The Public Spot
ರಾಜಕೀಯ

ಕಾಂಗ್ರೆಸ್‌ ನಾಯಕತ್ವ ಬಿಕ್ಕಟ್ಟು ನಡುವೆ ಸಾವಿರ ದಿನದ ಸಂಭ್ರಮ!

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಇಂದು ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬೃಹತ್ ಸಮಾವೇಶದ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಸಚಿವರು, ಶಾಸಕರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕಂದಾಯ ಇಲಾಖೆಯಿಂದ 1 ಲಕ್ಷದ 10 ಸಾವಿರ ಫಲಾನುಭವಿಗಳಿಗೆ ಸಮಾವೇಶದಲ್ಲಿ ಹಕ್ಕುಪತ್ರ ನೀಡಲಾಗುತ್ತದೆ. 70 ಸಾವಿರ ಜನರಿಗೆ ಸಮಾವೇಶದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. 1 ಲಕ್ಷದ 50 ಸಾವಿರ ಜನರಿಗೆ ಊಟ, ಲಡ್ಡು ವಿತರಣೆ ಮಾಡಲಾಗ್ತಿದ್ದು, 120 ಕೌಂಟರ್‌ನಲ್ಲಿ ಊಟ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.

ಕಾಂಗ್ರೆಸ್‌ ಸರ್ಕಾರದ ಸಾವಿರ ದಿನದ ಸಂಭ್ರಮದ ಸಮಾವೇಶಕ್ಕೆ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಭದ್ರತೆಗೆ ಐದಕ್ಕೂ ಹೆಚ್ಚು ಜಿಲ್ಲೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹಾವೇರಿ ಜಿಲ್ಲಾ ಪೊಲೀಸರ ಜೊತೆಗೆ ಶಿವಮೊಗ್ಗ, ಚಿತ್ರದುರ್ಗ, ಮಂಗಳೂರು, ಬೆಂಗಳೂರು, ಬೆಳಗಾವಿ ಜಿಲ್ಲೆ ಪೊಲೀಸರನ್ನು ನಿಯೋಜನ ಮಾಡಲಾಗಿದೆ. ಸುಮಾರು 3 ಸಾವಿರ ಸಿಬ್ಬಂದಿಯನ್ನ ಬಂದೋಬಸ್ತ್‌ಗಾಗಿ ನಿಯೋಜನೆ ಮಾಡಲಾಗಿದೆ. ಇಬ್ಬರೂ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಲಾಗಿದೆ. ಆರು ಜನ ಅಡಿಷನ್ ಎಸ್‌ಪ;ಇ, 21 ಜನ DySP ನಿಯೋಜನೆ ಮಾಡಲಾಗಿದೆ. 72 ಜನ CPI ಸೇರಿದಂತೆ 162 ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ನಿಯೋಜನೆ ಮಾಡಲಾಗಿದೆ. 220 ASI ಸೇರಿದಂತೆ 1,616 ಜನ ಪೊಲೀಸ್ ಕಾನ್ಸಟೇಬಲ್, 170 ಜನ WPC ,13 ಡಿ.ಆರ್ ವಾಹನ, 12 KSRP ತುಕುಡಿ, 12 ಬಾಂಬ್ ನಿಷ್ಕ್ರಿಯ ತಂಡ & 3 ಕ್ಯೂಅರ್‌ಟಿ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ 50 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಅಳವಡಿಸಲಾಗಿದೆ.

ರಾಜ್ಯ ಕಾಂಗ್ರೆಸ್ ಸರಕಾರದ ಸಾಧನ ಸಮಾವೇಶವನ್ನು ಭೂ ಗ್ಯಾರಂಟಿ ಸಮರ್ಪಣಾ ಹೆಸರಿನಲ್ಲಿ ಸರ್ಕಾರದ ಸಾಧನ ಸಮಾವೇಶ ನಡೆಯುತ್ತಿದ್ದು, ಬರೋಬ್ಬರಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರಗಳ ವಿತರಣೆ ಮಾಡಲಾಗ್ತಿದೆ. ಬೆಳಗ್ಗೆ 11.30ಕ್ಕೆ ಅಜ್ಜಯ್ಯನ ಗುಡಿ ಪ್ರದೇಶದಲ್ಲಿ ಸಮಾವೇಶ ಆರಂಭ ಆಗಲಿದೆ. ಸುಮಾರು 100 ಎಕರೆ ಪ್ರದೇಶದಲ್ಲಿ ಬೃಹತ್ ಸಮಾವೇಶಕ್ಕೆ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ. ವಿಶೇಷ ಹೆಲಿಕಾಪ್ಟರ್ ಮೂಲಕ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ಮೆಡಿಕಲ್ ಕಾಲೇಜ್ ಆವರಣದಲ್ಲಿ ಸಿಎಂ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಹಂಪಿ ಉತ್ಸವಕ್ಕೆ ಹೋಗಿದ್ದ ಸಿಎಂ ಸಿದ್ದರಾಮಯ್ಯ ನೇರವಾಗಿ ಹಾವೇರಿಗೆ ಆಗಮಿಸಲಿದ್ದಾರೆ. ಸಮಾವೇಶದ ವೀಕ್ಷಣೆಗೆ 21 ಕ್ಕೂ ಹೆಚ್ಚು LED ವಾಲ್ ವ್ಯವಸ್ಥೆ ಮಾಡಲಾಗಿದೆ. ಸುಮಾರು 7 ಜಿಲ್ಲೆಗಳಿಂದ ಸಾಧನ ಸಮಾವೇಶಕ್ಕೆ ಜನರು ಆಗಮಿಸಲಿದ್ದಾರೆ.

ಹಾವೇರಿ ಡಿಪೋದಿಂದ 180 ಕ್ಕೂ ಹೆಚ್ಚು KSRTC ಬಸ್‌ಗಳನ್ನು ಕಾರ್ಯಕರ್ತನ್ನು ಕರೆತರಲು ಬಳಕೆಮಾಡಿಕೊಳ್ಳಲಾಗ್ತಿದೆ. ಅದೇ ರೀತಿ 7 ಜಿಲ್ಲೆಗಳಿಂದಲೂ ಕಾರ್ಯಕರ್ತರನ್ನು ಕರೆತರಲು ಬಸ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಇವತ್ತು ಬಸ್‌ ಸಂಚಾರದಲ್ಲಿ ವ್ಯತ್ಯಯ ಆಗೋದು ನಿಶ್ಚಿತ. ದೂರದ ಊರುಗಳಿಗೆ ಪ್ಲಾನ್‌ ಮಾಡಿಕೊಂಡಿದ್ದರೆ ಉತ್ತರ ಕರ್ನಾಟಕದ್ ಜನರು ವಿಚಾರ ಮಾಡುವುದು ಒಳಿತು. ಇಲ್ಲದಿದ್ದರೆ ಮಾರ್ಗ ಮಧ್ಯದಲ್ಲಿ ಬಸ್‌ಗಳು ಬಾರದೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ. ಇನ್ನು ನಾಯಕತ್ವ ಬಿಕ್ಕಟ್ಟಿನ ನಡುವೆ ಹಾವೇರಿಯಲ್ಲಿ ಸಾವಿರ ದಿನಗಳ ಸಂಭ್ರಮ ನಡೆಯುತ್ತಿದ್ದು, ಯಾರೆಲ್ಲಾ ಭಾಗಿಯಾಗಲಿದ್ದಾರೆ..? ಅನ್ನೋ ಕುತೂಹಲ ಕಾಡುತ್ತಿದೆ. ನಿನ್ನೆ ನಡೆದ ಹಂಪಿ ಉತ್ಸವದಲ್ಲಿ ಸ್ವತಃ ಡಿಸಿಎಂ ಡಿ.ಕೆ ಶಿವಕುಮಾರ್‌ ಗೈರಾಗುವ ಮೂಲಕ ಸಿಎಂ ಜೊತೆಗೆ ಅಂತರ ಕಾಯ್ದುಕೊಳ್ಳುವ ಮೂಲಕ ಬಿಕ್ಕಟ್ಟಿಗೆ ಪುಷ್ಟಿ ನೀಡಿದ್ದರು.

Related posts

Cabinet List; ಸಂಪುಟ ಪುನಾರಚನೆ ಚರ್ಚೆ.. ದೆಹಲಿಯಲ್ಲಿ ಸಿಎಂ ಕಸರತ್ತು.. ಯಾರು ಔಟ್‌..? ಯಾರು ಇನ್..?

Publicspot

ಕಾಂಗ್ರೆಸ್​ನಲ್ಲಿ ಡಿನ್ನರ್​ ಪಾಲಿ‘ಟ್ರಿಕ್ಸ್​’ ಡಿಕೆಶಿ ಉದ್ದೇಶ ಏನು..? ಸಿಎಂ ಆಗ್ತಾರಾ..?

Publicspot

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿ

admin

ಮಣಿಪಾಲ್​ ಆಸ್ಪತ್ರೆಯಲ್ಲಿ ದೇವೇಗೌಡರನ್ನು ಭೇಟಿಯಾದ ಜಮೀರ್.. ಸ್ಪಷ್ಟನೆ..

Publicspot

ತ್ರಿಭಾಷಾ ಸೂತ್ರ ವಿಚಾರದಲ್ಲಿ ಕಾಂಗ್ರೆಸ್‌ ನಿಲುವು ಏನು..? ಹಿಂದಿ ಬೇಡ.. ಉರ್ದು ಬೇಕಾ..?

Publicspot

ಚುನಾವಣೆಗೆ ಸಜ್ಜಾಗ್ತಿದ್ಯಾ JDS..? ಇವತ್ತಿನ ಸಮಾವೇಶದ ಉದ್ದೇಶ ಏನು..?

Publicspot