The Public Spot
ರಾಜ್ಯ

ಕೇಂದ್ರದ ವಿರುದ್ಧ ಸಿಡಿದೆದ್ದ ರೈತರು.. ಮಧ್ಯರಾತ್ರಿ ಸರ್ಕಸ್​ ಸಕ್ಸಸ್​ ಆದ್ರೆ..

ಕಬ್ಬು ಬೆಳೆಯುವ ರೈತರು MSP ದರ ಹೆಚ್ಚಳ ಮಾಡುವಂತೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಬೆಳಗಾವಿಯಿಂದ ಹಮ್ಮಿಕೊಂಡಿರುವ ಪಾದಯಾತ್ರೆ ಧಾರವಾಡ ಜಿಲ್ಲೆಗೆ ಪ್ರವೇಶಿಸಿದೆ. ಧಾರವಾಡದ ತೆಗೂರು ಬಳಿ ಕಬ್ಬು ಬೆಳೆಗಾರರ ಬಹಿರಂಗ ಸಮಾವೇಶ ನಡೆದಿದ್ದು, ಸಮಾವೇಶಕ್ಕೆ ಬೆಳಗಾವಿ ಹಾಗೂ ಧಾರವಾಡದ ಅಧಿಕಾರಿಗಳು ಕೂಡ ಆಗಮಿಸಿದ್ದರು. ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್, ಧಾರವಾಡ ಡಿಸಿ ಸ್ನೇಹಲ್, ಐಪಿಎಸ್ ಅಧಿಕಾರಿಗಳಾದ ಭೀಮಾಶಂಕರ ಗುಳೇದ್, ಧಾರವಾಡ ಎಸ್​ಪಿ ಗುಂಜನ್ ಆರ್ಯ ಆಗಮಿಸಿದ್ರು. ವೇದಿಕೆಯ ಮೇಲೆ ಕೇವಲ ಕುರುಬೂರು ಶಾಂತಕುಮಾರ್ ಹಾಗೂ ಬಿ.ಡಿ ಹಿರೇಮಠಗೆ ಮಾತ್ರ ಖುರ್ಚಿ ಹಾಕಲಾಗಿತ್ತು. ಹೀಗಾಗಿ ಅಧಿಕಾರಿಗಳು ವೇದಿಕೆಯ ಕೆಳಗೆ ಕುಳಿತುಕೊಳ್ಳಬೇಕಾಯ್ತು.

ಇದಕ್ಕೂ ಮೊದಲು ಧಾರವಾಡ ಜಿಲ್ಲೆ ಪ್ರವೇಶಕ್ಕೂ ಮುನ್ನ ಜಿಲ್ಲಾಧಿಕಾರಿಗಳು ರೈತ ನಾಯಕರ ಜೊತೆಗೆ ಸಭೆ ಮಾಡಿದ್ರು. ಸಭೆ ಬಳಿಕ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ, ಕಬ್ಬಿನ ದರ ನಿಗದಿಗೆ ರೈತರ ಹೋರಾಟ ಮಾಡ್ತಿದ್ದೇವೆ. ಕೇಂದ್ರ ಸರ್ಕಾರಕ್ಕೆ ಮತ್ತೆ ಡೆಡ್​ಲೈನ್ ನೀಡುತ್ತಿದ್ದು, ಧಾರವಾಡದ ಗುಳೇದಕೊಪ್ಪಕ್ಕೆ ಪಾದಯಾತ್ರೆ ಆಗಮಿಸುತ್ತದೆ. ಗುಳೇದಕೊಪ್ಪ ಗ್ರಾಮಕ್ಕೆ ಕೇಂದ್ರದ ನಿಯೋಗ ಬರಲಿದೆ. ಜೊತೆಯಲ್ಲಿ ಧಾರವಾಡ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳು ಇರ್ತಾರೆ. ರೈತರ ಜೊತೆಗೆ ಡಿಸಿಗಳು ಹಾಗೂ ಅಧಿಕಾರಿಗಳು ಮಾತನಾಡಲಿದ್ದಾರೆ. ರೈತರ ಮನವಿಗೆ ಕೇಂದ್ರ ನಿಯೋಗ ಒಪ್ಪಿದರೆ ನಾವು ಹಬ್ಬವನ್ನು ಮಾಡುತ್ತೇವೆ. ಇಲ್ಲದೆ ಹೋದರೆ ಇದೆ 22 ರಂದು ಯರಿಕೊಪ್ಪ ಪಾದಯಾತ್ರೆ ಬರಲಿದೆ ಎಂದಿದ್ದಾರೆ.

ಅಕ್ಟೋಬರ್​ 22ರಂದು ಯರಿಕೊಪ್ಪ ಗ್ರಾಮದಲ್ಲಿ 50 ಲಕ್ಷ ರೈತರು ಸೇರಲಿದ್ದಾರೆ. ಅದಾದ ಮೇಲೆ ದೊಡ್ಡ ಮಟ್ಟದ ಜನಾಂದೋಲನ ಮಾಡಲಿದ್ದೇವೆ ಎಂದಿದ್ದಾರೆ. ಇತ್ತ ಮೈಸೂರಿನಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ನಾನು ರೈತರಲ್ಲಿ ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡುತ್ತಿದ್ದೇನೆ. ನಾನು ರೈತರ ವಿಚಾರದಲ್ಲಿ ರಾಜಕೀಯ ಮಾಡಲು ಸಿದ್ದನಿಲ್ಲ. ರಾಜಕೀಯ ಮಾಡುವುದಕ್ಕೆ ನಾನು ಬೇರೆಯವರಿಗೆ ಬಿಟ್ಟಿದ್ದೇನೆ. ನಾನು ಪ್ರಮಾಣಿಕವಾಗಿ ರೈತರ ಪರ ಇದ್ದೇನೆ. ತಕ್ಷಣವೇ ಪ್ರತಿಭಟನೆ ಕೈಬಿಡಿ ಎಂಬುದು ನನ್ನ ಮನವಿ. ಕಬ್ಬಿನ ದರ ಸಮಸ್ಯೆ, ಬರ ಪರಿಹಾರ ಎಲ್ಲದಕ್ಕೂ ಕೇಂದ್ರದ ಸಹಕಾರ ಬೇಕಿದೆ. ಹೀಗಾಗಿ ಪ್ರಧಾನಮಂತ್ರಿಗಳ ಸಮಯ ಕೇಳಿದ್ದೇನೆ. ಸರ್ವ ಪಕ್ಷಗಳು ಒಪ್ಪಿದರೆ ಅವರನ್ನೂ ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ, ರೈತರ ಹೋರಾಟಕ್ಕೆ ನನ್ನ ಬೆಂಬಲವಿದೆ. ರೈತರ ವಿಚಾರದಲ್ಲಿ ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಎನ್ನುವುದು ಇಲ್ಲ. ನಾನು ಅಧಿಕಾರದಲ್ಲಿ ಇದ್ದಾಗಲೂ ರೈತರ ಪರವಾದ ನಿಲುವುಗಳನ್ನು ತೆಗೆದುಕೊಂಡಿದ್ದೇನೆ. MSP ಹೆಚ್ಚಳ ವಿಚಾರವಾಗಿ ಕೇಂದ್ರ ಸರ್ಕಾರ ಎಕ್ಸ್​ಫರ್ಟ್​ ಕಮಿಟಿ ವರದಿ ಪಡೆದುಕೊಳ್ಳಲು ನಿರ್ಧಾರ ಮಾಡಿದೆ. ಆ ಎಕ್ಟ್​ಫರ್ಟ್​ ಕಮಿಟಿ ವರದಿ ಬರಲಿ. ನಾನೂ ಕೂಡ ದೆಹಲಿಗೆ ತೆರಳಿ ಕೃಷಿ ಸಚಿವರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದಿದ್ದಾರೆ. ಇನ್ನೂ ಮಧ್ಯರಾತ್ರಿ ಸಮಯಕ್ಕೆ ಬೆಳಗಾವಿ ಡಿಸಿ ಮನವೊಲಿಕೆ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದು, ಇಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಜೊತೆಗೆ ಸಭೆ ಏರ್ಪಡಿಸಿದ್ದಾರೆ. ಇಂದಿನ ಸಭೆಯ ನಿರ್ಧಾರಗಳ ಮೇಲೆ ಕಬ್ಬು ರೈತರ ಹೋರಾಟ ಅಂತಿಮ ರೂಪ ಪಡೆಯಲಿದೆ.

Related posts

ಸ್ವಂತ ಜಮೀನಲ್ಲಿ ನಿಧಿ ಸಿಕ್ಕರೂ ಸರ್ಕಾರಕ್ಕೆ ಸೇರುತ್ತಾ..? ಕಾರಣವೇನು..?

Publicspot

Rain Alert: ರಾಜ್ಯದಲ್ಲಿ ಎರಡು ದಿನ ಮಳೆಯಬ್ಬರ.. ಯಾವೆಲ್ಲಾ ಜಿಲ್ಲೆಗಳಿಗೆ ಅಲರ್ಟ್‌..!?

Publicspot

ಬೆಂಗಳೂರಲ್ಲಿ ಗಣತಿಗೆ ಡಿಸಿಎಂ ಡಿಕೆಶಿ ಚಾಲನೆ.. ಪ್ರಶ್ನೆಗಳಿಗೆ ಉತ್ತರಿಸಲು ಗರಂ..

Publicspot

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಮರುಬಳಕೆ ಘಟಕದಿಂದ ವಿದ್ಯುತ್ ಉತ್ಪಾದನೆ, ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ

admin

Mysore Mahisha Mandala; ಮೈಸೂರು ಚಾಮುಂಡಿಗೆ ಕೊಡುವ ಗೌರವ ಮಹಿಷನಿಗೂ ಕೊಡಿ..

Publicspot

Caste Census Doubt; ಜಾತಿ ಜನಗಣತಿಗೆ ಸರ್ಕಾರದಲ್ಲೇ ವಿರೋಧ.. ಸೆಪ್ಟೆಂಬರ್‌ 22ರಿಂದ ಸಮೀಕ್ಷೆ ಡೌಟ್..

Publicspot