The Public Spot
ಅಪರಾಧ

ಕುರುಬ ಸಮುದಾಯದ ನೌಕರನ ಮೇಲೆ ಕೈ ಮಾಡಿದ ಸವಧಿ.. ಆಕ್ರೋಶ

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಡಿಸಿಸಿ ಬ್ಯಾಂಕ್ ವರ್ಕರ್​ ಹಾಗೂ ಯುನಿಯನ್ ಅಧ್ಯಕ್ಷ ನಿಂಗರಾಜ ಕರೆಣ್ಣವರ ಮೇಲೆ ಶಾಸಕ ಲಕ್ಷ್ಮಣ ಸವದಿ ಹಾಗೂ ಪುತ್ರ ಚಿದಾನಂದ ಸವದಿ ವಿರುದ್ಧ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಡಿಸಿಸಿ ಬ್ಯಾಂಕ್​ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಲಕ್ಷ್ಮಣ ಸವದಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಡಿಸಿಸಿ ಬ್ಯಾಂಕ್ ನೌಕರನ ಮೇಲೆ ಹಲ್ಲೆ ಮಾಡಲಾಗಿದೆ ಅನ್ನೋ ಆರೊಪಕ್ಕೆ ಆಕ್ರೋಶ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಸತ್ಯಪ್ಪ ಬಾಗನ್ನವರ್ ಮಾತನಾಡಿ, ಅಥಣಿಯಲ್ಲಿ ನಡೆದ ಘಟನೆ ವಿಷಾದನೀಯ.. ಮನೆಗೆ ಕರೆಸಿಕೊಂಡು ಅಪ್ಪ ಮಗ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ.. ಮನೆ ಬಿಟ್ಟು ಓಡಿ ಬಂದ್ರು ಲಕ್ಷ್ಮಣ ಸವದಿ ಬಿಟ್ಟಿಲ್ಲ, ಇದು ಶಾಸಕ ಲಕ್ಷ್ಮಣ ಸವದಿ ಮಾಡುತ್ತಿರೋ ದುರಾಡಳಿತ. ಲಕ್ಷ್ಮಣ ಸವದಿ ಶಾಸಕರಾಗಲು ಹಾಲುಮತ ಸಮಾಜ ಕಾರಣ. ನಮ್ಮ ಸಮಾಜದ ಮೇಲೆ ದೌರ್ಜನ್ಯ ಮಾಡಿದ್ದು ಖಂಡನೀಯ ಎಂದಿದ್ದಾರೆ.

2018ರಲ್ಲಿಯೂ ಇದೇ ರೀತಿ ಮಾಡಿದ್ದ ಲಕ್ಷ್ಮಣ ಸವದಿಯನ್ನು ಮನೆಗೆ ಕಳುಹಿಸಿದ್ವಿ. ಶಾಸಕ ಲಕ್ಷ್ಮಣ ಸವದಿ ಅಂತ್ಯ ಆರಂಭವಾಗಿದೆ ಎಂದು ಕುರುಬ ಸಮುದಾಯ ಸತ್ಯಪ್ಪ ಬಾಗನ್ನವರ್ ಕಿಡಿಕಾರಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿನ್ನ ತಾಕತ್ತು ಕಮ್ಮಿಯಾಗಿದೆ ಎಂದಿರುವ ಬಾಗನ್ನವರ್, ಮನೆಗೆ ಕರೆಸಿ ಹಲ್ಲೆ ಮಾಡಿರೋದು ಖಂಡನೀಯ. ತಕ್ಷಣ ಶಾಸಕ ಲಕ್ಷ್ಮಣ ಸವದಿ ಹಾಗೂ ಚಿದಾನಂದ ಸವಧಿಯನ್ನು ಬಂಧಿಸಬೇಕು. ಹಲ್ಲೆಗೆ ಒಳಗಾದ ನೌಕರ ಮೇಲೆಯೇ ದೂರು ದಾಖಲು ಮಾಡಲು ಎಸ್ಸಿ, ಎಸ್ಟಿ ಕೇಸ್ ದಾಖಲು ತಯಾರಿ ನಡೆಸಿದ್ದಾರೆ. ತಕ್ಷಣ ಎಸ್‌ಪಿಯವರು ಶಾಸಕ ಹಾಗೂ ಅವರ ಪುತ್ರನ ಮೇಲೆ ಕೇಸ್ ದಾಖಲು ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಈ ಘಟನೆಯಿಂದ ಶಾಸಕ ಲಕ್ಷ್ಮಣ ಸವದಿ ಅಥಣಿ ಬಿಟ್ಟು ಗ್ರಾಮೀಣ ಭಾಗದಲ್ಲಿ ಓಡಾಡೋದು ಕಷ್ಟ ಆಗಲಿದೆ ಎಂದು ಬಾಗನ್ನವರ್ ಎಚ್ಚರಿಸಿದ್ದಾರೆ. ಲಕ್ಷ್ಮಣ ಸವದಿ ತನ್ನ ಪುತ್ರನ ಜೊತೆಗೆ ಸೇರಿ ಹಲ್ಲೆ ಮಾಡಿದ್ದಾರೆ. ಆತನ ಅಳಿಯ 27 ವರ್ಷಗಳಿಂದ ಅಥಣಿಯಲ್ಲಿ ಠಿಕಾಣಿ ಹೂಡಿದ್ದಾನೆ. ಆತ ಏನೋ ಲಫಡಾ ಮಾಡಿರಬೇಕು, ಅದಕ್ಕಾಗಿ ಆತನನ್ನು ತೆಗೆದಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ಒಂದಾದ ಮೇಲೆ ಒಂದರಂತೆ ಕುಕೃತ್ಯಗಳು ನಡೆಯುತ್ತಲೇ ಇದ್ದು, ಈ ಪ್ರಕರಣ ಮತ್ತಷ್ಟು ಕಾವು ಪಡೆದುಕೊಳ್ಳುವ ಸಾಧ್ಯತೆಯಿದೆ. ಸಿಎಂ ಸಿದ್ದರಾಮಯ್ಯ ಕೂಡ ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

Related posts

Teacher Asulted student; ಕ್ರೂರವಾಗಿ ವರ್ತಿಸಿದ ಶಿಕ್ಷಕನ ಬಂಧನ, ಜೈಲಿಗೆ ಶಿಫ್ಟ್​..

Publicspot

ಧರ್ಮಸ್ಥಳ ಮೂಳೆ ರಹಸ್ಯ.. SIT ತನಿಖಾ ವರದಿ ಮತ್ತು ಅನುಮಾನದ ಹುತ್ತ..

Publicspot

Darshan File a Case; ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ನಟ ದರ್ಶನ್..

Publicspot

ಪ್ರಜ್ವಲ್​ ರೇವಣ್ಣ ಕೇಸ್​​, 25 ಲಕ್ಷ ಬಹುಮಾನ ಘೋಷಿಸಿದ ಸರ್ಕಾರ..!

Publicspot

ಶಿವಮೊಗ್ಗದಲ್ಲಿ SSLC ಸ್ಪೆಷಲ್ ಕ್ಲಾಸ್‌ ಮುಗಿಸಿ ಬರ್ದತಿದ್ದ ಹುಡುಗನನ್ನು ಹತ್ಯೆ!

Publicspot

Second Marriage; ಮದುವೆ ಆದ್ಮೇಲೆ ಗಂಡನೇ ಪರದೈವ ಅನ್ನೋ ನಂಬಿಕೆ ಕಳೆದುಕೊಂಡಿದ್ಯಾ..?

Publicspot