The Public Spot
ರಾಜ್ಯ

ಆಣೆ ಪ್ರಮಾಣವೋ.. ಕಾಂಗ್ರೆಸ್‌ ಪಾಲಿಗೆ ಬಿಡದಿ ಅನ್ನೋದು ಶಾಪವೋ..?

ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಟೌನ್ ಶಿಪ್‌ ವಿರುದ್ಧ ಜೂನ್ 21ಕ್ಕೆ ಜೆಡಿಎಸ್ ಪಾದಯಾತ್ರೆ ಹಮ್ಮಿಕೊಂಡಿರುವ ವಿಚಾರವಾಗಿ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಹೆಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
2018 ರಲ್ಲೇ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೆಡ್ ಜೋನ್‌ನಿಂದ ಎಲ್ಲೋ ಜೋನ್ ಮಾಡಬೇಕಿತ್ತು. ಆಗ ರೆಡ್ ಜೋನ್ ತೆಗೆದಿದ್ರೆ, ಈ ಪರಿಸ್ಥಿತಿ ಯಾಕೆ ಬರ್ತಿತ್ತು..? ಅದೇನೋ ನಿಖಿಲ್ ಕುಮಾರಸ್ವಾಮಿ ಆತ್ಮಸಾಕ್ಷಿ ಮಾತುಗಳನ್ನಾಡಿದ್ದಾರೆ. ದೇವಸ್ಥಾನಕ್ಕೆ ಬಂದ್ರೆ ಸತ್ಯ ಗೊತ್ತಾಗುತ್ತದೆ. ಆಗ ಆತ್ಮಸಾಕ್ಷಿ ಯಾರಿಗೆ ಇದೆ ಅಂತ ಗೊತ್ತಾಗುತ್ತೆ..? ಎಂದಿದ್ದಾರೆ.

ಚಾಮುಂಡೇಶ್ವರಿ ಮುಂದೆ ಬಂದು ಪ್ರಮಾಣ ಮಾಡಲಿ ಎಂದು8 ಸವಾಲು ಹಾಕಿರುವ ಬಾಲಕೃಷ್ಣ, ಅವರು ಬರದೆ ಇದ್ರೂ ಒಂದು ಡೇಟ್ ಫಿಕ್ಸ್ ಮಾಡ್ತೀವಿ. ನಾವೇ ಹೋಗಿ ಕರ್ಪೂರ ಹಚ್ಚಿ ಬರುತ್ತೇವೆ. ಎಲ್ಲವನ್ನೂ ಆ ಭಗವಂತನೇ, ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳಲಿ ಅಂತ ಶಾಸಕ ಹೆಚ್.ಸಿ.ಬಾಲಕೃಷ್ಣ ಮತ್ತೆ ಆಣೆ ಪ್ರಮಾಣದ ಸವಾಲ್‌ ಹಾಕಿದ್ದಾರೆ.

ಬಿಡದಿ ಟೌನ್‌ಶಿಪ್ ವಿರೋಧಿಸಿ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ. ದೆಹಲಿಯಲ್ಲಿ ಪ್ರಧಾನಿ ಮೋದಿಗೆ ಮನವಿ ಮಾಡಲು ಬಿಜೆಪಿ ನಿರ್ಧರಿಸಿದೆ. ಟೌನ್‌ಶಿಪ್‌ ಯೋಜನೆ ಕೈ ಬಿಡುವಂತೆ ಪ್ರಧಾನಿಗೆ ಮನವಿ ಜೊತೆಗೆ ದೆಹಲಿಯಲ್ಲಿ ಜಂತರ್ ಮಂತರ್‌ನಲ್ಲಿ ಹೋರಾಟ ಮಾಡ್ತೀವಿ ಅಂತ ಬಿಜೆಪಿಯ ಪ್ರಸಾದ್ ಗೌಡ ಹೇಳಿದ್ದಾರೆ. ಜಿಡಿಎಸ್ ಜೊತೆ ಸೇರಿ ಒಟ್ಟಿಗೆ ಹೋರಾಟಕ್ಕೂ ಮಾತುಕತೆ ಮಾಡ್ತೇವೆ. ಇಲ್ಲಿನ ವಾಸ್ತವಾಂಶವನ್ನ ಮೋದಿ ಅವರಿಗೂ ನಾವು ತಿಳಿಸ್ತೇವೆ. ಗೋಲಿ ಬಾರ್ ಮಾಡಿದ್ರೂ ಸರಿ ನಾವು ಈ ಭೂಮಿ ಉಳಿಸಲು ಹೋರಾಟ ಮಾಡ್ತೇವೆ ಅಂತ ಹೇಳಿದ್ದಾರೆ.

ಇನ್ನು, ಬಿಡದಿಯಲ್ಲಿ ರೈತರ ಇಚ್ಛೆಗೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ ಅಂತ ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಗುಡುಗಿದ್ದಾರೆ. ಯಾವುದೇ ಯೋಜನೆಗೆ ಶೇಕಡಾ 70ಕ್ಕಿಂತ ಹೆಚ್ಚಿನ ರೈತರು ಒಲವು ವ್ಯಕ್ತಪಡಿಸಬೇಕು. ಆದರೆ ಇಲ್ಲಿ ಬಹಳಷ್ಟು ಜನ ರೈತರು ಜಮೀನು ನೀಡಲು ಸಿದ್ದರಿಲ್ಲ. ಹಾಗಾಗಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಈ ಬಗ್ಗೆ ಮುಖ್ಯಮಂತ್ರಿಗೆ ಸೂಚನೆ ನೀಡಬೇಕು. ರೈತರ ಇಚ್ಛೆಗೆ ವಿರುದ್ಧವಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದನ್ನು ಕೈ ಬಿಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ

ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ರೈತರಿಂದ ಪರ-ವಿರೋಧದ ಕುರಿತು ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.. ಯಾವುದೇ ಕಾರ್ಯಕ್ರಮ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು. ಇದರ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡ್ತೀವಿ. ಪಕ್ಷಕ್ಕೂ ಡ್ಯಾಮೇಜ್ ಆಗಬಾರದು ಅಂತ ಹೇಳಿದ್ದಾರೆ. ಆದರೆ ಬಿಡದಿ ಟೌನ್‌ಶಿಪ್‌ ವಿಚಾರವಾಗಿ ಜೆಡಿಎಸ್‌ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಈ ಯೋಜನೆ ಜೆಡಿಎಸ್‌ನ ಬ್ರೈನ್ ಚೈಲ್ಡ್. ಆಗ ಅವರು ಪ್ರಸ್ತಾಪ ಮಾಡಿ ಈಗ್ಯಾಕೆ ವಿರೋಧ ಮಾಡ್ತಿದ್ದಾರೆ..? ದಬ್ಬಾಳಿಕೆ ಮಾಡಿ ರೈತರ ಜಮೀನು ಕಸೀತಿಲ್ಲ. ಇಷ್ಟ ಇದ್ರೆ ಜಮೀನು ಕೊಡ್ತಾರೆ. ನಾವು ಕಾನೂನು ಮೀರಿ ಏನೂ ಮಾಡ್ತಿಲ್ಲ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ.

Related posts

ಅಪರೂಪದ ಸಮಾಗಮ, ಅಚ್ಚರಿಯ ಬೆಳವಣಿಗೆಗೆ ಕಾರಣವಾದ ಮೋದಿ..!

ಯಶವಂತಿ

ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ಟೀಕೆ.. ಹೌದು ನಮ್ಮ ತಪ್ಪು ಎಂದು ಒಪ್ಪಿಕೊಂಡ ಸಚಿವರು..

Publicspot

ನಾಳೆ ಬೆಂಗಳೂರಿಗೆ ಬರ್ತಿದ್ದಾರೆ ಪ್ರಧಾನಿ ಮೋದಿ.. ಏನೆಲ್ಲಾ ಬದಲಾವಣೆ..?

Publicspot

ಬೃಹತ್ ಇ-ಖಾತಾ ಮೇಳಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವ

admin

PUC ಫಲಿತಾಂಶ ನಾಳೆ ಪ್ರಕಟ.. ಶಿಕ್ಷಣ ಸಚಿವರ ಪ್ರಚಾರಕ್ಕೆ ತಡವಾಯ್ತು..

Publicspot

ಕೇರಳಂ ವಿಚಾರ ಅಂದ್ರೆ ಕಾಂಗ್ರೆಸ್​ ತಲೆ ಮೇಲೆ ಹೊತ್ತು ಮಾಡೋದ್ಯಾಕೆ..?

Publicspot