The Public Spot
ರಾಜ್ಯ

ಬೆಂಗಳೂರಿಗೆ ಮುಂದೆ ಯಾವ ಗತಿ ಬರಬಹುದು ಗೊತ್ತಿದ್ಯಾ..? ಇಲ್ನೋಡಿ..

ತಮಿಳುನಾಡು ಸರ್ಕಾರ ಹೊಸೂರಿನಿಂದ ಬೊಮ್ಮಸಂದ್ರಕ್ಕೆ ಮೆಟ್ರೋ ರೈಲು ಯೋಜನೆ ಜಾರಿ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಇತ್ತ ಕರ್ನಾಟಕ ಸರ್ಕಾರ ಅತ್ತಿಬೆಲೆ ತನಕ ನಮ್ಮ ಮೆಟ್ರೋ ಯೋಜನೆ ವಿಸ್ತರಿಸಲು ಮುಂದಾಗಿದೆ. ಇದು ಅಭಿವೃದ್ಧಿ ಯೋಜನೆ, ಇದರಿಂದ ಬೆಂಗಳೂರಿಗೆ ಆಗುವ ನಷ್ಟ ಆದರೂ ಏನು ಎಂದು ನಾವು ನೀವೆಲ್ಲಾ ಕೇಳಬಹುದು. ಆದರೆ ಇದರಿಂದ ಬೆಂಗಳೂರು ಅನ್ನೋ ಕರುನಾಡಿನ ಹೆಮ್ಮೆಯ ನಗರಕ್ಕೆ ಗಂಡಾಂತರ ಕಾದಿದೆ. ಇದು ಯಾರಿಗೂ ತಿಳಿಯದ ವಿಚಾರವೇನು ಅಲ್ಲ. ಎಲ್ಲರಿಗೂ ಗೊತ್ತಿರುತ್ತದೆ. ಆದರೆ ತಮ್ಮ ವೈಯಕ್ತಿಕ ಹಿತಾಸಕ್ತಿಗಳು, ತಮಗೆ, ತಮ್ಮ ಸಂಸ್ಥೆಗಳಿಗೆ ಆಗುವ ಲಾಭಗಳಿಗಾಗಿ ನಾಡು ನುಡಿ ಎಲ್ಲವನ್ನೂ ಹಾಳು ಮಾಡಲು ಮುಂದಾಗ್ತಾರೆ.

ಅತ್ತಿಬೆಲೆಗೆ ನಮ್ಮ ಮೆಟ್ರೋ ರೈಲು ವಿಸ್ತರಣೆಯನ್ನು ಕನ್ನಡಪರ ಸಂಘಟನೆಗಳ ವಿರೋಧ ಮಾಡಿವೆ. ಕರ್ನಾಟಕ – ತಮಿಳುನಾಡು ಗಡಿ ಭಾಗಕ್ಕೆ ಮೆಟ್ರೋ ವಿಸ್ತರಣೆಗೆ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೂಡಲೇ ಬೊಮ್ಮಸಂದ್ರ – ಅತ್ತಿಬೆಲೆ ಮೆಟ್ರೋ ಯೋಜನೆ ಕೈಬಿಡಲು ಆಗ್ರಹ ಮಾಡಿದ್ದಾರೆ. ಮೆಟ್ರೋ ವಿಸ್ತರಣೆಯಿಂದ ಬೆಂಗಳೂರಿನ ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುತ್ತದೆ ಅನ್ನೋದು ಕನ್ನಡಪರ ಸಂಘಟನೆಗಳ ಒತ್ತಾಸೆ. ಕನ್ನಡಪರ ಹೋರಾಟಗಾರರ ಆತಂಕ. ನಮ್ಮ ಮೆಟ್ರೋ ವಿಸ್ತರಣೆ ಆದರೆ ಬೆಂಗಳೂರು ಮಿನಿ ತಮಿಳುನಾಡು ಆಗಲಿದೆ ಅನ್ನೋ ಕಾರಣಕ್ಕೆ ಅತ್ತಿಬೆಲೆ ಮೆಟ್ರೋ ಯೋಜನೆ ಕೈಬಿಡದಿದ್ದರೆ ಬೃಹತ್ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ಮೆಟ್ರೋ ರೈಲು ವಿಸ್ತರಣೆಗೆ ಡಿಪಿಆರ್ ಸಿದ್ಧಪಡಿಸಲು ಬಿಎಂಆರ್‌ಸಿಎಲ್‌ಗೆ ಸರ್ಕಾರ ಸೂಚನೆ ಕೊಟ್ಟಿದೆ. ಹೊಸೂರು – ಬೊಮ್ಮಸಂದ್ರ ಮೆಟ್ರೋ ಮಾರ್ಗದ ವಿಸ್ತರಣೆಯ ಸುತ್ತ ರಾಜಕೀಯ ಹಾಗೂ ಭಾಷಾ ವಿವಾದ ಎದ್ದಿದ್ದು, ತಮಿಳುನಾಡು ಬಜೆಟ್‌ನಲ್ಲಿ ಹೊಸೂರು – ಬೊಮ್ಮಸಂದ್ರ ಮಾರ್ಗದ 23 ಕಿ.ಮೀ. ಮೆಟ್ರೋ ಯೋಜನೆ ಪ್ರಸ್ತಾಪ ಮಾಡಲಾಗಿದೆ. ಬೊಮ್ಮಸಂದ್ರದಿಂದ ಅತ್ತಿಬೆಲೆಯವರೆಗೆ 10.5 ಕಿ.ಮೀ. ಮೆಟ್ರೋ ಮಾರ್ಗದಲ್ಲಿ 9 ನಿಲ್ದಾಣಗಳ ಯೋಜನೆ ಜಾರಿಗೆ ಸಕಲ ತಯಾರಿ ನಡೆಯುತ್ತಿದೆ. ಕೇವಲ ಮಿನಿ ತಮಿಳುನಾಡು ಆಗುತ್ತದೆ ಅನ್ನೋದು ಮಾತ್ರವಲ್ಲ. ಮುಂದೊಂದು ದಿನ ಬೆಂಗಳೂರು ಕರ್ನಾಟಕ ರಾಜ್ಯದಿಂದ ಬೇರ್ಪಟ್ಟರೂ ಅಚ್ಚರಿಯಿಲ್ಲ.

ಈಗಾಗಲೇ ಬೆಂಗಳೂರಿನಲ್ಲಿ ಕನ್ನಡ ಭಾಷಿಕರ ಆಕ್ರಮಣ ಜಾಸ್ತಿ ಆಗಿದೆ ಅನ್ನೋ ವಾದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಿದೆ. ಟ್ವಿಟ್ಟರ್​ನಲ್ಲಿ (X Post) ಬೆಂಗಳೂರಲ್ಲಿ ಕೇಂದ್ರಾಡಳಿತ ಪ್ರದೇಶ ಮಾಡಬೇಕು ಅನ್ನೋ ಅಭಿಯಾನವೂ ಶುರುವಾಗಿದೆ. ಸದ್ಯಕ್ಕೆ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಸಾಧ್ಯವಾಗದೇ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಬೆಂಗಳೂರು ತಮಿಳುನಾಡು ಭಾಗಕ್ಕೂ ವಿಸ್ತರಣೆ ಆದರೆ, ಎರಡೂ ರಾಜ್ಯಗಳ ನಡುವೆ ಆದಾಯ ಹಂಚಿಕೆ ಆದಾಗ, ಮೂಲಸೌಕರ್ಯ ಸೇರಿದಂತೆ ಅಭಿವೃದ್ಧಿ ವಿಚಾರದಲ್ಲಿ ಸಂಘರ್ಷ ಏರ್ಪಟ್ಟಾಗ ಕೇಂದ್ರಾಡಳಿತ ಪ್ರದೇಶಕ್ಕೆ ಮತ್ತಷ್ಟು ಶಕ್ತಿ ಬರಬಹುದು. ಹಿಂದಿ ಭಾಷಿಕರ ಆಗ್ರಹಕ್ಕೆ ಮಣಿಯುವ ಕೇಂದ್ರ ಸರ್ಕಾರ ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಂದ ಬೆಂಗಳೂರನ್ನು ಹಾಗೂ ಹೊಸೂರನ್ನು ಬೇರ್ಪಡಿಸಿ ಕೇಂದ್ರಾಡಳಿತ ಮಾಡಿದರೆ ಅಚ್ಚರಿಯೇನು ಆಗೋದಿಲ್ಲ. ಈಗಲೇ ಎಚ್ಚೆತ್ತುಕೊಂಡು ಸ್ವಾರ್ಥ ರಾಜಕಾರಣಿಗಳ ಸೊಕ್ಕು ಮುರಿಯಬೇಕಿದೆ. ಇಲ್ಲದಿದ್ದರೆ ಬೆಂಗಳೂರು ಮುಂದಿನ ಪೀಳಿಗೆಗೆ ಕನ್ನಡಾಂಬೆಯ ದತ್ತು ಪುತ್ರ ಎನ್ನುವಂತಾಗುವ ಸಾಧ್ಯತೆ ಹೆಚ್ಚು.

Related posts

Police Constable; ವಯೋಮಿತಿ ಹೆಚ್ಚಿಸಿ.. ಪೊಲೀಸ್​ ನೇಮಕಾತಿ ಮಾಡಿ.. ಆಕಾಂಕ್ಷಿಗಳ ಆಗ್ರಹ..

Publicspot

High Court News: ರಾಜ್ಯದಲ್ಲಿ ಮತ್ತೆ ರಸ್ತೆ ಇಳಿಯುತ್ತವೆ ಬೈಕ್​ ಟ್ಯಾಕ್ಸಿ..!?

Publicspot

ಹೊಸ ವರ್ಷ 2026ರ ಸ್ವಾಗತಕ್ಕೆ ಹೇಗಿದೆ ಬೆಂಗಳೂರು ಖಾಕಿ ತಯಾರಿ..?

Publicspot

5 ಜಿಲ್ಲೆಗಳಿಗೆ ರೆಡ್ ಅಲರ್ಟ್.. ಮಳೆ ಸಮಯದಲ್ಲಿ ಈ ತಪ್ಪು ಮಾಡಬೇಡಿ..

Publicspot

RAIN DAMAGES IN KARNATAKA: ಕರ್ನಾಟಕದಲ್ಲಿ ಮಳೆ ಅಬ್ಬರದ ಎಫೆಕ್ಟ್‌ ಹೇಗಿದೆ..?

Publicspot

Caste Census Doubt; ಜಾತಿ ಜನಗಣತಿಗೆ ಸರ್ಕಾರದಲ್ಲೇ ವಿರೋಧ.. ಸೆಪ್ಟೆಂಬರ್‌ 22ರಿಂದ ಸಮೀಕ್ಷೆ ಡೌಟ್..

Publicspot