The Public Spot
ಅಪರಾಧ

ಜೈಲಲ್ಲಿ ಪವಿತ್ರಾಗೌಡಗೆ ಮನೆಯೂಟ ಸಿಗುತ್ತಾ..? ಇಲ್ವಾ..? ಹೈಕೋರ್ಟ್‌ ಹೇಳಿದ್ದೇನು..?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ A1 ಆಗಿರುವ ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೆ ಊಟ ಪಡೆಯಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಸೆಷನ್ಸ್‌‌ ಕೋರ್ಟ್‌ನಲ್ಲಿ ಮನೆಯೂಟ ಕೊಡುವಂತೆ ಕೋರ್ಟ್‌ ಆದೇಶ ಮಾಡಿತ್ತು. ಆದರೆ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಮನೆಯೂಟ ಕೊಡಲು ಸಾಧ್ಯವಿಲ್ಲ ಎಂದು ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿ ಆಗಿತ್ತು. ಇದೀಗ ಇವತ್ತು ಮತ್ತೆ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿದೆ. ಆರೋಪಿಗಳಾದ ಪವಿತ್ರಾಗೌಡ, ಲಕ್ಷ್ಮಣ್, ನಾಗರಾಜುಗೆ ಮನೆ ಊಟ ಕೊಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದ್ದಾರೆ.

ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ, ಜೈಲು ಕೈಪಿಡಿ ಪಾಲಿಸಬೇಕೆಂದು ಎಸ್‌ಪಿಪಿ ಪ್ರಸನ್ನಕುಮಾರ್ ತಿಳಿಸಿದ್ರು. ಆಗ ಇತರೆ ಕೆಲವು ಕೈದಿಗಳಿಗೆ ಮನೆ ಊಟ ನೀಡಲಾಗ್ತಿದೆ. ಇದು ತಾರತಮ್ಯ ಎಂದು ಪವಿತ್ರಾಗೌಡ ಪರ ವಕೀಲರು ಆಕ್ಷೇಪ ಎತ್ತಿದ್ದಾರೆ. ಸರ್ಕಾರದ ಪರ ವಕೀಲರ ವಾದಕ್ಕೆ ಇತರೆ ಆರೋಪಿಗಳಾದ ಲಕ್ಷ್ಣಣ್ ಹಾಗೂ ನಾಗರಾಜು ಪರ ವಕೀಲ ಸುನೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಬೇರೆ ಕೈದಿಗಳಿಗೆ ವಿಶೇಷ ಸವಲತ್ತು ಒದಗಿಸುತ್ತಿದ್ದರೆ ಮಾಹಿತಿ ನೀಡಿ ಎಂದು ಸರ್ಕಾರಕ್ಕೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಹೈಕೋರ್ಟ್ ಪೀಠ ಸೂಚನೆ ನೀಡಿದೆ. ಇದೇ ವೇಳೆ ಮನೆ ಊಟದ ಬಗ್ಗೆ ಮಾರ್ಗಸೂಚಿ ರೂಪಿಸುವುದು ಅಗತ್ಯ ಇದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆಯನ್ನು ಫೆಬ್ರವರಿ 2ಕ್ಕೆ ಮುಂದೂಡಿದೆ.

57ನೇ ಸಿಸಿಹೆಚ್ ಕೋರ್ಟ್‌ ಮನೆ ಊಟ ನೀಡಲು ನೀಡಿದ್ದ ಆದೇಶಕ್ಕೆ ಹೈಕೋರ್ಟ್‌ ನೀಡಿದ್ದ ತಡೆ ವಿಸ್ತರಣೆ ಆಗಿದ್ದು, ಹೈಕೋರ್ಟ್‌ ವಿಚಾರಣೆ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ. ಲಕ್ಷ್ಮಣ್ ಪರ ವಕೀಲ ಸುನೀಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದಾದ ಬಳಿಕ ದೇಶದ ಎಲ್ಲಾ ಜೈಲುಗಳಿಗೆ ಸುತ್ತೋಲೆ ಹೊರಡಿಸಲಾಯ್ತು. ಆರೋಪಿಗಳಿಗೆ ರಾಜಾತಿಥ್ಯ ನೀಡಬಾರದು ಅಂತ. ಆದ್ರೆ, ಸುತ್ತೋಲೆ ಬಂದ ಬಳಿಕವೂ ಜೈಲುಗಳಲ್ಲಿ 90 ಮೊಬೈಲ್‌ಗಳನ್ನು ಸೀಜ್ ಮಾಡಲಾಗಿದೆ. ಈ ಬಗ್ಗೆ 40ಕ್ಕು ಹೆಚ್ಚು ಎಫ್ಐಆರ್ ದಾಖಲಾಗಿದೆ. ಡ್ರಗ್ಸ್ ಸೀಜ್ ಮಾಡಿದ್ದಾರೆ, ಹೀಗಾಗಿ ಪೊಲೀಸ್ ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ಈ ಆದೇಶ ತೋರಿಸಿ ದರ್ಶನ್‌ಗೆ ಹಿಂಸೆ ನೀಡ್ತಿದ್ದಾರೆ. ಈಗಾಗಲೇ ಒಂದು ಪ್ರಕರಣದಲ್ಲಿ ಆರೋಪಿಗೆ ಮನೆ ಊಟ ಕೊಡ್ತಿದ್ದಾರೆ. ಆದ್ರೆ, ಆ ಆದೇಶವನ್ನು ಯಾರೂ ಪ್ರಶ್ನೆ ಮಾಡಿಲ್ಲ ಎಂದು ದೂರಿದ್ದಾರೆ.

ದರ್ಶನ್ ಕೇಸ್ ಅಂದ ಕೂಡಲೇ ಸರ್ಕಾರ ಮುತುವರ್ಜಿ ವಹಿಸೋದು ಯಾಕೆ..? ಎಂದು ವಕೀಲ ಸುನೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೈಲಿನ ಮ್ಯಾನ್ಯುಯಲ್ ಪ್ರಕಾರ ಊಟ ನೀಡಲು ಹೇಳಲಾಗಿದೆ ಎಂದು ಎಸ್‌ಪಿಪಿ ಪ್ರಸನ್ನಕುಮಾರ್ ತಿಳಿಸಿದ್ದಾರೆ. ಈಗಾಗಲೇ ಆಕ್ಷೇಪಣೆಯನ್ನ ಸೆಷನ್ಸ್ ಕೋರ್ಟ್‌ನಲ್ಲಿ ಮಾಡಲಾಗಿದೆ. ಆಗಿದ್ದರೂ ಮನೆ ಊಟ ನೀಡೋದು ಸೂಕ್ತ ಅಲ್ಲ ಎಂದಿದ್ದಾರೆ. ಎಲ್ಲಾ ದಾಖಲೆಗಳ ಸಲ್ಲಿಕೆ ನ್ಯಾಯಾಲಯ ಸೂಚಿಸಿದೆ. ಈ ಬಗ್ಗೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ ಅಲೋಕ್ ಕುಮಾರ್ ಮಾತನಾಡಿ, ಮನೆ ಊಟಕ್ಕೆ ಅವಕಾಶ ನೀಡದೆ ಇರುವುದು ಉತ್ತಮ ಎಂದಿದ್ದಾರೆ. ನಾವು ಜೈಲಿನಲ್ಲಿ ಒಳ್ಳೆಯ ಊಟ ನೀಡುತ್ತಿದ್ದೇವೆ. ಹೀಗಾಗಿ ಮನೆಯಿಂದ ತರುವ ಊಟ ನೀಡಲು ನಾವು ಅವಕಾಶ ನೀಡುವುದಿಲ್ಲ. ಕಾರಾಗೃಹದಲ್ಲಿ ತಯಾರಿಸುವ ಊಟದ ಗುಣಮಟ್ಟವನ್ನುFSLಗೆ ಕಳುಹಿಸಿ ಪರೀಕ್ಷೆಯನ್ನೂ ಮಠಾಡಿಸಲಾಗಿದೆ ಎಂದಿದ್ದಾರೆ.

Related posts

ಕುರುಬ ಸಮುದಾಯದ ನೌಕರನ ಮೇಲೆ ಕೈ ಮಾಡಿದ ಸವಧಿ.. ಆಕ್ರೋಶ

Publicspot

Lectuer – Student Love: ಮನೆಯಲ್ಲಿ ಮದುವೆ ತಯಾರಿ.. ಮಗಳು ಪ್ರಾಧ್ಯಾಪಕನ ಜೊತೆ ಪರಾರಿ..

ಯಶವಂತಿ

ಸೌಜನ್ಯ ಪ್ರಕರಣದ ವಿಚಾರಣೆ ಪುನಾರಂಭ ಆಯ್ತಾ..? ಏನಿದು ನಿಗೂಢತೆ..?

Publicspot

ಬಿಕ್ಲು ಶಿವ ಕೊಲೆ ಕೇಸ್‌.. ಬಿಜೆಪಿ ಶಾಸಕ ಬೈರತಿ ಬಸವರಾಜು ಅರೆಸ್ಟ್‌

Publicspot

You Tuber Sameer house Raid: ಸಮೀರ್​ ಬಗ್ಗೆ ಮಟ್ಟಣ್ಣವರ್​ ಕೊಟ್ಟ ಸ್ಪಷ್ಟನೆ ಏನು..?

Publicspot

3 ಮಕ್ಕಳ ತಾಯಿ.. ಮದುವೆ ಆಗಲು ಒತ್ತಡ.. ಲಾಡ್ಜ್​ನಲ್ಲಿ ಅವನಲ್ಲ ಇವನು..

Publicspot