September 27, 2026
The Public Spot
ಅಪರಾಧರಾಜಕೀಯ

ಪ್ರಜ್ವಲ್​ ರೇವಣ್ಣ ಬ್ಯಾರಕ್​ನಲ್ಲಿ ಮೊಬೈಲ್​ ಪತ್ತೆ ಮತ್ತು ಅನುಮಾನ

ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲಿನಲ್ಲಿ ನಿನ್ನೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆರ. ಸೆಂಟ್ರಲ್ ಜೈಲ್​ನ ಸಜಾಬಂಧಿ ಕೈದಿಗಳ ಬ್ಯಾರಕ್ ತಪಾಸಣೆ ಮಾಡಲಾಗಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬ್ಯಾರಕ್​ನಲ್ಲೂ ತಪಾಸಣೆ ನಡೆಸಿದ್ದು, ಬಟ್ಟೆಗಳಲ್ಲಿ ಅಡಗಿಸಿಟ್ಟ ಹ್ಯಾಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿದೆ ಅನ್ನೋ ಸುದ್ದಿಯಾಗಿದೆ. ಒಂದು ಮೊಬೈಲ್, ಪೆನ್​ಡ್ರೈವ್​​ ಸಿಕ್ಕಿದ್ದು, ಸಿಸಿಬಿ ಪೊಲೀಸ್ರು ಸೀಜ್ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ದಾಳಿ ವೇಳೆ ಮೊಬೈಲ್ ವಿಚಾರವಾಗಿ ಏನೂ ತಿಳಿಯದಂತೆ ತಟಸ್ಥವಾಗಿದ್ದರು ಎನ್ನಲಾಗಿದೆ.

ಪ್ರಜ್ವಲ್ ರೇವಣ್ಣ ಜೊತೆ ಮತ್ತೋರ್ವ ಸಜಾ ಬಂಧಿ ಕೈದಿಯಿದ್ದು, ಇಬ್ಬರು ಮಾತ್ರ ಈ ಬ್ಯಾರಕ್​ನಲ್ಲಿ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ಬ್ಯಾರಕ್​ನಲ್ಲಿ ಮೊಬೈಲ್ ಪತ್ತೆ ಆಗಿರುವ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಒಂದು ಪೆನ್ ಡ್ರೈವ್ , ಚಾರ್ಜರ್ ಹಾಗೂ ನೋಟ್ ಬುಕ್ ಸೇರಿದಂತೆ ಕೆಲವು ವಸ್ತುಗಳು ಪತ್ತೆಯಾಗಿವೆ. ಎಲೆಕ್ಟ್ರಾನಿಕ್ ಸಿಟಿ ವಿಭಾಗ ಪೊಲೀಸ್ರು, ಜೈಲಾಧಿಕಾರಿಗಳು ಮತ್ತು ಸಿಸಿಬಿ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದರು. ಪ್ರಜ್ವಲ್ ಜೊತೆಗೆ ಪ್ರತಾಪ್ ರೈ ಎಂಬ ಕೈದಿಯೂ ಇದ್ದು, ಇಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

ಪ್ರಜ್ವಲ್ ರೇವಣ್ಣ ಬ್ಯಾರಕ್​ನಲ್ಲಿ ಮೊಬೈಲ್​ ಪತ್ತೆಯಾದ ಹಿನ್ನಲೆ ಜೈಲಿನ ಅಸಿಸ್ಟೆಂಟ್​ ಸೂಪರಿಟೆಂಡೆಂಟ್​ ಈರಣ್ಣ ರಂಗಪುರ್ ಎಂಬುವರನ್ನು ಅಮಾನತು ಮಾಡಿ ಬಂಧಿಖಾನೆ ಡಿಜಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಎಸ್​ಪಿ ಅಂಶುಕುಮಾರ್​ಗೆ ನೋಟಿಸ್ ಜಾರಿ ಮಾಡಿದ್ದು, ಮೊಬೈಲ್ ಕೊಟ್ಟಿದ್ಯಾರು ಅನ್ನೋ ಬಗ್ಗೆ ಸ್ಪಷ್ಟನೆ ಕೊಡಲು ಸೂಚನೆ ನೀಡಲಾಗಿದೆ. ಜೊತೆಗೆ ಕರ್ತವ್ಯ ಲೋಪದ ಕಾರಣ ಕೇಳಿ ಜೈಲು ಮುಖ್ಯ ಅಧೀಕ್ಷಕರಾಗಿರುವ ಅಂಶುಕುಮಾರ್​ಗೆ ನೋಟಿಸ್ ಕೊಡಲಾಗಿದೆ. ಆಗಸ್ಟ್​ 6ರಂದು ಪರಿಶೀಲನೆ ನಡೆಸಲಾಗಿತ್ತು. ಅಂದು ಏನೂ ಸಿಕ್ಕಿರಲಿಲ್ಲ. ಇದೀಗ ನಿನ್ನೆ ಪ್ರಜ್ವಲ್ ರೇವಣ್ಣ ಬ್ಯಾರಕ್​ನಲ್ಲಿ ಮಾತ್ರ ಮೊಬೈಲ್ ಜಪ್ತಿ ಆಗಿದೆ.

ಸಿಸಿಬಿ ದಾಳಿ ಮತ್ತು ಮೊಬೈಲ್​ ಬಗ್ಗೆ ಅನುಮಾನ ಯಾಕೆ..?

ಜೈಲಿನಲ್ಲಿ ಗಾಂಜಾ, ಮದ್ಯ ಸೇರಿದಂತೆ ಅಕ್ರಮ ಚಟುವಟಿಕೆಗಳ ತಾಣ ಅನ್ನೋದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಅಲ್ಲಿನ ಸಿಬ್ಬಂದಿಗಳೇ ಅಕ್ರಮ ವ್ಯವಹಾರದ ರಾಯಭಾರಿಗಳು ಅಂದರೂ ತಪ್ಪಾಗಲಾರದು. ಆದರೆ ನಿನ್ನೆ 100 ಜನ ಸಿಬ್ಬಂದಿ ಬಳಸಿ ನಾನೇ ದಾಳಿ ಮಾಡಿಸಸಿದ್ದು ಎಂದು ಗೃಹ ಸಚಿವ ಪ್ರಿಯಾಂಕ್​ ಖರ್ಗೆ ತಿಳಿಸಿದ್ದಾರೆ. ದಾಳಿಗೂ ಮುನ್ನ ಸಿಎಂ ಡಿ.ಕೆ ಶಿವಕುಮಾರ್​ ಅವರ ಒಪ್ಪಿಗೆ ಪಡೆಯಲಾಗಿತ್ತು ಎಂದಿದ್ದಾರೆ. ಇನ್ನೂ ಇಡೀ ಜೈಲಿನಲ್ಲಿ ಬೇರೇನು ಸಿಕ್ಕಿಲ್ಲ. ಕೇವಲ ಪ್ರಜ್ವಲ್​ ಬ್ಯಾರಕ್​ನಲ್ಲಿ ಒಂದು ಮೊಬೈಲ್​, ಚಾರ್ಜರ್​, ನೋಟ್​ ಬುಕ್​ ಪತ್ತೆ ಆಗಿದೆ ಅಂದ್ರೆ ನಂಬಿಕೆ ಅರ್ಹ ಎನ್ನಲು ಸಾಧ್ಯವಾಗ್ತಿದೆ.

ಇತ್ತೀಚಿಗೆ ಜೆಡಿಎಸ್​ ಕಾರ್ಯಕರ್ತರು ಹಾಗೂ ನಾಯಕರು ಕಾಂಗ್ರೆಸ್​ ಸರ್ಕಾರಕ್ಕೆ ಕಠಿಣ ಸವಾಲುಗಳನ್ನು ಎದುರಿಸುವಂತೆ ಮಾಡುತ್ತಿದ್ದಾರೆ. ಬಿಡದಿ ರೈತರ ಹೋರಾಟ, ಬರ ನಿರ್ವಹಣೆ ವಿರುದ್ಧ ಜೆಡಿಎಸ್​ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ತಿದೆ. ಇದೇ ವಿಚಾರ ಶೀಘ್ರದಲ್ಲೇ ಆರಂಭ ಆಗುವ ಸದನದಲ್ಲೂ ಪ್ರಸ್ತಾಪ ಆಗುವ ಸಾಧ್ಯತೆಯಿದೆ. ಅದೇ ಕಾರಣಕ್ಕೆ ಸರ್ಕಾರ ಜೆಡಿಎಸ್​ ವಿರುದ್ಧ ಪ್ರಜ್ವಲ್​ನನ್ನು ಗುರಾಣಿ ಆಗಿ ಬಳಸಿಕೊಳ್ತಾ..? ಅನ್ನೋ ಅನುಮಾನ ಜೆಡಿಎಸ್​ ಕಾರ್ಯಕರ್ತರೂ ಸೇರಿದಂತೆ ಸಾಕಷ್ಟು ಜನರ ಪ್ರಶ್ನೆ ಆಗಿದೆ. ಆಳುವ ಸರ್ಕಾರ ತನಗೆ ಬೇಕಾದಾದ ತನಗೆ ಬೇಕಾದಂತೆ ವರದಿ ಮಾಡಿಸಿಕೊಳ್ಳುವುದು, ತನಿಖೆ ನಡೆಸುವುದು ಸುಳ್ಳೇನು ಅಲ್ಲ.

Related posts

Women Death for Love; ಹೆಣ್ಣು ಮನಸ್ಸು ಚಂಚಲ ಅಂತಾರೆ.. ಆದರೆ ಮದುವೆ ಆಗಿದ್ದ ಹೆಣ್ಣು ಮಾಡಿದ್ದೇನು..?

Publicspot

ಬಿಡದಿ ಭೂ ಸ್ವಾಧೀನ ವಿಚಾರವಾಗಿ ಪೋಸ್ಟರ್​ ವಾಕ್ಸಮರ..! HDK ಕಿಡಿ..

Publicspot

Court Order bring Happy & Sad: ಕೋರ್ಟ್‌ ಆದೇಶದಿಂದ ಸಂತೋಷ ಜೊತೆಗೆ ದುಃಖ

Publicspot

ಪ್ರಜ್ವಲ್​ ರೇವಣ್ಣ ಕೇಸ್​​, 25 ಲಕ್ಷ ಬಹುಮಾನ ಘೋಷಿಸಿದ ಸರ್ಕಾರ..!

Publicspot

Cong MP Trouble: ಹಾಸನದ ಕಾಂಗ್ರೆಸ್​ ಸಂಸದನಿಗೆ ಸಂಕಷ್ಟ..! ಸುಪ್ರೀಂ ಶಾಕ್..

Publicspot

Aunty Rape: ಚಿಕ್ಕಮ್ಮನ ಜೊತೆಗೇ ಕಾಮ ಕೇಳಿ.. 10 ವರ್ಷದ ಬಳಿಕ ಅತ್ಯಾಚಾರ ಎಂದ ಆಂಟಿ..

Publicspot