ನನಗಂತು ತುಂಬಾನೆ ಬೇಜಾರಾಯ್ತು ಎಂದಿದ್ದಾರೆ.

ಸುಪ್ರೀಂಕೋರ್ಟ್​ ಜಾಮೀನು ರದ್ದು ಮಾಡಿದ ವಿಚಾರವನ್ನು ನಾವು ದರ್ಶನ್​ಗೆ ಹೇಳುವುದು ಹೇಗೆ..? ಅನ್ನೋ ವಿಚಾರ ಒಂದು ಕ್ಷಣ ನಾನು ಯೋಚನೆ ಮಾಡಿದೆ. 15 ನಿಮಿಷ ಆದರೂ ಈ ವಿಚಾರ ತಿಳಿಸೋ ಬಗ್ಗೆ ನನಗೆ ಉತ್ತರ ಹೊಳೆಯಲಿಲ್ಲ. ನಾನು ಯೋಚಿಸುತ್ತಲೇ ಇದ್ದೆ. ಆ ವಿಚಾರ ಕೇಳಿದ ತಕ್ಷಣ ಬ್ಯಾಗ್‌‌ನ ರೆಡಿ ಮಾಡು ಬರ್ತಿದ್ದೀನಿ ಅನ್ನೋ ಮಾತನ್ನ ದರ್ಶನ್ ನನಗೆ ಹೇಳಿದ್ದರು ಎನ್ನುವ ಮೂಲಕ ನನ್ನಲ್ಲಿದ್ದ ಆತಂಕವನ್ನು ತಾನೇ ಕಡಿಮೆ ಮಾಡಿದರು ಎಂದಿದ್ದಾರೆ.

ದರ್ಶನ್ ವಿರೋಧಿಗಳು ದರ್ಶನ್​ಗೆ ಮಾತ್ರವಲ್ಲ, ಮಗ ವಿನೀಶ್‌ನನ್ನೂ ಕೂಡ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಮಾಡಿದ್ದರು. ದರ್ಶನ್ ಮಗ ವಿನೀಶ್‌ಗೆ ಇನ್ನು 16 ವರ್ಷ, ವಿನೀಶ್ ವಿಚಾರ ಕೇಳಿದಾಗ, 16 ವರ್ಷದ ಹುಡುಗನಿಗೆ ನಾನು ಏನಂತ ಹೇಳಲಿ..? ದರ್ಶನ್ ಮೊದಲ ಬಾರಿ ಅರೆಸ್ಟ್ ಆದಾಗ ವಿನೀಶ್ ತುಂಬಾನೆ ಅತ್ತಿದ್ದ. ಈ ವಿಚಾರ ಅವನಿಗೆ ಫ್ರೆಂಡ್ಸ್ ಮೂಲಕ ಗೊತ್ತಾಗಿತ್ತು. ದರ್ಶನ್ ಜೈಲು ಸೇರಿದಾಗ ಮಧ್ಯರಾತ್ರಿಯೆಲ್ಲ ವಿನೀಶ್ ಎದ್ದು ಅಳ್ತಾ ಕೂರ್ತಿದ್ದ ಎಂದು ನೆನಪಿಸಿಕೊಂಡಿದ್ದಾರೆ.

ದರ್ಶನ್​ ಅರೆಸ್ಟ್​ ಮೇಲೆ ಸುಮಾರು 1 ತಿಂಗಳು ವಿನೀಶ್​ನ ಮ್ಯಾನೇಜ್ ಮಾಡೋದು ಕಷ್ಟವಾಯ್ತು. ಅಪ್ಪ ಅನ್ನೋದಕ್ಕಿಂತ ಫ್ಯಾನ್ ತರ ದರ್ಶನ್​ನನ್ನು ನೋಡ್ತಾನೆ ಅಂದಿದ್ದಾರೆ. ಅಷ್ಟೇ ಅಲ್ಲದೆ ದರ್ಶನ್ ಫ್ಯಾನ್ಸ್ ಅನ್ ಎಜುಕೇಟೆಡ್ ಅನ್ನೋರಿಗೂ ಚಾಟಿ ಬೀಸಿರುವ ದರ್ಶನ್ ಪತ್ನಿ ವಿಜಯಲಕ್ಷ್ಮೀ. ಒಂದು ಶಾಲೆ ಓಪನ್​ ಮಾಡಿ, ಟೀಕಾಕಾರಿಂದಲೇ ಪಾಠ ಮಾಡಿಸೋಣ ಬಿಡಿ ಎಂದು ವ್ಯಂಗ್ಯಭರಿತ ಮಾತುಗಳಲ್ಲಿ ಉತ್ತರ ನೀಡಿದ್ದಾರೆ. ಈ ನಡುವೆ ಇವತ್ತು ದರ್ಶನ್​ ಕೊಲೆ ಕೇಸ್​ ಟ್ರಯಲ್​ ಆರಂಭ ಆಗುತ್ತಿದೆ.

Related posts

PIL rejected by supreme court; ಸುಪ್ರೀಂಕೋರ್ಟ್‌ ಆದೇಶ ಮುಚ್ಚಿಟ್ಟು SIT ರಚನೆ ಮಾಡಿತಾ ಸರ್ಕಾರ..?

Publicspot

ಡಿಕೆ ಬ್ರದರ್ಸ್​ ಒತ್ತಡಕ್ಕೆ ಹೈಕಮಾಂಡ್​​ ಮಣಿದರೆ ಉಳಿಯುತ್ತಾ ಸರ್ಕಾರ..?

Publicspot

Big Boss Bund: ಬಿಗ್‌‌ಬಾಸ್‌ ಮನೆಗೆ ಬೀಗ ಬಿದ್ದಿದೆ.. ಮುಂದೆ ಇರುವ ದಾರಿ ಯಾವುದು..?

Publicspot

ನೀಟ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್‌ಗೆ ಯಾರು ಹೊಣೆ..? ಜವಾಬ್ದಾರಿ ಯಾರದ್ದು..?

Publicspot

ಬಿರಿಯಾನಿ ತಿಂದ ನಟ ಡಾಲಿ ಧನಂಜಯ್‌‌ ಮೊದಲ ಪ್ರತಿಕ್ರಿಯೆ ಏನು..?

Publicspot

Duniya Vijay Slams SIMA; ದುಬೈನಲ್ಲಿ ಕನ್ನಡಿಗರಿಗೆ ಅವಮಾನ.. ಯಾಕೆ ಬೇಕು ಆ ಪ್ರಶಸ್ತಿ..?

Publicspot