The Public Spot
ರಾಜಕೀಯ

S I R ಮತಪಟ್ಟಿ ಪರಿಷ್ಕರಣೆಯಲ್ಲಿ ಮಹತ್ವದ ಬದಲಾವಣೆ.. ಸರಿಯಾಗ್ತಾರಾ BLO..?

SIR ಪ್ರಕ್ರಿಯೆಯಲ್ಲಿ ಬಿಎಲ್​ಒಗಳ ಕಳ್ಳಾಟಕ್ಕೆ ಜಿಬಿಎ ಬ್ರೇಕ್​ ಹಾಕಲು ಮುಂದಾಗಿದೆ. ಬಿಎಲ್​ಒಗಳು ಮನೆ ಮನೆಗೇ ಹೋಗಿ S I R ಮಾಡ್ಬೇಕು ಅಂತ BLOಗಳಿಗೆ GBA ಖಡಕ್ ಸಂದೇಶ ರವಾನಿಸಿದೆ. ಕೇಂದ್ರ ಚುನಾವಣಾ ಆಯೋಗದಿಂದ ಸೂಚನೆ ಹಿನ್ನೆಲೆ GBAಯಿಂದ BLOಗಳಿಗೆ ಸಂದೇಶ ನೀಡಲಾಗಿದೆ. ಅರ್ಜಿ ಪಡೆಯಲು ಮತದಾರರು ಇಲ್ಲದಿದ್ದರೆ ಸ್ಥಳ ಮಹಜರ್ ಮಾಡಬೇಕು. ವಿಡಿಯೋ, ಫೋಟೋ ಸಹಿತ ಮಹಜರ್ ಮಾಡ್ಬೇಕು ಅಂತ BLOಗಳಿಗೆ GBA ಸೂಚನೆ ನೀಡಿದೆ. ಈ ಮೂಲಕ ಮಸೀದಿ, ದೇಗುಲ, ಚೌಲ್ಟ್ರಿಗಳಲ್ಲಿ SIR ಅರ್ಜಿ ಹಂಚಿಕೆಗೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ.

ಮತದಾರರ ಹೆಸರು ಡಿಲೀಟ್ ಮಾಡೋಕು ಮುಂಚೆ ಕಡ್ಡಾಯವಾಗಿ ರಾಜಕೀಯ ಪಕ್ಷಗಳ ಗಮನಕ್ಕೆ ತರಬೇಕು ಅಂತ BLOಗಳಿಗೆ ಸೂಚನೆ ನೀಡಲಾಗಿದೆ. ಮೊದಲು ರಾಜಕೀಯ ಪಕ್ಷಗಳ ಗಮನಕ್ಕೆ ತಂದು ಗೊಂದಲ ಸರಿಪಡಿಸಿಕೊಳ್ಳಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ. ಇನ್ನು, ಮನೆ ಮನೆಗೆ ಭೇಟಿ ನೀಡದೇ, ಗುಂಪು ಗುಂಪಾಗಿ SIR ಅರ್ಜಿ ವಿತರಣೆ ಬಗ್ಗೆ ದೂರು ಕುರಿತು ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾತನಾಡಿದ್ದು, ನಿಯಮ ಉಲ್ಲಂಘಿಸಿ SIR ಅರ್ಜಿ ವಿತರಣೆ ಮಾಡಿದ 35 ಬಿಎಲ್ಒಗಳಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗಿದೆ.. ಉತ್ತರ ಬಂದ ನಂತರ ಕ್ರಮ ಕೈಗೊಳ್ತೇವೆ ಅಂತ ಹೇಳಿದ್ದಾರೆ.

ರಾಜ್ಯದಲ್ಲಿ ಎಸ್​ಐಆರ್​ ಪ್ರಕ್ರಿಯೆ ಬಗ್ಗೆ ನಮಗೆ ಅನುಮಾನ ಇದೆ ಅಂತ ಬಿಜೆಪಿ ಎಂಎಲ್​ಸಿ ಸಿಟಿ ರವಿ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಸಿ.ಟಿ ರವಿ, ಮನೆ, ಮನೆಗೆ ತೆರಳಿ ಎಸ್ಐಆರ್ ಫಾರ್ಮ್ ಹಂಚಿಕೆ ಮಾಡೋದು ನಿಯಮ. ಆದ್ರೆ ಮಸೀದಿಗಳಲ್ಲಿ ಮಾಡೋದು ನಮಗೆ ಅನುಮಾನ ಇದೆ. ನಕಲಿ ಮತದಾರರಿಗೆ ಫಾರ್ಮ್ ಕೊಟ್ಟು, ಅಸಲಿ ಮತದಾರರಿಗೆ ಫಾರ್ಮ್ ಸಿಗದೇ ಇದ್ರೆ ಎಸ್​ಐಆರ್​ನ ಉದ್ದೇಶ ವಿಫಲವಾಗುತ್ತದೆ. ಕಾಂಗ್ರೆಸ್ ಸರ್ಕಾರ ಮೊದಲು ಎಸ್ಐಆರ್ ವಿರೋಧಿಸಿ, ಅಕ್ರಮವನ್ನು ಸಕ್ರಮ ಮಾಡಲು ಎಸ್ಐಆರ್ ಬಳಕೆ ಮಾಡಿಕೊಳ್ಳುತ್ತಿದೆ ಅಂತ ಆರೋಪಿಸಿದ್ದಾರೆ. ಇನ್ನು ಇದೇ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದ್ದಾರೆ.

ಎಸ್ಐಆರ್ ವಿಚಾರವಾಗಿ ಬಿಜೆಪಿ, ಜೆಡಿಎಸ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ, ಜೆಡಿಎಸ್ ಹೇಳಿದ ತಕ್ಷಣ ಚುನಾವಣಾ ಆಯೋಗ ಹೇಗೆ ಸ್ಪಂದಿಸುತ್ತದೆ..? ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈ ಗೊಂಬೆ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಕೂಡ SIR ಪ್ರಕ್ರಿಯೆ ಆರಂಭವಾದಾಗ ಪ್ರತಿಭಟನೆ ಮಾಡಿದ್ದು ಬಿಜೆಪಿನೇ. ಅಕ್ರಮ ಮಾಡ್ತಿದ್ದಾರೆ ಅಂತ ಮಮತಾ ಬ್ಯಾನರ್ಜಿ ವಿರುದ್ಧ ಆರೋಪಿಸಿದ್ರು. ಮತದಾರರ ಹಕ್ಕನ್ನ ರಕ್ಷಣೆ ಮಾಡಬೇಕು ಅಂತ ಚುನಾವಣಾ ಆಯೋಗಕ್ಕೆ ಪ್ರಾಮಾಣಿಕವಾಗಿ ಕೇಳಿದ್ದೇವೆ ಅಂತ ಪ್ರಿಯಾಂಕ್​ ಖರ್ಗೆ ತಿಳಿಸಿದ್ದಾರೆ.

ಒಟ್ಟಾರೆ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿ S I R ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡು ಬರ್ತಿದೆ. ಕೇಂದ್ರ ಚುನಾವಣಾ ಆಯೋಗವೇ ಈ ಪ್ರಕ್ರಿಯೆ ನಡೆಸುತ್ತಿದ್ದರೂ ಇಲ್ಲಿ ಸ್ಥಳೀಯ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ನೌಕರರು ಭಾಗಿಯಾಗ್ತಿದ್ದಾರೆ. ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹೇರದೆ, ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಬಿಡಬೇಕಿದೆ. ಯಾವುದೇ ಲೋಪ ಆಗದಂತೆಯೂ ಮೇಲುಸ್ತುವಾರಿ ಮಾಡಬೇಕಿದೆ.

Related posts

November Action; ದೆಹಲಿಯಿಂದ ಬಂದ ಸತೀಶ್​ ಜಾರಕಿಹೊಳಿ ಹೇಳಿದ್ದೇನು..?

Publicspot

ಅಡ್ಡ ಮತದಾನ ಮಾಡಿದ್ದು ವೈಯಕ್ತಿಕ ಲಾಭಕ್ಕೋ..? ನಾಯಕತ್ವದ ಸೇಡಿಗೋ..?

Publicspot

ಒಂದು ರಾಷ್ಟ್ರ ಒಂದು ಚುನಾವಣೆ.. ಜಾರಿ ಆಗಲು ಅಡ್ಡಿ ಆತಂಕ ಏನು..?

Publicspot

Vachana VV ‘ಪುರೋಹಿತ ಶಾಹಿಗಳು ಶರಣರನ್ನು ಕೊಂದರು.. ಬಲಿದಾನಕ್ಕೆ ವಚನ ವಿವಿ ಸ್ಥಾಪಿಸಿ’

Publicspot

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಮರುಬಳಕೆ ಘಟಕದಿಂದ ವಿದ್ಯುತ್ ಉತ್ಪಾದನೆ, ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ

admin

ಬಳ್ಳಾರಿಯ ಬ್ಯಾನರ್ ಹೋರಾಟಕ್ಕೆ ಬಿಜೆಪಿ ನಾಯಕರ ಸಿದ್ಧತೆ.. ರಾಜ್ಯ ನಾಯಕರಿಗೆ ಮನಸ್ಸಿಲ್ಲ ಯಾಕೆ..?

Publicspot