The Public Spot
ಅಪರಾಧ

ಶಿಡ್ಲಘಟ್ಟದ ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ರಾಜೀವ್‌ ಗೌಡನ ಜೊತೆ ಮತ್ತೊಬ್ಬ ಅರೆಸ್ಟ್‌

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡರ ಜೊತೆಗೆ ಬಾಯಿಗೆ ಬಂದಂತೆ ಮಾತಾಡಿದ್ದ ಕಾಂಗ್ರೆಸ್‌ ನಾಯಕ ರಾಜೀವ್ ಗೌಡ ಕೊನೆಗೂ ಸಿಕ್ಕಿಬಿದ್ದಿದ್ದಾನೆ.. ಚಪ್ಪಲಿಯಲ್ಲಿ ಹೊಡೆಸ್ತೀನಿ.. ಜನರನ್ನ ನುಗ್ಗಿಸ್ತೀನಿ ಅಂತ ಧಮ್ಕಿ ಹಾಕಿದ್ದ ರಾಜೀವ್ ಗೌಡನ ಕೈಗೆ ಕೋಳ ಹಾಕಲಾಗಿದೆ.. ಹೈಕೋರ್ಟ್‌ನಲ್ಲಿ FIR ರದ್ದು ಕೋರಿದ್ದ ಅರ್ಜಿ ವಜಾ ಆಗಿತ್ತು. ಆ ಬಳಿಕ ಚಿಂತಾಮಣಿ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯೂ ವಜಾ ಆಗಿತ್ತು. ಇದೀಗ ಅನಿವಾರ್ಯ ಪರಿಸ್ಥಿತಿಯಲ್ಲಿ ಯಾರ ಕೈಗೂ ಸಿಗದೇ ತಲೆಮರೆಸಿಕೊಂಡಿದ್ದ ರಾಜೀವ್‌ ಗೌಡನನ್ನು 13 ದಿನದ ಬಳಿಕ ಚಿಕ್ಕಬಳ್ಳಾಪುರ ಪೊಲೀಸರು ಕೇರಳದ ಗಡಿಯಲ್ಲಿ ಅರೆಸ್ಟ್‌ ಮಾಡಿದ್ದಾರೆ..

ಜನವರಿ 12ರಂದು ಪೌರಾಯುಕ್ತೆ ಅಮೃತ ಗೌಡಗೆ ಧಮ್ಕಿ ಹಾಕಿದ್ದ ರಾಜೀವ್‌ ಗೌಡನ ಆಡಿಯೋ ಜನವರಿ 14ರಂದು ವೈರಲ್‌ ಆಗಿತ್ತು. ಆಡಳಿತ ಪಕ್ಷ ಕಾಂಗ್ರೆಸ್‌‌‌ನಲ್ಲಿದ್ದೀನಿ ಅನ್ನೋ ಧಿಮಾಕಿನಲ್ಲಿ ಏನ್‌ ಮಾಡಿದ್ರೂ ನಡೆಯುತ್ತೆ ಅಂತ ರಾಜೀವ್‌ಗೌಡ ಮಾತಿನಲ್ಲೇ ಕುಸ್ತಿ ಮಾಡ್ತಿದ್ದ. ಆ ಬಳಿಕ ಪೌರಾಯುಕ್ತೆ ಅಮೃತಾಗೌಡ, ಶಿಢ್ಲಘಟ್ಟ ಜೆಡಿಎಸ್‌ ಶಾಸಕರೂ ದೂರು ಕೊಟ್ಟಿದ್ರು. ಮಾಧ್ಯಮಗಳಲ್ಲಿ ರಾಜೀವ ಗೌಡನ ಬಗ್ಗೆ ಭಾರೀ ಸುದ್ದು ಮಾಡಿತ್ತು. ಇಷ್ಟೆಲ್ಲಾ ಆದ್ಮೇಲೆ ಕಾಂಗ್ರೆಸ್‌‌ನಿಂದಲೂ ಅಮಾನತುಗೊಂಡಿದ್ದ.. ಕೆಳಹಂತದ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನಿಗಾಗಿ ರಾಜೀವ್ ಗೌಡ ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾ ಬಳಿಕ ಕೇರಳದ ಗಡಿಭಾಗದಲ್ಲಿ ಬಂಧಿಸಲಾಗಿದೆ.

ಮಂಗಳೂರಿನಲ್ಲಿ ರಾಜೀವ್‌ಗೌಡನಿಗೆ ಉದ್ಯಮಿಯೊಬ್ಬರು ಆಶ್ರಯ ಕೊಟ್ಟಿದ್ರ ಅನ್ನದು ಗೊತ್ತಾಗಿದೆ. ಉದ್ಯಮಿಗೂ ಕಂಟಕ ಆಗುತ್ತೆ ಅಂತ ಗೊತ್ತಾಗ್ತಿದ್ದಂತೆ ರಾಜೀವ್‌ ಗೌಡ ಜಾಗ ಖಾಲಿ ಮಾಡಿದ್ದ. ಮಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಸಂಬಂಧಿಕರೊಬ್ಬರ ಕಾರಿನಲ್ಲಿ ಡ್ರಾಪ್‌ ಹಾಕಿಸಿಕೊಂಡು, ಕೇರಳದ ರೈಲು ಹತ್ತಿದ್ದ. ಫೋನ್‌ ನಂಬರ್‌ ಬದಲಿಸಿಕೊಂಡು, ವೇಷ ಬದಲಿಸಿಕೊಂಡು ಕೇರಳಕ್ಕೆ ಓಡಿಹೋಗ್ತಿದ್ದ. ಆದ್ರೆ ಅಷ್ಟರಲ್ಲಿ ರಾಜೀವ್ ಗೌಡನನ್ನ ಜಿಪಿಎಸ್‌ ಮೂಲಕ ಪೊಲೀಸರು ಟ್ರ್ಯಾಕ್‌ ಮಾಡಿ ಬಂಧಿಸಿದ್ದಾರೆ. ಮಂಗಳೂರು ರೈಲು ನಿಲ್ದಾಣಕ್ಕೆ ರಾಜೀವ್ ಗೌಡ ಎಂಜಿ ಹೆಕ್ಟೇರ್‌‌ ಕಾರಿನಲ್ಲಿ ಬಂದಿದ್ದ. ಕಾರ್‌ನ ಜಿಪಿಎಸ್ ಆಧರಿಸಿ ಶೋಧ ನಡೆಸಿದ್ದ ಪೊಲೀಸರು ಮಂಗಳೂರು ಪೊಲೀಸರ ಸಹಾಯ ಪಡೆದು ರಾಜೀವ್‌ನನ್ನ ಕೇರಳದ ಗಡಿಯಲ್ಲಿ ಅರೆಸ್ಟ್‌ ಮಾಡಿದ್ದಾರೆ.

ರಾಜೀವ್‌‌ ಗೌಡನ ಮೇಲೆ 16 ಕ್ರಿಮಿನಲ್‌ ಪ್ರಕರಣಗಳು ಇದ್ದು, 16 ಬೆದರಿಕೆ ಪ್ರಕರಣ, ಹಲ್ಲೆ, ಕಾನೂನು ಬಾಹಿರ ಕೇಸ್‌ಗಳಿವೆ. 100ಕ್ಕೂ ಹೆಚ್ಚು ಭೂವ್ಯಾಜ್ಯಗಳಲ್ಲಿ ರಾಜೀವ್ ಗೌಡ‌‌ ವಾಟೆಂಡ್‌ ಲಸ್ಟ್‌‌ನಲ್ಲಿದ್ದಾನೆ. ರಾಜೀವ್ ಗೌಡನ ಬಂಧನ ಆಗ್ತಿದ್ದಂತೆ ಹಳೇ ಕೇಸ್‌ಗಳಿಗೆ ಜೀವ ಬಂದಿದೆ. ಹಣ ಕೊಟ್ಟವರು, ಭೂಮಿ ಕಳ್ಕೊಂಡವರ ದೂರಿಗೂ ಮರುಜೀವ ಬಂದಿದೆ ಎಂದು ಚಿಕ್ಕಬಳ್ಳಾಪುರ ಪೊಲೀಸ್‌ ವರಿಷ್ಟಾಧಿಕಾರಿ ಮಾಹಿತಿ ನೀಡಿದ್ದಾರೆ. ರಾಜೀವ್ ಗೌಡನನ್ನು ಅರೆಸ್ಟ್ ಮಾಡಿರುವ ಶಿಡ್ಲಘಟ್ಟ ಪೊಲೀಸರು, ಕೇರಳದಿಂದ ನೇರವಾಗಿ ಚಿಕ್ಕಬಳ್ಳಾಪುರಕ್ಕೆ ಕರೆತರಲಾಗಿದೆ. ವಿಚಾರಣೆ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ಕೋರ್ಟ್‌ಗೆ ಹಾಜರು ಮಾಡಲಿದ್ದಾರೆ. ರಾಜೀವ್ ಗೌಡನಿಗೆ ಆಶ್ರಯ ನೀಡಿದ್ದ ಮೈಕಲ್ ಎಂಬಾತನನ್ನೂ ಪೊಲೀಸರು ಬಂಧನ ಮಾಡಿದ್ದು, ಕಾನೂನು ಪ್ರಕ್ರಿಯೆಗೆ ಒಳಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯಿದೆ.

Related posts

ಪ್ರೀತಿಯಲ್ಲಿ ಮುಳುಗಿದ್ದವಳು ಮದುವೆ ಆಗಿ ಮಾಡಿದ ಎಡವಟ್ಟು.. ಎರಡು ಸಾವು

Publicspot

Darshan And Pavitra Gowda Tension: ದರ್ಶನ್​ ಪಾಲಿಗೆ ಮಂಗಳವಾರ ಶುಭವೋ..? ಅಶುಭವೋ..?

Publicspot

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ದಿನಕ್ಕೊಂದು ಎಡವಟ್ಟು.. ನಿನ್ನೆ ಒಂದು.. ಇವತ್ತು ಒಂದು..

Publicspot

RAMYA REACTION: ನಟ ದರ್ಶನ್​ ಜೈಲಿಗೆ ಹೋಗಿದ್ದಕ್ಕೆ ರಮ್ಯಾ ಬೇಸರ.. ಟ್ರೋಲರ್ಸ್​ ಭೀತಿನಾ..?

Publicspot

SIT ತನಿಖೆ NIAಗೆ ವರ್ಗಾವಣೆ ಆಗುತ್ತಾ..? ಏನಿದು BJP ಆಗ್ರಹ..?

Publicspot

ಒಂದು ಕೋಟಿ ಕದ್ದವರು ಒಂದು ವರ್ಷದ ಬಳಿಕ ಅರೆಸ್ಟ್​..! ಭಲೇ ಖಾಕಿ

Publicspot