ಪ್ರಧಾನಿ ಮೋದಿ ಹೆಸರು ಗೊತ್ತಿಲ್ಲದ್ದಕ್ಕೆ ಮದುವೆ ಕ್ಯಾನ್ಸಲ್.. ಇವನಿಗೆ ಬಂಪರ್​..!!

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಈ ರೀತಿಯ ಘಟನೆಯೊಂದು ನಡೆದಿದೆ. ಗಾಜಿಯಾಪುರದಲ್ಲಿ ಮದುವೆ ಆಗುವ ಸಮಯದಲ್ಲಿ ಮದುಮಗಳು ದೇಶದ ಪ್ರಧಾನಿ ಯಾರು..? ಎಂದು ಪ್ರಶ್ನೆ ಮಾಡಿದ್ದಾಳೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಹೇಳಲು ವಿಫಲ ಆಗಿದ್ದರಿಂದ ಆಕೆ ಮದುವೆ ಆಗುವುದಕ್ಕೆ ನಿರಾಕರಿಸಿದ್ದಾರೆ ಎಂದು ವರದಿ ಆಗಿದೆ. ಈ ವೇಳೆ ನರೇಂದ್ರ ಮೋದಿ ಹೆಸರನ್ನು ಹೇಳಿದ ಮದುವೆ ಗಂಡಿನ ಸಹೋದರನ ಜೊತೆಗೆ ಆಕೆ ಮದುವೆ ಆಗಿರುವ ಅಚ್ಚರಿಯ ಘಟನೆ ಕಳೆದ ಶನಿವಾರ ನಡೆದಿದೆ. ಸೈದ್ದಾಪುರ ಪೊಲೀಸ್​ ಠಾಣೆ ವ್ಯಾಪ್ತಿಯ […]

ಮೇನಲ್ಲಿ ಮದುವೆ.. ಜೂನ್‌ಗೆ ಜೂಟ್.. ಆಗಸ್ಟ್‌ಗೆ ಆತ್ಮಹತ್ಯೆ.. ಇದಕ್ಕೆ ಪೊಲೀಸರೇ ಕಾರಣ..

ಮೈಸೂರಿನಲ್ಲಿ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಳೆದ ಮೇ 8 ರಂದು ಮದುವೆಯಾಗಿದ್ದ ಯುವತಿ ವರ್ಷಿತಾ ನೇಣಿಗೆ ಕೊರಳೊಡ್ಡಿರುವ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. 20 ವರ್ಷದ ಯುವತಿ ವರ್ಷಿತಾ ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದರು. ಆದರೂ ಪೋಷಕರು ಆಕೆಯನ್ನು ಬೇರೆ ಹುಡುಗನ ಜೊತೆಗೆ ಮದುವೆ ಮಾಡಿ ಕಳುಹಿಸಿದ್ದರು ಎನ್ನಲಾಗಿದೆ. ಮೇ ತಿಂಗಳಲ್ಲಿ ಮದುವೆಯಾದ ಬಳಿಕ ಎದುರಾದ ಆಷಾಢ ಮಾಸ ಆಕೆಯನ್ನು ಮತ್ತೊಂದು ದಿಕ್ಕಿನ ಕಡೆಗೆ ರವಾನಿಸಿದ್ದು, ಬದುಕು ಅಂತ್ಯವಾಗುವಂತೆ ಮಾಡಿದೆ. […]

ಮುಖ್ಯಮಂತ್ರಿಯಾಗಿ ನಾನ್ಯಾಕೆ 2ನೇ ಮದುವೆ ಆದೆ..!? ಇದು ಅಸಲಿ ಕಥೆ..!

ಪಂಜಾಬ್​ ಮುಖ್ಯಮಂತ್ರಿ ಮದುವೆ ಸರಳವಾಗಿ ಗುರುವಾರ ಚಂಢಿಗಡದ ನಿವಾಸದಲ್ಲಿ ನೆರವೇರಿದೆ. ಇತ್ತೀಚಿಗಷ್ಟೇ ಭರ್ಜರಿಯಾಗಿ ಆಮ್​ ಆದ್ಮಿ ಪಕ್ಷದಿಂದ ಜಯಭೇರಿ ಬಾರಿಸಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದ ಭಗವಂತ್​ ಮನ್​ ವೃತ್ತಿಯಲ್ಲಿ ವೈದ್ಯೆ​ ಆಗಿರುವ ಡಾ ಗುರ್​ಪ್ರೀತ್​​ ಕೌರ್ ಎಂಬಾಕೆಯನ್ನು ವರಿಸಿದ್ದಾರೆ. ಸರಳ ಕಾರ್ಯಕ್ರಮದಲ್ಲಿ ಸಂಬಂಧಿಕರು, ಆಪ್ತರು ಹಾಗೂ ಹಿತೈಶಿಗಳು ಮಾತ್ರವೇ ಭಾಗಿಯಾಗಿದ್ದರು. ಆಮ್​ ಆದ್ಮಿ ಪಕ್ಷದ ಸಂಸ್ಥಾಪಕ ಹಾಗು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಭಾಗವಹಿಸಿ, ನೂತನ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಆದರೆ ಪಂಜಾಬ್​ ಸಿಎಂ ಆಗುವ ಮೊದಲೇ […]

ಬೆಂಗಳೂರು ಪೊಲೀಸರೇ ಮಂಗಳಮುಖಿಯರ ಗೂಂಡಾಗಿರಿಗೆ ಅಂತ್ಯ ಯಾವಾಗ..?

ಬೆಂಗಳೂರಿನ ಯಾವುದೇ ಏರಿಯಾದಲ್ಲೂ ಮಂಗಳಮುಖಿಯರು ಇಲ್ಲ ಎನ್ನುವ ಹಾಗಿಲ್ಲ. ಪ್ರತಿಯೊಂದು ಏರಿಯಾದ ಪ್ರತಿಯೊಂದು ಸಿಗ್ನಲ್​ಗಳಲ್ಲೂ ಮಂಗಳಮುಖಿಯರು ಭಿಕ್ಷಾಟನೆ ಮಾಡುವುದು ಕಾಣಿಸುತ್ತದೆ. ಭಿಕ್ಷಾಟನೆ ನೆಪದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಲೇ ಇರುತ್ತಾರೆ. ಮಂಗಳಮುಖಿಯರ ವಿರುದ್ಧ ದೂರು ಕೊಟ್ಟು ಪೊಲೀಸ್​ ಠಾಣೆಗೆ ಅಲೆಯುವ ಇಚ್ಛೆ ಇಲ್ಲದ ವಾಹನ ಸವಾರರು ಅಲ್ಲಿಂದ ತಪ್ಪಿಸಿಕೊಂಡು ಮುಂದೆ ಹೋದರೆ ಸಾಕು ಎನ್ನುವಂತೆ ಜೇಬಿನಲ್ಲಿ ಸಿಕ್ಕ ಚಿಲ್ಲರೆ ಕೊಟ್ಟರೆ ಮುಂದೆ ಸಾಗುತ್ತಾರೆ. ಜೇಬಿನಲ್ಲಿ ಹೆಚ್ಚು ಹಣ ಇದೆ ಎನ್ನುವುದನ್ನು ಕಂಡರೆ ಮೈಮೇಲೆ ಬೀಳುವ ಮಂಗಳಮುಖಿಯರು 100, 500 […]

ಮೈಸೂರಿನ ಮದುವೆ ಮಂಟಪದಲ್ಲಿ ಆಗಿದ್ದೇನು..! ನಾ ಒಲ್ಲೆ ಎಂದಿದ್ಯಾಕೆ ನಲ್ಲೆ..!!?

ಮೈಸೂರಿನಲ್ಲಿ ನಡೆಯುತ್ತಿದ್ದ ಮದುವೆ ಕೊನೇ ಕ್ಷಣದಲ್ಲಿ ಮುರಿದು ಬಿದ್ದಿದೆ. ಅಪ್ಪ ಅಮ್ಮ ಧಾರೆ ಎರೆದು ಇನ್ನೇನು ಹುಡುಗ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಹುಡುಗಿ ಕುಸಿದು ಬಿದ್ದಿದ್ದಾಳೆ. ಯುವತಿಗೆ ಏನೋ ಆಯ್ತು ಎಂದು ಜನರೆಲ್ಲಾ ಗಾಬರಿಯಿಂದ ಬಂದು ಗಾಳಿ ಬೀಸಿದಾಗ ಆಕೆ ಹೇಳಿದ್ದನ್ನು ಕೇಳಿ ಉಳಿದವರೆಲ್ಲಾ ಮೂರ್ಚೆ ಹೋದಂತೆ ಆಗಿದ್ದಾರೆ. ನಾನು ಈತನನ್ನು ಮದುವೆ ಆಗಲಾರೆ, ನಾನು ನನ್ನ ಪ್ರಿಯಕರನನ್ನೇ ಮದುವೆ ಆಗುತ್ತೇನೆ ಎಂದಿದ್ದಾಳೆ. ಈಕೆಯ ಮಾತನ್ನು ಕೇಳಿದ ಗಂಡಿನ ಮನೆಯವರು ಹಾಗೂ ಸಂಬಂಧಿಕರು ವಧುವಿನ ಕುಟುಂಬಸ್ಥರ ವಿರುದ್ಧ […]

Mysore: ಕಳೆದ ವರ್ಷ ಕೊರೊನಾದಿಂದ ಸತ್ತಿದ್ದ ಅಪ್ಪ ಮದುವೆಯಲ್ಲಿ ಪ್ರತ್ಯಕ್ಷ..!!

ಕೊರೊನಾ ಸೋಂಕು ಸಾಕಷ್ಟು ದೇಶಗಳನ್ನು ದಿವಾಳಿಯನ್ನಾಗಿ ಮಾಡಿತು. ಅಷ್ಟೇ ಅಲ್ಲ ಬೆಲೆ ಏರಿಕೆ ಗಗನಕ್ಕೆ ಮುಟ್ಟುವಂತೆ ಮಾಡಿತು. ಅದರ ಜೊತೆಗೆ ಜನರ ನೆಮ್ಮದಿ ಹಾಳು ಮಾಡುವ ಕೆಲಸ ಮಾಡಿತು. ಇನ್ನೂ ಅದೆಷ್ಟೋ ಜನರ ಕನಸುಗಳನ್ನು ನುಚ್ಚು ನೂರು ಮಾಡಿತು. ಅದರಲ್ಲಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಅಜ್ಜಂಪುರ ಗ್ರಾಮದ ರಮೇಶ್ ಕೂಡ ಒಬ್ಬರು. ಇಬ್ಬರು ಗಂಡು ಮಕ್ಕಳ ತಂದೆ ಆಗಿದ್ದ ರಮೇಶ್ ಮಕ್ಕಳ ಮದುವೆ ಮಾಡುವ ಚಿಂತನೆಯಲ್ಲಿ ಇದ್ದರು. ಆದರೆ ಕೊರೊನಾ ಸೋಂಕು ಅವರ ಪ್ರಾಣವನ್ನೇ ಕಸಿದುಕೊಂಡು […]

ಹೊಸ ಬಾಳಿಗೆ ಕಾಲಿಟ್ಟ 65 ವರ್ಷದ ವೃದ್ಧ ಪ್ರೇಮಿಗಳು..! ಯೌವ್ವನ ಮೀರಿತು 35 ವರ್ಷದ ಪ್ರೇಮ..!

ಮಂಡ್ಯ ಅಂದ್ರೆ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗೋದು ಸಾಮಾನ್ಯ. ಆದರೆ ಇದೀಗ ವಿಭಿನ್ನ ವಿಚಾರದಲ್ಲಿ ಮಂಡ್ಯ ಸುದ್ದಿಯಾಗಿದೆ. 65 ವರ್ಷ ವಯಸ್ಸಿನ ವಯೋವೃದ್ಧರು ಹಸೆಮಣೆ ಏರಿ ನೂತನ ಬಾಳಿಗೆ ಕಾಲಿಟ್ಟಿದ್ದಾರೆ. ಶ್ರೀಕ್ಷೇತ್ರ ಮೇಲುಕೋಟೆಯಲ್ಲಿ ಸಾಂಪ್ರಾದಾಯಿಕ ರೀತಿಯಲ್ಲಿ ವಿವಾಹ ಮಹೋತ್ಸವ ನಡೆದಿದೆ. 35 ವರ್ಷಗಳಿಂದ ಕಾಯುತ್ತಿದ್ದ ತನ್ನ ಪ್ರೀತಿ ಸಿಕ್ಕಿದ ಖುಷಿಯಲ್ಲಿ ಆ ವೃದ್ಧರು ಇದ್ದರು ಎನ್ನುವುದೇ ವಿಶೇಷ ಸಂಗತಿ. 65 ವರ್ಷದ ಜನುಮದ ಜೋಡಿಗೆ ಕಂಕಣ ಭಾಗ್ಯ..!! ಮೂಲತಃ ಹಾಸನ ಜಿಲ್ಲೆಯವರಾದ ಚಿಕ್ಕಣ್ಣ ತನ್ನ ಸೋದರ ಅತ್ತೆಯ ಮಗಳನ್ನು […]

ಗಂಡು ಮಕ್ಕಳ ಮದುವೆಗೆ ಹೆಣ್ಣು ಸಿಗದೆ ಪರದಾಟ..! ಕಾರಣ ಕಣ್ಣ ಮುಂದಿದೆ..

ಕಾಲ ಬದಲಾಗಿದೆ. ಹೆಣ್ಣು ಹೆತ್ತವರು ಮದುವೆ ಮಾಡುವುದೇ ದುಸ್ತರ ಎನ್ನುವ ಕಾಲ ಹೊರಟು ಹೋಗಿದೆ. ಹೆಣ್ಣು ಮಕ್ಕಳಿದ್ದರೆ, ಉತ್ತಮ ವರನಿಗೆ ಕೊಟ್ಟು ಮದುವೆ ಮಾಡಬಹುದು. ಗಂಡು ಮಕ್ಕಳಿಗೆ ಹೆಣ್ಣು ಹುಡುಕುವ ಶಾಪ ಯಾರಿಗೂ ಬೇಡಪ್ಪ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅದರಲ್ಲೂ ಐದಾರು ವರ್ಷಗಳ ಈಚೆಗೆ ಹೆಣ್ಣುಗಳೇ ಇಲ್ಲವೇನೋ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅದರಲ್ಲೂ ಅಳಿದುಳಿದ ಹೆಣ್ಣು ಮಕ್ಕಳನ್ನು ನಗರ ಪ್ರದೇಶದಲ್ಲಿ ವಾಸವಾಗಿರುವ ಹುಡುಗರು ಹಾಗೂ ಸರ್ಕಾರಿ ಕೆಲಸದಲ್ಲಿ ಇರುವ ಜನರು ಮದುವೆ ಆಗುತ್ತಿದ್ದಾರೆ. ಹೀಗಾಗಿ ರೈತರ […]

ವಧು – ವರರಿಂದ ಮದುವೆಗೆ ಅರ್ಜಿ ಆಹ್ವಾನಿಸಿದ ಸರ್ಕಾರ..!

ಮದುವೆ ಎಂಬುದು ಅಪ್ಪಟ ಎರಡು ಮನಸ್ಸುಗಳನ್ನು ಒಂದು ಮಾಡುವ ವಿಚಾರ. ಮದುವೆ ಮೂಲಕ ಎರಡು ಮನಸ್ಸುಗಳನ್ನು ಒಂದು ಮಾಡಿ ಒಂದು ಸಂಸಾರವನ್ನು ಬೆಳಗಲು ಹೆಣ್ಣನ್ನು ಸ್ವಾಗತಿಸಲಾಗುತ್ತದೆ. ಇದೇ ಕಾರಣಕ್ಕೆ ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಗಾಧೆ ಮಾತು ಚಾಲ್ತಿಯಲ್ಲಿದೆ. ಮದುವೆ ಮಾಡುವುದು ಅಷ್ಟೊಂದು ಸುಲಭವಾದ ಕೆಲಸವಲ್ಲ ಎನ್ನುವುದು ಈ ಗಾಧೆ ಮಾತಿನ ಅರ್ಥ. ಹೀಗಿನ ಪರಿಸ್ಥಿತಿಯಲ್ಲಿ ಗಂಡು ಮಗನಿಗೆ ಹೆಣ್ಣು ಹುಡುಕುವುದು ದೊಡ್ಡ ಸಮಸ್ಯೆಯೇ ಆಗಿದೆ. ಆದರೆ ಸರ್ಕಾರ ಮಾತ್ರ ಮದುವೆ ಮಾಡಿಕೊಳ್ಳಲು […]