The Public Spot
ಅಪರಾಧ

ದರ್ಶನ್ ಪಾಲಿಗೆ ಕಠಿಣ ಆಗ್ತಿದೆ ಉರುಳು.. ಮಾಫಿ ಸಾಕ್ಷಿ ಬಿಚ್ಚಿಡೋ ಸತ್ಯವೇನು..?

ಚಾಲೆಂಜಿಂಗ್​ ಸ್ಟಾರ್​ ದರ್ಶನ್‌ ಪಾಲಿಗೆ ಅಕ್ಷರಶಃ ಕಠಿಣ ದಿನಗಳು ಎದುರಾಗುತ್ತಿವೆ ದರ್ಶನ್‌ ಪಾಲಿಗೆ ಎಲ್ಲರೂ ದೂರ ಆಗ್ತಿದ್ದಾರೆ. ದರ್ಶನ್‌ ಜೊತೆಗಿದ್ದುಕೊಂಡು ಬಾಸ್‌ ಬಾಸ್‌ ಅಂತಿದ್ದವರೇ ಉರುಳಿನ ಹಗ್ಗ ವಸೆಯಲು ಶುರು ಮಾಡಿದ್ದಾರೆ ಅನ್ನೋದು ಆಘಾತಕಾರಿ ವಿಚಾರ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌‌ ಪಾಲಿಗೆ ಮತ್ತೊಬ್ಬ ಆರೋಪಿ ಪ್ರದೂಷ್ ಕಂಟಕ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದ ಪ್ರದೂಷ್​ ವಾದವನ್ನು ಕೋರ್ಟ್​ ಇನ್ನೂ ಒಪ್ಪಿಕೊಂಡಿಲ್ಲ. ಆದರೆ ಮಾಫಿ ಸಾಕ್ಷಿ ಅರ್ಜಿಯ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಅಂತಾ ಆದೇಶ ನೀಡಲಾಗಿದೆ. ಇದು ದರ್ಶನ್​ ಪಾಲಿಗೆ ಸಂಕಷ್ಟದ ಮುನ್ಸೂಚನೆ ಎನ್ನುವಂತಾಗಿದೆ.

ರೇಣುಕಾಸ್ವಾಮಿ ಕೊಲೆ ನಡೆದ ದಿನ ನಟ ದರ್ಶನ್‌ ಜೊತೆಗಿದ್ದ ಪ್ರದೂಷ್​ಗೆ ಎಲ್ಲಾ ವಿಚಾರವೂ ತಿಳಿದಿತ್ತು. ಅದೇ ಕಾರಣಕ್ಕೆ ಪೊಲೀಸರು ಪ್ರದೂಷ್​ನನ್ನು ಅರೆಸ್ಟ್​ ಮಾಡಿದ್ದರು. ಇದೀಗ ಪ್ರದೂಷ್​ ನಟ ದರ್ಶನ್‌ ಪಾಲಿಗೆ ಕಂಟಕವಾಗುವ ಎಲ್ಲಾ ಸಾಧ್ಯತೆಗಳಿವೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದ ದರ್ಶನ್‌‌, ಹಿಂದಿನ ಚೇರ್‌ನಲ್ಲಿ ಒಬ್ಬಂಟಿಯಾಗಿ ಕುಳಿತು, ಪ್ರದೂಷ್‌ ಅರ್ಜಿ ವಿಚಾರಣೆಯನ್ನು ವೀಕ್ಷಿಸಿದ್ರು. ಮಾಫಿ ಸಾಕ್ಷಿ ಆಕ್ಷೇಪಣಾ ವಿಚಾರಣೆ ನಡೆಸಿದ ಕೋರ್ಟ್​ ನಟ ದರ್ಶನ್‌ ಪಾಲಿಗೆ ಬಿಗ್‌ ಶಾಕ್‌‌ ಕೊಟ್ಟಂತಾಗಿದೆ.

ಪ್ರದೂಷ್‌ ಮಾಫಿ ಸಾಕ್ಷಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವುದು ಸರಿಯಲ್ಲ ಎಂದಿರುವ ಕೋರ್ಟ್​, ದರ್ಶನ್ ಸೇರಿ ಬೇರೆ ಯಾವ ಆರೋಪಿಗಳೂ ಆಕ್ಷೇಪಣೆ ಸಲ್ಲಿಸುವಂತಿಲ್ಲ ಎಂದಿದೆ. ಆಕ್ಷೇಪಣೆ ಅರ್ಜಿ ಸಲ್ಲಿಕೆ ಜೊತೆಗೆ ವಾದಕ್ಕೆ ಸಜ್ಜಾಗಿದ್ದ ದರ್ಶನ್​ ಪರ ವಕೀಲ ಹಶ್ಮತ್​ ಪಾಷಾಗೆ ಕೋರ್ಟ್‌‌ನಲ್ಲಿ ಹಿನ್ನಡೆ ಆಗಿದೆ. ದರ್ಶನ್ ಪರ ವಕೀಲರ ಆಕ್ಷೇಪಣೆ ವಾದವನ್ನು ಕೋರ್ಟ್‌ ತಿರಸ್ಕರಿಸಿದ್ದು, ಪ್ರದೂಷ್‌ ಮಾಫಿ ಸಾಕ್ಷಿ ಅರ್ಜಿ ಪರಿಗಣನೆ ಮಾಡುವ ಬಗ್ಗೆ ಪ್ರತ್ಯೇಕ ಆದೇಶ ನೀಡಲಿದೆ. ಇತರೆ ಆರೋಪಿಗಳ ಆಕ್ಷೇಪಣೆ ಅರ್ಜಿಗಳ ಬಗ್ಗೆಯೂ ಪ್ರತ್ಯೇಕ ವಿಚಾರಣೆ ಮಾಡಿ ತೀರ್ಪು ನೀಡಲಿದೆ.

ಜೂನ್​ 8, 2024ರಂದು ದರ್ಶನ್ ಮನೆಗೆ ಪ್ರದೂಷ್ ಭೇಟಿ ನೀಡಿದ್ದು, ದರ್ಶನ್ ಜೊತೆಯಲ್ಲೇ ಸ್ಟೋನಿ ಬ್ರೂಕ್ಸ್‌ಗೆ ಪ್ರದೂಷ್ ಬಂದಿದ್ದು, ಫೋನ್‌ನಲ್ಲಿ ದರ್ಶನ್‌ಗೆ ಏನೋ ತೋರಿಸಿದ್ದು, ಸ್ಟೋನಿ ಬ್ರೂಕ್ಸ್‌ನಿಂದ ಪವಿತ್ರಾ ಮನೆಗೆ ಹೋಗಿದ್ದು, ಸಂಜೆ ದರ್ಶನ್, ಪವಿತ್ರಾ ಒಂದೇ ಕಾರಿನಲ್ಲಿ ಶೆಡ್‌ಗೆ ತೆರಳಿದ್ದು, ಶೆಡ್‌ ಪ್ರವೇಶಿಸಿದಾಗ ವ್ಯಕ್ತಿಯೊಬ್ಬ ಅಲ್ಲಿ ಕುಳಿತಿದ್ದನು. ರೇಣುಕಾಸ್ವಾಮಿಯನ್ನ ನೋಡ್ತಿದ್ದಂತೆ ದರ್ಶನ್‌ ನಿಂದಿಸಿದ್ರು. ದರ್ಶನ್ ಸೂಚನೆಯಂತೆ ಪವಿತ್ರಾಗೌಡ ಚಪ್ಪಲಿಯಿಂದ ಹಲ್ಲೆ ಮಾಡಿದ್ರು. ದರ್ಶನ್ ಕೂಡ ನೈಲಾನ್ ಹಗ್ಗದಿಂದ ನಾಲ್ಕು ಬಾರಿ ಹೊಡೆದ್ರು. ರೇಣುಕಾಸ್ವಾಮಿ ಮೇಲೆ ದರ್ಶನ್ ಮಾರಣಾಂತಿಕ ಹಲ್ಲೆ ಮಾಡಿದ್ರು. ರೇಣುಕಾಸ್ವಾಮಿ ಸಂದೇಶಗಳನ್ನ ಪವನ್ ಓದುತ್ತಿದ್ದ. ಈ ಮೆಸೇಜ್‌ಗಳನ್ನ ಕೇಳುತ್ತಾ ಕೇಳುತ್ತಾ ದರ್ಶನ್ ಹಲ್ಲೆ ಮಾಡಿದ್ರು. ರೇಣುಕಾಸ್ವಾಮಿ ಖಾಸಗಿ ಅಂಗಕ್ಕೆ ದರ್ಶನ್ ಹಲವು ಬಾರಿ ಒದ್ದರು ಅನ್ನೋ ಕಂಪ್ಲೀಟ್​ ಚಿತ್ರಣವನ್ನು ಕೋರ್ಟ್​ ಎದುರು ಎಳೆಎಳೆಯಾಗಿ ಹೇಳಲಿದ್ದಾರೆ.

ರೇಣುಕಾಸ್ವಾಮಿ ಮೃತಪಟ್ಟ ಬಗ್ಗೆ ಪ್ರದೂಷ್‌ ದರ್ಶನ್‌ಗೆ ತಿಳಿಸಿದ್ರಂತೆ. ಈ ವೇಳೆ ನನಗೆ ಸಹಾಯ ಮಾಡುವಂತೆ ದರ್ಶನ್ ಕೇಳಿಕೊಂಡ್ರು. ಸಹಾಯ ಮಾಡಿಲ್ಲ ಅಂದ್ರೆ ಗನ್​ನಿಂದ ಶೂಟ್​ ಮಾಡಿಕೊಂಡು​ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ರು. ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ತೀನಿ ಅಂದ್ರು. ಹೀಗಾಗಿ ಇನ್ಸ್‌ಪೆಕ್ಟರ್ ವಿನಯ್‌ಗೆ ನಾನೇ ಕರೆ ಮಾಡಿದ್ದೆ. ಇನ್ಸ್‌ಪೆಕ್ಟರ್ ಸೂಚನೆಯಂತೆ ಮೂವರು ಆರೋಪಿಗಳ ಶರಣಾಗತಿಗೂ ಪ್ಲ್ಯಾನ್‌ ರೆಡಿಯಾಯ್ತು. ರಾಘವೇಂದ್ರ, ನಂದೀಶ್, ಪವನ್‌ಗೆ ಶರಣಾಗಲು ಪ್ರದೂಷ್ ಸೂಚನೆ ನೀಡಿದ ಬಳಿಕ ಶರಣಾಗತಿಗೂ ಮುನ್ನ ರಾಘವೇಂದ್ರನನ್ನ ದರ್ಶನ್‌ಗೆ ಭೇಟಿ ಮಾಡಿಸಿದ್ದೂ ಕೂಡ ಇದೇ ಪ್ರದೂಷ್​. ಇಷ್ಟೆಲ್ಲಾ ಅಂಶಗಳು ಪ್ರದೂಷ್​ ಅರ್ಜಿಯಲ್ಲಿ ಇರುವುದು ದರ್ಶನ್​ ಪಾಲಿಕೆ ಸಂಕಷ್ಟ ಅನ್ನೋದು ಖಚಿತ ಆಗ್ತಿದೆ.

Related posts

Kolar malur MLA Case; ಕಾಂಗ್ರೆಸ್‌ ಶಾಸಕನ ಸ್ಥಾನ ಅನರ್ಹ.. ಸುಪ್ರೀಂಕೋರ್ಟ್‌ನಲ್ಲಿ ಸಿಗುತ್ತಾ ರಿಲೀಫ್..?

Publicspot

SIT ENQUIRY MASK MEN: ಅನಾಮಿಕನನ್ನು ಸುಧೀರ್ಘವಾಗಿ ವಿಚಾರಣೆ ಮಾಡಿದ SIT

Publicspot

ಪೊಲೀಸರೇ ಕಳ್ಳರಾದಾಗ ನ್ಯಾಯ ಕೇಳೋದು ಯಾರನ್ನು..? ಆಗಿದ್ದೇನು..?

Publicspot

Killer Lover; 2 ವರ್ಷದ ಪ್ರೀತಿ ಹುಡುಗಿ ಬಾವನನ್ನೇ ಕೊಂದ ಪ್ರೇಮಿ ಬಂಧನ

Publicspot

ಪ್ರೀತಿ ಪ್ರೇಮದ ಹೆಸರಲ್ಲಿ ಹಿಂದೂ ಹುಡುಗಿಗೆ ನಡೀತ ಲವ್ ಜಿಹಾದ್..!​

Publicspot

ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕನ ಸಾವಿಗೆ ಕಾರಣ ಏನು..? ಅದೂ ಕೂಡ ಈ ರೀತಿ ಸಾವಾ..?

Publicspot