September 30, 2026
The Public Spot
ಸಿನಿಮಾ

ಚಿತ್ರಕಥೆ ಕಳವು ಮಾಡಿದ್ರಾ ಡಾರ್ಲಿಂಗ್ ಕೃಷ್ಣ..? ಲವ್‌ ಮಾಕ್ಟೇಲ್‌ 3 ಚಿತ್ರಕಥೆ ಯಾರದ್ದು..?

ಯುಗಾದಿ ಹಬ್ಬದ ದಿನ ಲವ್ ಮಾಕ್ಟೇಲ್ 3 ರಿಲೀಸ್ ಆಗಿತ್ತು. ತಂದೆ ಮಗಳ ಬಾಂಧವ್ಯದ ಸೊಗಸಾದ ಕಥೆಯನ್ನು ಕಂಡ ಕನ್ನಡ ಸಿನಿ ರಸಿಕರು ಅಬ್ಬರದ ಪ್ರಚಾರ ಇಲ್ಲದಿದ್ದರೂ ಆಲಂಗಿಸಿದ್ದರು. ಲವ್ ಮಾಕ್ಟೇಲ್ ಸೀರಿಸ್‌ನ 3 ಚಿತ್ರದ ಗೆಲುವಿನ ಖುಷಿಯಲ್ಲಿ ಡಾರ್ಲಿಂಗ್ ಕೃಷ್ಣ ದಂಪತಿ ಇದ್ದರು. ಈ ನಡುವೆ ಸ್ಯಾಂಡಲ್ ವುಡ್ ನಿರ್ದೇಶಕ ರಾಘವೇಂದ್ರ ಫೇಸ್‌ಬುಕ್‌ನಲ್ಲಿ ಕೊಟ್ಟ ತಿರುವು ಆಘಾತ ನೀಡಿತ್ತು. ಡಾರ್ಲಿಂಗ್‌ ಕೃಷ್ಣ ಮಾಡಿರುವ ಲವ್ ಮಾಕ್ಟೇಲ್ 3ನೇ ಚಿತ್ರದ ಸೆಕೆಂಡ್ ಹಾಫ್ ನನ್ನದೇ ಕಥೆ ಅಂತ ಬರೆದುಕೊಂಡಿದ್ದಾರೆ.

ಮಾರಿಗೋಲ್ಡ್ ಚಿತ್ರದ ನಿರ್ದೇಶಕ ರಾಘವೇಂದ್ರ ನೇರವಾಗಿ ಫೇಸ್‌ಬುಕ್‌ನಲ್ಲಿ ಬರೆದಿದ್ದು, ನಾನು ಒಂದು ಚಿತ್ರಕಥೆಯನ್ನ ರೆಡಿ ಮಾಡಿಕೊಂಡು ನಟ, ನಿರ್ದೇಶಕ ಆಗಿರುವವರಿಗೆ ಚಿತ್ರಕಥೆಯನ್ನು ಹೇಳಿದ್ದೆ. ಇದೀಗ ಅದೇ ಕಥೆಯ ಒಂದು ಚಿತ್ರ ಬಿಡುಗಡೆ ಆಗಿದ್ದು, ಸಿನಿಮಾದ ದ್ವಿತಿಯಾರ್ಧ ಸಂಪೂರ್ಣವಾಗಿ ನನ್ನ ಕಥೆಯನ್ನೇ ಅವಲಂಬಿಸಿದೆ. ಇನ್ಮುಂದೆ ಯಾರಾದರೂ ಚಿತ್ರ ಕಥೆ ಬರೆದಾಗ ಅದನ್ನ ಸ್ಕ್ರೀನ್‌ ರೈಟರ್‌ ಅಸೋಷಿಯೇನ್‌ನಲ್ಲಿ ನೋಂದಣಿ ಮಾಡಿಕೊಳ್ಳಿ. ಚಿತ್ರಕಥೆಯನ್ನು ಯಾರಿಗಾದರೂ ಹೇಳುವಾಗ ಅದನ್ನು ರೆಕಾರ್ಡ್‌ ಮಾಡಿಕೊಳ್ಳಿ. ಆ ರೆಕಾರ್ಡ್‌ ಮಾಡಿದ್ದನ್ನು ಇ-ಮೇಲ್‌ ಮಾಡಿಕೊಂಡು ಸಾಕ್ಷಿಯಾಗಿ ಇಟ್ಕೊಳಿ ಎಂದಿದ್ದಾರೆ. ಪರೋಕ್ಷವಾಗಿ ರಾಘವೇಂದ್ರ ಅವರ ಬೆರಳು, ಡಾರ್ಲಿಂಗ್‌ ಕೃಷ್ಣನ ಕಡೆಗೆ ತೋರಿಸಿತ್ತು.

ಮಾಧ್ಯಮಗಳ ಮುಂದೆ ಬಂದ ಡಾರ್ಲಿಂಗ್‌ ಕೃಷ್ಣ ದಂಪತಿ, ಮೂರನೇ ಮಾಕ್ಟೇಲ್ ಕತೆಯೂ ನಮ್ಮದು, ಅದರ ಗೆಲುವು ನಮ್ಮದೆ.. ಕಥೆಯನ್ನು ಕದ್ದು ಸಿನಿಮಾ ಮಾಡೋ ಅವಶ್ಯಕತೆ ನಮಗಿಲ್ಲ ಎಂದಿದ್ದಾರೆ. ಕಳೆದ 15 ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದೇವೆ. ಈ ರೀತಿ ಯಾವತ್ತು ಆಗಿರಲಿಲ್ಲ. ನನ್ನ ಕರಿಯರ್‌ನ ಅತಿ ದೊಡ್ಡ ಹಿಟ್ ಲವ್ ಮಾಕ್‌ಟೈಲ್ 3. ಆದರೆ ರಾಘವೇಂದ್ರ ನಾಯಕ್ ಹೇಳಿರೋದು ನಿಜ. ನಾನು ಸೇಮ್ ಕಾನ್ಸೆಪ್ಟ್ ಸಿನಿಮಾ ಮಾಡಿದ್ದೀನಿ. ಕ್ಲೈಮಾಕ್ಸ್‌ನಲ್ಲಿ ಆದಿ ಹೆಣ್ಣು ಮಗುನ ದತ್ತು ತೆಗೆದುಕೊಳ್ತಾನೆ. ಸಿಂಗಲ್ ಪೇರೆಂಟ್ ಹೆಣ್ಣು ಮಗುವನ್ನು ದತ್ತು ತಗೋಳೋಕೆ ಆಗಲ್ಲ ಅನ್ನೋದೇ ನನ್ನ ಸಿನಿಮಾ ಕಾನ್ಸೆಪ್ಟ್. ಸ್ಕ್ರೀನ್ ಪ್ಲೇ.. ಡೈಲಾಗ್ಸ್.. ಸೀನ್ಸ್ ಯಾವ್ದು ನಿಂದಲ್ಲ, ಮತ್ತೆ ಯಾಕಯ್ಯ ಬಂದಿದ್ದೀಯಾ..? ಎಂದು ಪ್ರಶ್ನಿಸಿದ್ದಾರೆ.

ಕಥೆಯನ್ನು ಕದ್ದ ಅರೋಪ ಮಾಡ್ತಿರುವ ರಾಘವೇಂದ್ರ ನಾಯಕ್ ಹಾಗು ಗುರುದೇಶ ಪಾಂಡೆ ಮೇಲೆ ಲೀಗಲ್ ಆಗಿ ಕೇಸ್ ಹಾಕ್ತಿನಿ.. ಕಾಂಪ್ರಮೈಸ್ ಆಗಲ್ಲ ಎಂದಿದ್ದಾರೆ. ಲವ್ ಮಾಕ್‌ಟೈಲ್ ಕಥೆ ಬರೆಯೋಕೆ 4 ವರ್ಷ ತಗೊಂಡಿದ್ದೀನಿ. ರಾಘವೇಂದ್ರ 2-3 ನಿಮಿಷದಲ್ಲಿ ಕಥೆ ಹೇಳಿದ್ರು. ನಾನು ವರ್ಷಕ್ಕೆ ಇದೇ ರೀತಿ 150 ಕಥೆ ಕೇಳ್ತೀನಿ ಎಂದಿದ್ದಾರೆ. ರಾಘವೇಂದ್ರ ನಾಯಕ್ ಅರೋಪದಲ್ಲಿ ಹುರುಳಿಲ್ಲ. ರಾಘವೇಂದ್ರ ನಾಯಕ್ ಫೇಸ್ ಬುಕ್‌ನಲ್ಲಿ ಪೋಸ್ಟ್ ಹಾಕಿದ ನಂತರ, ನಮ್ಮ ಸಂಪರ್ಕಕ್ಕೆ ಸಿಕ್ತಿಲ್ಲ. ಅನೇಕ ಬಾರಿ ಫೋನಿಗೆ ಪ್ರಯತ್ನಿಸಿದ್ದೇನೆ. ನಮ್ಮ PRO 50 ಮೆಸೇಜ್ ಹಾಕಿದ್ದಾರೆ. ಅವರು ಎಲ್ಲಿದ್ದಾರೆ ನಮಗೆ ಗೊತ್ತಿಲ್ಲ. ಕಥೆ ಕದ್ದು ಸಿನಿಮಾ ಮಾಡಿದ್ರೆ ನಾನು ಸಿನಿಮಾ ರಂಗವನ್ನೇ ಬಿಡ್ತೀನಿ ಎಂದಿದ್ದಾರೆ.

Related posts

ಒಡೆಯ ಚಿತ್ರದಲ್ಲಿ ದರ್ಶನ್​ ತಮ್ಮನಾಗಿದ್ದ ನಿರಂಜನ್​ ಮೇಲೆ ಹಲ್ಲೆ..!

Publicspot

ಬಾಲಿವುಡ್‌ ನಟ ರಣವೀರ್‌ ಸಿಂಗ್‌ಗೆ ಬಂಧನದಿಂದ ಸಿಗುತ್ತಾ ರಿಲೀಫ್‌..!?

Publicspot

Actors Harish Roy Finale ceremony; ಹುಟ್ಟೂರಲ್ಲಿ ಇವತ್ತು ಹರೀಶ್​ ರಾಯ್ ದೇಹಕ್ಕೆ ಅಗ್ನಿ ಸ್ಪರ್ಶ..​

Publicspot

ದರ್ಶನ್​ ಬೆನ್ನು ನೋವಿಗೆ ಆಪರೇಷನ್ ಮಾಡಿಸಲಿಲ್ಲ ಯಾಕೆ..?

Publicspot

ಕಿರಿಕ್‌ ಹುಡುಗಿಗೆ ಇಂದು ಕಲ್ಯಾಣ.. ಈಗಲಾದ್ರೂ ಸಂಸಾರ ಸರಿಯಾಗಲಿ..

Publicspot

ಅರೆ ನಗ್ನ ಸ್ಥಿತಿಯಲ್ಲಿ ನಟಿಯ ಫೋಟೋ.. ರುಕ್ಮಿಣಿ ವಸಂತ್‌ ಹೇಳಿದ್ದೇನು..?

Publicspot