The Public Spot
ರಾಜಕೀಯ

ಕಾಂಗ್ರೆಸ್‌ ನಾಯಕರು ಏನೇ ಹೇಳಿದ್ರೂ ಅದು ನನಗೆ ಪ್ರಸಾದ..

ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ವಿಚಾರ ಜೋರು ಸದ್ದು ಮಾಡುತ್ತಿದೆ. ಸಿಎಂ ಸ್ಥಾನ ಖಾಲಿ ಇಲ್ಲ, ಸಿಎಂ ಬದಲಾವಣೆ ಇಲ್ಲ ಎಂದಿದ್ದ ಖರ್ಗೆ, ಸಿಎಂ ಬದಲಾವಣೆ ಬಗ್ಗೆ ಇನ್ನು ಡೇಟ್ ಫಿಕ್ಸ್ ಆಗಿಲ್ಲ. ಸಮಯ ನಿಗದಿಯಾಗದೇ ನಾನು ಹೇಗೆ ಹೇಳಲಿ..? ಎಂದಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಸಮಯ ನಿಗದಿಯಾದ ಮೇಲೆ ನಾವು ಏನು ನಿರ್ಧಾರ ಕೈಗೊಳ್ಳಬೇಕೋ ಕೈಗೋಳ್ತೇವೆ. ಏನು ನಿರ್ಣಯ ತೆಗೆದುಕೊಂಡ್ರೆ ಪಕ್ಷಕ್ಕೆ ಏನು ಪರಿಣಾಮ ಆಗುತ್ತದೆ ಅನ್ನೋದನ್ನ ಚರ್ಚಿಸಿ ನಿರ್ಧರಿಸುತ್ತೇವೆ ಎಂದಿದ್ದಾರೆ.

ನಾಯಕತ್ವ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್‌‌ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಏನ್ ಹೇಳಿದ್ರೂ ಪ್ರಸಾದ ಅಂತ ಸ್ವೀಕರಿಸುತ್ತೇವೆ ಎಂದಿದ್ದಾರೆ. ಈ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್‌‌ ಸೈಲೆಂಟ್ ಆಗಿ ದಾಳ ಉರುಳಿಸಿದ್ದಾರೆ. ಮೇ 15ರಂದು ಡಿ.ಕೆ ಶಿವಕುಮಾರ್‌ ಗೆ ಶುಭಸುದ್ದಿ ಸಿಗುವ ವಿಚಾರಕ್ಕೆ ರಾಮನಗರದಲ್ಲಿ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಆ ಬಗ್ಗೆ ನನಗೆ ಗೊತ್ತಿಲ್ಲ, ಇಕ್ಬಾಲ್ ಹುಸೇನ್ ಹೇಳಿದ್ರೆ ಅವರನ್ನೇ ಕೇಳಿ. ನಾನು ದೆಹಲಿಗೆ ಹೋಗುವುದು ಹೊಸದೇನಲ್ಲ. ನಾನು 15 ವರ್ಷದಿಂದ ದೆಹಲಿಗೆ ಹೋಗ್ತಿದ್ದೇನೆ ಎಂದಿದ್ದಾರೆ. ಇನ್ನು ಸಿಎಂ ಬದಲಾವಣೆ ವಿಚಾರವನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದಿದ್ದಾರೆ .

ಸಿಎಂ ಬದಲಾವಣೆ ಇಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಅವರು ರಾಜ್ಯಕ್ಕೆ ಸಿಎಂ ಆಗಿ ಬಂದರೆ ಸ್ವಾಗತ ಅಂತ ಅಂದಿದ್ದೆ. ಆ ವಿಚಾರ ಬಗ್ಗೆ ಮಾತಾಡುತ್ತಾ ಅವರು ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಇದ್ದಾರೆ, ಮತ್ತೆ ಬದಲಾವಣೆ ಸದ್ಯಕ್ಕೆ ಇಲ್ಲ ಅಂದಿದ್ದಾರೆ. ಅವರ ಮಾತನ್ನೂ ನಾನು ಒಪ್ತೇನೆ. ಅವರ ಹೇಳಿಕೆಯನ್ನು ಸ್ವಾಗತ ಮಾಡ್ತೇನೆ ಎಂದಿದ್ದಾರೆ. ಈ ಮೂಲಕ ಸಿಎಂ ಬದಲಾವಣೆ ವಿಚಾರ ಇಲ್ಲಿಗೆ ಮುಗಿಯುತ್ತೆ ಎಂದಿದ್ದಾರೆ. ಸಚಿವ ಎಂ.ಬಿ ಪಾಟೀಲ್ ಕೂಡ ಖರ್ಗೆ ಹೇಳಿದ ಮೇಲೆ ಅದು ಫೈನಲ್‌ ಎಂದಿದ್ದಾರೆ. ಯಾವ ಕಾಲಕ್ಕೆ ಏನಾಗ್ಬೇಕು ಅದು ಆಗ್ತಾ ಇರುತ್ತೆ. ಅಲ್ಲೀತನಕ ನಮ್ಮ ಕೆಲಸ ನಾವು ಮಾಡ್ತಾ ಇರ್ಬೇಕು ಎಂದಿದ್ದಾರೆ ಸಚಿವ ಕೃಷ್ಣ ಭೈರೇಗೌಡ.

ಸಂಪುಟ ಪುನಾರಚನೆಗೆ ಒತ್ತಡ ಹೇರಿರುವ ಹಿರಿಯ ಶಾಸಕರು ಮತ್ತೆ ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಪ್ಲ್ಯಾನ್‌ ಮಾಡಿದ್ದಾರೆ. ಮೇ 5 ಅಥವಾ 7 ರಂದು ದೆಹಲಿಗೆ ಪ್ರಯಾಣಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ದೆಹಲಿಗೆ ಭೇಟಿ ನೀಡುವ ಶಾಸಕರ ಪಟ್ಟಿಯನ್ನ ಅಶೋಕ್ ಪಟ್ಟಣ್ ಸಿದ್ದ ಮಾಡ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಶಾಸಕರು ದೆಹಲಿಗೆ ಹೋಗ್ತೇವೆ ಎಂದು ಅಶೋಕ್​ ಪಟ್ಟಣ್ ಹೇಳಿದ್ದಾರೆ. ಮೇ 4ರಂದು ಚುನಾವಣಾ ಫಲಿತಾಂಶ ಹೊರ ಬೀಳ್ತಿದ್ದಂತೆ ದೆಹಲಿ ಕಡೆಗೆ ಶಾಸಕರು ಪ್ರಯಾಣಿಸಲಿದ್ದಾರೆ. ಕಳೆದ ಬಾರಿ 20 ಶಾಸಕರು ದೆಹಲಿಗೆ ಭೇಟಿ ನೀಡಿ, ಸಚಿವ ಸ್ಥಾನಕ್ಕೆ ಡಿಮ್ಯಾಂಡ್ ಮಾಡಿದ್ರು. ಇದೀಗ 50ಕ್ಕೂ ಹೆಚ್ಚು ಶಾಸಕರು ದೆಹಲಿ ಭೇಟಿಗೆ ನಿರ್ಧರಿಸಿದ್ದಾರೆ. ಈಗಾಗಲೇ 25ಕ್ಕೂ ಹೆಚ್ಚು ಶಾಸಕರ ಲೀಸ್ಟ್ ರೆಡಿ ಆಗಿದ್ಯಂತೆ.

Related posts

Cabinet Fight; ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ನಲ್ಲಿ ಪರ ವಿರೋಧ ಮಾತು..!

Publicspot

ಬಳ್ಳಾರಿಯ ಬ್ಯಾನರ್ ಹೋರಾಟಕ್ಕೆ ಬಿಜೆಪಿ ನಾಯಕರ ಸಿದ್ಧತೆ.. ರಾಜ್ಯ ನಾಯಕರಿಗೆ ಮನಸ್ಸಿಲ್ಲ ಯಾಕೆ..?

Publicspot

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಸಿದ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು:

admin

ಕಾಂಗ್ರೆಸ್​ನಲ್ಲಿ ಟಿಕೆಟ್​ ಕುಟುಂಬಕ್ಕೇ ಸೇರಿದೆ.. ಒಂದಾಗುತ್ತಾ ಒಡೆದ ಮನಸ್ಸುಗಳು..?

Publicspot

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಮರುಬಳಕೆ ಘಟಕದಿಂದ ವಿದ್ಯುತ್ ಉತ್ಪಾದನೆ, ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ

admin

ಕಾಂಗ್ರೆಸ್​ ಜಗಳದಲ್ಲಿ ಬಿಜೆಪಿ ಸುಲಭವಾಗಿ ಗೆದ್ದುಕೊಳ್ಳುತ್ತಾ..? ಜಮೀರ್​ ತಂತ್ರ ಏನು..?

Publicspot